ಅನಾಥರಕ್ಷಕ ಶ್ರೀಗುರುನಾಥಾ




ಹುಬ್ಬಳ್ಳಿಯಲ್ಲಿ ನಾಗವ್ವಯೆಂಬ ಯುವತಿಯು ಬೇರೆಯವರ ಮನೆಗೆಲಸ ಮಾಡಿ ಉಪಜೀವನ ನಡೆಸುತ್ತಿದ್ದಳು. ಅವಳು ಪ್ರತಿದಿನ ಮುಂಜಾನೆ ಶ್ರೀಗುರುನಾಥರ ದರ್ಶನ ಪಡೆದುಕೊಂಡು ಹೋಗುತ್ತಿದ್ದಳು.
ಒಂದು ದಿನ ಮುಂಜಾನೆ ಆಗಿನ ಜನ ಆಗಿನ ಭಾರತ ಮಿಲ್ಲರಸ್ತೆ (ಈಗಿನ ಕಾರವಾರ ರೋಡ ಮೂಲಕ ಮನೆಗೆ ಹೋಗುತ್ತಿರುವಾಗ,  ಸುಂದರವಾದ ನಾಗವ್ವನನ್ನು ಕಂಡು ನಾಲ್ಕಾರು ಜನರು ರೌಡಿಗಳು ಈಕೆಯನ್ನು ಬಲಾತ್ಕರಿಸಲು ಅವಳ ಸುತ್ತುವರಿದು ಛೇಡಿಸ ಹತ್ತಿದರು. ಆಗ ಅಸಹಾಯಕಳಾದ ಅವಳು ಹೆದರಿ ಹೇ ಗುರುನಾಥಾ ನನ್ನನ್ನು ರಕ್ಷಿಸು ಎಂದು ಗಟ್ಟಿಯಾಗಿ ಕೂಗಿ ಮುಖವನ್ನು ಮುಚ್ಚಿಕೊಂಡು ನೆಲದ ಮೇಲೆ ಕುಳಿತುಬಿಟ್ಟಳು. ಆ ಕ್ಷಣ  ಅಲ್ಲಿ ಒಂದು ಭಯಂಕರ ರೂಪವನ್ನು ಕಂಡು ರೌಡಿಗಳ ಮನಸ್ಸಿನಲ್ಲಿ ಭಯದ ಕಂಪನಾದಿಗಳು ಹುಟ್ಟಿ ಹೆದರಿದ ರೌಡಿಗಳು ಅಲ್ಲಿಂದ ಓಡಿ ಹೋದರು. ಸ್ವಲ್ಪ ಸಮಯದ ನಂತರ ನಾಗವ್ವ ಕಣ್ಣು ತೆರೆದು ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ದಯಾಮಯನಾದ ಶ್ರೀಗುರುನಾಥಾರೂಢರು ಮಾನರಕ್ಷಣೆ ಮಾಡಿದ್ದಕ್ಕಾಗಿ ಕೃತಜ್ಞತಾ ಭಾವದಿಂದ ಆತನನ್ನು ನೆನೆಯುತ್ತ ಮನೆಗೆ ತೆರಳಿದಳು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರಪ್ಪನ ನೋಟದಿಂದ ಪಂಡಿತನ ಗರ್ವಭಂಗ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ