ಸಿದ್ಧರ ಸೇವೆಗೆ ಬರುವಾಗ ಲಕ್ಷ್ಮವ್ವಗೆ ನಾಯಿ ಕಚ್ಚಿದಾಗ ಸಿದ್ಧರ ಅಂಗಾರ ಹಚ್ಚಿ ಗುಣವಾದಳು

 




 ಹಳೇಹುಬ್ಬಳ್ಳಿ ಚನ್ನಪೇಟೆಯ ಹಣಗಿ ಓಣಿಯ ನಿವಾಸಿ ಲಕ್ಕಮ್ಮ ಜೂಜಾರ ಅವರು ಶ್ರೀ ಸಿದ್ದಾರೂಢರಲ್ಲಿ ಇಟ್ಟ ಶ್ರದ್ಧೆ ಮೆಚ್ಚತಕ್ಕದ್ದೆ. ಪ್ರತಿದಿನ ಮುಂಜಾನೆ ಐದು ಗಂಟೆಗೆ ಎದ್ದು ಚನ್ನಪೇಟೆಯ ಹತ್ತಾರು ತನ್ನ ಸಖಿಯರನ್ನು ಕರೆದುಕೊಂಡು ಶ್ರೀಸಿದ್ದಾರೂಢಮಠಕ್ಕೆ ಹೋಗಿ ಸದ್ಗುರುಗಳ ದರ್ಶನ ಪಡೆದು ಮಠದ ಕಸಗೂಡಿಸಿ ರಂಗೋಲಿ ಹಾಕಿ ಸಣ್ಣಪುಟ್ಟ ಕೆಲಸಗಳೆನ್ನದೆ ಎಲ್ಲವನ್ನೂ ಮಾಡಿ ಬೆಳಗಿನ ಪೂಜೆ ಮುಗಿಸಿಕೊಂಡು ಮನೆಗೆ ಬರುವರೂಢಿ ವರ್ಷಗಟ್ಟಲೆ ನಡೆದಿತ್ತು ಯಾವುದೋ ಕಾರಣದಿಂದ ಒಂದು ದಿನ ತಪ್ಪಿದರೆ ಸಾಕು ಅವಳಿಗೆ ಕಾಯಿಲೆ ಕಟ್ಟಿಟ್ಟದ್ದು ಮಳೆ, ಗಾಳಿ, ಛಳಿ ಏನೇ ಇದ್ದರೂ ಸಹ ಅವುಗಳನ್ನು ಲೆಕ್ಕಿಸದೆ ಮಠಕ್ಕೆ ಹೋಗಿ ಸದ್ಗುರುಗಳ ದರ್ಶನ ಮಾಡಿಕೊಂಡರೇನೇ ಆವಳ ಆರೋಗ್ಯ ಚೆನ್ನಾಗಿರುತ್ತಿತ್ತು. ಈ ಪದ್ಧತಿ ಹಲವಾರು ವರ್ಷ ದೈನಂದಿನ ನಡೆದಿತ್ತು.
ಮುಂದೆ ಶ್ರೀ ಸಿದ್ಧಾರೂಢರು ಮಹಾಸಮಾಧಿ ಹೊಂದಿದ ನಂತರವೂ ತನ್ನ ಕಾಯಕವನ್ನು ತಪ್ಪಿಸುತ್ತಿರಲಿಲ್ಲ ಶ್ರೀ ಸಿದ್ಧಾರೂಢರು ಬೇರೆ ಮೌನಯೋಗಿ ಶ್ರೀ ಗುರುನಾಥಾರೂಢರು ಬೇರೆ ಎಂಬ ಭೇದ ಭಾವ ಅನೇಕರ ಮನಸ್ಸಿನಲ್ಲಿ ಹೊಯ್ದಾಡುತ್ತಿತ್ತು ಆದರೆ ಆ ತಾಯಿ ಲಕ್ಷ್ಮಮ್ಮ ಆ ರೀತಿ ಭೇದಭಾವವಿಲ್ಲದೆ ಮೌನಯೋಗಿ ಗುರುನಾಥಾ ರೂಢರಲ್ಲಿಯೂ ಆಷ್ಟೇ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಳು.
ಒಂದು ದಿನ ಮುಂಜಾನೆ ತನ್ನ ಇತರ ತಾಯಂದಿರೊಡಗೂಡಿ ಮಠಕ್ಕೆ ಹೋಗುತ್ತಿರುವಾಗ ಹೆಗ್ಗೇರಿಯ ಪಕ್ಕದಲ್ಲಿರುವ (ಆಗಿನ) ಶ್ರೀಗಂಗಮ್ಮನವರ ಪೇರಲ ತೋಟದಿಂದ ಒಂದು ನಾಯಿ ಬಂದು ಲಕ್ಷ್ಮಮ್ಮನವರ ಕಾಲನ್ನು ಕಚ್ಚಿ ಓಡಿಹೋಯಿತು. ಆಗ ರಕ್ತ ಬಂದಿತು ಅದೇ ಸಮಯದಲ್ಲಿ ಅದೇ ದಾರಿಯಿಂದ ಹೋಗುತ್ತಿದ್ದ ಮಠದ ಟ್ರಸ್ಟಿಗಳಾದ ಗುರುನಾಥರಾವ ಬೆಳಮಕರ ಅವರು ಈ ದೃಶ್ಯವನ್ನು ನೋಡಿ ಮರುಗಿ ಅವಳ ಹತ್ತಿರ ಬಂದು  ಏನಮ್ಮ ತಾಯಿ ನಾಯಿ ಕಡಿದು ರಕ್ತಬರಾಕ  ಹತೈತಿ , ಸಪಾರೆ  ಅವರ ಮನೆಗೆ ಹೋಗಿ ನಂಜಿನ ಔಷಧ ಹಾಕಿಸಿಕೊಂಡು ಬಾ ಗುಣ ಆಗ್ತೈತಿ ಎಂದಾಗ ಲಕ್ಷ್ಮಮ್ಮ ಹೇಳಿದಳು,
ಏ  ಬೆಳಮಕರ ಹೋಗ್ ಹೋಗ್ ಏನ್ ಹೇಳ್ತಿ! ಸಿದ್ಧಾರೂಢ ಆಜ್ಞನೇ ನಾಯಿರೂಪದಿಂದ ಬಂದು ಕಡದಾನ, ಅವನ ನೆಟ್ಟಗೆ ಮಾಡ್ತಾನ ಹೋಗ್ ಎಂದು ಮಠಕ್ಕೆ ಹೋಗಿ ಅಜ್ಜನ ಗದ್ದುಗೆಗೆ ನಮಸ್ಕರಿಸಿ ಅಲ್ಲಿದ್ದ ಭಸ್ಮ  (ಅಂಗಾರ)ವನ್ನು ನಾಯಿ ಕಚ್ಚಿದ ಸ್ಥಾನಕ್ಕೆ ಹಚ್ಚಿಕೊಂಡು ಮುಂದೆ ಮೌನಮುನಿ ಶ್ರೀ ಗುರುನಾಥರ ದರ್ಶನ ಪಡೆದು ಕೈ ಮುಗಿದದ್ದು ನಿಂತಾಗ ಶ್ರೀಗುರುನಾಥರು ಕುಲು ಕುಲುನಗುತ್ತ ಎರಡೂ ಕೈಗಳನ್ನು ಎ ಕೆಳಗಿಳಿಸಿದರು. ಆಗ ತಾಯಿ ಲಕ್ಷ್ಮಮ್ಮ ಸದ್ಗುರುಗಳು ಕರುಣೆಯಿಂದ ಆಶಿರ್ವದಿಸಿದರು ಎಂಬ ಭಾವದಿಂದ ಸಂತೋಷಗೊಂಡು ನಿತ್ಯದ ಕಾಯಕ ತೀರಿಸಿ ಆನಂದದಿಂದ ಮನೆಗೆ ಬಂದಳು.

ಅನನ್ಯಾಶ್ಚಿಂ ತಯಂತೋಮಾಂ | ಯೋಜನಾಪರ್ಯುಪಾಸತೆ ||
ತೆಷಾ೦ನಿತ್ಯಾಭಿಯುಕ್ತಾನಾ೦ |
ಯೋಗಕ್ಷೇಮಂವಹಾಮ್ಯಹಂ ||

ಎಂಬ ಭಗವದ್ಗೀತೆಯೋಕ್ತಿಯಂತೆ ನಾಯಿಕಡಿದ ನಂಜು ಏರಲಿಲ್ಲ. ಒಂದೆರಡು ದಿವಸಗಳಲ್ಲಿ ಗಾಯವು ಮಾಯವಾಯಿತು. ಈ ಘಟನೆಯನ್ನು ಲಕ್ಷ್ಮಮ್ಮ ತನ್ನ ಮನೆಯ ಯಾವ ಸದಸ್ಯರಿಗೂ ಇತರರಿಗೂ ಹೇಳಿರಲಿಲ್ಲ. ಒಂದು ದಿನ ಲಕ್ಷ್ಮಮ್ಮನ ಸಣ್ಣಮಗ ಗೋಪಾಲರಾವ ಜೂಜಾರ ಅವರು ಮಠಕ್ಕೆ ಹೋದಾಗ ಅವರ ಹತ್ತಿರ ಶ್ರೀಗುರುನಾಥರಾವ ಬೆಳಮಕರ ಬಂದು, ಏನ್ರಿ! ಗೋಪಾಲರಾವ ನಿಮ್ಮ ತಾಯಿ ಹೇಗೆ ಇದ್ದಾಳೆ. ಅವಳಿಗೆ ನಾಯಿಕಡಿದ ನಂಜು ಹೇಗಿದೆ? ಅವಳ ಆರೋಗ್ಯ ಚೆನ್ನಾಗಿದೆಯೇ? ಎಂದು ಪ್ರಶ್ನಿಸಿದರು. ಆಗ ಗೋಪಾಲರಾವ ಅವರು ಆಶ್ಚರ್ಯಚಕಿತರಾಗಿ ಏನ್ರಿ  ಬೆಳಮಕರರೇ! ಅದೆಂಥ ನಂಜು? ಅವಳು ಆರೋಗ್ಯವಾಗಿದ್ದಾಳೆ, ಮಠಕ್ಕೆ ದಿನಾ ಬರುತ್ತಾಳಲ್ಲ ಎಂದಾಗ ಬೆಳಮಕರರು ಲಕ್ಷ್ಮಮ್ಮನಿಗೆ ನಾಯಿಕಡಿದ ವಿಚಾರ ತಿಳಿಸಿದರು ಆಗ ಇಬ್ಬರಿಗೂ ಆಶ್ಚರ್ಯವಾಗಿ ಸದ್ಗುರುವಿನ ಮಹಿಮೆಯ ಪ್ರತ್ಯಕ್ಷ ಅನುಭವವಾಯಿತು
ನಿಮಿಷವಾಗಲಿ ನಿಮ್ಮ ನೆನಹು ನಿಂದೊಡೆ ಮುಕ್ತಿ ಪರತಿಲ್ಲವೆಂಬುದು ನಿಗಮೋಕ್ತಿ ಎಂಬ ಶ್ರೀ ನಿಜಗುಣ ಶಿವಯೋಗಿಗಳ ಉಕ್ತಿಯಂತೆ ಅವಳ ಅಂತಃಕರಣದಲ್ಲಿ ಶ್ರೀಸಿದ್ಧಾರೂಢರ, ಶ್ರೀಗುರುನಾಥಾರೂಢರ ನೆನಹು ಮತ್ತು ಓ೦ ನಮಃಶಿವಾಯ ಮಂತ್ರ ಸದಾಕಾಲ ನಿಂತಿತ್ತು.
ಒಂದು ದಿನ ಶಿವರಾತ್ರಿಯ ಜಾತ್ರೆಯ ಸಪ್ತಾಹದ ಮೊದಲ ದಿನ ಅವರ ಮನೆಯ ಸದಸ್ಯರೊಬ್ಬರು ಶ್ರೀ ಸಿದ್ಧಾರೂಢರ ಮಠಕ್ಕೆ ಹೋಗಿ, ಸದ್ಗುರುಗಳ ಗದ್ದುಗೆಯ ದರ್ಶನ ಪಡೆದು ಗುರುಗಳ ಭಸ್ಮ (ಅಂಗಾರ) ತೆಗೆದುಕೊಂಡು, ಶ್ರೀಗುರುನಾಥರ ದರ್ಶನವನ್ನು ಪಡೆದು ಮನೆಗೆ ಬಂದು ಆ ತಾಯಿ ಲಕ್ಷ್ಮಮ್ಮನ ಹಣೆಗೆ ಹಚ್ಚಿದ ತಕ್ಷಣ ತನ್ನ ದೇಹತ್ಯಾಗ ಮಾಡಿ ಸದ್ಗುರುಗಳ ಪಾದಪದ್ಮಂಗಳಲ್ಲಿ ಲೀನಹೊಂದಿ ವಿದೇಹ ಮುಕ್ತಿ ಪಡೆದಳು.

 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರುಪ್ಪನ ಕರುಣೆಯಿಂದ ಹನುಮವ್ವ ಮಗುವನ್ನು ಪಡೆದಳು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ