ಶಿವಯ್ಯ ಸರ್ಪದಿಂದ ಉಳಿದ
ತಿರ್ಲಾಪುರ ಗ್ರಾಮದ ಶಿವಯ್ಯನವರು ಅಣ್ಣೀಗೇರಿಯ ರುದ್ರಮುನಿ ಸ್ವಾಮಿಗಳ ಅನನ್ಯ ಭಕ್ತಿಗೈದು ದಿನಾಲು ಆಶ್ರಮಕ್ಕೆ ಬಂದು, ಶ್ರೀಗಳ ಮುಖದಿಂದ ಜ್ಞಾನಾಮೃತ ಪಾನ ಮಾಡಿದ ಬ್ರಹ್ಮ ಜ್ಞಾನಿಗಳಾಗಿದ್ದರು. ಮುಂದೆ ಶ್ರೀ ಸಿದ್ಧಾರೂಢರ ಮಠದಲ್ಲಿಯ ಪಾಠ ಶಾಲೆಯಲ್ಲಿ ನಡೆಯುತ್ತಿರುವ ಬ್ರಹ್ಮಜ್ಞಾನ ಪ್ರವಚನದಲ್ಲಿ ಪಾಲ್ಗೊಂಡು ಪ್ರವಚನ ಮಾಡಿ ಮಂಗಲವಾದ ನಂತರ ಅವರು ಪಾಠಶಾಲೆಯಿಂದ ಹೊರಬಂದಾಗ ಒಂದು ದೊಡ್ಡ ಉರಿಸರ್ಪವು ಬಂದು ಕಚ್ಚಿತು. ಉರಿಸರ್ಪವೆಂದರೆ ಆ ಸರ್ಪ ಕಚ್ಚಿದರೆ ಮೈಯ್ಯಲ್ಲ ಉರಿಯುವ ಬಾಧೆಯಾಗುವುದರಿಂದ ಅದಕ್ಕೆ ಉರಿಸರ್ಪ ಅಥವಾ ಉರಿಪಿಂಜರವೆಂದು ಕರೆಯುತ್ತಾರೆ. ಆ ಸರ್ಪ ಕಚ್ಚಿದ ತಕ್ಷಣ ಶಿವಯ್ಯನವರ ಮೈಯ್ಯಲ್ಲಿ ಉರಿ ಉಲ್ಬಣಗೊಂಡು ಆ ಉರಿಬಾಧೆ ತಡೆಯಲಾರದೆ ನೆಲಕ್ಕೆ ಬಿದ್ದು ಉರುಳಾಡತೊಡಗಿದರು,
ಆಗ ಅಲ್ಲಿದ್ದ ಭಕ್ತರು ಇತರರು ಶಿವಯ್ಯನವರ ಸ್ಥಿತಿಯನ್ನು ಕಂಡು ಆನೇಕ ಗಾಬರಿಯಾಗಿ ಏನು ಮಾಡಬೇಕೆಂದು ತೋಚದಾಯಿತು. ಆಗ ಒಬ್ಬರು ಹೇಳಿದರು. ನೋಡಿ ಭಕ್ತರೇ! ಶಿವಯ್ಯನವರ ಈ ಉರಿ ಶಮನ ಮಾಡುವ ಶಕ್ತಿ ಶ್ರೀಗುರುನಾಥರಲ್ಲಿದೆ. ಅದು ಮತ್ತಾರಿಂದ ಸಾಧ್ಯವಿಲ್ಲ. ಅವರಲ್ಲಿ ಎತ್ತಿಕೊಂಡು ನಡೆಯಿರಿ, ಎಂದು ಹೇಳಿದಾಗ ಭಕ್ತರು ಅವನನ್ನು ಎತ್ತಿಕೊಂಡು ಮೌನ ಮುನಿ ಶ್ರೀ ಗುರುನಾಥಾರೂಢರು ಕೂಡವ ಖೋಲಿಗೆ ತೆಗೆದುಕೊಂಡು ಹೋಗಿ, ಶ್ರೀಗಳ ಮುಂದೆ ಶಿವಯ್ಯನವರನ್ನು ಮಲಗಿಸಿ ನಡೆದ ಸಂಗತಿಯನ್ನು ತಿಳಿಸಿದರು.
ಆಗ ಕರುಣಾಮಯನಾದ ಗುರುನಾಥನು, ಉರಿಯಿಂದ ಹೊರಳಾಡುತ್ತಿರುವ ಶಿವಯ್ಯನವರ ಹತ್ತಿರ ಬಂದು, ಅವರ ಮೈಮೇಲೆ ಥೂ -ಥೂ ಎಂದು ಉಗುಳಿದರು. ಶ್ರೀಗಳು ಉಗುಳಿದ ತಕ್ಷಣ ಶಿವಯ್ಯನವರ ಮೈಮೇಲಿದ್ದ ಉರಿಯು ಮಾಯವಾಗಿ ಎದ್ದುಕುಳಿತ. ನಂತರ ಸದ್ಗುರುಗಳಿಗೆ ದೀರ್ಘದಂಡ ನಮಸ್ಕರಿಸಿದಾಗ, ಅಲ್ಲಿ ನೆರೆದ ಭಕ್ತರು ಶ್ರೀಗಳ ಲೀಲೆಯನ್ನು ಕಂಡು ಬೆರಗಾದರು. ನಂತರ ಶಿವಯ್ಯನವರು ಶ್ರೀಗಳಿಗೆ ವಂದಿಸಿ ನಿಷ್ಠೆಯಿಂದ ಸದ್ಗುರುಗಳ ಸೇವೆಯಲ್ಲಿ ಉಳಿದು, ಕೊನೆಗೆ ದೇಹತ್ಯಾಗ ಮಾಡಿದ ನಂತರ ಅವರ ಸಮಾಧಿಯನ್ನು ಪಾಠ ಶಾಲೆಯ ಹಿಂದಿರುವ ಕಬೀರದಾಸರ ಗದ್ದುಗೆಯ ಹತ್ತಿರ ಮಾಡಿದರು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
