ಸಿದ್ಧರ ಪ್ರಸಾದ ಕಡೆಗಣಿಸಿ ಬಡವರಾದರು
🌺 ಪ್ರಸಾದ ಕಡೆಗಣಿಸಿ ಬಡವರಾದರು 🌺
ಮುಂದೆ ಅವರ ಮಕ್ಕಳಾದ ರಾಮಣ್ಣ, ಖಂಡೋಬಾ ಮತ್ತು ಮಲ್ಲಪ್ಪನವರು ಸಿದ್ಧರ ಭಕ್ತಿ ಮಾಡುತ್ತಿದ್ದರು. ಅವರು ಒಂದು ಹೊಸಮನೆ ಕಟ್ಟಿ ಗೃಹಪ್ರವೇಶಕ್ಕಾಗಿ ಆಮಂತ್ರಣ ಕೊಡಲು ಅವರ ಮನೆಯವಳಾ, ಲಕ್ಷ್ಮಮ್ಮ ಸಿದ್ದರ ಮಠಕ್ಕೆ ಹೋಗಿ ಸಿದ್ದರಿಗೆ ಆಮಂತ್ರಣ ನೀಡಿದಾಗ ಗುರುಗಳು ಒಪ್ಪಿಕೊಂಡು ಹೇಳಿದರು 'ಲಕ್ಷ್ಮಮ್ಮಾ, ಕುಡಿಯುವ ನೀರಿನ ಕೆರೆಯ ದಂಡೆಯ ಮೇಲೆ ಇರುವ ಮಾವಿನ ಗಿಡದ ಸುತ್ತುಕಟ್ಟೆಯ ಮೇಲೆ ಒಂದು ಹಳೆಯ ಮಗಿಯಿದೆಯಲ್ಲ, ಅದನ್ನು ತೆಗೆದುಕೊಂಡು ಕೆರೆಯಲ್ಲಿಯ ನೀರು ತುಂಬಿ ತೆಗೆದುಕೊಂಡು ಬಾ' ಎಂದರು. ಆಗ ಲಕ್ಷ್ಮಮ್ಮ ಆ ಮಗಿಯನ್ನು ತೆಗೆದುಕೊಂಡು ನೀರು ತುಂಬಿ ತಂದು ಸಿದ್ದನ ಕೈಯಲ್ಲಿಟ್ಟಾಗ ಅವರು ಹೇಳಿದರು "ಲಕ್ಷ್ಮಮ್ಮಾ, ಇದನ್ನು ತೆಗೆದುಕೊಡು ಹೋಗಿ ನಿಮ್ಮ ದೇವರ ಜಗುಲಿಯ ಮೇಲಿಟ್ಟು ಪೂಜಿಸು, ನಿಮ್ಮ ಸಂಕಟ ಪರಿಹಾರವಾಗುತ್ತದೆ' ಎಂದು ಆ ಮಣ್ಣಿನ ಮಗಿಯನ್ನು ಅವಳ ಕೈಯಲ್ಲಿಟ್ಟರು.
ಲಕ್ಷ್ಮಮ್ಮ ಅದನ್ನು ತೆಗೆದುಕೊಂಡು ಕಾರವಾರ ದಾರಿಯಿಂದ ಮೌನೇಶ್ವರ ಮಂದಿರದ ಮುಂದೆ ನಡೆದು ಮುಸಲ್ಮಾನರ ಸುಡುಗಾಡ ದಾರಿಯಿಂದ ಬರುವಾಗ ಅವಳ ಮನಸ್ಸಿನಲ್ಲಿ ಈ ಮಗಿಯು ಬಂಗಾರದ್ದಲ್ಲ, ಬೆಳ್ಳಿ, ಹಿತ್ತಾಳೆ, ತಾಂಬ್ರದ್ದಲ್ಲ; ಈ ಹಳೆಯ ಮುಗಿಯನ್ನು ಪೂಜಿಸುವುದರಿಂದ ನಮ್ಮ ಮನೆ ಹೇಗೆ ಉದ್ದಾರವಾದೀತು?' ಎಂದು ಸಂಶಯಪಟ್ಟು ಆ ಮರಿಯನ್ನು ಒಂದೆಡೆ ಎಸೆದು ಮನೆಗೆ ಹೋದಳು.
ಮರುದಿನ ಸದ್ಗುರುಗಳು ಗೃಹಪ್ರವೇಶಕ್ಕೆ ಮನೆಗೆ ಬಂದಾಗ ಲಕ್ಷ್ಮಮ್ಮಳಿಗೆ 'ಲಕ್ಷ್ಮಮ್ಮಾ, ನಿನ್ನ ಕೊಟ್ಟ ಮರಿಯನ್ನು ಪೂಜಿಸಿದೆಯಾ?' ಎಂದಾಗ ಅವಳು ಗಾಬರಿಯಾಗಿ ಅಳುತ್ತ 'ಅಪಾ, ಆ ಹಳೆಯ ಮಗಿಯನ್ನು ಹೇಗೆ ಪೂಜಿಸಬೇಕೆಂದು ನಿನ್ನ ಮಾತಿನಲ್ಲಿ ಸಂಶಯ ಬಂದು ಅದನ್ನು ಎಸೆದು ತಪ್ಪು ಮಾಡಿದೆ' ಎಂದಳು. ಗುರುಗಳು, ಆಗಲಿಬಿಡು ಎಂದು ಸುಮ್ಮನಾಗಿ ಗೃಹಪ್ರವೇಶದ ಕಾರ್ಯ ಮುಗಿಸಿ ಆಶ್ರಮಕ್ಕೆ ಹೋದರು.
ಮುಂದೆ ಅವರ ಆರ್ಥಿಕ ಪರಿಸ್ಕೃತಿ ಕೆಲವೇ ಸಮಯದಲ್ಲಿ ಹದಗೆಟ್ಟು ಎಲ್ಲವನ್ನೂ ಮಾರಿ ಬಡವರಾದರು. ಗುರುಪ್ರಸಾದವೆಂದರೆ ಅದು ಹಣವಿರಲಿ, ವಸ್ತುವಿರಲಿ, ಹರಕು ತಟ್ಟಿರಲಿ ಅಥವಾ ಯಾವುದೇ ಇರಲಿ ಅದನ್ನು ತಿರಸ್ಕರಿಸಬಾರದು ಎಂದು ಮಹಾತ್ಮರು ಹೇಳಿದ್ದಾರೆ. ಅದಿರಲಿ, ಮೈಲಾರಪ್ಪ ಮರಣ ಹೊಂದಿದಾಗ ಅವನ ತಲೆಯ ಮೇಲೆ ಸಿದ್ದರು ಕಾಲಿಟ್ಟು ಆಶೀರ್ವದಿಸಿದ ಭಾವಚಿತ್ರ ಇಂದಿಗೂ ಅವರ ಮನೆಯಲ್ಲಿದೆ.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
