ಗುರುನಾಥನ ಕೃಪಾ ಆಶೀರ್ವಾದದಿಂದ ಬಸಪ್ಪನಲ್ಲಿ ಭಕ್ತಿ ಬಂತು




ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಬಸಪ್ಪ ಶಿರೋಳ ಅವನೊಬ್ಬ ನಾಸಿಕ, ದೇವರು ಎಂದರೆ ಸಿಟ್ಟು ಬರುತ್ತಿತ್ತು. ಎಲ್ಲಿಯಾದರೂ ಕೀರ್ತನೆ, ಭಜನೆ, ಪ್ರವಚನ ನಡೆಯುತ್ತಿದ್ದರೆ ಇವರೆಲ್ಲ ತಲೆಕೆಟ್ಟವರು, ಕಾಣದದೇವರ ಬಗ್ಗೆ ಹೇಳುತ್ತಾರೆ. ಒಂದು ಪುಸ್ತಕ ಹಿಡಿದು ಒಬ್ಬ ಮುದುಕ ಏನೇನೋ ಹೇಳುತ್ತಾನೆ, ವಯಸ್ಸಾದವರು ಅದನ್ನು ನಂಬಿ ಕೇಳುತ್ತಾರೆ. ಇದೆಲ್ಲ ಬೂಟಾಟಿಕೆ ಹಾಗೆ ಹೀಗೆ ಎಂದು ಮಾತಾಡುತ್ತಿದ್ದನು.
ಒಂದು ದಿನ ತನ್ನ ಹೊಟ್ಟೆಯಲ್ಲಿರುವ ಕರುಳಿನ ನೋವಿನಿಂದ ತಲೆನೋವು ಮೇಲಿಂದ ಮೇಲೆ ಬರುತ್ತಿತ್ತು. ಹುಬ್ಬಳ್ಳಿಯ ಪ್ರಸಿದ್ದ ಡಾಕ್ಟರರಲ್ಲಿ ತೋರಿಸಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿದರೂ ಗುಣವಾಗಲಿಲ್ಲ. ಆಯುರ್ವೇದ ಹಾಗೂ ಹೋಮಿಯೋಪಥಿ ಡಾಕ್ಟರರಲ್ಲಿ ತೋರಿಸಿದರೂ ಗುಣವಾಗಲಿಲ್ಲ, ನೆಲಹಿಡಿಯುವ ಪ್ರಸಂಗ ಬಂದಿತು. ಅವನ ಉಪಚಾರ ಮಾಡಿ ಮಾಡಿ ಮನೆಯ ಜನರಿಗೆ ಬೇಸರವಾಯಿತು. ಏನು ಮಾಡಬೇಕೆಂದು ತೋಚದಾಯಿತು. ಅವನ ಹತ್ತಿರ ಅವನಬ್ಬ ಗೆಳೆಯನು ಬಂದು, ಈ ನಿನ್ನ ಬೇನೆ ಯಾವ ಡಾಕ್ಟರರಿಂದಲೂ ಗುಣವಾಗುವದಿಲ್ಲ, ಶ್ರೀ ಗುರುನಾಥಾರೂಢರು ಪ್ರತ್ಯಕ್ಷ ದೇವರು. ಅವರ ದರ್ಶನದಿಂದ ಮಾತ್ರ ನಿನ್ನ ನೋವು ಗುಣವಾಗುತ್ತದೆ. ಇದಕ್ಕೆ ಇದೊಂದೇ ಉಪಾಯ ಎಂದು ಹೇಳಿದ.
ಆದರೆ ಬಸಪ್ಪ ತನ್ನ ಗೆಳೆಯನ ಮಾತು ನಂಬದೆ ಹೇಳಿದ. ನೋಡು ಗೆಳಯ ಯಾರಾದರೇನು ಅವರೂ ಮನುಷ್ಯರೆ. ಎಂಥೆಂಥ ವೈದ್ಯರಿಂದ ಗುಣವಾಗಲಿಲ್ಲ. ಸುಮ್ಮನೇ ಹೇಳುತ್ತಿರುವೆ. ಇದು ನನ್ನಿಂದಾಗದು ಹೋಗು ಎಂದು ತನ್ನ ನೋವು ತಾಳಲಾರದೆ ಸಿಟ್ಟಿಗೆದ್ದು ಹೇಳಿ ಕಳಿಸಿದನು. ಆದರೆ ಅವನ ನೋವು ಹೆಚ್ಚಾದಾಗ ಸಿದ್ದಾರೂಢರ ಭಕ್ತನಾದ ಒಬ್ಬ ವಯಸ್ಸಾದ ತನ್ನ ಓಣಿಯ ಮುದುಕ ಬಂದು, ಬಸಪ್ಪ ಶ್ರೀ ಗುರುನಾಥರೆಂದರೆ ಸೃಷ್ಟಿಕರ್ತ,
ದೇವರು. ಭವರೋಗ ವೈದ್ಯರು, ಆ ದೇವರೇ ಅವತಾರಗೈದು ಧರೆಗೆ ಬಂದಿದ್ದಾರೆ, ಮಾತನ್ನು ನಂಬಿ, ಇದು ಕೊನೆಯ ಉಪಾಯವೆಂದು ತಿಳಿದು ಶ್ರೀಗಳ ಭಕ್ತಿಮಾಡು ನೀನು ಗುಣ ಹೊಂದುತ್ತಿ ಎಂದು ಹೇಳಿ ಹೋದ.
ಆಗ ಬಸಪ್ಪ ತನ್ನ ಮನಸ್ಸಿನಲ್ಲಿ ಈ ಯಜಮಾನರು ಹೇಳುತ್ತಾರೆ ಕೊನೆಯ ಮಾಡಿ ನೋಡೋಣ ಎಂದು, ಒಂದು ಸೋಮವಾರ ಮಠಕ್ಕೆ ಹೋಗಿ ಮಂಟಪದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಸಿದ್ಧಾರೂಢರ ಮೂರ್ತಿ ಮತ್ತು ಶ್ರೀ ಗುರುನಾಥರ ದರ್ಶನವನ್ನು ಒಲ್ಲದ ಮನಸ್ಸಿನಿಂದ ದರ್ಶನ ಮಾಡಿಕೊಂಡು ಮಂಗಳಾರತಿ ನಂತರ ಮನೆಗೆ ಬಂದು ವಿಚಾರಮಾಡಿದ. ಅದೆಂದರೆ ಸಾವಿರಾರು ಭಕ್ತರು ಮಠಕ್ಕೆ ಬಂದು ಬಡವ ಬಲ್ಲಿದ ಶ್ರೀಮಂತರೆಲ್ಲರೂ ಮಠಕ್ಕೆ ಹೋಗಿ ದರ್ಶನ ಪಡೆಯುತ್ತಾರೆ. ಅವರು ಹುಚ್ಚರಿರಲಿಕ್ಕಿಲ್ಲ ಆದ್ದರಿಂದ ದಿನಾಲು ಶ್ರೀಗಳ ದರ್ಶನ ಮಾಡಿಕೊಂಡು ಬರುವ ಕೊನೆಯ ಉಪಾಯ ಮಾಡುತ್ತೇನೆ ಎಂದು ನಿರ್ಧರಿಸಿ, ದಿನಾಲು ಸಾಯಂಕಾಲ ಮಠಕ್ಕೆ ಹೋಗಿ ಗುರುದ್ವಂತ ದರ್ಶನ ತೆಗೆದುಕೊಳ್ಳುತ್ತ ನಡೆದ. 
ಕೆಲವು ದಿವಸ ಕಳೆದ ನಂತರ ಶ್ರೀ ಗುರುನಾಥರ ಇರುವಿಕೆಯನ್ನು ಕಂಡು ಅವರ ಮೇಲೆ ಭಕ್ತಿ ಹೆಚ್ಚಾಯಿತು. ಒಂದು ದಿನ ಸಾಯಂಕಾಲ ಗುರುನಾಥರ ದರ್ಶನಕ್ಕೆ ಹೋದಾಗ ಶ್ರೀಗಳು ಅಡುಗೆಯ ಮನೆಯಲ್ಲಿರುವ ತಮ್ಮ ಖೋಲಿಯಿಂದ ಹೊರಗೆ ಬಂದಾಗ, ಬಸಪ್ಪನ ಭಕ್ತಿ ಉಮ್ಮಳಿಸಿ ಬಂದು ಅಳುತ್ತ ಶ್ರೀಗಳೇ ಈವರೆಗೆ ಪ್ರಪಂಚದಲ್ಲಿ ಪಶುವಿನಂತೆ ನಡೆದುಕೊಂಡ. ಸಂತರನ್ನು ಟೀಕಿಸಿದೆ. ತಪ್ಪಾಗಿ ತಿಳಿದುಕೊಂಡು ನಡೆದುಕೊಂಡಿದ್ದೇನೆ. ಅವೆಲ್ಲವನ್ನೂ ಮನ್ನಿಸಿ ನನ್ನ ನೋವನ್ನು ಶಮನಗೊಳಿಸು ತಂದೆ ಎಂದು ಅಳುತ್ತ ಸಾಷ್ಟಾಂಗ ನಮಿಸಿ ಎದ್ದು ನಿಂತಾಗ, ಗುರುಗಳು ಕರುಣೆಯಿಂದ ನಗುತ್ತ ತಲೆಗೆ ಪಟ್ಟೆಂದು ಹೊಡೆದರು. ಆಗ ಬಸಪ್ಪ ನಗುತ್ತಿದ್ದಾಗಲೇ ಅರ್ಧ ತಲೆ ನೋವು ಮಾಯವಾಯಿತು. ಪುನಃ ಗುರುಗಳು ಅವನ ಹೊಟ್ಟೆಗೆ ಒದ್ದರು. ಆಗ ಅರ್ಧದಷ್ಟು ಹೊಟ್ಟೆನೋವು ಶಮನವಾಯಿತು. ಆಗ ಬಸಪ್ಪ ಗುರುನಾಥರನ್ನು ಪ್ರತ್ಯಕ್ಷ ದೇವರೆಂದು ನಂಬಿ, ದಿನಾಲು ಅವರ ದರ್ಶನ ಪಡೆಯುತ್ತ ಹೋದಂತೆ ಪೂರ್ಣ ಗುಣವಾದನು.



ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ