ಭೀಮಣ್ಣನಿಗಾದ ಆರ್ಥಿಕ ಪರಸ್ಥಿತಿಯನ್ನು ಪರಿಹಾರ ಮಾಡಿದ ಗುರುನಾಥ
ಒಬ್ಬ ಸಿದ್ಧ ಪುರುಷ ಅಥವಾ ಯೋಗಿ ಜ್ಞಾನಿಗಳು ವಿದೇಹ ಕೈವಲ್ಯ ಹೊಂದಿದ ನಂತರ ಅವರಿಗೆ ಜನನ ಮರಣಗಳಿಲ್ಲ, ಅವರು ಮುಕ್ತ ಸ್ವರೂಪರು ಅಥವಾ ಪರಬ್ರಹ್ಮ ಸ್ವರೂಪರು ಎಂಬುದೇನೋ ಅದ್ವೈತ ಶಾಸ್ತ್ರ ರೀತಿಯಿಂದ ಸರಿಯಾದರೂ ಒಬ್ಬ ಸಿದ್ಧ ಪುರುಷನು ತನ್ನ ದೇಹತ್ಯಾಗದ ನಂತರವೂ ತನ್ನ ನಂಬಿದ ಭಕ್ತರಿಗೆ ಎಂದೂ ಕೈ ಬಿಡದೆ ರಕ್ಷಿಸುತ್ತಾನೆ ಎಂಬುದಕ್ಕೆ ಶ್ರೀ ಸಿದ್ಧಾರೂಢ ಚರಿತ್ರೆಯಲ್ಲಿ ಅನೇಕ ಉದಾಹರಣೆಗಳನ್ನು ಕೊಡಬಹುದು. ಅದನ್ನು ವಿವರಿಸುವುದು ಅಸಂಗತ. ಅದರಂತೆ ಶ್ರೀಗುರುನಾಥಾರೂಢರು ದೇಹತ್ಯಾಗ ಮಾಡಿ ಸಮಾಧಿ ಹೊಂದಿದ ನಂತರವೂ ತನ್ನ ನಂಬಿದ ಭಕ್ತನಿಗೆ ಕೈಬಿಡದೆ ರಕ್ಷಿಸಿದ ಎಂಬುದಕ್ಕೆ ಒಂದು ಉದಾಹರಣೆ.
ಹಳೇಹುಬ್ಬಳ್ಳಿ ಚನ್ನಪೇಟೆಯ ದಾಳಿಂಬರ ಓಣಿಯ ಹಾವಪ್ಪ ದಿವಟೆ ಅವರ ಪತ್ನಿ ರಾಮವ್ವ ಅವರ ಮಕ್ಕಳು ಕುಟುಂಬ ಸಹಿತ ಶ್ರೀ ಸಿದ್ಧಾರೂಢರ ಭಕ್ತರು. ಅವರ ಮೂರನೆಯ ಮಗ ಭೀಮಣ್ಣ ಹೆಚ್ಚಿನ ವಿದ್ಯಾಸಂಪನ್ನನಾಗಿ ಆಗಿನ ಗೋಕಾಕ ಮಿಲ್ಲಿನಲ್ಲಿ ಅಸಿಸ್ಟಂಟ ಪ್ರೊಡಕ್ಷನ್ ಮ್ಯಾನೇಜರ ಆಗಿ ನಿವೃತ್ತರಾದ ನಂತರ ಮನೆಯಲ್ಲಿ ಉಳಿದರು. ಮಕ್ಕಳ ಉದ್ಯೋಗಕ್ಕಾಗಿ ಬ್ಯಾಂಕಿನಲ್ಲಿ ಸಾಲ ಪಡೆದು ಒಂದು ಬೋರವೆಲ್ ಮಶಿನ್ ಖರೀದಿಸಿ ಅದನ್ನು ನಡೆಸಿಕೊಂಡು ಹೋಗಲು ಅನುವು ಮಾಡಿಕೊಟ್ಟರು. ಕೆಲವು ದಿವಸ ಯಂತ್ರ ಸರಿಯಾಗಿ ನಡೆದು ಮುಂದೆ ಆ ಯಂತ್ರದ ಬಿಡಿ ಭಾಗಗಳು ಮೇಲಿಂದ ಮೇಲೆ ಮುರಿಯುವುದು ಮತ್ತು ರಿಪೇರಿಯಿಂದಾಗಿ ತೊಂದರೆಯಾಯಿತು. ಮುಂದೆ ಅದರ ಬೇಡಿಕೆ ಕಡಿಮೆಯಾಗಿ ಬಹಳಷ್ಟು ಹಾನಿಯಾಗಿ ಬ್ಯಾಂಕಿನಲ್ಲಿ ಕಂಡು ಬಡ್ಡಿ ತುಂಬಲಾಗಲಿಲ್ಲ. ಅದಕ್ಕಾಗಿ ಬ್ಯಾಂಕಿನವರು ಕೋರ್ಟಿನಲ್ಲಿ ಪಟ್ಟಿ ದಾಖಲು ಮಾಡಿದರು. ನ್ಯಾಯಾಧೀಶರು ಬ್ಯಾಂಕಿನವರ ವಾದವನ್ನು ಎತ್ತಿ ಹಿಡಿದು ಸಾಲದ ಮೂರುಪಟ್ಟು ಮೊತ್ತ ಸಂದಾಯಿಸುವ ತೀರ್ಪು ನೀಡಿದರು,
ಆಗ ಭೀಮಣ್ಣನವರಿಗೆ ಬ್ಯಾಂಕಿನವರು ಆಸಲು ಬಡ್ಡಿ ಸಹಿತ ಹಣ ತುಂಬಲು ನೋಟೀಸ ಜಾರಿ ಮಾಡಿ ಮೂರು ತಿಂಗಳಲ್ಲಿ ತುಂಬಲು ಅವಕಾಶ ಮಾಡಿಕೊಟ್ಟರು. ಇದ್ದ ಮನೆ ಮಾರಿದರೂ ಅಷ್ಟು ದುಡ್ಡು ತುಂಬಲು ಸಾಧ್ಯವಿಲ್ಲವಾದ್ದರಿಂದ ಭೀಮಣ್ಣ ಹೌಹಾರಿದರು. ಏನು ಮಾಡಬೇಕೆಂಬ ಚಿಂತೆ ಮನದೊಳಗೆ ಬೇರೂರಿತು. ದೈವೀ ಭಕ್ತರಾದ ಅವರು ಎಲ್ಲ ದೇವರಿಗೆ ಕೈಮುಗಿದು ಬೇಡಿಕೊಂಡರು. ಅದರಂತೆ ಶ್ರೀ ಸಿದ್ಧೂರೂಡರ ಮತ್ತು ಶ್ರೀ ಗುರುನಾಥಾರೂಢರ ಭಕ್ತರಾಗಿರುವದರಿಂದ ಮೇಲಿಂದ ಮೇಲೆ ದರ್ಶನ ಪಡೆಯುತ್ತಿದ್ದರು. ಬ್ಯಾಂಕಿನವರಿಗೆ ರಿಯಾಯಿತಿ ಪತ್ರ ಬರೆದರೂ ಸಾಧ್ಯವಾಗಲಿಲ್ಲ, ಅವರು ಬಹಳಷ್ಟು ಖಿನ್ನ ಮನಸ್ಕರಾಗಿ ಒಂದು ದಿನ ಮನಸ್ತಾಪವಾಗಿ ಶ್ರೀಸಿದ್ದರ ಗದ್ದುಗೆಗೆ ನಮಸ್ಕರಿ, ಶ್ರೀಗುರುನಾಥಾರೂಢರ ಗದ್ದುಗೆಯ ಮುಂದೆ ನಿಂತು ಸದ್ಗುರು ತಂದೆ ಸಾಲದ ಹೊರೆಯಿಂದ ನಾನು ಜೀವನ ನಡೆಸುವುದು ಕಷ್ಟವಾಗಿದೆ. ನೀನಲ್ಲದೆ ನನಗೆ ಬೇರಾರೂ ಗತಿಯಿಲ್ಲ. ಆದ್ದರಿಂದ ನೀನೆ ಈ ಸಂಕಟದಿಂದ ಹೇಗಾದರೂ ಪಾರು ಮಾಡಿ ಕಾಪಾಡು ತಂದೆ ಎಂದು ಅನನ್ಯ ಭಕ್ತಿಯಿಂದ ದುಃಖದಿಂದ ಬೇಡಿಕೊಂಡು ಕೈಮುಗಿದು ನಿಂತಾಗ, ಐದು ಅಡಿ ಅಂತರದಲ್ಲಿದ್ದ ಶ್ರೀಗಳ ಮೂರ್ತಿಯ ಕೊರಳೊಳಗಿನ ಮಾಲೆಯಲ್ಲಿಯ ಒಂದು ಸಂಪಿಗೆಯ ಹೂವು ಚಟ್ಟನೇ ಹಾರಿ ಭೀಮಣ್ಣನ ಎದೆಗೆ ಬಡಿದು ಅವನ ಕೈಯ್ಯಲ್ಲಿ ಬಿತ್ತು. ಆಗ ಭೀಮಣ್ಣನ ವರಭಾವದಲ್ಲಿ ಶ್ರೀಗಳು ನೀನು ಭಯಪಡಬೇಡ ಎಲ್ಲವೂ ಸರಿಯಾಗುತ್ತದೆ ಎಂಬ ಸೂಚನೆ ನೀಡಿದ್ದಾರೆಂದು ಆನಂದ ಭಾಷ್ಪಗಳನ್ನು ಸುರಿಸಿ ಮನೆಗೆ ಬಂದರು. ಅದೇ ದಿನ ರಾತ್ರಿ ಅವರ ಕನಸಿನಲ್ಲಿ ಶ್ರೀಸಿದ್ದಾರೂಢರು ಜಾಕೀಟ ಹಾಕಿ ಕೊಂಡಂತಹ ಮತ್ತೊಬ್ಬ ವ್ಯಕ್ತಿ ಜೊತೆಗೆ ಬಂದು ಆಶೀರ್ವದಿಸಿ ಅಂತರ್ಧಾನ ಹೊಂದಿದರು. ಮರುದಿನವೂ ಶ್ರೀಗಳ ದರ್ಶನಕ್ಕೆ ಹೋದಾಗ ಆದೇ ರೀತಿಯಾಯಿತು.
ಭೀಮಣ್ಣ ಮರುದಿನ ಬ್ಯಾಂಕಿಗೆ ಹೋದಾಗ ಬ್ಯಾಂಕಿನ ಮ್ಯಾನೇಜರರು ಭೀಮಣ್ಣನವರೇ, ನೀವು ಕೋರ್ಟಿನ ತೀರ್ಪಿನಂತೆ ಸಾಲದ ಪೂರ್ಣ ಹಣ ಸಂದಾಯ ಮಾಡುವ ಅವಶ್ಯಕತೆಯಿಲ್ಲ. ಅದರ ಬದಲಾಗಿ ಒಂದು ಮೂರಾಂಶ ಹಣ ಕಟ್ಟಿದರೆ ಸಾಕು ಎಂದು ಹೇಳಿ ಆ ಪ್ರಕಾರ ಒಂದು ಪತ್ರ ಬರೆದು ಕೊಟ್ಟದ್ದು ಒಂದು ಪವಾಡವೇ ಎಂದರೇ ತಪ್ಪಾಗಲಾರದು. ಆಗ ಭೀಮಣ್ಣನವರಿಗೆ ಆದ ಆನಂದ ಅಷ್ಟಿಷ್ಟಲ್ಲ .ಅವರು ಮನೆಗೆ ಬಂದು ಎಲ್ಲರಿಗೂ ಮತ್ತು ವಕೀಲರಿಗೂ ಹೇಳಿದಾಗ ಅವರು ಅಚ್ಚರಿಗೊಂಡು ಇಷ್ಟೊಂದು ರಿಯಾಯಿತಿ ನಿಮಗೆ ಹೇಗೆ ಸಿಕ್ಕಿತು. ಇದು ಅಸಾಧ್ಯ ಮಾತು ಎಂದು ಹೇಳಿದಾಗ ಭೀಮಣ್ಣನವರು ಹೇಳಿದ್ದೇನೆಂದರೆ, ಈ ರಿಯಾಯಿತಿ ಸಿಕ್ಕಿದ್ದು ಶ್ರೀಗುರು ನಾಥಾರೂಢರಿಂದಲೇ ಸಿಕ್ಕಿದೆ ಇದರಲ್ಲಿ ನನ್ನದೇನೂ ಇಲ್ಲ ಎಂದು ಹೇಳಿ ಮುಂದೆ ಹಣತುಂಬಿ ಋಣಮುಕ್ತರಾದರು.
ನಂಬಿದರವರೂ ಬಡವರು ಶ್ರೀಮಂತರು, ರೋಗಷ್ಠರು, ಹುಚ್ಚರೋ ಜಾಣರೋ ಅಂತ ನೋಡದೆ ಯಾರು ಕಷ್ಟದ ಲ್ಲಿ ಇರುತ್ತಾರೆ ಅವರನ್ನು ಸದ್ಗುರು ಸದಾ ರಕ್ಷಿಸುತ್ತಾನೆ,
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
