ಸಿದ್ಧಾರೂಢ ಆಶೀರ್ವಾದದಿಂದ ಖಿರಸಾ ರವರ ಮನೆಯಲ್ಲಿ ಭೂತ ಓಡಿದವು

 🌺 ಖಿರಸಾ ಅವರ ಮನೆಯ ಭೂತ ಓಡಿದವು 🌺



ವಿಕ್ಟೋರಿಯಾ ರೂಡ ಸಾಲ ಓಣಿ ಹುಬ್ಬಳ್ಳಿಯ ಖೀರಾಸಾ ಮತ್ತು ಅವರ ಮಕ್ಕಳಾದ ವೆಂಕುಸಾ, ಗಂಗಾಸಾ, ಘಂಟಸಾ ಕಠಾರೆಯೆಂಬವರು ಬಹಳ ದೊಡ್ಡ ನೇಕಾರಿಕೆಯ ಮನೆತನದವರೂ ಹಾಗೂ ದೊಡ್ಡ ಶ್ರೀಮಂತರಾಗಿದ್ದರೂ, ನಿರಭಿಮಾನದಿಂದ ಶ್ರೀ ಸಿದ್ಧಾರೂಢರ ಭಕ್ತರಾಗಿದ್ದರು. ತಮ್ಮ ಮನೆಯಲ್ಲಿ ಯಾವುದೇ ವಿಶೇಷ ಸಂದರ್ಭಗಳಲ್ಲಿ ಸದ್ಗುರುಗಳನ್ನು ಕರೆಸಿ ಪಾದಪೂಜಿಸಿ ಪ್ರಸಾದ ವಿತರಿಸುತ್ತಿದ್ದರು. ನಿತ್ಯ ಮಠಕ್ಕೆ ಹೋಗಿ ಸಿದ್ಧರ ದರ್ಶನ ತೆಗೆದುಕೊಂಡು ಶಾಸ್ತ್ರ ಕೇಳಿ ತೀರ್ಥಪ್ರಸಾದ ತೆಗೆದುಕೊಂಡು ಮನೆಗೆ ಬರುತ್ತಿದ್ದರು.
ಹೀಗೆ ಕೆಲವು ದಿವಸ ಕಳೆದ ನಂತರ ಅವರ ದೊಡ್ಡ ಮನೆಯಲ್ಲಿ ಕೆಲವು ಭೂತಗಳು ಸೇರಿಕೊಂಡವು. ಇವರು ರಾತ್ರಿ ಊಟ ಮಾಡಿ ಮಲಗಿದಾಗ ಅವು ವಿಚಿತ್ರವಾಗಿ ಚೀರುತ್ತ ಗದ್ದಲ ಮಾಡುತ್ತಿರುವುದರಿಂದ ಮನೆಯವರಿಗೆ ವಿಪರೀತ ಭಯವಾಯಿತು. ಇದರಿಂದಾಗಿ ಸ್ವಂತ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋಗುವುದು ಹೇಗೆ? ಎಂಬ ಚಿಂತೆ ಅವರನ್ನು ಕಾಡಿತು. ಒಬ್ಬರ ಸಲಹೆಯ ಮೇರೆಗೆ ಮಂತ್ರ ಮಾಟಗಾರರನ್ನು ಕರೆಸಿ ಕ್ರಮ ತೆಗೆದುಕೊಂಡರೂ ನಿಷ್ಪಲವಾಯಿತು.
ಮತ್ತೆ ಕೆಲವು ದಿವಸ ಕಳೆದ ನಂತರ ಇವರು ರಾತ್ರಿ ಊಟ ಮಾಡಿ ಮಲಗಿದಾಗ ಭೂತಗಳು ಬಂದು ಉಳಿದ ಅಡುಗೆಯನ್ನು ತಿಂದು ಗಡಿಗೆಗಳನ್ನು ಡಬ್ಬುಹಾಕಿ ಹೋಗಲಾರಂಭಿಸಿದವು. ಇದರಿಂದಾಗಿ ಶ್ರೀ ಖಿರಾಸಾ  ಅವರಿಗೆ ಬಹಳ ಚಿಂತೆಯಾಗಿ ಒಂದು ದಿನ ಸದ್ಗುರುಗಳ ಮಠಕ್ಕೆ ಹೋಗಿ ಅವರ ದರ್ಶನ ತೆಗೆದುಕೊಂಡು ಅನಿವಾರ್ಯವಾಗಿ ಸದ್ಗುರುಗಳನ್ನು ಕುರಿತು ತಂದೆ, ನಮ್ಮ ಮನೆಯಲ್ಲಿ ಭೂತಗಳು ಚೇಷ್ಟೆ ಮಾಡುತ್ತಿವೆ. ನಮಗೆ ಬಹಳ ಹೆದರಿಕೆಯಾಗಿದೆ. ದಯವಿಟ್ಟು ಏನಾದರೊಂದು ಉಪಾಯ ಸೂಚಿಸಿರಿ ಎಂದು ಬೇಡಿಕೊಂಡನು.
ಆಗ ಸದ್ಗುರುಗಳು ಕರುಣೆಯಿಂದ ಒಂದು ತೆಂಗಿನ ಕಾಯಿಯನ್ನು ಖಿರಾಸಾನ  ಕೈಯಲ್ಲಿಟ್ಟು `ಖೀರಾಸಾ ಈ ಕಾಯಿಯನ್ನು ತೆಗೆದುಕೊಂಡು ಹೋಗಿ ನಿಮ್ಮ ಮನೆಯ ದೇವರ ಜಗುಲಿಯಲ್ಲಿಟ್ಟು ಪೂಜಿಸಿರಿ. ನಿಮಗೆ ಒಳ್ಳೆಯದಾಗುತ್ತದೆ' ಎಂದು ಆಶೀರ್ವದಿಸಿ ಕಳಿಸಿದರು. ಅದರಂತೆ ಖಿರಸಾ  ಅವರು ತೆಂಗಿನಕಾಯಿ ತೆಗೆದುಕೊಂಡು ಹೋಗಿ ತಮ್ಮ ದೇವರ ಜಗುಲಿಯಲ್ಲಿಟ್ಟು, ಭಕ್ತಿಯಿಂದ ಪೂಜಿಸಿದ ಎರಡು ಮೂರು ದಿವಸಗಳಲ್ಲಿ ವಿಚಿತ್ರ ಶಬ್ದ ಮಾಡುತ್ತ ಓಡಿ ಹೋದವು ಭೂತಗಳು ಪುನಃ ಬರಲಿಲ್ಲ. ಆಗ ಮನೆಯವರೆಲ್ಲರಿಗೂ ನೆಮ್ಮದಿ ದೊರಕಿತು. ಅಂದಿನಿಂದ ಶ್ರೀ ಸಿದ್ಧರಲ್ಲಿ ಅಪಾರ ಭಕ್ತಿಯುಂಟಾಯಿತು. ಅಂದಿನಿಂದ ಅವರ ಮನತನದವರು ಇಂದಿಗೂ ಶ್ರೀ ಸಿದ್ಧಾರೂಢರ ಭಕ್ತರಾಗಿದ್ದಾರೆ.



ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ


ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ