ಗಿರಣಿ ಛಾಳದಲ್ಲಿ ಸಿದ್ಧರ ಗುಡಿ ಸ್ಥಾಪನೆ
ಆಗಿನ ಕಾಲದ ಹುಬ್ಬಳ್ಳಿಯಲ್ಲಿ ಬಟ್ಟೆ ತಯಾರಿಸುವ ಭಾರತಮಿಲ್ಲಿನ ಕೆಲಸಗಾರರಿಗೆ ವಾಸಿಸಲು ಕಟ್ಟಿಸಿಕೊಟ್ಟ ಗಿರಣಿ ಚಾಳಿನಲ್ಲಿ ಚಾಳಿನ ಪಶ್ಚಿಮ ದಿಕ್ಕಿನಲ್ಲಿರುವ ಜನರು ಒಂದು ಭಜನಾ ಮಂಡಳಿಯನ್ನು ಕಟ್ಟಿಕೊಂಡು, ಅದರ ಮುಖಾಂತರ ಶ್ರೀಸಿದ್ಧಾರೂಢರ ಸಣ್ಣಮಂದಿರವನ್ನು ಕಟ್ಟಿ, ಶ್ರೀಗಳ ಸಣ್ಣ ಮೂರ್ತಿಯನ್ನು ನಿರ್ಮಿಸಿಟ್ಟು ಭಜನೆ ಪೂಜೆ ಮಾಡುತ್ತಿದ್ದರು. ಶ್ರಾವಣ ಮಾಸದ ಸಪ್ತಾಹ ಕಾಲಕ್ಕೆ ಶ್ರೀ ಸಿದ್ಧಾರೂಢರನ್ನು ಕರೆಸಿ ಪಾದ ಪೂಜಿಸಿ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಶ್ರೀಸಿದ್ದಾರೂಢರ ನಂತರ ಶ್ರಾವಣ ಮಾಸದಲ್ಲಿ ಶ್ರೀಗುರುನಾಥರನ್ನು ಕರೆಸಿ ಪೂಜಿಸಿ ಪ್ರಸಾದ ವಿತರಿಸುತ್ತಿದ್ದರು. ಆಗ ಅದೇ ಚಾಳಿನ ಪೂರ್ವಭಾಗದಲ್ಲಿದ್ದ ಭಕ್ತ ನಾಗಪ್ಪ ಬೆನಕನಡೋಣಿಯವರೂ ಅದೇ ಸಮಯದಲ್ಲಿ ಶ್ರೀಗುರುನಾಥರನ್ನು ತಮ್ಮ ಮನೆಗೆ ಕರೆದು ಪೂಜಿಸಿ ಶ್ರೀಗಳ ಕೃಪೆಗೆ ಪಾತ್ರರಾಗುತ್ತಿದ್ದರು.
ಮುಂದೆ ಅದೇ ಚಾಳಿನ ಪೂರ್ವಭಾಗದ ಭಕ್ತರು ತಮ್ಮಲ್ಲಿಯೂ ಒಂದು ಭಜನಾ ಮಂಡಳಿಯನ್ನು ಕಟ್ಟಿಕೊಂಡು ಅಲ್ಲಿರುವ ಸಣ್ಣ ಮಾರುತಿ ಮಂದಿರದ ಅಂಗಳದಲ್ಲಿ ಭಜನೆ ಪ್ರಾರಂಭಿಸಿದರು. ಮಳೆಗಾಲದಲ್ಲಿ ಭಜನೆ ಮಾಡಲು ತೊಂದರೆಯಾದಾಗ ಅಲ್ಲಿಯ ಪ್ರಮುಖರಾದ ನಾಗಪ್ಪ ಬೆನಕನಡೋಣಿ, ಮಲ್ಲಪ್ಪ ಕಂಬಳಿ, ಹನುಮಂತಪ್ಪ ಪುಂಡಿ ಮುಂತಾದವರು ಕೂಡಿ ಹತ್ತಿರದ ಮನೆಯವರಾದ ಮಲ್ಲಪ್ಪ ಕಂಬಳಿಯವರ ಅಪ್ಪಣೆ ಪಡೆದು ಎರಡು ಕೋಣೆಗಳಿರುವ ಮನೆಯ ಮುಂಭಾಗದ ಖೋಲಿಯಲ್ಲಿ ಭಜನೆ ಪ್ರಾರಂಭಿಸಿದರು.
ಒಂದು ದಿನ ಶ್ರಾವಣ ಮಾಸದಲ್ಲಿ ಮೊದಲಿನ ಮಠದಲ್ಲಿ ಶ್ರೀಗುರುನಾಥರು ಪೂಜೆ ಮುಗಿಸಿಕೊಂಡು ನಾಗಪ್ಪ ಬೆನಕನಡೋಣಿಯವರ ಮನೆಗೆ ಪೂಜೆಗೆ ಹೋಗದೆ ಕಂಬಳಿಯವರ ಮನೆಗೆ ಹೋಗಿ ಸುಮ್ಮನೇ ಕುಳಿತರು. ಆಗ ಭಕ್ತರು ಮಲ್ಲಪ್ಪನವರ ಮನೆ ಹೋಗಿ ಶ್ರೀಗುರುನಾಥರಿಗೆ ಪೂಜಿಸಿ ಅವರ ಆಶೀರ್ವಾದಕ್ಕೆ ಪಾತ್ರರಾಗಿ ಸಿದ್ದಾರೂಢ ಮಠಕ್ಕೆ ಟಾಂಗಾದಲ್ಲಿ ಕಳಿಸಿದರು. ಆಗ ಭಕ್ತರು ತಮ್ಮ ತಮ್ಮಲ್ಲಿ ವಿಚಾರ ವಿನಿಮಯ ಮೂಲ ಶ್ರೀಗುರುನಾಥರು ಕುಳಿತುಹೋದ ಮನೆಯು ಪವಿತ್ರವಾಗಿದೆ. ಅಲ್ಲಿಯೂ ಒಂದು ಗುಡಿಯನ್ನು ನಿರ್ಮಿಸಬೇಕೆಂದು ತೀರ್ಮಾನಿಸಿ, ಭಾರತಮಿಲ್ಲಿನ ಮ್ಯಾನೆಜರ ನಾರಾಯಣ ಸೆಟರಿಗೆ ಭೆಟ್ಟಿಯಾಗಿ ಸೇಠರೇ ಮಲ್ಲಪ್ಪ ಕಂಬಳಿಯವರ ಮನೆಯಲ್ಲಿ ಸಿದ್ಧಾರೂಢರ ಮಂದಿರವನ್ನು ಕಟ್ಟಬೇಕೆಂದು ವಿಚಾರ ಮಾಡಿದ್ದೇವೆ. ತಾವು ಅನುಮತಿ ಕೊಡಿರಿ ಎಂದಾಗ ನಾರಾಯಣ ಸೇಠರು ಅನುಮತಿ ನೀಡದೆ ಬೆದರಿಸಿ ಕಳಿಸಿದರು.
ಅಂದೇ ನಾರಾಯಣ ಸೆಠ ರಾತ್ರಿ ಮಲಗಿದಾಗ ಕೆಟ್ಟು ಕನಸು ಕಂಡರು ಎದ್ದರು ತಕ್ಷಣ ತಾವು ಮಲಗಿದ ಮಂಚದ ಮೇಲಿದ್ದ ಗಾದಿಗೆ ಬೆಂಕಿ ಹತ್ತಿತು. ಇದನ್ನು ಕಂಡ ಸೇಠರು ಎದ್ದು ದೂರ ಸರಿದು ಗಾಬರಿಯಾಗಿ ವಿಚಾರ ಮಾಡುತ್ತ ನಿನ್ನೆ ಚಾಳಿನ ಭಕ್ತರು ನನ್ನಲ್ಲಿ ಬಂದು ಸಿದ್ಧಾರೂಢರ ಗುಡಿ ಕಟ್ಟಬೇಕೆಂದು ವಿನಂತಿಸಿದ್ದರು. ನಾನು ಅವರನ್ನು ತಾತ್ಸಾರ ಮಾಡಿ ಸಿಟ್ಟಿಗೆದ್ದು ಬೆದರಿಸಿ ಕಳಿಸಿದನು. ಶ್ರೀಸಿದ್ದಾರೂಢರು ದೊಡ್ಡ ಜ್ಞಾನಿ, ಯೋಗಿಪುರುಷರು. ಅವರ ಗುಡಿ ಕಟ್ಟಲು ನಿರಾಕರಿಸಿದ್ದರಿಂದ ಹೀಗೆ ಆಗಿರಬಹುದು ಎಂದು ಪಶ್ಚಾತಾಪಪಟ್ಟು, ಮರುದಿನ ಮಿಲ್ಲಿನ ಭಕ್ತರನ್ನು ಮತ್ತು ಚಾಳಿನ ಪ್ರಮುಖ ವಾಚಮನ್ ಬಾಬುರಾವ ಜಮಾದಾರ ಅವರನ್ನು ಕರೆದು ಗುಡಿ ಕಟ್ಟಲು ಅನುಮತಿ ನೀಡಿದರು. ಆಗ ಭಕ್ತರಿಗಾದ ಆನಂದ ಹೇಳತೀರದು. ನಂತರ ವಾಚಮನ್ನನಿಗೆ ಹೇಳಿದರು. ಭಕ್ತರಿಗೆ ಗುಡಿ ಕಟ್ಟಬೇಕಾದ ಮನೆಯವರನ್ನು ಆ ಮನೆಯಿಂದ ಬಿಡಿಸಿ ಇನ್ನೊಂದು ಕಡೆಯಿದ್ದ ಖಾಲಿ ಮನೆಯನ್ನು ಅವರಿಗೆ ಕೊಟ್ಟು ಭಕ್ತರಿಗೆ ಗುಡಿಕಟ್ಟಲು ಅನುಕೂಲ ಮಾಡಿಕೊಡು ಎಂದು ಆಜ್ಞಾಪಿಸಿದರು.
ಆಮೇಲೆ ವಾಚಮನ್ನರು ಬಂದು ಆ ಮನೆಯಲ್ಲಿರುವ ಮಲ್ಲಪ್ಪ ಕಂಬಳಿಯವರನ್ನು ಆ ಮನೆಯಿಂದ ಬಿಡಿಸಿ ಬೇರೊಂದು ಮನೆಗೆ ಅವರನ್ನು ಕಳಿಸಿ, ಗುಡಿ ಕಟ್ಟಲು ಅನುಕೂಲ ಮಾಡಿ ಕೊಟ್ಟರು. ನಂತರ ಆ ಮನೆಯನ್ನೇ ಭಕ್ತರು ಗುಡಿಯಾಗಿ ಪರಿವರ್ತಿಸಿದರು. ಆಮೇಲೆ ಅಲ್ಲಿ ಸಿದ್ದಾರೂಢ ಮೂರ್ತಿಯನ್ನು ತಾತ್ಕಾಲಿಕವಾಗಿ ನಿರ್ಮಿಸಿ ಭಜನೆ ಪೂಜೆ ನಡೆಸುತ್ತಿದ್ದರು. ಮುಂದೆ ಶ್ರೀಗುರುನಾಥ ಸ್ವಾಮಿಯವರನ್ನು ಕರೆಸಿ ಪೂಜಿಸಿ ಅನ್ನ ಸಂತರ್ಪಣೆ ಮಾಡಿ ಗುರುಗಳನ್ನು ಟಾಂಗಾದಲ್ಲಿ ಮಠಕ್ಕೆ ಕಳಿಸುತ್ತಿದ್ದರು.
ಈ ಮಧ್ಯೆ ಒಂದು ಅವಿಸ್ಮರಣೀಯವಾದ ಘಟನೆ ನಡೆಯಿತು. ಅದೆಂದರೆ ಒಂದು ರಾತ್ರಿ ಸುಮಾರು ನಾಲ್ಕು ಗಂಟೆಗೆ ಗುಡಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಲ್ಲಿ ಮಂಗಳಾರತಿ ಕೇಳಿಬರುತ್ತಿತ್ತು. ಅದನ್ನು ಮೋಹನರಾಯರು, ನೀಲಪ್ಪ ಲಗುಮಪ್ಪ ವಂಟಮುರಿ ಇವರು ಮಂಗಳಾರತಿ ಧ್ವನಿ ಕೇಳಿ ಆಶ್ಚರ್ಯಚಕಿತರಾಗಿ ಮರುದಿನ ಎಲ್ಲ ಭಕ್ತರಿಗೆ ತಿಳಿಸಿದಾಗ, ಭಕ್ತರೆಲ್ಲರೂ ಇದೊಂದು ಜಾಗ್ರತಸ್ಥಾನವೆಂದು ನಂಬಿ ಕಾಲಾ ನಂತರ ಎಲ್ಲರೂ ಸಂಘಟಿತರಾಗಿ ಹಂಚಿನ ಚಪ್ಪರದ ಗುಡಿಯನ್ನು ತೆಗೆದು ಒಂದು ಅಂತಸ್ತಿನ ಆರ್ .ಸಿ.ಸಿ. ಗುಡಿಯನ್ನು ಕಟ್ಟಿ, ಶ್ರೀಸಿದ್ಧಾರೂಢರ ದರ್ಶನ ಗದ್ದುಗೆ ನಿರ್ಮಿಸಿ, ಅಮೃತಶಿಲೆಯ ಮೂರ್ತಿ ಸ್ಥಾಪಿಸಿ ಮಂಟಪಕಟ್ಟಿ, ಸುತ್ತಗೋಡೆಗೆ ಅಮೃತ ಶಿಲೆಯ ಕಲ್ಲು ಮತ್ತು ನೆಲಕ್ಕೆ ಅದೇ ಶಿಲೆಯ ಕಲ್ಲುಗಳನ್ನು ಜೋಡಿಸಿ ಸುಂದರವಾದ ಮಂದಿರ ನಿರ್ಮಿಸಿದರು. ಪ್ರತಿದಿನ ಭಜನೆ ಮಂಗಳಾರತಿ ಕಾರ್ಯಗಳನ್ನು ಮಾಡುತ್ತ ನಡೆದರು. ಅಂದು ಶ್ರೀಗುರುನಾಥರು ಕುಳಿತ ಸ್ಥಾನ ಒಂದು ಸಣ್ಣ ಪವಿತ್ರ ಕ್ಷೇತ್ರವಾಯಿತು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
