ಸಿದ್ಧರ ಸನ್ನಿಧಿಯಲ್ಲಿ ವಿರುಪಾಕ್ಷಪ್ಪನಿಂದ ಪ್ರಥಮ ಸೋಮವಾರ ಪೂಜೆ

 🌺 ಸಿದ್ಧರ ಸನ್ನಿಧಿಯಲ್ಲಿ ವಿರುಪಾಕ್ಷಪ್ಪನಿಂದ ಪ್ರಥಮ ಸೋಮವಾರ ಪೂಜೆ 🌺



ಸಿದ್ದರ ಭಕ್ತನಾದ ವಿರುಪಾಕ್ಷಪ್ಪ ಕಾತರಕಿಯೆಂಬವನು ಬಹಳ ದಿವಸಗಳಿಂದ ಸೇವೆ ಮಾಡುತ್ತಿದ್ದನು. ಅವನ ನಿಯಮವೆಂದರೆ ಕಾರ್ತಿಕ ಮಂಟಪದಲ್ಲಿ ಗುರುಗಳನ್ನು ಕೂಡಿಸಿ ಪೂಜಿಸುತ್ತಿದ್ದನು. ಸೋಮವಾರ ಆ ಮಂಟಪವನ್ನು ಮಠಕ್ಕೆ ತೆಗೆದುಕೊಂಡು ಹೋಗಿ ಮಠದ ಪೂಜಾ ಸಮಯದಲ್ಲಿ ಅದರಲ್ಲಿ ದೀಪ ಹಚ್ಚಿ ಅದರಲ್ಲಿ ಗುರುಗಳನ್ನು ಕೂಡಿಸಿ ಪೂಜಿಸಿ ಆರತಿ ಹಿಡಿದಿದ್ದನು. ಆ ಪೂಜೆಯನ್ನು ಭಕ್ತರು ಆನಂದದಿಂದ ನೋಡುತ್ತಿರುವಾಗ ಮಂಟಪಕ್ಕೆ ಬೆಂಕಿ ತಗುಲಿ ಸುಟ್ಟು ಹೋಯಿತು. ಭಕ್ತರು ಇದು ಅಶುಭವೆಂದು ವಿರುಪಾಕ್ಷಪ್ಪನಿಗೆ ಹೇಳಿದಾಗ ಅವನ ಮನಸ್ಸು ನೊಂದುಹೋಯಿತು. ಆಗ ಸಿದ್ಧ ಹೇಳಿದ್ದ ಭಕ್ತರೇ, ಯಾರೂ ಚಿಂತಿಸಬಾರದು, ಮಂಟಪ ಸುಟ್ಟಿರುವುದು ಇದೊಂದು ಒಳ್ಳೆಯ ಚಿಹ್ನೆಯಾಗಿದೆ. ಸ್ವಲ್ಪ ದಿನಗಳ ನಂತರ ಈಗ ಈ ಮಂಟಪ ಸುಟ್ಟಾಗ  ಯಾವ ರೀತಿ ಪ್ರಕಾಶ ತೋರಿತೋ ಅದರಂತೆ ನೀವೂ ಈಗ ಸ್ಥಾಪಿಸಿದ ಸೋಮವಾರ ಪೂಜೆಯಲ್ಲಿ ಅದೇ ಪ್ರಕಾರ ದೀಪ್ತವಾಗುತ್ತದೆ. ನಿಮ್ಮ ವಂಶ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ ಎಂದರು.
ಆಷಾಢ ಮತ್ತು ಕಾರ್ತಿಕ ಮಾಸದಲ್ಲಿ ಪಾಲಖಿಯಲ್ಲಿ ಸಿದ್ಧರನ್ನು ಕೂಡಿಸಿಕೊಂಡು ಮನೆಗೆ ಬರುತ್ತಿದ್ದರು. ಆಗ ವಿರುಪಾಕ್ಷಪ್ಪ ಮತ್ತು ಮಂಡಳಿ ಸಹಿತ ಗುರುಗಳಿಗೆ ಪೂಜಿಸಿ ಪ್ರಸಾದವುಣಿಸುತ್ತಿದ್ದರು. ಆಗಿನ ಖರ್ಚನ್ನು ಅವನೊಬ್ಬನೇ ನೋಡಿಕೊಳ್ಳುತ್ತಿದ್ದನು. ಒಂದು ದಿವಸ ವಿರುಪಾಕ್ಷಪ್ಪನ ಕೈಯಲ್ಲಿ ಗುರುಗಳು ಐದು  ರೂಪಾಯಿಗಳನ್ನು ಕೊಟ್ಟು ಹೇಳಿದರು ವಿರುಪಾಕ್ಷಿ, ಗೋಪಾಳ ಕಾಲ ಉತ್ಸವದಲ್ಲಿ ನೀವು ಮಾಡುವ ಭೋಜನ ಖರ್ಚಿನಲ್ಲಿ ಈ ಐದು ರೂಪಾಯಿಗಳನ್ನು ಸೇರಿಸಿ ಖರ್ಚು ಮಾಡಿರಿ. ಉತ್ಸವ ಅಭಿವೃದ್ಧಿಯಾಗುತ್ತದೆ' ಎಂದಾಗ ವಿರುಪಾಕ್ಷಪ್ಪ ಐದು ರೂಪಾಯಿಗಳನ್ನು ಪ್ರಸಾದವೆಂದು ಸ್ವೀಕರಿಸಿ ಮನೆಗೆ ಬಂದು ಆ ವರ್ಷದಿಂದ ಎಷ್ಟು ಸಲ ಉತ್ಸವ ಮಾಡಿದನೋ ಅಷ್ಟೂ ಸಲ ಎಷ್ಟೋ ಜನ ಬಂದು ಊಟ ಮಾಡಿದರೂ ಅನ್ನ ಹೆಚ್ಚಾಗುತ್ತಿತ್ತು. ಇದನ್ನು ಕಂಡ ವಿರುಪಾಕ್ಷಪ್ಪನ ಭಕ್ತಿ ಹೆಚ್ಚಾಯಿತು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗಣಪತಿ ಅಥಣಿಯ ರಕ್ಷಣೆ ಹಾಗೂ ತಮ್ಮಾಜಪ್ಪನ ವೈಕುಂಠ ಯಾತ್ರೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ