ಗುರುನಾಥ ಪಾದವಿಟ್ಟ ಸ್ಥಳ ಚುಳಕಿ ಗ್ರಾಮ ಪುಣ್ಯಕ್ಷೇತ್ರವಾಯಿತು
ಸವದತ್ತಿ ಮತ್ತು ನರಗುಂದ ಮಧ್ಯದಲ್ಲಿ ಚುಳುಕಿ ಎಂಬ ಗ್ರಾಮವಿದೆ. ಅಲ್ಲಿಯ ಭಕ್ತರು ಶ್ರೀ ಗುರುನಾಥ ಸ್ವಾಮಿಗಳನ್ನು ಪಾದ ಪೂಜೆಗಾಗಿ ಕರೆದುಕೊಂಡು ಹೋಗಿದ್ದರು. ಅವರ ಜೊತೆಗೆ ಶ್ರೀ ಶಿವಾನಂದ ಭಾರತಿ ಸ್ವಾಮಿಗಳೂ ಹೋಗಿದ್ದರು. ಅಲ್ಲಿ ಕಲ್ಲಮೇಶ್ವರ ಮಠದಲ್ಲಿ ಶ್ರೀಗಳ ಪೂಜೆಯನ್ನು ಭಕ್ತರು ಬಹಳ ಸಂತೋಷದಿಂದ ಮಾಡಿದರು. ಬಹಳಷ್ಟು ಜನರು ನೆರೆದಿದ್ದರು. ಅವರೆಲ್ಲರೂ ಶ್ರೀಗುರುನಾಥಾರೂಢರ ದರ್ಶನದಿಂದ ಪುನೀತರಾದರು. ಸಾರ್ವತ್ರಿಕ ಪ್ರಸಾದ ವಿತರಣೆಯೂ ಆಯಿತು. ನಂತರ ಶ್ರೀಗಳು ಸ್ವಲ್ಪ ವಿಶ್ರಾಂತಿ ಪಡೆದ ಮೇಲೆ ಸಾಯಂಕಾಲ ಅಲ್ಲಿಯೇ ಸಮೀಪದಲ್ಲಿದ್ದ ಸಣ್ಣಗುಡ್ಡದಲ್ಲಿ ಸ್ವಾಮಿಗಳನ್ನು ವಾಯುವಿಹಾರಕ್ಕಾಗಿ ಕರೆದುಕೊಂಡು ಹೋದರು.
ಗುಡ್ಡದ ಮೇಲೆ ಸ್ವಲ್ಪ ವಿಶಾಲ ಪ್ರದೇಶದಲ್ಲಿ ಎಲ್ಲರೂ ಕುಳಿತುಕೊಂಡು ಶ್ರೀಗುರುನಾಥರು ಒಂದೆಡೆ ಬಹಳ ಹೊತ್ತು ಕುಳಿತು ಬಾಲಕರು ಆಟವಾಡುವಂತೆ ಸಣ್ಣ ಸಣ್ಣ ಕಲ್ಲುಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಆಟವಾಡಿದಂತೆ ಮಾಡಿದರು. ಹೀಗೇಕೆ ಮಾಡಿದರೆಂದು ಯಾರಿಗೂ ಗೊತ್ತಾಗಲಿಲ್ಲ, ಅದಕ್ಕೆ ಕಾರಣವೇನೆಂದರೆ ಮುಂದೆ ಅಲ್ಲಿ ಒಂದು ಪುಣ್ಯಕ್ಷೇತ್ರವಾಗುತ್ತದೆ ಎಂಬ ಸಂಕೇತವಾಗಿತ್ತು, ಸ್ವಾಮಿಗಳನ್ನು ಕರೆದುಕೊಂಡು ಪುನಃ ಅಲ್ಲಿಯ ಮಠಕ್ಕೆ ಬಂದ ನಂತರ ಹುಬ್ಬಳ್ಳಿಯ ಮಠಕ್ಕೆ ಅವರ ಸೇವಕರ ಜೊತೆಗೆ ಕಳಿಸಿಕೊಟ್ಟರು.
ಶ್ರೀಗುರುನಾಥರು ಕುಳಿತ ಸಣ್ಣ ಗುಡ್ಡದಲ್ಲಿ ಶ್ರೀಗಳ ಪ್ರಭಾವದಿಂದ ಈಗ ಕಲ್ಲೇಶ್ವರ ಸ್ವಾಮಿಗಳಿಂದ ಕಾಶಿ ವಿಶ್ವನಾಥ ಪಾಂಡುರಂಗ ಮುಂತಾದ ದೇವತೆಗಳು ದೇವಸ್ಥಾನಗಳು ನಿರ್ಮಾಣಗೊಂಡು ಭಕ್ತರ ಕಣ್ಮನಗಳು ಸೆಳೆಯುತ್ತ ಅದೊಂದು ನೋಡತಕ್ಕ ಪುಣ್ಯಕ್ಷೇತ್ರವಾಗಿದೆ.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
