ಸೀತಾಮಹಾರಾಜರು ಸಿದ್ಧರಲ್ಲಿ ಬರದೆ ಬದುಕಲಿಲ್ಲ

 🌺 ಸೀತಾಮಹಾರಾಜರು ಸಿದ್ಧರಲ್ಲಿ ಬರದೆ ಬದುಕಲಿಲ್ಲ 🌺




ಸಾವಂತವಾಡಿಯ ಸಂಸ್ಥಾನದ ಮಹಾರಾಜರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರಲ್ಲಿ ಲಕ್ಷ್ಮೀಬಾಯಿಯು ಧಾರಾ ಸಂಸ್ಥಾನದ ರಾಜಬಂಧು ಸೀತಾರಾಜನ ಜೊತೆಯಲ್ಲಿ ಲಗ್ನವಾಗಿದ್ದಳು. ಮಹಾರಾಜರು ಈಶ್ವರ ಭಕ್ತರಾಗಿದ್ದರಿಂದ ಅನಾಥರ ಮೇಲೆ ದಯೆತೋರಿಸುತ್ತ ಸತ್ಪುರುಷರ ಮೇಲೆ ವಿಶ್ವಾಸವಿಟ್ಟು ಅದರಂತೆ ಆಚರಿಸುತ್ತಿದ್ದರು. ವಿದ್ಯಾವಂತರಾದ ಅವರ ಹೆಣ್ಣು ಮಕ್ಕಳು ತಂದೆಯಂತೆಯೇ ವರ್ತಿಸುತ್ತಿದ್ದರು. ಒಮ್ಮೆ ಅಕ್ಕಲಕೋಟೆಯ ಶರಣರು ಮಹಾರಾಣಿಯ ಸಂಗಡ ಧಾರಾ ಸಂಸ್ಥಾನಕ್ಕೆ ಹೋದಾಗ ಶರಣರಿಂದ ಶ್ರೀ ಸಿದ್ಧಾರೂಢರ ಚರಿತ್ರೆಯನ್ನು ಭಕ್ತಿಯಿಂದ ಕೇಳಿದರು. ಇದರಿಂದಾಗಿ ಸಿದ್ದರಲ್ಲಿ ಭಕ್ತಿಯುಂಟಾಗಿ ಲಕ್ಷ್ಮೀಬಾಯಿಯು ಶರಣರನ್ನು ಕರೆದುಕೊಂಡು ಹುಬ್ಬಳ್ಳಿಗೆ ಹೋದಳು. ಶರಣರು ಅವರನ್ನು ಸಿದ್ದರ ಕಡೆಗೆ ಕರೆದುಕೊಂಡು ಹೋಗಿ ಲಕ್ಷ್ಮೀಬಾಯಿಯಿಂದ ಸಿದ್ಧರ ಪೂಜಾ ಮೊದಲಾದವುಗಳನ್ನು ಮಾಡಿಸಿ ತಾವು ಇಳಿದುಕೊಂಡ ಸ್ಥಳಕ್ಕೆ ಕರೆದುಕೊಂಡು ಹೋದರು.
ಮರುದಿನ ಲಕ್ಷ್ಮೀಬಾಯಿಯು ಸಿದ್ದರ ಹತ್ತಿರ ಹೋಗಿ ಗುರುವೇ, ನಾವು ಶ್ರೀಮಂತರು. ಹೊರಗಿನ ಜನರಿಗೆ ಸುಖಗಳೆಂದು ಕಂಡರೂ ಶರೀರ ಉಪಾಧಿಗಳ ದುಃಖ ಎಲ್ಲರಿಗೂ ಇರುವಂತೆ  ನಮಗೂ ಇರುತ್ತವೆ. ಆದ್ದರಿಂದ ನಾವು ಸನ್ಮಾರ್ಗಿಗಳಾಗಿ ನಿಶ್ಚಿಂತ ಸುಖದಿಂದ ಇರುವಂತೆ ಆಶೀರ್ವದಿಸಿರಿ' ಎಂದು ಬೇಡಿಕೊಂಡಳು. ಆಗ ಸಿದ್ಧರು 'ಮಗೂ, ನಿನ್ನ ಹೃದಯದಲ್ಲಿ ಸದ್ದುರುವು ಅಂತರ್ಯಾಮಿಯಾಗಿದ್ದು, ನಿನ್ನನ್ನು ಕಾಪಾಡುವನು' ಎಂದು ಹೇಳಿ ಅವಳಿಗೆ ತನ್ನೂರಿಗೆ ಕಳಿಸಿದರು. ಮುಂದೆ ಸ್ವಲ್ಪ ದಿವಸಗಳಲ್ಲಿ ಧಾರಾ ಸಂಸ್ಥಾನದ ರಾಜರ ಬಂಧುಗಳಾದ ಸೀತಾಮಹಾರಾಜರು ರೋಗಗ್ರಸ್ತರಾಗಿ ಬಹಳ ದುಃಖ ಪಟ್ಟರು. ಹವಾ ಬದಲಾವಣೆಗೆ ಸಿಮ್ಲಾದಲ್ಲಿ ಹೋಗಿ ನಿಂತರು. ಅಲ್ಲಿಯೂ ಕಡಿಮೆಯಾಗಲಿಲ್ಲ. ಅಲ್ಲಿಯ ವಾಯಿಸ್‌ರಾಯರು ತಮ್ಮ ಕುಟುಂಬದ ರೋಗ ಕಡಿಮೆ ಮಾಡಿದ ಡಾಕ್ಟರರಿಗೆ ತೋರಿಸಿದರು. ಆದರೂ ರೋಗ ಇನ್ನೂ ಹೆಚ್ಚಾಗುತ್ತ ನಡೆಯಿತು. ತನ್ನ ಪತ್ನಿ ಲಕ್ಷ್ಮೀಬಾಯಿಯ ಹೇಳಿಕೆಯಿಂದ ತಾರಿನ ಮುಖಾಂತರ ಸಿದ್ಧರಿಗೆ ರೋಗದ ಬಗ್ಗೆ ತಿಳಿಸಿದರು. ಅದಕ್ಕೆ ಸಿದ್ಧಾರೂಢರಿಂದ ಮಹಾರಾಜರು ಇಲ್ಲಿಗೆ ಬಂದಿದ್ದರೆ ನೆಟ್ಟಗಾಗುತ್ತಿತ್ತು' ಎಂದು ಉತ್ತರ ಬಂದಿತು.
ವ್ಹಾಯಿಸ್‌ರಾಯರ ಆಜ್ಞೆ ಮೀರಬಾರದೆಂದು ಮಹಾರಾಜರು ಸಿದ್ದರ ಹತ್ತಿರ ಹೋಗಲಿಲ್ಲ. ರೋಗ ಹೆಚ್ಚಾದಾಗ ಲಕ್ಷ್ಮೀಬಾಯಿಗೂ ಹೋಗುವುದಾಗಲಿಲ್ಲ. ಆದ್ದರಿಂದ ತಮ್ಮ ಪಾದತೀರ್ಥವನ್ನು ಶರಣರ ಮುಖಾಂತರ ಸೋಲನ್ ಸ್ಟೇಶನ್ನಿಗೆ ಕಳಿಸಿಕೊಡಬೇಕೆಂದು ತಾರಿನ ಮುಖಾಂತರ ತಿಳಿಸಿದಳು. ಅದರಂತೆ ಅಕ್ಕಲಕೋಟೆಯ ಶರಣರು, ಸಿದ್ದಾರೂಢರ ಪಾದತೀರ್ಥ ಮತ್ತು ವಿಭೂತಿ ಮಹಾರಾಜರಿಗೆ ತಂದು ಕೊಟ್ಟರು. ಮಹಾರಾಜರು ತೀರ್ಥಪ್ರಸಾದ ತೆಗೆದುಕೊಳ್ಳುತ್ತ ಶರಣರಿಗೆ ಎಂಟು ಹತ್ತು ದಿವಸ ಇರಿಸಿಕೊಂಡರು. ಆದರೆ ಅಲ್ಲಿ ಹಿಮಾಲಯದ ಥಂಡಿಯಿಂದ ಶರಣರ ಪಾದಗಳು ಶಲೆತುಬಿಟ್ಟವು. ಅವರು ತಿರುಗಿ ಊರಿಗೆ ಹೋಗಬೇಕೆಂದು ವಿಚಾರ ಮಾಡಿದಾಗ ಅಲ್ಲಿಯ ದಿವಾನರು ಶರಣರಿಗೆ `ಮಹಾರಾಜರ ರೋಗ ನಿವಾರಣೆಯಾಗಲೆಂದು ಆಶೀರ್ವದಿಸಲು ಸಿದ್ದರಿಗೆ ತಾರಿನಿಂದ ತಿಳಿಸಿರಿ' ಎಂದಾಗ ಶರಣರು ನಾನೇ ಹೋಗಿ ಬರುತ್ತೇನೆ ಎಂದಾಗ ದಿವಾನರು ಶರಣರಿಗೆ ಗಾಡಿ ಚಾರ್ಜು ಐದುನೂರು ರೂಪಾಯಿಗಳನ್ನು ಕೊಟ್ಟು ಮತ್ತು ಸಿದ್ದರ ಪಾದಗಳಿಗೆ ಕಾಣಿಕೆಯಾಗಿ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟು ಕಳಿಸಿದರು.
ಶರಣರು ಅವುಗಳನ್ನು ತೆಗೆದುಕೊಂಡು ಹುಬ್ಬಳ್ಳಿಗೆ ಬಂದು ರೂಪಾಯಿಗಳನ್ನು ಸಿದ್ಧರ ಪಾದಕ್ಕಿಟ್ಟು ನಮಸ್ಕರಿಸಿ `ಅಪಾ, ಧಾರಾ ಮಹಾರಾಜರು ಗುಣವಾಗಲೆಂದು ತಮ್ಮ ಆಶೀರ್ವಾದ ತರಲು ದಿವಾನರು ಹೇಳಿ ಕಳಿಸಿದ್ದಾರೆ' ಎಂದಾಗ ಸದ್ಗುರುಗಳು ಮನದಲ್ಲಿ ವಿಚಾರ ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶೀರ್ವದಿಸಿದರು. ಶರಣರು ಇದನ್ನು ಕೇಳಿ ಮನಸ್ಸಿನಲ್ಲಿ, ಮಹಾರಾಜರಿಗೆ ಆಶೀರ್ವಾದ ಮಾಡದೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಏಕೆ ಹೇಳಿದರೆಂದು ಗಾಬರಿಯಾದರು. ಶರಣರ ತಾರಿನ ಮೂಲಕ ವಿಚಾರಿಸಿದಾಗ ಮಹಾರಾಜರು ನಿಧನರಾದರೆಂದು ದಿವಾನರಿಂದ  ಉತ್ತರ ಬಂದಿತ್ತು.
ಮುಂದ ಧಾರಾ ಸಂಸ್ಥಾನದ ರಾಣಿ ಲಕ್ಷ್ಮೀಬಾಯಿ ತಮ್ಮ ಮಂಡಳಿ ಸಹಿತ ಶಿವರಾತ್ರಿಯ ಉತ್ಸವಕ್ಕೆ ಹುಬ್ಬಳ್ಳಿಗೆ ಬಂದರು. ಆಗ ಅಕ್ಕಲಕೋಟ ಮಹಾರಾಣಿ  ತಾರಾಬಾಯಿ ಅವಳ ತಂಗಿ ಶಾಂತಾಬಾಯಿ ಮತ್ತು ಸಾವಂತವಾಡಿಯ ರಾಣಿ ಸಾಹೇಬರು ಅಲ್ಲಿದ್ದರು. ಜಾತ್ರೆ ಮುಗಿದು ಮರುದಿನ ರಾಜಮನೆತನದ ಪರಿವಾರದವರು ಸಿದ್ದರ ಪ್ರಸಾದ ತೆಗೆದುಕೊಳ್ಳಲು ಹೋದರು. ಆಗ ಸಿದ್ದಾರೂಢರು ಸ್ನಾನಕ್ಕೆ ಬಚ್ಚಲಲ್ಲಿ ಕುಳಿತಿದ್ದರು. ಆರೂಢರು ಅವರನ್ನು ನೋಡಿ ಒಂದು ಹಸ್ತದಿಂದ ಅಕ್ಕಲಕೋಟೆಯ ಮಹಾರಾಣಿಯ ತಂಗಿ ಶಾಂತಾಬಾಯಿಯನ್ನು ಮತ್ತೊಂದು ಹಸ್ತದಿಂದ ಸೀತಾರಾಜನ ಪುತ್ರನನ್ನು ಹಿಡಿದು ಸ್ನಾನ ಮಾಡುವ ಸ್ಥಳದಲ್ಲಿ ಕೂಡಿಸಿ ಸ್ವತಃ ತಮ್ಮ ಹಸ್ತದಿಂದ ಅವರ ಮೇಲೆ ನೀರು ಹಾಕಿ ತೊಳೆದರು. ಇದನ್ನು ನೋಡಿದ ಜನರು ಆಶ್ಚರ್ಯಚಕಿತರಾದರು. ಮುಂದೆ ಸ್ವಲ್ಪ ಕಾಲದಲ್ಲಿ ಶಾಂತಾಬಾಯಿಯು ಬಡೋದಾ ಮಹಾರಾಜರ ರಾಣಿಯಾದಳು. ಈ ಹಿಂದೆ ಶಾಂತಾಬಾಯಿಯ ಕನಸಿನಲ್ಲಿ ಸಿದ್ಧರು ಬಂದು 'ನಿನಗೆ ರಾಚೈಶ್ವರ್ಯ ಸಿಗುವುದಲ್ಲದೆ ಅಷ್ಟಪುತ್ರ ಸೌಭಾಗ್ಯವತಿಯಾಗು' ಎಂದು ಆಶೀರ್ವದಿಸಿದ್ದರು. ಆ ವಚನ ಇಂದು ಸತ್ಯವಾಯಿತು ಮತ್ತು ಸೀತಾರಾಜನ ಮಗನು ಧಾರಾಸಂಸ್ಥಾನದ ರಾಜನಾದನು. ಆಗ ಸರ್ವರಿಗೂ ಇದು ಸಿದ್ದಾರೂಢರ ಮಹಿಮೆಯೆಂದು ತಿಳಿದು ಬಂದಿತು.



ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ