ಭಕ್ತರ ರಕ್ಷಕ ಶ್ರೀಗುರುನಾಥ
ಮೌನಮುನಿ ಶ್ರೀ ಗುರುನಾಥರ ನೋಟ ಮತ್ತು ಸ್ಪರ್ಶ ಮಾತ್ರದಿಂದ ಭಕ್ತರನ್ನು ರಕ್ಷಿಸುವ ಶಕ್ತಿ ಅವರಲ್ಲಿತ್ತು. ಒಂದು ದಿನ ಬ್ಯಾಹಟ್ಟಿಯ ಒಬ್ಬ ಭಕ್ತ ಮಹಾರೋಗ ತಾಳಲಾರದೆ ಶ್ರೀ ಗುರುನಾಥರ ದರ್ಶನಕ್ಕೆ ಬಂದಾಗ ಶ್ರೀಗಳಿಗೆ ಸಾಧುಗಳು ಪ್ರಸಾದ ಉಣಿಸುತ್ತಿದ್ದರು. ಆಗ ಆ ರೋಗಿ ಶ್ರೀಗಳನ್ನು ಕುರಿತು ಸದ್ಗುರುವೆ, ನಾನು ರೋಗದಿಂದ ಬಾಧೆ ತಾಳಲಾರದೆ ಬಹಳ ಕಷ್ಟ ಪಡುತ್ತಿದ್ದೇನೆ ಕೃಪೆ ಮಾಡಿ ನನ್ನನ್ನು ರೋಗದಿಂದ ಮುಕ್ತಗೊಳಿಸು ಎಂದು ಅಳುತ್ತ ಬೇಡಿಕೊಂಡನು. ಆಗ ಸ್ವಾಮಿಗಳು ಅವನ ಮೇಲೆ ಉಗುಳಿದರು. ಆಗ ಭಕ್ತನು ಇದು ಮಹಾಪ್ರಸಾದವೆಂದು ನಂಬಿ ಅವರು ಉಗುಳಿದ ಅನ್ನದ ಅಗುಳನ್ನು ಆರಿಸಿಕೊಂಡು ಏಕಾಂತ ಸ್ಥಳದಲ್ಲಿ ಹೋಗಿ ಭಕ್ತಿಭಾವದಿಂದ ಪ್ರಸಾದವನ್ನು ಸೇವಿಸಿದನು. ನಂತರ ತನ್ನೂರಿಗೆ ಹೋದಾಗ ಬರಬರುತ್ತ ಆ ರೋಗವು ನಾಶವಾಗುತ್ತ ನಡೆದು ಪೂರ್ಣ ಗುಣಮುಖನಾದನು. ಸಶಕ್ತ ಮನಸ್ಸನ್ನು ಪಡೆದು ಗುರುಸ್ಮರಣೆಯನ್ನು ಮಾಡುತ್ತ ತನ್ನ ಕಾಯಕದಲ್ಲಿ ತೊಡಗಿ ಸಕಲ ಭೋಗ ಭಾಗ್ಯಗಳನ್ನು ಪಡೆದನು.
ಒಂದುದಿನ ಒಬ್ಬ ಭಕ್ತ ಕೋರ್ಟಿನ ಕೇಸಿನಲ್ಲಿ ಸಿಲುಕಿ ಬಹಳ ದುಃಖಿತನಾದನು. ತನ್ನಲ್ಲಿ ಪ್ರಬಲ ಸಾಕ್ಷಿ ಪುರಾವೆಗಳು ಇಲ್ಲದ್ದರಿಂದ ತನಗೆ ಶಿಕ್ಷೆ ಯಾಗುವದೆಂದು ಖಚಿತವಾಯಿತು. ಇನ್ನು ದೇವರ ದೇವನಾದ ಶ್ರೀಗುರುನಾಥ ಸ್ವಾಮಿಗಳ ಮೊರೆ ಹೋಗುವುದೇ ಲೇಸೆಂದು ತಿಳಿದು, ಮಠಕ್ಕೆ ಬಂದಾಗ ಶ್ರೀಗಳು ಕುರ್ಚಿಯ ಮೇಲೆ ಕುಳಿತಿದ್ದರು. ಆಗ ಭಕ್ತನು ಸಾಷ್ಟಾಂಗ ನಮಿಸಿ ತನ್ನ ಅಳಲನ್ನು ತೋಡಿಕೊಂಡನು. ಆಗ ಗುರುಗಳು ತಮ್ಮ ಕೊರಳಲ್ಲಿದ್ದ ಹಾರವನ್ನು ಅವನ ಕೊರಳಿಗೆ ಬೀಳುವಂತೆ ಎಸೆದರು. ಆಗ ಆ ಮಾಲೆ ಅವನ ಕೊರಳಿಗೆ ಬಿತ್ತು. ಇದನ್ನು ನೋಡಿದ ಭಕ್ತನು ನನಗೆ ಗುರುಗಳು ಅನುಗ್ರಹಿಸಿದರೆಂದು ತಿಳಿದು ಸಂತೋಷದಿಂದ ಮನೆಗೆ ಬಂದು, ಮರುದಿನ ಕೋರ್ಟಿಗೆ ಹೋದಾಗ ನ್ಯಾಯಾಧೀಶರು ನಿರಪರಾಧಿಯೆಂದು ತೀರ್ಪು ನೀಡಿದಾಗ, ನಾನು ಗುರುಕೃಪೆಯಿಂದ ಪ್ರಾಣಾಪಾಯದಿಂದ ಪಾರದೆ ಎಂದು ಶ್ರೀಗಳಲ್ಲಿ ಅಪಾರ ಭಕ್ತಿ ಹೆಚ್ಚಾಗಿ ದಿನಾಲು ಗುರುಗಳ ದರ್ಶನ ಪಡೆಯುತ್ತಾ ಧನ್ಯನಾದನು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
