ಗೋವೆಯಲ್ಲಿ ಮುಾರು ಸಿದ್ಧಾರೂಢ ಮಠ ಸ್ಥಾಪನೆ

 🌺 ಗೋವೆಯಲ್ಲಿ ಮುಾರು ಸಿದ್ಧಾರೂಢ ಮಠ ಸ್ಥಾಪನೆ 🌺


ಒಂದು ದಿನ ಸದ್ಗುರುಗಳು ಪಾಂಡುರಂಗ ಮಹಾರಾಜರನ್ನು ಕರೆದು (ಪರಶುರಾಮ ಪಂತ) `ಪಂತರೇ, ಗೋವೆಯ ಪಂಚವಾಡಿಯಲ್ಲಿ ಆಶ್ರಮ ಸ್ಥಾಪಿತವಾಯಿತು. ನೀವು ಅಲ್ಲಿ ಆಶ್ರಮದಲ್ಲಿದ್ದು, ಭಜನ, ಪೂಜನ, ಶಾಸ್ತ್ರ ಪ್ರಚಾರ ಮಾಡುತ್ತ ಜಗದೋದ್ಧಾರ ಮಾಡಬೇಕು' ಎಂದು ಆಶೀರ್ವದಿಸಿದರು. ಆಗ ಪಂತರು `ಸದ್ಗುರುವೇ ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ಗೋವೆಗೆ ಹೋಗುತ್ತೇನೆ' ಎಂದರು. ಆಗ ಸಿದ್ದರು ಮತ್ತೆ ಹೇಳುತ್ತ ಗೋವಾ ಪ್ರಾಂತ ದೊಡ್ಡದಿದ್ದು ನೀವು ಅಲ್ಲಿಯ ಜನರಂತೆಯೇ ಇದ್ದು ಆಚಾರ ವಿಚಾರದಲ್ಲಿ ಕೊರತೆಯಾಗಬಾರದು. ಅಲ್ಲಿಯ ಜನರಿಗೆ ಭಜನೆ ಮಾಡಲು ಹಚ್ಚಬೇಕು. ಹೋಗುವಾಗ ನಿಮ್ಮ ಪತ್ನಿ ಪುತ್ರರನ್ನು ಕರೆದುಕೊಂಡು ಹೋಗಿರಿ. ಅದರಲ್ಲಿ ನಿಮ್ಮ ಪತ್ನಿಯು ಯಶಸ್ವಿಯಾಗುತ್ತಾಳೆ. ಸ್ತ್ರೀ ಸಮಾಜವನ್ನು ಕುಶಲತೆಯಿಂದ ನೋಡಿಕೊಳ್ಳಬೇಕು. ನಿಮಗೆ ಬಹಳ ಹೇಳುವ ಅವಶ್ಯಕತೆಯಿಲ್ಲ' ಎಂದರು.
ಆಗ ಪಾಂಡುರಂಗ ಮಹಾರಾಜರು ಸಿದ್ದ ಚರಣಗಳಲ್ಲಿ ವಂದಿಸಿ ತನ್ನ ಪತ್ನಿ ಪುತ್ರರನ್ನು ಕರೆದುಕೊಂಡು ಗೋವೆಯ ಮುಖ್ಯ ಆಶ್ರಮ ಪಂಚವಾಡಿಗೆ ಹೋಗಿ ಕೀರ್ತನ ಶಾಸ್ತ್ರ ಪ್ರವಚನ ಭಜನ ಕಾರ್ಯಕ್ರಮ ಪ್ರಾರಂಭಿಸಿದರು. ಅನೇಕ ಭಕ್ತರು ಬರಹತ್ತಿದರು. ಸ್ವಲ್ಪ ದಿವಸಗಳಲ್ಲಿಯೇ ಬಹಳ ಪ್ರಚಾರಕ್ಕಾಗಿ ಉಸಗಾಂವದಿಂದಲೂ ಅನೇಕ ಭಕ್ತರು ಬರುತ್ತಿದ್ದು ಅವರೂ ತಮ್ಮ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಬೇಕೆಂದು ಕೇಳಿಕೊಂಡರು. ಪಂತರು ಅಲ್ಲಿಯೂ ಒಂದು ಆಶ್ರಮ ಸ್ಥಾಪಿಸಿ ಶಾಸ್ತ್ರ ಪುರಾಣ ಪ್ರವಚನ ನಾಮಸ್ಮರಣೆಯ ಕಾರ್ಯ ನಡೆಸುತ್ತಿದ್ದುದರಿಂದ ಅಲ್ಲಿಯೂ ಬಹಳ ಪ್ರಚಾರವಾಗಿ ಸ್ಥಳೀಯ ಮತ್ತು ಪರಸ್ಥಳಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಅದರಿಂದ ಜನದಟ್ಟಣೆಯಾಯಿತು. ಎಲ್ಲ ಜಾತಿಯ ಜನರು ಬರತೊಡಗಿದರು. ಅಲ್ಲಿ ಪಂತರು ಧರ್ಮ, ಅರ್ಥ, ಕಾಮ, ಮೋಕ್ಷ, ತತ್ವಗಳನ್ನು ಬೋಧಿಸುತ್ತಿದ್ದರು.
ಕೆಲವರು ಶಾಸ್ತ್ರಕ್ಕೆ ಬರುತ್ತಿದ್ದರೆ ಕೆಲವರು ಊಟಕ್ಕೆ ಬರುತ್ತಿದ್ದರು. ಪಂತರು ಎಲ್ಲರಿಗೂ ಸಮಾನ ದೃಷ್ಟಿಯಿಂದ ನೋಡಿಕೊಳ್ಳುತ್ತಿದ್ದರು. ಭಜನ ಪೂಜನ ನಾಮಸ್ಮರಣೆಯಿಂದ ಉಸಗಾಂವ ತುಂಬಿ ಹೋಗಿತ್ತು. ಯಾರಿಂದಲೂ ಹಣ ಬೇಡುತ್ತಿರಲಿಲ್ಲ. ಎಲ್ಲರಿಗೂ ಪ್ರಸಾದ ಕೊಟ್ಟು ಕಳಿಸುತ್ತಿದ್ದರು. ಇದನ್ನು ನೋಡಿದ ಜನರು ಚಕಿತರಾಗುತ್ತಿದ್ದರು. ಇಪ್ಪತ್ತು ನಾಲ್ಕು ಗಂಟೆ ಭಜನೆ ನಡೆಯುತ್ತಿತ್ತು. ಆಗ ಪಂತರು ಬಹಳ ಉದಾರಿಗಳಾಗಿದ್ದರು. ಇದರಿಂದ ಸಿದ್ದಾರೂಢರ ಕೀರ್ತಿ ಎಲ್ಲೆಡೆ ಹಬ್ಬಿತು. ಅಲ್ಲಿ ಯಾವ ನ್ಯೂನತೆಗಳೂ ಬರಲಿಲ್ಲ.
ಅಲ್ಲಿ ಅಡಪೈ  ಗ್ರಾಮದ ಭಕ್ತರೂ ಬರುತ್ತಿದ್ದರಿಂದ ಅಲ್ಲಿಯೂ ಸಿದ್ಧಾಶ್ರಮ ಸ್ಥಾಪಿಸಿ ಭಜನೆ, ಕೀರ್ತನೆ, ನಾಮಸ್ಮರಣೆ, ಶಾಸ್ತ್ರ ಪ್ರವಚನ ಪ್ರಾರಂಭಿಸಿ ಮೋಕ್ಷಮಾರ್ಗ ತೋರಿಸಿದರು. ಅಜ್ಞಾನಿ ಮೂಢ ಜನರಿಗೆ ಭಕ್ತಿ ಮಾರ್ಗಕ್ಕೆ ಹಚ್ಚಿದರು. ಹೀಗೆ ಗೋವೆಯಲ್ಲಿ ಮೂರು ಗ್ರಾಮಗಳಲ್ಲಿ ಸಿದ್ದಾಶ್ರಮ ಸ್ಥಾಪಿಸಿದರು. ಪಂಚವಾಡಿಯಲ್ಲಿ ವೈಶಾಖಮಾಸದಲ್ಲಿ ಉಪಗಾಂವದಲ್ಲಿ ಪುಷ್ಯಮಾಸದಲ್ಲಿ ಮತ್ತು ಅಡಪೈ  ಗ್ರಾಮದಲ್ಲಿ ಜೇಷ್ಠ ಮಾಸದಲ್ಲಿ ವಿಶೇಷ ಉತ್ಸವಗಳು ನಡೆಯುತ್ತಿದ್ದವು.

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ