ಗುರುನಾಥರ ಪ್ರಸಾದ ತೆಗೆದುಕೊಂಡ ಮಹಿಳೆಗೆ ಮಗುವಾಯಿತು, ಕಡೆಗಣಿಸಿದ ಮಹಿಳೆಗೆ ಪಶ್ಚಾತ್ತಾಪವಾಯಿತು




 ಮುಂಬೈ ನಗರದ ಆಗಿನ ಕಾಲದ ಸುಪ್ರಸಿದ್ದ ಚಲನಚಿತ್ರ ನಟಿ ಶ್ರೀಮತಿ ಶೋಭನಾ ಎಂಬುವರು, ಶ್ರೀ ಸಿದ್ಧಾರೂಢಸ್ವಾಮಿಗಳ ಪರಮ ಭಕ್ಕದಾಗಿದ್ದರು. ಅವರು ಬಿಡುವು ಸಿಕ್ಕಾಗೆ ಹುಬ್ಬಳ್ಳಿಗೆ ಬಂದು ನೀ ಸಿದ್ಧಾರೂಢರ ಸಮಾಧಿ ದರ್ಶನ ಹಾಗೂ ಶ್ರೀಗುರುನಾಧಾರೂಢರ ದರ್ಶನ ಪಡೆದುಕೊಂಡು ಹೋಗುವುದು ಅವರ ರೂಢಿಯಾಗಿತ್ತು. ಒಮ್ಮೆ ತನ್ನ ಗೆಳತಿಯ ಜೊತೆಗೆ ಹುಬ್ಬಳ್ಳಿಗೆ ಬಂದು, ಶ್ರೀ ಸಿದ್ಧಾರೂಢರ  ಗದ್ದುಗೆಯ ದರ್ಶನ ಪಡೆದು ನಂತರ ಶ್ರೀ ಗುರುನಾಥಾರೂಢರ ದರ್ಶನಕ್ಕೆ ಹೋದರು, ಸಮಯದಲ್ಲಿ ಅಡುಗೆಯ ಮನೆಯಲ್ಲಿ ಶ್ರೀಗುರುನಾಥಾರೂಢರು ಪ್ರತಿ ತುತ್ತಿಗೆ ಕೆಲವು  ಅಂಶಗಳನ್ನು ನುಂಗಿ ಹೆಚ್ಚಿನ ಭಾಗವನ್ನು ಹೊರಗೆ ಘಲ್ ಎಂದು ಉಗುಳಿ ಬಿಡುತ್ತಿದ್ದರು. ಈ ಪ್ರಸಾದವನ್ನು ಒಂದು ದೊಡ್ಡ ವಸ್ತ್ರದಲ್ಲಿ ಸಾಧುಗಳು ಹಿಡಿದು ನಂತರ ಅಲ್ಲಿದ್ದ ಭಕ್ತರಿಗೆ ಪ್ರಸಾದವೆಂದು ಕೊಡುತ್ತಿದ್ದರು.
ಈ ಸಮಯದಲ್ಲಿ ಗುರುಗಳ ದರ್ಶನಕ್ಕಾಗಿ ಬಂದ ಶೋಭನಾಸಮರ್ಥ ಅಲ್ಲಿಯೇ  ಇದ್ದಾಗ ಅವಳಿಗೂ ಆವಳ ಗೆಳತಿಗೂ ಸಾಧುಗಳು ಪ್ರಸಾದ ಕೊಟ್ಟರು. ಶ್ರೀಮತಿ ಶೋಭನಾ ಸಮರ್ಥ ಅವರು ಶ್ರೀಗಳ ಪರಮ ಭಕ್ತರಾಗಿದ್ದರಿಂದ ಆ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರು. ಆದರೆ ಅವರ ಗೆಳತಿ ಮಾತ್ರ ಪ್ರಸಾದವನ್ನು ಎಂಜಲೆಂದು ಭಾವಿಸಿ, ತನ್ನ ಕೈಯ್ಯಲ್ಲಿ ಮಡಚಿಕೊಂಡು ನಿಂತರು. ನಂತರ ಉಭಯತರು ಶ್ರೀಗಳಿಗೆ ನಮಿಸಿ, ತಮ್ಮೂರಿಗೆ ಹೋಗುವಾಗ ತನ್ನ ಕೈಯ್ಯಲ್ಲಿ ಮಡಚಿ ಕೊಂಡಿದ್ದ ಪ್ರಸಾದವನ್ನು ಒಂದು ದೊಡ್ಡ ಕಲ್ಲಿನ ಬುಡದಲ್ಲಿ ಇಟ್ಟು ಕಲ್ಲನ್ನು ಮುಚ್ಚಿ ಈರ್ವರೂ ಮುಂಬೈಗೆ ತೆರಳಿದರು. ಮುಂದೆ ಒಂದು ವರ್ಷದಲ್ಲಿ ಶೋಭನಾ ಸಮರ್ಥ ಅವರಿಗೆ ಒಂದು ಹೆಣ್ಣು ಮಗುವಾಯಿತು. (ಅವರೇ ಚಲನಚಿತ್ರತಾರ ನೂತನ ಸಮರ್ಥ) ಮುಂದೆ ಶೋಭನಾ ಸಮರ್ಥ ಅವರು ಅದೆ ಗೆಳತಿಯೊಡನೆ ಶ್ರೀಗುರುನಾಥಾರೂಢರ ದರ್ಶನಕ್ಕೆ ಬಂದರು.
ಆಗ ಶೋಭನಾ ಅವರು ತನ್ನ ಕಂಕುಳಲ್ಲಿದ್ದ ಕೂಸಿನೊಂದಿಗೆ ಶ್ರೀಗಳಿಗೆ ನಮಸ್ಕರಿಸಿದರು. ಆಗ ಶ್ರೀಗಳು ನಸುನಗುತ್ತಿದ್ದರು. ಅದರಂತೆ ಆ ಗೆಳತಿಯೂ ನಮಸ್ಕರಿಸಿದಾಗ ಶ್ರೀಗಳು ಸುಮ್ಮನೆ ಕುಳಿತಿದ್ದರು. ನಂತರ ಹೊರಗೆ ಬಂದು ಆ ಗೆಳತಿ ಈ ಹಿಂದೆ ಶ್ರೀಗಳು ಕೊಟ್ಟ ಪ್ರಸಾದವನ್ನು ಕಲ್ಲಿನ ಬುಡದಲ್ಲಿ ಇಟ್ಟಿದ್ದನ್ನು ಸ್ಮರಿಸಿಕೊಂಡು, ಕಲ್ಲಿನ ಹತ್ತಿರ ಹೋಗಿ ಕಲ್ಲನ್ನು ಎಬ್ಬಿಸಿ ನೋಡಿದಾಗ ಅಲ್ಲಿ ಎರಡು ಕಪ್ಪೆಗಳು ಕಂಡುಬಂದುವು. ಶ್ರೀಗಳ ಮಹಿಮೆಯನ್ನು ನೋಡಿದ ಮಕ್ಕಳಿಲ್ಲದ ಆ ಗೆಳತಿ, ತನ್ನ ಮನಸ್ಸಿನಲ್ಲಿ ಈ ಹಿಂದೆ ಶ್ರೀಗಳ ಪ್ರಸಾದ ತೆಗೆದುಕೊಂಡಿದ್ದರೆ ನನಗೂ ಮಕ್ಕಳಾಗುತ್ತಿದ್ದವು ಎಂದು ಪಶ್ಚಾತ್ತಾಪ ಪಟ್ಟು ಆ ಗೆಳತಿ ಶೋಭನಾಳೊಂದಿಗೆ ತಮ್ಮೂರಿಗೆ ತೆರಳಿದರು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಅನಾಥರಕ್ಷಕ ಶ್ರೀಗುರುನಾಥಾ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ