ಮಠದಲ್ಲಿ ಮಂಗ ಕಾಗೆಗಳಿಗೆ ಮುಕ್ತಿ ಕೊಟ್ಟ ಸಿದ್ಧಾರೂಢರು

 🌺 ಮಠದಲ್ಲಿ ಮಂಗ ಕಾಗೆಗಳಿಗೆ ಮುಕ್ತಿ ಕೊಟ್ಟ ಸಿದ್ಧಾರೂಢರು  🌺


ಶ್ರೀ ಸಿದ್ಧಾರೂಢರು ತಮ್ಮ ಶಿಷ್ಯರಾದ ಕಬೀರದಾಸರು, ನಾಗಾನಂದರು ಇನ್ನಿತರ ಅನೇಕ ಭಕ್ತರೊಂದಿಗೆ ಪ್ರವಚನ ನೀಡಲು ಕುಳಿತಾಗ ಒಂದು ದೊಡ್ಡ ಮಂಗ ಮಾಳಿಗೆಯಿಂದ ಇಳಿದು ಬಂದು ಯಾರಿಗೂ ಅಂಜದೆ ದೂರದಿಂದಲೇ ನೆಲಕ್ಕೆ ಹಣೆಹಚ್ಚಿ ನಮಸ್ಕರಿಸಿ ಕುಳಿತಿತು. ಆಗ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಸಿದ್ದರು ಪ್ರವಚನ ನೀಡಿ ಮಂಗಲಾಚರಣೆಯಾದರೂ ಮಂಗ ಅಲ್ಲಿಂದ ಕದಲಲಿಲ್ಲ. ಆರೂಢರು ಕಡಲೆ ತರಿಸಿ ಅದನ್ನು ಕೈಸನ್ನೆಯಿಂದ ಕರೆದು `ಬಾರಪ್ಪಾ, ರಾಮಭಕ್ತಾ' ಎಂದು ಕರೆದು ಕಡಲೆಕಾಳು ಕೊಟ್ಟಾಗ, ಅದು ಮೆಲ್ಲ ಮೆಲ್ಲನೇ ತಿಂದು ಮತ್ತೊಮ್ಮೆ ನಮಸ್ಕರಿಸಿ ಗಿಡಕ್ಕೆ ಹಾರಿ ಕುಳಿತಿತು.
ನಿತ್ಯ ಅದೇ ವೇಳೆಗೆ ಬಂದು ಪ್ರವಚನ ಕೇಳಿ ಪ್ರಸಾದ ತಿಂದು ಹೋಗುತ್ತಿತ್ತು. ಉಳಿದವರು ಏನಾದರೂ ತಿನಿಸು ಕೊಟ್ಟರೆ ಮುಟ್ಟುತ್ತಿರಲಿಲ್ಲ. ಹೀಗೆ ಅನೇಕ ದಿವಸಗಳು ಕಳೆದವು ಸಿದ್ಧರಿಗೆ ನಮಿಸಿ ಅವರ ಪ್ರವಚನ ಕೇಳಿ ಅವರು ಕೊಟ್ಟ ಪ್ರಸಾದ ತಿಂದಾಗಲೇ ಅದಕ್ಕೆ ಸಮಾಧಾನ. ಅದಕ್ಕೆ ಆರೂಢರ ಹಸ್ತಸ್ಪರ್ಶ ಬೇಕಿತ್ತು. ಅವರ ಉಪದೇಶಾಮೃತದಿಂದ ಅದರ ಯಾವುದೋ ಜನ್ಮದ ಪಾಪವಳಿದು ಅವರ ದೃಷ್ಟಿಮಾತ್ರದಿಂದ ಮುಕ್ತಿ ಬೇಕಿತ್ತು. ಅದೆಲ್ಲ ಸಿದ್ದರ ಅಂತರಂಗಕ್ಕೆ ವೇದ್ಯವಾದ ವಿಷಯವಾಗಿದ್ದು ಉಳಿದ ಸಾಮಾನ್ಯರ ತರ್ಕಕ್ಕೆ ನಿಲುಕದ ವಿಷಯ. ಅದು ಮುಂದೆ ಎಲ್ಲಿಗೆ ಹೋಯಿತೋ ಗೊತ್ತಿಲ್ಲ. ಆದರೆ ಸಿದ್ಧರಿಗೆ ಮಾತ್ರ ಗೊತ್ತು.
ಇನ್ನೊಂದು ದಿವಸ ಒಂದು ಕಾಗೆ ಕೆರೆಯಲ್ಲಿ ಮುಳುಗಿ ಮಿಂದು ಮಡಿಯಾಗಿ ಒದ್ದೆ ಮೈಯಿಂದಲೇ ಆರೂಢರು ಪ್ರವಚನ ಮಾಡುವಾಗ ಅವರ ಎದುರುಗಡೆ ಬಂದು ಕುಳಿತಿತು. ಜನರಿಗೆ ಕುತೂಹಲವಾಯಿತು. ಸಿದ್ದರನ್ನೇ ನೋಡುತ್ತ ಉಪದೇಶ ಕೇಳುತ್ತಿತ್ತು. ಅದಕ್ಕೆ ಯಾರ ಅಂಜಿಕೆಯೂ ಇರಲಿಲ್ಲ. ಮಂಗಲದ ನಂತರ ಹಾರಿಹೋಯಿತು , ಎಳೆ೦ಟು ದಿವಸ ಹೀಗೆಯೇ ನಡೆಯಿತು , ಕಾ ಕಾ ಎಂದು  ಕೂಗುವುದನ್ನು ಮರೆತು , ಏಕಾಗ್ರಚಿತ್ತದಿಂದ ಪ್ರವಚನ ಕೇಳುತ್ತಿತ್ತು. ಅದಕ್ಕೆ ಯಾವ ಜನ್ಮದ ಸಾಫಲ್ಯತೆ ಪಡೆಯಬೇಕಾಗಿತ್ತೋ ಏನೋ! ಈ ರಹಸ್ಯ ಆರೂಢರಿಗೆ ಮಾತ್ರ ಗೊತ್ತು.
ಒಂದು ದಿನ ಒಬ್ಬ ಭಕ್ತ ಕೇಳಿದ `ಅಪಾ, ಆಗ ಮಂಗ ಬಂದು ನಿಮ್ಮ ಉಪದೇಶ ಕೇಳಿತು. ಈಗ ಕಾಗೆ ದಿನಾಲು ಬಂದು ಉಪದೇಶ ಕೇಳುತ್ತಿದೆ. ಇದರ ಗುಟ್ಟೇನು?' ಎಂದಾಗ ಸಿದ್ದ ಹೇಳಿದ, `ಹಿಂದಿನ ಜನ್ಮದಲ್ಲಿ ಉತ್ತಮ ಸಾಧಕನಾಗಿ ಅಕಸ್ಮಾತ್ ಸಾವಿನ ಕೊನೆಯ ಗಳಿಗೆಯಲ್ಲಿ ತನ್ನ ಪಿಂಡವನ್ನು ಕಾಗೆಗಳು ತಿನ್ನುತ್ತವೆಯೋ ಇಲ್ಲವೋ ಎಂದು ಚಿಂತಿಸುತ್ತ ಮರಣ ಹೊಂದಿದ. ಯಂ ಯಂ ವಾಪಿ ಸ್ಮರನ್ ಭಾವ ತ್ಯಜಂತ್ಯ೦ತೆ  ಕಲೇವರಮ್ | ತಂತಮೇವೃತ್ತಿ ಕೌಂತೇಯ ಸದಾ ತದ್ಭಾವ ಭವಿತಃ || ಎಂಬ ಗೀತೆಯ ವಾಕ್ಯದಂತೆ ಈಗ ಕಾಗೆಯ ಜನ್ಮ ತೊಟ್ಟಿದ್ದಾನೆ.
'ಮಹಾತ್ಮರ ಉಪದೇಶದಿಂದ ಕಾಗೆಯ ಜನ್ಮ ಕಳೆಯಲಿದೆ. ನಾಗಾನಂದಾ ಒಂದು ಹಿಡಿ ಅನ್ನವನ್ನು ಎಲೆಯಲ್ಲಿ ಇಟ್ಟುಕೊಂಡು ಬಾ' ಎಂದಾಗ ನಾಗಾನಂದರು ಅಡುಗೆಯ ಮನೆಗೆ ಹೋಗಿ ಒಂದು ಹಿಡಿ ಅನ್ನವನ್ನು ತಂದು ಆರೂಢರ ಕೈಯಲ್ಲಿ ಕೊಟ್ಟರು. ಕ್ಷಣಮಾತ್ರ ಕಣ್ಣು ಮುಚ್ಚಿ ತೆರೆದು ಅನ್ನದ ಪಿಂಡವನ್ನು ಕಾಗೆಯ ಮುಂದಿಟ್ಟಾಗ ಅದು ಸುಮ್ಮನೆ ಒಂದಗುಳ ಬಿಡದೆ ತಿಂದು, ಸಿದ್ಧರ ಚರಣಗಳ ಮೇಲೆ ಉರುಳಾಡಿ ಕೆರೆಯ ದಂಡೆಗೆ ಹೋಗಿ ಪ್ರಾಣ ಬಿಟ್ಟಿತು. ನಂತರ ಸಿದ್ದರ ಅಪ್ಪಣೆಯಂತೆ ಭಕ್ತರು ಒಂದೆಡೆ ತಗ್ಗು ತೆಗೆದು ಕಾಗೆಯನ್ನು ಹುಗಿದರು. ಹೀಗೆ . ಆಶ್ರಮದಲ್ಲಿ ಅನೇಕ ಪ್ರಸಂಗಗಳಾಗುತ್ತಿದ್ದವು. ಅಲ್ಲಿ ನಾಯಿ, ಬೆಕ್ಕು, ಮುಂಗುಸಿ, ಸರ್ಪ ಎಲ್ಲವೂ ಇರುತ್ತಿದ್ದವು. ಅವುಗಳಿಗೂ ಸಿದ್ದರ ಕರುಣೆ ಮೀಸಲಾಗಿತ್ತು.

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ