ಕರುಳಿನ ಕೂಗು ನಮ್ಮ ಪಾಲಿನ ಪರಮಾತ್ಮನೇ ಆಗಿರುವ ಸಿದ್ಧಾರೂಢರಿಗೆ ಕೇಳಿಸಿತು
🌺 ಕರುಳಿನ ಕೂಗು ನಮ್ಮ ಪಾಲಿನ ಪರಮಾತ್ಮನೇ ಆಗಿರುವ ಸಿದ್ಧಾರೂಢರಿಗೆ ಕೇಳಿಸಿತು 🌺
ಭಕ್ತರು ಸಂಕಷ್ಟದಲ್ಲಿ ಇದ್ದಾಗ ಅವರು ಆ ಭಕ್ತರನ್ನು ತಾವೇ ಹೋಗಿ , ಕಾಣುತ್ತಿದ್ದರು. ಇಲ್ಲವೆ ತಮ್ಮ ಶಿಷ್ಯರನ್ನು ಕೊಟ್ಟು ಕರೆಯಿಸಿ ಅವರ ಆಶೋತ್ತರಗಳನ್ನು ಪೂರೈಸುತ್ತಿದ್ದರು. ಈ ಮಾತಿಗೆ ಒಂದೆರಡು ರಸಪ್ರಸಂಗಗಳನ್ನು ನೋಡೋಣ, ಬೆಳಗಾಂವ ಜಿಲ್ಲೆಯ ಇಟಗಿ ಗ್ರಾಮದ ಮಾತೋಶ್ರೀ ಬಸಲಿಂಗಪ್ಪನವರಿಗೆ ಸಿದ್ಧಾರೂಢರೆ ಸಾಕ್ಷಾತ್ ಶಿವ, ಪ್ರತ್ಯಕ್ಷ ಪರಮಾತ್ಮನೇ ಆಗಿದ್ದರು. ಆತಾಯಿಯ ಮೈಮನ ಭಾವ ಬುದ್ದಿ ಚಿಂತನೆ ಕಣಕಣದಲ್ಲಿ ಸಿದ್ದಾರೂಡರೇ ಒಸರದಂತೆ ತುಂಬಿಕೊಂಡಿದ್ದರು. ಆ ತಾಯಿ ಪ್ರತಿ ಅಮವಾಸೆಗೆ, ಪ್ರತಿ ಜಾತ್ರೆಗೆ ಬರುತ್ತಿದ್ದರು. ತಾವೇ ಭಕ್ತಿಯಿಂದ ಪ್ರಸಾದಮಾಡಿ, ಕೈಯಾರೆ ತಾವೇ ಕುಳಿತು ತುತ್ತು ಮಾಡಿ, ಸಿದ್ಧಾರೂಢರಿಗೆ ಉಣಿಸಿದರೇನೇ ಆ ತಾಯಿಗೆ ತೃಪ್ತಿಯಾಗುತ್ತಿತ್ತು. ಒಂದು ಸಲ ಶಿವರಾತ್ರಿ ಜಾತ್ರೆಗೆ ಮಾತೋಶ್ರೀ ಬಸಲಿಂಗಮ್ಮ ಹಾಗೂ ಪಾರ್ವತವ್ವ ಕನ್ನೂರಶೆಟ್ಟರ ಸಂಗಡ ಹುಬ್ಬಳ್ಳಿಗೆ ಬಂದರು. ಎರಡು ಮೂರು ದಿನ ಮಠದಲ್ಲಿ ಉಳಿದು ಸೇವೆ ಮಡಿದರು. ಕೌದಿ ಪೂಜೆಯ ಮರುದಿವಸ ತಾವೇ ಪ್ರಸಾರ ಮಾಡಿ ಸಿದ್ದಾರೂಢರಿಗೆ ಉಣಿಸಲು ಬಂದರು. ಮಠದಲ್ಲಿ ಅಸಾಧ್ಯ ಜನಸಂದಣಿ. ಬಂದ ಭಕ್ತರೆಲ್ಲರಿಗೆ ಸಿದ್ಧಾರೂಢರು ಆಶೀರ್ವದಿಸಿ ಕಳಿಸಿಕೊಡುತ್ತಿದ್ದರು. ಸಿದ್ಧಾರೂಢರ ಬಳಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಎಷ್ಟೋ ಹೊತ್ತು ಕಾಯ್ದರು, ಭಕ್ತರು ಕಡಿಮ ಆಗಲಿ, ಆಗ ನಾವು ಅಪ್ಪನ ಬಳಿಗೆ ಹೋಗೋಣ. ಅಲ್ಲಿಯವರೆಗೆ ಕೆರೆಯ ಕಟ್ಟೆಯ ಮೇಲೆ ಕುಳಿತುಕೊಳ್ಳೋಣ ಎಂದು ಅವರು ಅಲ್ಲಿ ಹೋಗಿ ಕುಳಿತರು. ಮಧ್ಯಾಹ್ನ ಎರಡು ಗಂಟೆಯಾಯಿತು. ಸಿದ್ಧಾರೂಢರಿಗೂ ಹಸಿವು ಆಗಿತ್ತೇನೋ. ಅವರು ತಮ್ಮ ಬಳಿಯಿದ್ದ ಶಿಷ್ಯನಿಗೆ, “ಕೆರೆಯ ಕಟ್ಟೆಯ ಮೇಲೆ ಬಸಲಿಂಗಮ್ಮ, ಪಾರ್ವತೆವ್ವ ಎಂಬ ಇಬ್ಬರು ಹೆಣ್ಣು ಮಕ್ಕಳು ಕಾಯುತ್ತ ಕುಳಿತ್ತಿದ್ದಾರೆ. ಅವರನ್ನು ಕರೆದುಕೊಂಡು ಬಾ'' ಎಂದರು. ಆ ಶಿಷ್ಯ ಕೆರೆಯ ಕಟ್ಟೆಯ ಬಳಿ ಬಂದು, ಬಸಲಿಂಗಮ್ಮ ಪಾರ್ವತವ್ವರನ್ನು ಸಿದ್ಧಾರೂಢಪ್ಪ ಕರೆಯುತ್ತಿದ್ದಾರೆ. ಅವರು ಕೂಡಲೇ ಬರಬೇಕು'' ಎಂದನು. ಬಸಲಿಂಗಮ್ಮ ಹಾಗೂ ಪಾರ್ವತೆವ್ವ ಅವರು ಹಿಗ್ಗಿದರು. ನಮ್ಮ ಕರುಳಿನ ಕೂಗು ನಮ್ಮ ಪಾಲಿನ ಪರಮಾತ್ಮನೇ ಆಗಿರುವ ಸಿದ್ಧಾರೂಢರಿಗೆ ಕೇಳಿಸಿತು ಎಂದು ಹೋಗಿ ಪ್ರಸಾದ ಉಣಿಸಿದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
