ಸಂಚಾರ ಸಮಯದಲ್ಲಿ ರೊಟ್ಟಿ ಕೊಟ್ಟ ಯಾದವಾಡದ ತಾಯಿಯನ್ನು 40 ವರ್ಷದ ನಂತರ ಗುರುತಿಸಿ ಹಾರೈಸಿ ಕಳಿಸಿದ ಕಥೆ
🌺 ಸಿದ್ಧರು ಯಾದವಾಡದ ತಾಯಿಯನ್ನು ಗುರುತಿಸಿ ಹಾರೈಸಿ ಕಳಿಸಿದ ಕಥೆ 🌺
ಸಿದ್ಧಾರೂಢರು ಸಂಚಾರ ಮಾಡುತ ಹುಬ್ಬಳ್ಳಿ ಕಡೆ ಬರುತ್ತಾ ಇರುವಾಗ ಹಾದಿಯಲ್ಲಿ ಹೋಲದಲ್ಲಿ ಗುಡಿಸಲು ನೋಡಿ ಅದರ ಎದುರು ಸಿದ್ದರು ನಿಂತರು. ಆ ಸಮಯಕ್ಕೆ ಆ ಗುಡಿಸಲಿನಲ್ಲಿಯ ಒಡತಿ ತನ್ನ ಪತಿಗೆ ಊಟಕ್ಕೆ ನೀಡುತ್ತಿದ್ದಳು. ಯಾಜಮಾನನು ಕೈಯಲ್ಲಿಯ ರೊಟ್ಟಿ ಮುರಿದು ಬಾಯಿಯಲ್ಲಿ ಇನ್ನೇನು ಹಾಕಿಕೊಳ್ಳುವಾಗ ಎದುರು ನಿಂತಿದ್ದ ಸಿದ್ದರನ್ನು ಅವನು ನೋಡಿ ಅವನಿಗೆ ದಯೆ ಬಂತು, "ಲಕ್ಷ್ಮಿ ನಮ್ಮ ಗುಡಿಸಿಲಿನೆದುರು ಯಾರೋ ಸಾದುಗಳು ನಿಂತಿದ್ದಾರೆ, ಅವರಿಗೆ ರೊಟ್ಟಿ ನೀಡು' ಎಂದು ಹೇಳಿದ. ಆ ದಂಪತಿಗಳಿಗೆ ಬಡತನ ದುಡಿಯದ ಹೊರತು ಅನ್ನ ಹುಟ್ಟದು. ಬುಟ್ಟಿಯಲ್ಲಿ ಹೆಚ್ಚು ರೊಟ್ಟಿ ಇರಲಿಲ್ಲ. ಆದರೆ ಅನ್ನದಾನ ಮಾಡಬೇಕೆಂಬ ಬುದ್ಧಿ ಹೆಚ್ಚಿತ್ತು. ಆತಾಯಿ ತನ್ನ ಹಾಗೂ ತನ್ನ ಮಕ್ಕಳ ಹೊಟ್ಟಿ ಕಟ್ಟಿ, ಒಂದು ರೊಟ್ಟಿಯ ಮೇಲೆ ಸ್ವಲ್ಪ ಪುಂಡೀಪಲ್ಲೆ ಹಚ್ಚಿಕೊಂಡು ಬಂದಳು. ಆಗ ಸಿದ್ಧರು ದೊಡ್ಡದಾದ ರೊಟ್ಟಿಯ ಮಧ್ಯದಲ್ಲಿ ಸ್ವಲ್ಲೇ ಪುಂಡೀಪಲ್ಲೆ ಕಂಡು, 'ಏನು ತಾಯಿ, ದೊಡ್ಡ ರೊಟ್ಟಿ ಆದರೆ ಪಲ್ಲೆ ಸ್ವಲ್ವೇ ಇದೆಯಲ್ಲ ? ಎಂದು ಅಂದರು. ಆಗ ಆ ತಾಯಿ ಜಾಣ್ಮೆಯಿಂದ ಆ ಪಲ್ಲೆಯನ್ನು ರೊಟ್ಟಿಯ ತುಂಬ ಸವರಿ ಕೊಟ್ಟಳು. ಆ ರೊಟ್ಟಿಯನ್ನು ಕೈಯಲ್ಲಿ ಹಿಡಿದ ಸಿದ್ದರು, 'ತಾಯಿ, ರೊಟ್ಟಿಯ ತುಂಬ ಪಲ್ಲೆ ತುಂಬಿತು. ಮುರಿದು ತಿನ್ನುವದಕ್ಕೆ ಸ್ಥಳವೇ ಉಳಿಯಲಿಲ್ಲ. ನಿನ್ನ ದಾನಗುಣ ದೊಡ್ಡದು' ಎಂದರು. ಆ ತಾಯಿ ನಮಸ್ಕರಿಸಿ ನಿಂತಗಾ ಸಿದ್ದರು ತಾಯೇ, ನಿನ್ನ ಹಾಗೂ ನಿನ್ನ ಮಕ್ಕಳ ಹೊಟ್ಟೆಯನ್ನು ಕಟ್ಟಿ ನನಗೆ ನೀನು ಅನ್ನ ನೀಡಿದೆ. ನಾನೂ ನಿನಗೆ ಅನ್ನ ನೀಡುತ್ತೇನೆ. ಒಡ್ಡು ಉಡಿ' ಎಂದರು. . ಅನ್ನಪೂರ್ಣೇಶ್ವರಿಯ ಅವತಾರದಂತಿದ್ದ ಸಿದ್ಧರು ಆ ಇಡೀ ರೊಟ್ಟಿಯನ್ನು ಅವಳ ಉಡಿಯಲ್ಲಿ ಹಾಕುತ್ತ, 'ತಾಯೇ! ನಿನ್ನ ಮನೆಯಲ್ಲಿ ಸೌಖ್ಯ ಸೂಸಲಿ. ಅನ್ನಪೂರ್ಣೇಶ್ವರಿ ನೆಲೆಸಲಿ ಎಂದು ಆಶೀರ್ವಾದದ ಅಭಯ ವರಹಸ್ತ ಎತ್ತಿ ಹರಸಿದರು. ಆ ತಾಯಿಯು ಕೃತಜ್ಞತಾ ಭಾವದಿಂದ ; ತಂದೆ ನಿಮ್ಮ ಆಶೀರ್ವಾದ ನಮಗಿರಲಿ' ಎಂದು ಬೇಡಿದಳು. ಹಾಗೆ ನೋಡಿದರೆ, ಸಿದ್ಧರಿಗೆ ಸದ್ಯ ಉಣ್ಣುವದಕ್ಕೆ ರೊಟ್ಟಿ ಇರಲಿಲ್ಲ. ಆ ತಾಯಿಯು ತನ್ನ ಹಾಗೂ ತನ್ನ ಮಕ್ಕಳ ಹೊಟ್ಟೆ ಹಸಿವು ಕಟ್ಟಿಟ್ಟು ಆ ಅನ್ನವನ್ನು ಬಾಗಿಲೆದುರಿಗೆ ಬಂದ ಸಿದ್ಧರಿಗೆ ನೀಡಿದ ಅವಳ ತ್ಯಾಗಬುದ್ದಿ ದಾನಗುಣದ ಹೆಗ್ಗಳಿಕೆ, ಹಿರಿಮೆಗೆ, ಸಿದ್ದರು ಆ ತಾಯಿಗೆ ಸಕಲ ಸೌಭಾಗ್ಯವನ್ನು ಕೊಟ್ಟಿದ್ದು ಅವರ ಹೃದಯ ವೈಶಾಲ್ಯತೆಗೆ ಜೀವಂತ ಸಾಕ್ಷಿ. ಹೊರಗೆ ಅವರು ಬಿಕ್ಷುಕರಂತೆ ಕಂಡರೂ ಅವರು ಒಳಗೆ ಕುಬೇರನೇ ಆಗಿದ್ದರು. ಅವರ ಕೈಯಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿದ್ದಳು.
(ಇದು ನೆಡೆದು ಸಿದ್ಧಾರೂಢರು ಸಂಚಾರ ಮಾಡುತ್ತ ಹುಬ್ಬಳ್ಳಿಯಲ್ಲಿ ನೆಲಸಿದಾಗ ಒಮ್ಮೆ ಜಾತ್ರೆಗೆ ಯಾದವಾಡದ ಆ ತಾಯಿ ಬಂದಿದ್ದಳು )
ಈ ಯಾದವಾಡದ ತಾಯಿಯೂ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಹುಬ್ಬಳ್ಳಿಗೆ ಬಂದಳು. ಆಗಲೇ ಅವಳು ತುಂಬ ಶ್ರೀಮಂತಗಳಾಗಿದ್ದಳು. ಮನೆಯಲ್ಲಿ ಸಂಪತ್ತು ಸೌಭಾಗ್ಯ ಶಾಂತಿ ಸಮಾಧಾನಗಳು ಸೂರೆಗೊಂಡಿದ್ದವು. ಅವಳು ಮಠದ ಮುಂದಿದ್ದ ಕೆರೆಯಲ್ಲಿ (ಈಗ ಆ ಕೆರೆಯನ್ನು ಮುಚ್ಚಲಾಗಿದೆ) ಮುಖ ತೊಳೆಯುವಾಗ, ಸಿದ್ಧಾರೂಢರು ದೊಡ್ಡ ಅಡಿಗೆ ಮನೆಯಿಂದ ಶಿವರಾತ್ರಿ ಕಾರ್ಯಕ್ರಮಕ್ಕೆಂದು ವೇದಿಕೆಯ ಕಡೆಗೆ ಬರುತ್ತಿದ್ದರು. ಆಗ ಕೈಲಾಸ ಮಂಟಪ ಇರಲಿಲ್ಲ. ಸಿದ್ಧಾರೂಢರ ಸಮಾಧಿಯ ಎದುರಿನಲ್ಲಿ ಕಾರ್ಯಕ್ರಮಗಳು ಏಳು ದಿನಗಳ ಕಾಲ ಜರುಗುತ್ತಿದ್ದವಂತೆ. ಯಾದವಾಡದಿಂದ ಬಂದು, ಕೆರೆಯಲ್ಲಿ ಮುಖ ತೊಳೆಯುವ ಆ ತಾಯಿಯನ್ನು ಸಿದ್ಧರು ಕಂಡರು. ಮಗ್ಗುಲಲ್ಲಿದ್ದ ಗೋವಿಂದ ಸ್ವಾಮಿಗಳನ್ನು ಕರೆದು, “ಗೋವಿಂದಾ, ರೊಟ್ಟಿ ತುಂಬಾ ಪುಂಡೀಪಲ್ಲೆ ಸವರಿ ನನಗೆ ಅನ್ನ ಪ್ರಸಾದ ನೀಡಿದ ನನ್ನ ತಾಯಿ ಯಾದವಾಡದಿಂದ ಬಂದಿದ್ದಾಳೆ. ಅದೋ, ಕೆರೆಯಲ್ಲಿ ಮುಖ ತೊಳೆದು, ಸೆರಗಿನಿಂದ ಸದ್ಯ ಮುಖ ಒರೆಸಿಕೊಳ್ಳುತ್ತಿದ್ದಾಳಲ್ಲ. ಅವಳೇ ನನ್ನ ತಾಯಿ. ಅವಳನ್ನು ಕರೆದುಕೊಂಡು ಬಾ ಎಂದರು. ಗೋವಿಂದ ಸ್ವಾಮಿಗಳು ಆ ತಾಯಿಯ ಬಳಿ ಹೋದರು. ತಾಯೇ! ನೀವು ಯಾದವಾಡ ಗ್ರಾಮದವರೇ ? ಎಂದು ಕೇಳಿದರು. ಆಶ್ಚರ್ಯ, ಆ ತಾಯಿಯು ವಿನಮ್ರಳಾಗಿ, 'ಅಹುದು' ಎಂದಳು. ತಾಯೇ, ನಿಮ್ಮನ್ನು ಸಿದ್ಧಾರೂಢರು ಕರೆಯುತ್ತಿದ್ದಾರೆ. ಆ ಅಪ್ಪನೇ ನಿಮಗಾಗಿ ಅದೊ ಅಲ್ಲಿ ಕಾಯುತ್ತಿದ್ದಾರೆ. ಬೇಗ ಬನ್ನಿರಿ ಎಂದು ಕರೆದರು. ಆ ತಾಯಿ ಕ್ಷಣಕಾಲ ಸ್ತಬ್ಧಳಾದಂತೆ ನಿಂತಳಂತೆ. ಆಗ ಅವಳು ಗೋವಿಂದ ಸ್ವಾಮಿಗಳಿಗೆ, “ಸ್ವಾಮೀ, ನಾನು ಹುಬ್ಬಳ್ಳಿಗೆ ಬಂದದ್ದೇ ಇದೇ ಮೊದಲು. ನಾನು ಸಿದ್ಧಾರೂಢ ಸ್ವಾಮಿಗಳನ್ನು ಕಂಡೇ ಇಲ್ಲ. ನೀವು ನನ್ನನ್ನು ತಪ್ಪಾಗಿ ತಿಳಿದಂತಿದೆ'' ಎಂದಳಂತೆ. "ತಾಯಿ, ಸಿದ್ದಾರೂಢಪ್ಪ ನಿಮ್ಮನ್ನೇ ಕರೆಯಲು ಹೇಳಿದ್ದು, ಬೇಗ ನಡೆಯಿರಿ ಎಂದು ಆ ತಾಯಿಯನ್ನು ಸಂಗಡ ಕರೆದುಕೊಂಡೇ ಬಂದರು, ಸಿದ್ದಾರೂಢರು ಅವಳತ್ತಲೇ ನಡೆದು ಬಂದು, ''ಯಾಕ ತಾಯಿ, ಮಗನ ಗುರ್ತಾ ಹತ್ತಲಿಲ್ಲೇನು? ಎಂದರಂತೆ. ಅವಳಿಗೆ ಬೇಗ ಏನೂ ಹೊಳೆಯಲಿಲ್ಲ. ಬುದ್ದಿಯೂ ಹರಿಯಲಿಲ್ಲ. ಅವಳು ಸುಮ್ಮನೇ ನಿಂತಳು. ಆಗ ಸ್ವಾಮಿಗಳು '' ತಾಯೇ! ನಿನಗೆ ಒಂದು ವಿಷಯ ಜ್ಞಾಪಿಸಿಕೊಡುತ್ತೇನೆ. ನೀವು ಇಬ್ಬರೂ ದಂಪತಿಗಳು ಯಾದವಾಡ ಊರಿನ ಹೊರವಲಯದ ಒಂದು ಹೊಲದಲ್ಲಿ ಹಾಕಿದ ಗುಡಿಸಲಿನಲ್ಲಿದ್ದೀರಿ. ನಿಮ್ಮಲ್ಲಿಗೆ ಒಬ್ಬ ಸಾಧು ಬಂದ, ನೀನು ಪುಂಡೀಪಲ್ಲಿ ರೊಟ್ಟಿ ಕೊಟ್ಟಿ. ಆ ಸಾಧು ಆರೊಟ್ಟಿಯನ್ನು ನಿನ್ನ ಉಡಿಯಲ್ಲಿಯೇ ಹಾಕಿ, ಹೊರಟು ಹೋದ. ಈ ಪ್ರಸಂಗ ನಿನ್ನ ಜ್ಞಾಪಕಕ್ಕೆ ಈಗ ಬಂತಲ್ಲವೇ? ಎಂದರು. ಆ ತಾಯಿಗೆ ಸ್ಮರಣೆ ಮರುಕಳಿಸಿತು. ಅವಳು ಸಿದ್ಧರಿಗೆ, “ಏ ತಂದೇ, ಆ ನನ್ನಪ್ಪ , ತನ್ನ ಅನ್ನ ನನ್ನ ಉಡಿಯೊಳಗೆ ಹಾಕಿ ಹರಸಿ ಹೋದ' ನಿಲ್ಲಲೇ ಇಲ್ಲ. ಆ ನನ್ನ ಅಪ್ಪ, ಆ ಬಳಿಕ ಎಲ್ಲಿ ಹೋದರೋ ಏನೋ. ಅವನ ಕೈಯ್ಯಾಗ ಏನಿತ್ತೋ ಏನೋ ! ಅಂದಿನಿಂದ ನಾನು ಮುಟ್ಟಿದ್ದೆಲ್ಲ ಬಂಗಾರ ಆಯ್ತು. ಭೂಮಿ ಸೀಮಿ ಆದವು ಎಂದಳಂತೆ. ಆಗ ಸಿದ್ದಾರೂಢರು ಹರ್ಷ ತುಂಬಿ, “ಆ ಸಾಧು ಮತ್ತೆಲ್ಲಿ ಹೋಗಿಲ್ಲ. ಈಗ ನಿನ್ನ ಮುಂದೆ ನಿಂತಿದ್ದಾನೆ, ತಾಯಿಗೆ ಮಗನ ಗುರ್ತ ಹತ್ತದಿದ್ದರೂ, ಮಗನಿಗೆ ತಾಯಿಯ ಗುರ್ತ ಸಟ್ಟನೇ ಸಿಕ್ಕಿತು ನೋಡು” ಎಂದರಂತೆ. ಆ ತಾಯಿಯ ಮೈ ಮನ ಭಾವಗಳೆಲ್ಲ ಧನ್ಯತೆಯಿಂದ ತುಂಬಿದವು. ಆ ತಾಯಿಯ ಆನಂದ ಕಣ್ಣೀರು ಸಿದ್ಧಾರೂಢರ ಪಾದಗಳ ಅಭಿಷೇಕ ಮಾಡಿದವಂತೆ',
( ಸುಮಾರು 40 ವರ್ಷಗಳ ಪೂರ್ವದಲ್ಲಿ ಬರಿ ಎರಡು ನಿಮಿಷ ಯಾದವಾಡ ಗ್ರಾಮದ ಊರ ಹೊರಗಿನ ಗುಡಿಸಿಲಿನಲ್ಲಿ ಕಂಡ ಆ ತಾಯಿಯನ್ನು ಹುಬ್ಬಳ್ಳಿಯ ಜಾತ್ರೆಯ ಗದ್ದಲದಲ್ಲಿಯೂ ಗುರುತಿಸಿದು ಅವರ ದೈವೀ ಶಕ್ತಿಗೆ ಜೀವಂತ ಸಾಕ್ಷಿ. ಕೃತಜ್ಞತಾ ಭಾವಕ್ಕೆ ಜೀವಂತ ನಿದರ್ಶನ.)
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
