ಹೆಣ್ಣು ಮಗುವು ಗಂಡು ಮಗುವಾಗಿ ಜನಿಸಿತು

 🌺 ಹೆಣ್ಣು ಮಗುವು ಗಂಡು ಮಗುವಾಗಿ ಜನಿಸಿತು 🌺




ಒಂದು ಸಂಸ್ಥಾನದ ಅರಸರು ತಮ್ಮ ಮಗಳಾದ ಶಶಿಕಲಾಳನ್ನು ಒಂದು ಸಂಸ್ಥಾನದ ರಾಜರಿಗೆ ಮದುವೆ ಮಾಡಿ ಕೊಟ್ಟಿದ್ದರು. ಒಂದು ವರ್ಷದ ನಂತರ ಗರ್ಭವತಿಯಾದ ಶಶಿಕಲಾ, ಹೆರಿಗೆಗಾಗಿ ತವರು ಮನೆಗೆ ಬಂದಳು. ಅಲ್ಲಿಯ ಪ್ರಸಿದ್ಧ ಜ್ಯೋತಿಷಿಯವರಿಗೆ ಕೇಳಲಾಗಿ ಹೆಣ್ಣು ಮಗು ಜನಿಸುತ್ತದೆ ಎಂದಿದ್ದರು. ಅವರಿಗೆ ಗಂಡು ಸಂತಾನ ಬೇಕಿತ್ತು. ಅಲ್ಲಿಯ ಶ್ರೀಮಂತಗೌಡರ ಮನೆಗೆ ಹುಬ್ಬಳ್ಳಿಯ ಕೆಲ ಸಾಧುಗಳು ಬಂದಿದ್ದರು. ಅವರಿಗೆ ಗೌಡರು ರಾಜರಿಗೆ ಬಂದ ಸಮಸ್ಯೆಯ ಬಗ್ಗೆ ತಿಳಿಸಲಾಗಿ ಸಾಧುಗಳು ಹೇಳಿದರು `ಗೌಡರೇ, ಶಿವನವತಾರಿ ಶ್ರೀ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿದ್ದಾರೆ. ಅವರಿಗೆ ಏನು ಬೇಕಾದರೂ ಕೊಡುವ ಸಾಮರ್ಥ್ಯವಿದೆ. ಅವರಿಗೆ ಶರಣಾಗತರಾದರೆ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ' ಎಂದರು.
ಇದನ್ನು ತಿಳಿದ ಗೌಡರು ಅರಸರಿಗೆ ಸಾಧುಗಳು ತಿಳಿಸಿದ ವಿಷಯ ತಿಳಿಸಿದರು. ಆಗ ಅರಸರು ಶಶಿಕಲಾ ಗೌಡರು ಮತ್ತು ದಿವಾನರು ಸೇರಿ ಹುಬ್ಬಳ್ಳಿಗೆ ಬಂದು ಸಿದ್ಧರಿಗೆ ವಂದಿಸಿ 'ಸದ್ಗುರುಗಳೇ, ಪ್ರಸಿದ್ಧ ಜ್ಯೋತಿಷಿಗಳು, ನನ್ನ ಮಗಳು ಹೆಣ್ಣು ಕೂಸನ್ನು ಹಡೆಯುತ್ತಾಳೆ' ಎಂದು ಹೇಳಿದ್ದಾರೆ. ಆದರೆ ನಮಗೆ ಗಂಡು ಸಂತಾನ ಬೇಕಾಗಿದೆ. ಉಪಾಯ ಸೂಚಿಸಿರಿ' ಎಂದು ಬೇಡಿಕೊಂಡಾಗ ಸಿದ್ದ ಹೇಳಿದ ಅರಸರೆ, ಪುರಾತನರು ಬರೆದಿಟ್ಟ ಜ್ಯೋತಿಷ್ಯಶಾಸ್ತ್ರ ಸತ್ಯವಾಗಿದೆ. ಅದರಲ್ಲಿ ಪಂಚಭವತಿ ಪಂಚ ನ ಭವತಿ ಎಂದು ಹೇಳಿದೆ. ಪುಣ್ಯದ ಬಲ ಹೆಚ್ಚಾಗಿದ್ದರೆ ಭವತಿ ಎಂದರೆ ಆಗುತ್ತದೆ. ಪುಣ್ಯದ ಬಲ ಕಡಿಮೆಯಿದ್ದರೆ ನಭವತಿ ಎಂದರೆ ಆಗುವುದಿಲ್ಲ ಎಂದಾಗುತ್ತದೆ. ನಿಮಗೆ ಗಂಡು ಸಂತಾನ ಬೇಕಿದ್ದರೆ ನಿಮ್ಮ ಅರಮನೆಯಲ್ಲಿ ಸಪ್ತಾಹ ಆಚರಿಸಿರಿ. ಆ ಪುಣ್ಯದ ಬಲದಿಂದ ಗಂಡು ಸಂತಾನವಾಗುತ್ತದೆ. ಇದರಲ್ಲಿ ಯಾವ ಸಂಶಯವಿಲ್ಲ. ಸಪ್ತಾಹಕ್ಕಾಗಿ ಶರಣಪ್ಪನವರನ್ನು ಕರೆದುಕೊಂಡು ಹೋಗಿರಿ' ಎಂದರು. ಆಗ ಅರಸರು ಸದ್ಗುರುಗಳಲ್ಲಿ ವಿಶ್ವಾಸವಿಟ್ಟು ಆಶೀರ್ವಾದ ಪಡೆದು ಶರಣಪ್ಪನವರನ್ನು ಕರೆದುಕೊಂಡು ಹೋದರು.
ಶರಣಪ್ಪನವರು ಅರಮನೆಯಲ್ಲಿ ಒಂದು ಮಂಟಪದಲ್ಲಿ ಸಿದ್ದರ ಭಾವಚಿತ್ರ ಸ್ಥಾಪಿಸಿ ಶೃಂಗರಿಸಿ ಪೂಜಿಸಿ ಸಪ್ತಾಹದಲ್ಲಿ ಭಜನ ಕೀರ್ತನೆಗಳನ್ನು ಮಾಡಿ ಕೊನೆಯ ದಿವಸ ಅನ್ನಸಂತರ್ಪಣೆ ಮಾಡಿ ಬಂದರು. ಅದರಿಂದ ಪುಣ್ಯವರ್ಧನೆಯಾಗಿ ಮುಂದೆ ಶಶಿಕಲಾ ಗಂಡು ಮಗುವಿಗೆ ಜನ್ಮ ಕೊಟ್ಟಳು. ಆ ಮಗುವಿನ ಹೆಸರು ಗುರುದಾಸ ಅವನೇ ದೊಡ್ಡವನಾಗಿ ಒಂದು ಸಂಸ್ಥಾನದ ಅಧಿಪತಿಯಾದನು. ಮುಂದೆ ಅರಸರು ಗೌಡರಾದಿಯಾಗಿ ಮೇಲಿಂದ ಮೇಲೆ ಬಂದು ಸಿದ್ಧರ ದರ್ಶನ ಪಡೆದು ಧನ್ಯರಾದರು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ವಿಶಾಲಾಕ್ಷಿಯ ಹೊಟ್ಟೆನೋವು, ಭೂತ ಬಿಟ್ಟು ಹೋದವು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ