ಚಿದ್ಧನಾನಂದರ ಸಮಾಧಿ ಅಲ್ಲಿ ಲೀಲೆ
🌺 ಚಿದ್ಧನಾನಂದರ ಸಮಾಧಿ ಅಲ್ಲಿ ಲೀಲೆ 🌺
ಚಿದ್ಘನಾನಂದರ ಸಮಾಧಿಯ ಮೇಲೆ ಒಂದು ಖೋಲಿ ಕಟ್ಟಿಸಿದ್ದರು. ಒಂದು ದಿನ ಸಮಾಧಿಯ ಮೇಲಿನ ಪಾದುಕೆಗಳ ಮೇಲೆ ಆರೂಢರು ಕಾಲಿಟ್ಟು ಕುಳಿತಿದ್ದರು, ಆಗ ಚಿದ್ಘನಾನಂದರ ವಂಶಜರು ಗದುಗೆಯ ದರ್ಶನಕ್ಕೆ ಬಂದಾಗ ಈ ದೃಶ್ಯವನ್ನು ನೂಡಿ ಕ್ರೋಧದಿಂದ ಸಿದ್ದರೇ, ನಿಮಗೆ ತಿಳಿಯುವುದಿಲ್ಲವೆ? ಪಾದುಕೆಗಳ ಮೇಲೆ ಕಾಲಿಟ್ಟು ಕುಳಿತಿರುವಿರಿ. ನಿಮ್ಮಂಥವರಿಗೆ ಇದು ಯೋಗ್ಯವೇ? ಎಂದು ಗದರಿ ಅವರ ಕೈ ಹಿಡಿದು ಹೊರಗೆ ಹಾಕಿ ಖೋಲಿಗೆ ಕೀಲಿ ಹಾಕಿ ಹೋದರು.
ಅದೇ ದಿನ ಚಿದ್ಘನಾನಂದರು ಅವರ ವಂಶಜರ ಕನಸಿನಲ್ಲಿ ಹೋಗಿ ಕ್ರೋಧದಿಂದ ನೀವು ಸಿದ್ಧರನ್ನು ಸಮಾಧಿ ಖೋಲಿಯಿಂದ ಹೊರಗೆ ಹಾಕಿದ್ದೇಕೆ? ನಾನು ಅವರನ್ನು ಬಹಳ ಪ್ರೀತಿಸುತ್ತೇನೆ. ನಾಳೆಯೆ ಸಮಾಧಿ ಖೋಲಿಯ ಮೇಲೆ ತೆರೆದು ಅವರನ್ನು ಅಲ್ಲಿ ಇರಗೊಟ್ಟರೆ ಒಳ್ಳೆಯದು. ಇಲ್ಲವಾದರೆ ನಿಮ್ಮನ್ನು ಪೂರ್ಣ ನಿರ್ನಾಮ ಮಾಡುತ್ತೇನೆ' ಎಂದು ಹೇಳಿ ಅದೃಶ್ಯರಾದರು.
ಮರುದಿವಸ ಅವರ ವಂಶಜರು ಬಂದು ಖೋಲಿಯ ಕೀಲಿ ತೆರೆದು ಸಿದ್ದರಲ್ಲಿ ಕ್ಷಮೆಯಾಚಿಸಿ `ಗುರುಗಳೇ, ನಾವು ನಿಮಗೆ ಬಹಳ ಅಪಚಾರ ಮಾಡಿದ್ದೇವೆ, ನಮ್ಮನ್ನು ಕ್ಷಮಿಸಿ, ತಾವು ಆ ಸಮಾಧಿಯ ಖೋಲಿಯಲ್ಲಿರಬೇಕು' ಎಂದು ದೈನ್ಯದಿಂದ ಬೇಡಿಕೊಂಡರು. ಆಗ ಸ್ವಾಮಿಗಳು ಹೇಳಿದರು ನನಗೆ ಆ ಸಮಾಧಿ ಮಂದಿರದಲ್ಲಿದ್ದರೆ ಮಾತ್ರ ಸುಖ ಸಿಗುತ್ತದೆಯೆಂದೇನೂ ಇಲ್ಲ. ನಾನು ಎಲ್ಲಿ ಬೇಕಾದರೂ ಸುಖದಲ್ಲಿರುತ್ತೇನೆ. ನನಗೇನೂ ಬೇಡ' ಎಂದು ತಿರಸ್ಕರಿಸಿದರು. ಆಗ ವಂಶಜರು 'ಶ್ರೀ ಗುರುವೇ, ನೀವು ದಯಾಘನರು ಇನ್ನು ಮುಂದೆ ನಿಮಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ನಮ್ಮ ತಪ್ಪನ್ನು ಮನ್ನಿಸಿ ಕಾಪಾಡಿರಿ' ಎಂದಾಗ ಗುರುಗಳು ಅವರನ್ನು ಕ್ಷಮಿಸಿ ಸಮಾಧಿ ಮಂದಿರದಲ್ಲಿರಹತ್ತಿದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
