ನಾಟಕ ಕಲಾಕಾರನ ಮಗನ ಜ್ವರ ಶಮನ ಮಾಡಿದ ಸಿದ್ಧಾರೂಢರು
🌺 ನಾಟಕ ಕಲಾಕಾರನ ಮಗನ ಜ್ವರ ಶಮನ ಮಾಡಿದ ಸಿದ್ಧಾರೂಢರು 🌺
ದೇಶದಲ್ಲೆಲ್ಲ ಪ್ರಸಿದ್ದವಾದ ಬಾಲಗಂಗಾಧರ ಮರಾಠಿ ನಾಟಕ ಮಂಡಳಿಯು ಹುಬ್ಬಳ್ಳಿಗೆ ಬಂದಿತ್ತು. ಆ ಮಂಡಳಿಯ ಮುಖ್ಯ ಪಾತ್ರಧಾರಿಯ ಮಗುವಿಗೆ ವಿಪರೀತ ಜ್ವರ ಬಂದು ಬಹಳ ಬಳಲುತ್ತಿತ್ತು. ಔಷಧೋಪಚಾರದಿಂದ ಪ್ರಯೋಜನವಾಗಲಿಲ್ಲ ಮಗು ಉಳಿಯುವುದೋ ಇಲ್ಲವೋ ಎಂಬ ಸಂಶಯ ಬಂದು ತಂದೆ ತಾಯಿಗಳು ಚಿಂತೆಗೊಳಗಾದರು. ಮಂಡಳಿಯಲ್ಲಿ ಮಂಕು ಕವಿಯಿತು. ಆಗ ಬಾಲಗಂಧರ್ವರ ತಾಯಿಯ ಸಲಹೆಯಂತೆ ಮಗುವನ್ನು ಆರೂಢರಲ್ಲಿ ತೆಗೆದುಕೊಂಡು ಹೋಗಿ ಅವರ ಪಾದಗಳ ಮೇಲೆ ಹಾಕಿ ಕೈ ಮುಗಿದು, 'ಗುರೂಜಿ, ಈ ಕೂಸನ್ನು ಉಳಿಸಿರಿ. ನಮ್ಮ ಮನೆಯ ನಂದಾದೀಪವನ್ನು ರಕ್ಷಿಸಿರಿ' ಎಂದು ದುಃಖಿಸುತ್ತ ಬೇಡಿಕೊಂಡರು.
ಆರೂಢರು ಮಗುವನ್ನು ಎತ್ತಿಕೊಂಡು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು 'ಮಗೂ, ಓಂ ನಮಃ ಶಿವಾಯ ಮಂತ್ರ ಅನ್ನು, ಜ್ವರ ಬಿಟ್ಟು ಹೋಗುತ್ತದೆ' ಎಂದಾಗ ಆ ಮಗು ಕ್ಷೀಣ ಧ್ವನಿಯಿಂದ ಮೇಲಿಂದ ಮೇಲೆ ಮಂತ್ರ ಉಚ್ಚರಿಸಿದಾಗ ಅಲ್ಲಿ ನಿಂತವರೂ ದನಿಗೂಡಿಸಿದರು. ನಂತರ ಜ್ವರ ಬಿಟ್ಟು ಹೋಗಿ, ಮಗುವು ಗುಣ ಹೊಂದಿತು. ಮರುದಿನ ಬಾಲಗಂಧರ್ವರು ಸ್ವತಃ ಪಾತ್ರವಹಿಸುವ ಸುಭದ್ರಾ ನಾಟಕ ನೋಡಲು ಸಿದ್ಧರಿಗೆ ಆಮಂತ್ರಣ ಕೊಟ್ಟರು. ಆ ನಾಟಕಕ್ಕೆ ಆರೂಢರು ಮತ್ತು ಅವರ ಶಿಷ್ಯರೂ ಹೋದಾಗ ಗುರುಗಳಿಗೆ ಪ್ರತ್ಯೇಕ ಆಸನದಲ್ಲಿ ಕೂಡಿಸಿದರು. ಸದ್ಗುರುಗಳು ಬೆಳತನಕ ನಾಟಕ ನೋಡಿ ಬಾಯ್ತುಂಬ ಹೊಗಳಿ ಬಂದರು. ಅಂದಿನಿಂದ ಬಾಲಗಂಧರ್ವರು ಸಿದ್ಧರ ಭಕ್ತರಾದರು. ಗಂಧರ್ವರು ಪಾತ್ರ ಮಾಡಿದ ಒಂದು ಮಹಾರಾಣಿ ಮತ್ತೊಂದು ಮಹಾರಾಜರ ವೇಷದ ಎರಡು ಭಾವಚಿತ್ರಗಳನ್ನು ಮಠದಲ್ಲಿ ಇಂದಿಗೂ ಇವೆ ನೋಡಬಹುದು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
