ಗುರಪ್ಪನ ನೋಟದಿಂದ ಪಂಡಿತನ ಗರ್ವಭಂಗ




ಶ್ರೀ ಸಿದ್ಧಾರೂಢರ ಶಿಷ್ಯೆ  ಸತ್ಯಭಾಮಾಬಾಯಿ ಚೌಧರಿಯವರು ದೊಡ್ಡ ಶ್ರೀಮಂತರು, ಶ್ರೀ ಸಿದ್ಧಾರೂಢರ ಆಜ್ಞೆಯಮೇರೆಗೆ ತಮ್ಮಲ್ಲಿ ಗೌರಿ ಹುಣ್ಣಿಮೆಯ ಸಮಯದಲ್ಲಿ ಶ್ರೀ ಸಿದ್ಧಾರೂಢರ ಸಪ್ತಾಹ ನಡೆಸುತ್ತಿದ್ದರು. ಅವರ ನಂತರ ಶ್ರೀಮತಿ ಲಕ್ಷ್ಮೀಬಾಯಿ ಚೌಧರಿಯವರು ಆ ಸಪ್ತಾಹವನ್ನು ವಿಜೃಂಭಣೆಯಿಂದ ನಡೆಸುತ್ತಿದ್ದರು. ಆ ಸಮಯದಲ್ಲಿ ಮೌನಯೋಗಿ ಶ್ರೀ ಗುರುನಾಥರನ್ನು ಕರೆಸಿ ಸಪ್ತಾಹ ನಡೆಸುತ್ತಿದ್ದರು. ಪ್ರತಿ ವರ್ಷದಂತೆ ಶ್ರೀ ಗುರುನಾಥಾರೂಢರನ್ನು ಕರೆದುಕೊಂಡು ಬಂದಿದ್ದರು.
ಅದೇ ಕಾಲಕ್ಕೆ ಉತ್ತರ ಹಿಂದುಸ್ಥಾನದಿಂದ ಒಬ್ಬ ಜಟಾಧಾರಿ ಸಾಧುವೊಬ್ಬನನ್ನು ಆಮಂತ್ರಿಸಿದ್ದರು. ಅವನು, ನಾನು ಮಹಾ ತಪಸ್ವಿಯಾಗಿದ್ದೇನೆ, ಸಕಲ ಶಾಸ್ತಪಂಡಿತನಾಗಿದ್ದೇನೆ ಮತ್ತು ಸರ್ವ ಸಿದ್ಧಿಗಳನ್ನು ಪಡೆದಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದನು. ಸಪ್ತಾಹದ ಸಮಯದಲ್ಲಿ ಎಲ್ಲ ಭಕ್ತರು ಕುಳಿತಾಗ ಮಾತು ಮಾತಿನಲ್ಲಿ ಅಲ್ಲಿದ್ದ ಭಕ್ತನೊಬ್ಬನು, ಹುಬ್ಬಳ್ಳಿಯಿಂದ ಬಂದ ಶ್ರೀ ಗುರುನಾಥ ಸ್ವಾಮಿಗಳು ಅಪಾರ ಮಹಿಮೆಯುಳ್ಳವರು, ಮಹಾ ಮೌನಯೋಗಿಗಳು ಎಂದು ಕೊಂಡಾಡಿದನು,
ಈ ಮಾತನ್ನು ಕೇಳಿದ ಉತ್ತರ ಹಿಂದುಸ್ತಾನದ ಸನ್ಯಾಸಿಯು ಸಿಟ್ಟಿಗೆದ್ದು, ಗುರುನಾಥರು ಅದೆಂಥ ಮೌನ ಸನ್ಯಾಸಿಗಳೊ, ಈ ದಿವಸ ನಾನು ಅವರನ್ನು ಮಾತನಾಡಿಸಿ ಮೌನವನ್ನೇ ಮುರಿಯುತ್ತೇನೆ ಎಂದು ಜಂಭದಿಂದ ಹೇಳಿ ಲಕ್ಷ್ಮೀಬಾಯಿಯವರ ಮೂರನೆಯ ಮಹಡಿಯಲ್ಲಿ ಕುಳಿತ ಗುರುನಾಥರನ್ನು ಮಾತನಾಡಿಸಲು ಮೆಟ್ಟಲುಗಳನ್ನು ಹತ್ತಿ ಹೋದನು. ಶ್ರೀಗುರುನಾಥಾರೂಢರು ಪಶ್ಚಿಮ ದಿಕ್ಕಿನ ಕಡೆಗೆ ಮುಖಮಾಡಿ ಉಚಿತಾಸನದಲ್ಲಿ ಕುಳಿತಿದ್ದರು. ಆ ಸನ್ಯಾಸಿಯು ಮೆಟ್ಟಿಲುಗಳನ್ನು ಹತ್ತಿ ಸ್ವಾಮಿಗಳ ಮುಂದೆ ಬಂದು ನಿಂತನು.
ಆಗ ಶ್ರೀಗುರುನಾಥರ ದೃಷ್ಟಿ ಆ ಸನ್ಯಾಸಿಯ ಮೇಲೆ ಬಿದ್ದ ತಕ್ಷಣ, ಅವನ ಅಂತಃಕರಣದಲ್ಲಿ : ಭಯದ ಕಂಪನಗಳು ಉಂಟಾಗಿ ಒಂದು ಶಿಲೆಯಂತೆ ನಿಂತನು. ಮೈಯ್ಯಲ್ಲಿ ಬೆವರು ಬಂದು ಗಡಗಡನೆ ನಡುಗಿ ಸ್ವಾಮಿಯವರ ದೃಷ್ಟಿಯನ್ನು ಎದುರಿಸಲಾಗದ ಹೇಗೆ ಬಂದಿದ್ದನೋ ಹಾಗೆಯೇ ಮೆಟ್ಟಿಲುಗಳನ್ನು ಇಳಿಯುತ್ತ ಬಂದ ದಾರಿಯಿಂದ ಹೊರಟುಹೋದನು. ಶ್ರೀ ಗುರುನಾಥರ ಮೌನ ಮುರಿಯಲು ಬಂದ ಸನ್ಯಾಸಿ ತನ್ನ ಆಹಂಕಾರವನ್ನು ಕಳೆದುಕೊಂಡು ಹೋದವನು ಮತ್ತೆ ಬರಲೇ ಇಲ್ಲ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಕಾಡನಕೊಪ್ಪದಲ್ಲಿ ಗುರುನಾಥ ಮಳೆ ಸುರಿಸಿದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ