ಮಲ್ಲಿಕಾರ್ಜುನ ಮನ್ಸೂರ ಖ್ಯಾತ ಗಾಯಕರಾದರು
🌺 ಮಲ್ಲಿಕಾರ್ಜುನ ಮನ್ಸೂರ ಖ್ಯಾತ ಗಾಯಕರಾದರು 🌺
ಶ್ರೀ ಸಿದ್ಧಾರೂಢರ ಭಕ್ತರಾದ ಭೀಮರಾಯಪ್ಪ ಮನ್ಸೂರ ಎಂಬವರು ತನ್ನ ಮಕ್ಕಳಾದ ಬಸವಣ್ಣೆಪ್ಪ ಮತ್ತು ಮಲ್ಲಿಕಾರ್ಜುನ ಎಂಬ ಚಿಕ್ಕ ಬಾಲಕರನ್ನು ಕರೆದುಕೊಂಡು ಮಠಕ್ಕೆ ಬಂದಾಗ ಸಿದ್ಧರು ದೊಡ್ಡ ಅಡುಗೆ ಮನೆಯ ಮುಂದಿನ ಅಂಕಣದಲ್ಲಿ ಬೆತ್ತದ ಖುರ್ಚಿಯ ಮೇಲೆ ಕುಳಿತಿದ್ದರು. ಮನ್ಸೂರವರು ತಮ್ಮಿಬ್ಬರು ಮಕ್ಕಳನ್ನು ಗುರುಗಳ ಪಾದಕ್ಕೆ ಹಾಕಿ 'ಸದ್ಗುರುವೇ ನನ್ನ ಸಣ್ಣ ಮಗ. ಮಲ್ಲಿಕಾರ್ಜುನನನ್ನು ಮುಂಬೈಗೆ ಸಂಗೀತ ಕಲಿಸಲು ಕಳಿಸಬೇಕೆಂದಿದ್ದೇನೆ. ತಾವು ಆಶೀರ್ವದಿಸಿದರೆ ಕಳಿಸಿಕೊಡುತ್ತೇನೆ' ಎಂದು ಕೈ ಜೋಡಿಸಿ ನಿಂತರು.
ಆಗ ಸ್ವಾಮಿಗಳು ಮಲ್ಲಿಕಾರ್ಜುನನಿಗೆ ಒಂದು ಗೀತೆ ಹಾಡಲು ಹೇಳಿದರು. ಆಗ ಬಾಲಕ ಒಂದು ಮಂಗಳಾರತಿಯನ್ನು ಹಾಡಿದನು. ಗುರುಗಳು ಅವನ ತಂದೆಗೆ ಹೇಳಿದರು ಭೀಮರಾಯಪ್ಪ, ಈ ನಿನ್ನ ಮಗನನ್ನು ಸಂಗೀತ ಕಲಿಸಲು ಕಳಿಸಿಕೊಡು. ಇವನು ದೊಡ್ಡ ಗಾಯಕನಾಗಿ ಕೀರ್ತಿವಂತನಾಗುತ್ತಾನೆ' ಎಂದು ಆಶೀರ್ವದಿಸಿದರು. ಮುಂದೆ ಆ ಬಾಲಕನು ಸಂಗೀತ ಕಲಿತು ದೊಡ್ಡವನಾಗಿ ಸಿದ್ಧರ ಆಶೀರ್ವಚನದಂತೆ ಮಲ್ಲಿಕಾರ್ಜುನ ಮನ್ಸೂರ ಎಂಬ ಹೆಸರಿನಿಂದ ದೇಶದಲ್ಲಿ ಪ್ರಸಿದ್ಧನಾದನು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
