ಶ್ರೀಗಳ ಕೃಪೆಯಿಂದ ಪಟದಯ್ಯ ಮಕ್ಕಳ ಪಡೆದ





ಹತ್ತೊಂಭತ್ತುನೂರಾ ಇಪ್ಪತ್ತೈದನೆಯ ಇಸ್ವಿಯಲ್ಲಿ ಚನ್ನಯ್ಯ ಕರವೀರಮಠ ಅವರು ಹಳೇಹುಬ್ಬಳ್ಳಿಯ ಪಾಂಜರಪೌಳದಲ್ಲಿ ಕಾರಕೂನ ಕೆಲಸ ಮಾಡುತ್ತಿದ್ದರು. ಶ್ರೀಮತಿ ಚನ್ನಬಸವ್ವ ದಂಪತಿಗಳು, ಸಂಸ್ಥೆಯವರು ಕಟ್ಟಿಸಿಕೊಟ್ಟ ಮನೆಯಲ್ಲಿ ವಾಸವಾಗಿದ್ದರು. ಸಮೀಪದಲ್ಲಿಯೇ ಇದ್ದ ಶ್ರೀ ಸಿದ್ಧಾರೂಢ ಮಠಕ್ಕೆ ಶ್ರೀಮತಿ ಚನ್ನಬಸಪ್ಪನವರು ದಿನಾಲು ಸಾಯಂಕಾಲ ಹೋಗಿ ಸಿದ್ದರ ದರ್ಶನ ಪಡೆದು ಆರತಿಯಾದ ನಂತರ ಮನೆಗೆ ಬರುತ್ತಿದ್ದರು. ನಂತರ ಪಾಂಜರಪೌಳದ ನೌಕರಿಬಿಟ್ಟು ಹೊಸ ಹುಬ್ಬಳ್ಳಿಯ ಜೋಳದ ಓಣಿಯಲ್ಲಿದ್ದು ಹುಬ್ಬಳ್ಳಿಯಲ್ಲಿ ನೌಕರಿ ಮಾಡುತ್ತಿದ್ದರು,
ಇವರಿಗೆ ಮೂರು ಮಂದಿ ಮಕ್ಕಳಿದ್ದು ಒಂದನೆಯವರು ಅಂದಾನಯ್ಯ ಎರಡನೆಯವರು ಪಟದಯ್ಯ, ಮೂರನೆಯವಳು ದ್ರಾಕ್ಷಾಯಿಣಿ ಹೀಗಿತ್ತು ಇವರ ಕುಟುಂಬ, ಸುಮಾರು ಹತ್ತೊಂಭತ್ತುನೂರಾ ಐವತ್ತೆರಡರಲ್ಲಿ ಅಂದಾನಯ್ಯ ಲಿಂಗೈಕ್ಯನಾದ, ಅದಕ್ಕಾಗಿ ಚನ್ನಬಸವ ತಾಯಿಯವರು ಮಗನ ಮರಣದ ಚಿಂತೆಯಲ್ಲಿ ದೇಹತ್ಯಾಗ ಸ್ಥಿತಿಗೆ ಬಂದರು. ಆಗ ತಾಯಿಯ ಬಯಕೆಯಂತೆ ಎರಡನೆಯ ಮಗನಾದ ಪಟದಯ್ಯನಿಗೆ ಲಗ್ನ ಮಾಡಲು ನಿಶ್ಚಯಿಸಿದರು. ಆಗ ಆದೇ ಓಣಿಯ ಘಂಟಿಕೇರಿಯಲ್ಲಿಯ ಶ್ರೀಮತಿ ವೀರವ್ವನ ಜೊತೆಗೆ ಲಗ್ನವಾಯಿತು. ಇದರಿಂದಾಗಿ ಶ್ರೀಮತಿ ಚನ್ನಬಸವ್ವನವರ ಆರೋಗ್ಯ ಸ್ಥಿತಿಯು ಸ್ವಲ್ಪ ಮಟ್ಟಿಗೆ ಸುಧಾರಿಸಿತು ಮತ್ತು ಮಗನ ಹೊಟ್ಟೆಯಿಂದ ಮೊಮ್ಮಕ್ಕಳನ್ನು ಕಾಣಬೇಕೆಂಬ ಪ್ರಬಲ ಅಪೇಕ್ಷೆಯಂತೆ ಪಟದಯ್ಯನಿಗೆ ಬೇಗ ಮಕ್ಕಳಾಗದಿದ್ದುದರಿಂದ ಚನ್ನಬಸಪ್ಪನವರಿಗೆ ಚಿಂತೆಯಾಗಿ ಪುನಃ ಆರೋಗ್ಯ ಕೆಟ್ಟಿತು. 
ಸಿದ್ಧಾರೂಢರ ಪರಮ ಭಕ್ಕಳಾದ ಚನ್ನಬಸಪ್ಪನವರು ಶ್ರೀಗುರುನಾಥಸ್ವಾಮಿಗಳನ್ನು ಮನೆಗೆ ಕರೆದುಕೊಂಡು ಬಂದು ಪಾದ ಪೂಜೆಸಿದರೆ ನಾನು ಮೊಮ್ಮಕ್ಕಳನ್ನು ಕಾಣಬಹುದು ಎಂದು ಅಪೇಕ್ಷಿಸಿ, ಹತ್ತೊಂಭತ್ತುನೂರಾ ಐವತ್ತಾರರಲ್ಲಿ ಶ್ರೀಗಳನ್ನು ಬರಮಾಡಿಕೊಂಡು ಉಚಿತಾಸನದಲ್ಲಿ ಕೂಡಿಸಿ ಪಾದಪೂಜೆಯನ್ನು ಮಾಡಿದರು. ತಾಯಿಯು, ಮಗನಾದ ಪಟದಯ್ಯನಿಗೆ ಹತ್ತಿರ ಕರೆದು ಶ್ರೀಗುರುನಾಥಾರೂಢರು ಮಟ್ಟಿರುವ ಪಾದುಕೆ (ಸಂಸ್ಥಾನಿಕರು ಮೆಡುವಂಥ ತುದಿ ಚೂಪಾಗಿ ಮೇಲೇರಿರುವ ಪಾದರಕ್ಷೆಗಳಂತಿರುವ) ಗಳನ್ನು ತಾನೇ ಸ್ವತಃ ಶ್ರೀ ಮೌನಯೋಗಿ ಗುರುನಾಥರ ಕಾಲಿನಿಂದ ತೆಗೆದು ಪಾದುಕೆಗಳಿಗೆ ನಮಸ್ಕರಿಸಿ ಮಗನಾದ ಪಟದಯ್ಯನ ತಲೆಯ ಮೇಲಿರಿಸಿ ಶ್ರೀಗಳಲ್ಲಿ ಭಕ್ತಿಯಿಂದ ಬೇಡುತ್ತ ತಂದೆ ಸದ್ಗುರುನಾಥಾ ನನ್ನ ಮಗನಿಗೆ ಮಕ್ಕಳಾಗಬೇಕು. ಆ ಮೊಮ್ಮಕ್ಕಳನ್ನು ನೋಡಿ ದೇಹತ್ಯಾಗ ಮಾಡಬೇಕೆಂದು ಅಪೇಕ್ಷೆಯಾಗಿದೆ. ದಯವಿಟ್ಟು ಆಶೀರ್ವದಿಸಿರಿ ಎಂದು ಬೇಡಿಕೊಂಡಳು. ಆಗ ಶ್ರೀಗಳು ಪಟದಯ್ಯನಿಗೆ ಮುಂದೆ ಕರೆದು ತಲೆಯ ಮೇಲೆ ಕೈಯಿಟ್ಟು ಮೌನದಿಂದ ಕೈಯೆತ್ತಿ ಆಶೀರ್ವದಿಸಿದರು. ನಂತರ ಶ್ರೀಗಳಿಗೆ ಎಲ್ಲರೂ ಭಕ್ತಿಯಿಂದ ನಮಸ್ಕರಿಸಿ, ಅನ್ನ ಪ್ರಸಾದವನ್ನು ಅವರು ಉಂಡಷ್ಟು ಉಣಿಸಿ ಮಠಕ್ಕೆ ಕಳಿಸಿದರು. ಮುಂದೆ ಒಂದೇ ತಿಂಗಳಲ್ಲಿ ಪಟದಯ್ಯನವರ ಪತ್ನಿ ಶ್ರೀಮತಿ ವೀರವ್ವನವರು ಒಂದೇ ತಿಂಗಳಲ್ಲಿ ಗರ್ಭಧರಿಸಿ ಗಂಡುಮಗುವಿಗೆ ಜನ್ಮವಿತ್ತು, ಮುಂದೆ ಆ ತಾಯಿ ಶ್ರೀಗುರುನಾಥರ ಕೃಪೆಯಿಂದ ಶಿವಜೋಗಯ್ಯ, ಗಿರಿಜಾ, ಜಗದೀಶ್ವರಯ್ಯ, ನಾಗರತ್ಯ ಅನುಸೂಯಾ ಮತ್ತು ಲಲಿತಾ ಹೀಗೆ ಆರು ಜನ ಮೊಮ್ಮಕ್ಕಳನ್ನು ಪಡೆದು ಚನ್ನಬಸಮ್ಮನವರ ಆಯುಷ್ಯ ವರ್ಧನವಾಗಿ ಎಲ್ಲ ಮೊಮ್ಮಕ್ಕಳ ಮದುವೆಯನ್ನು ಮಾಡಿ ತಮ್ಮ ಜೀವನದ ತೊಂಭತ್ತೆರಡನೆಯ ವಯಸ್ಸಿನಲ್ಲಿ ಶ್ರೀಗುರುನಾಥಾರೂಢರ ಪಾದದಲ್ಲಿ ಐಕ್ಯರಾದರು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರಪ್ಪನ ಹೊಡೆತದಿಂದ ಹೆಣ್ಣುಮಗಳ ಜ್ವರಶಮನ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ