ಚೇಳು ಕಡಿದ ಭಕ್ತಳ ವಿಷ ಗುಣಪಡಿಸಿ ಸಲುಹಿದ
🦂 ಚೇಳು ಕಡಿದ ಭಕ್ತಿಗೆ ಸಿದ್ಧ ಸಲುಹಿದ 🔥
ಒಂದು ವರ್ಷ ಶಿವರಾತ್ರಿಯ ಸಮಯದಲ್ಲಿ ದೊಡ್ಡ ಅಡುಗೆಯ ಮನೆ ಮತ್ತು ಇತರ ಕಡೆಗಳಲ್ಲಿ ರಾತ್ರಿ ಅನೇಕ ಹೆಣ್ಣು ಮಕ್ಕಳು ರೊಟ್ಟಿ ಬಡಿಯುವ ಸೇವೆಯಲ್ಲಿರುವಾಗ ಒಬ್ಬ ಹೆಣ್ಣು ಮಗಳಿಗೆ ದೊಡ್ಡ ಕರಿಚೇಳು ಕಡಿದು ಮುಖದಿಂದ ಬುರುಗು ಬಂದು ಎಚ್ಚರದಪ್ಪಿ ನೆಲಕ್ಕೆ ಬಿದ್ದಳು. ಆಗ ಎಲ್ಲರೂ ಗಾಬರಿಗೊಂಡರು.
ಒಬ್ಬರಿಂದ ಈ ಸುದ್ದಿ ತಿಳಿದು ಶ್ರೀ ಗುರುಗಳು ಅಲ್ಲಿಗೆ ಬಂದು ನೋಡಿ ಹೇಳಿದರು " ಆ ತಾಯಿಗೆ ಏನೂ ಆಗುವುದಿಲ್ಲ. ಗುರುಸೇವೆ ಮಾಡುವಾಗ ಆಕೆಗೆ ಈ ವಿಘ್ನ ಬಂದಿದೆ, ಯಾರೂ ಚಿಂತಿಸಬೇಡಿರಿ. ಆ ದೂರದಲ್ಲಿ ಬಿದ್ದಿರುವ ಮಣ್ಣಿನ ಹಂಚಿನ ತುಂಡನ್ನು ತೆಗೆದುಕೊಂಡು ಬನ್ನಿರಿ' ಎಂದರು. ಆಗ ಓರ್ವನು ಆ ತುಂಡನ್ನು ನೀರಿನಲ್ಲಿ ತೇಯ್ದು ಆಕೆಯ ಬಾಯಿಯಲ್ಲಿ ಹಾಕಿದನು. ಸ್ವಲ್ಪ ಹೊತ್ತಿನಲ್ಲಿ ಚೇಳಿನ ವಿಷ ಇಳಿದು ಗುಣವಾಗಿ ಎದ್ದು ಕುಳಿತು, ಗುರುಗಳಿಗೆ ವಂದಿಸಿ ಎದ್ದು ನಿಂತಾಗ ಎಲ್ಲರೂ ಚಕಿತರಾದರು. ನಂತರ ಗುರುಗಳು ಅವಳಿಗೆ 'ತಾಯಿ, ನೀನು ಗುರುಸೇವೆಯಲ್ಲಿರುವಾಗ ನಿನಗೇನೂ ಆಗಲಿಲ್ಲ. ಹೋಗು ಸೇವೆ ಮಾಡು' ಎಂದು ಹೇಳಿಕಳಿಸಿ 'ಈ ತುಂಡನ್ನು ಕಾಯ್ದಿರಿಸಿರಿ. ಮತ್ತೆ ಯಾರಿಗಾದರೂ ಚೇಳು ಹಾವು ಕಡಿದರೆ ಉಪಯೊಗಿಸಿರಿ' ಎಂದು ಹೇಳಿ ಹೋದರು.
ಒಂದು ಹಳ್ಳಿಯ ಓರ್ವ ಭಕ್ತನು ಈ ದೃಶ್ಯವನ್ನು ಕಂಡು ಹಂಚನ್ನು ನೀರಿನಲ್ಲಿ ತೇಯು ಕುಡಿಸಿದರೆ ಹಾವು ಚೇಳಿನ ಬಾಧೆ ನಿವಾರಣೆಯಾಗುತ್ತದೆಂದು ತಿಳಿದು ಜಾತ್ರೆ ಮುಗಿಸಿ ತನ್ನ ಹಳ್ಳಿಗೆ ಹೋದನು. ಮುಂದೆ ಒಂದೆರಡು ತಿಂಗಳು ಗತಿಸಿದ ನಂತರ ಓರ್ವ ಮನುಷ್ಯನಿಗೆ ಚೇಳು ಕಡಿಯಿತು. ಆ ಭಕ್ತ ಹಂಚಿನ ತುಂಡನ್ನು ನೀರಿನಲ್ಲಿ ತೆಯ್ದು ಕುಡಿಸಿದ . ಗುಣವಾಗಲಿಲ್ಲ , ಮರುವರ್ಷ ಆ ಭಕ್ತ ಜಾತ್ರೆಗೆ ಬಂದು ಗುರುಗಳನ್ನು ಕಂಡು ನಮಸ್ಕರಿಸಿ `ಅಪಾ, ಕಳೆದ ವರ್ಷ ಚೇಳು ಕಡಿದ ತಾಯಿಗೆ ಹಂಚಿನ ತುಂಡನ್ನು ನೀರಿನಲ್ಲಿ ತೇಯ್ದು ಕುಡಿಸಿದಾಗ ಆ ತಾಯಿ ಗುಣವಾಗಿದ್ದಳು. ನಾನೂ ನಮ್ಮ ಹಳ್ಳಿಯಲ್ಲಿ ಹಾಗೇ ಮಾಡಿದೆ ಗುಣವಾಗಲಿಲ್ಲ ಏಕೆ?' ಎಂದ. ಆಗ ಗುರುಗಳು ನಸುನಕ್ಕು ' ನೋಡು, ಆ ಹೆಂಚಿನ ತುಂಡಿನಲ್ಲಿಯೇ ಆ ಸತ್ವ ಬಂದಿತ್ತು. ಬೇರ ಹಂಚಿನಲ್ಲಿ ಆ ಸತ್ವ ಬರುವುದಾದರೂ ಹೇಗೆ?' ಎಂದಾಗ ಆ ಭಕ್ತನು ಇದು ಸಿದ್ದನ ಮಹಿಮೆಯಂದು ಕೊಂಡಾಡಿ ನಮಸ್ಕರಿಸಿ ಹೋದ.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
