ಪಾರಶಿ ಜನರು ಸಿದ್ಧರ ಭಕ್ತರಾದರು
🌺 ಪಾರಶಿ ಜನರು ಸಿದ್ಧರ ಭಕ್ತರಾದರು 🌺
ಮುಂಬೈಯಲ್ಲಿ ಬ್ಯಾರಿಸ್ಟರ್ ಪೇಸ್ತನಜಿಯೆಂಬವರಿದ್ದರು. ಅವರಿಗೆ ಸತ್ಪುರುಷರಲ್ಲಿ ಅಪಾರ ಪ್ರೇಮವಿದ್ದ ಕಾರಣ ಎಲ್ಲೆಡೆಗೆ ಪ್ರಸಿದ್ಧರಾದ ಶ್ರೀ ರೂಢರ ಚರಿತ್ರ ಗ್ರಂಥಗಳನ್ನು ತರಿಸಿ ಓದುತ್ತಿದ್ದರು. ಅದರಲ್ಲಿ ಆರೂಢರ ಅಗಾಧ ಮಹಿಮೆಗಳನ್ನು ನೋಡಿ ಆಕರ್ಷಿತರಾಗಿ, ತಮ್ಮ ಆಪ್ತ ಮಿತ್ರ ಮಂಡಳಿಯವರಿಗೂ ಓದಲು ಕೊಟ್ಟರು. ಸಿದ್ದರ ಕೀರ್ತಿಯನ್ನು ಕೇಳಿ ಒಮ್ಮೆ ಶಿವರಾತ್ರಿಯ ಉತ್ಸವಕ್ಕೆ ಎಲ್ಲರೂ ಮಠಕ್ಕೆ ಹೋದರು. ಅಲ್ಲಿ ಹೋದಾಗ ಜನದಟ್ಟಣೆ ಅತಿಯಾದಾಗ ಸಿದ್ಧಾರೂಢರ ದರ್ಶನ ತೆಗೆದುಕೊಳ್ಳುವುದು ಅಸಾಧ್ಯವಾಯಿತು. ಆಗ ಒಬ್ಬ ಗ್ರಹಸ್ಥರು ಅವರನ್ನು ಅಕ್ಕಲಕೋಟ ಶರಣರಿಗೆ ಭೇಟಿ ಮಾಡಿಸಿದರು. ಆಗ ಪೇಸ್ತನಜಿಯವರು ಶರಣಪ್ಪನವರಿಗೆ ನಮಸ್ಕಾರ ಮಾಡಿ ನಾವು ಮುಂಬೈಯಿಂದ ಸಿದ್ಧರ ದರ್ಶನಕ್ಕೆ ಬಂದಿದ್ದೇವೆ. ಅವರ ದರ್ಶನ ಮಾಡಿಸಿರಿ' ಎಂದರು. ಆಗ ಶರಣರು ಹೇಳಿದರು 'ನೀವು ನನ್ನ ಸಂಗಡ ಬನ್ನಿರಿ' ಎಂದು ಜನದಟ್ಟಣೆಯ ಮಧ್ಯದಿಂದ ಕರೆದುಕೊಂಡು ಹೋಗಿ ಸಿದ್ಧರ ದರ್ಶನ ಮಾಡಿಸಿದರು.
ಅವರು ಸಿದ್ದರಿಗೆ ಸಾಷ್ಟಾಂಗ ನಮಿಸಿ ಫಲಪುಷ್ಪಗಳನ್ನು ಕಾಣಿಕೆಯನ್ನೂ ಸಮರ್ಪಿಸಿ ಪುನಃ ಶರಣರ ದಾಸೋಹಕ್ಕೆ ಬಂದರು. ನಂತರ ಶರಣರು ಆ ಪಾರಶಿ ಜನರಿಗೆ ಊಟೋಪಚಾರಗಳನ್ನು ಮಾಡಿಸಿದರು. ನಂತರ ಪೇಸ್ತನಜಿಯವರು 'ಇವರು ಬ್ರಹ್ಮಜ್ಞಾನಿಗಳಿದ್ದಾರೆಂದು ತಿಳಿದು ಶರಣಪ್ಪನವರನ್ನು ಕುರಿತು ಸ್ವಾಮಿಗಳೇ, ನಾವು ಸದ್ಗುರುಗಳ ದರ್ಶನವು ಬಹಳ ದುರ್ಲಭವೆಂದು ತಿಳಿದಿದ್ದೆವು. ನೀವು ಅವರ ದರ್ಶನ ಮಾಡಿಸಿದ್ದರಿಂದ ಗುರುಸಮಾನರಾಗಿದ್ದೀರಿ' ಎಂದು ಕೊಂಡಾಡಿದರು. ಪೇಸ್ತನಜಿಯವರ ಸಂಗಡಿಗರು ಅದ್ವೈತ ಸಿದ್ಧಾಂತದ ಅನೇಕ ಗ್ರಂಥಗಳನ್ನು ಓದಿದ್ದರೂ, ಅವರ ಮನಸ್ಸಿನಲ್ಲಿ ಅನೇಕ ಸಂಶಯಗಳು ಉಳಿದಿದ್ದು, ಆ ಎಲ್ಲ ಪ್ರಶ್ನೆಗಳನ್ನು ಶರಣಪ್ಪನವರಿಗೆ ಕೇಳಿ ಅವರಿಂದ ಸರಿಯಾದ ಉತ್ತರ ಪಡೆದು ಸಮಾಧಾನಗೊಂಡರು. ಆಗ ಪೇಸ್ತನಜಿಯವರು ಶರಣಪ್ಪರನ್ನು ಕುರಿತು `ಸ್ವಾಮಿಗಳೇ, ಸಾಕ್ಷಾತ್ ಸಿದ್ಧಾರೂಢರೇ ಬಂದು ನಿಮ್ಮ ಮುಖದಿಂದ ಭಾಷಣ ಮಾಡಿಸಿದರು. ಈ ವರೆಗೆ ಸೃಷ್ಟಿಯ ಕ್ರಮ ಇತ್ಯಾದಿ ವಿಷಯಗಳು ಗೊತ್ತಿರಲಿಲ್ಲ. ನಿಮ್ಮ ಅಮೃತವಾಣಿಯಿಂದ ನನ್ನ ಮನಸ್ಸಿನಲ್ಲಿರುವ ಸಂಶಯಗಳು ನಿವಾರಣೆಯಾದವು. ನಾವು ಮುಂಬೈಯಲ್ಲಿ ಗುರುಪೌರ್ಣಿಮೆಯ ದಿವಸ ಶ್ರೀ ಸಿದ್ಧಾರೂಢರ ಕಥಾಮೃತವನ್ನು ನಿಮ್ಮ ಮುಖದಿಂದ ಕೇಳಬೇಕೆಂದಿದ್ದೇವೆ. ದಯವಿಟ್ಟು ಮುಂಬೈಗೆ ಬಂದು ನಮ್ಮನ್ನು ಉದ್ಧಾರ ಮಾಡಬೇಕು' ಎಂದು ಬೇಡಿಕೊಂಡರು
ಅದಕ್ಕೆ ಶರಣಪ್ಪನವರು ಆರೂಢರ ಅಪ್ಪಣೆ ಪಡೆದು ಮುಂಬೈಗೆ ಹೋದರು. ಅಲ್ಲಿ ಪೇಸ್ತನಜಿಯವರ ಮನೆಯಲ್ಲಿ ಸಿದ್ಧರ ಕಥಾಮೃತವನ್ನು ನಡೆಸಿ ಎಲ್ಲರಿಗೂ ಸಂತೋಷಗೊಳಿಸಿ ಅಕ್ಕಲಕೋಟೆಗೆ ಬಂದರು. ಇದರಂತೆ ಪ್ರತಿವರ್ಷ ಮುಂಬೈಗೆ ಹೋಗುವ ಪದ್ದತಿಯನ್ನಿರಿಸಿಕೊಂಡರು. ಮುಂದೆ ಸಿದ್ದಾರೂಢರ ಪಶ್ಚಾತ್ ಶ್ರೀ ಗುರುನಾಥಾರೂಢರನ್ನೂ ಒಂದು ಸಲ ಕರೆದುಕೊಂಡು ಹೋಗಿ ಪಾದಪೂಜೆ ಮಾಡಿ ಹುಬ್ಬಳ್ಳಿಗೆ ಕರೆದುಕೊಂಡು ಬಂದರು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
