ಗಣಪತಿ ಅಥಣಿಯ ರಕ್ಷಣೆ ಹಾಗೂ ತಮ್ಮಾಜಪ್ಪನ ವೈಕುಂಠ ಯಾತ್ರೆ
🌺 ಗಣಪತಿ ಅಥಣಿಯ ರಕ್ಷಣೆ ಹಾಗೂ ತಮ್ಮಾಜಪ್ಪನ ವೈಕುಂಠ ಯಾತ್ರೆ 🌺
ಅವನ ಬಂಧು ನಾರಾಯಣನಿಗೆ ಕುಷ್ಟರೋಗವಾಗಿತ್ತು. ಆಗ ಗಣಪತಿಯು ಅವನನ್ನು ಕರೆದುಕೊಂಡು ಹೋಗಿ ಸಿದ್ಧರಿಗೆ ತೋರಿಸಿದಾಗ ಅವರು ಹೇಳಿದರು `ಸದ್ದುರುವಿನ ವಿಭೂತಿಯನ್ನು ನಾರಾಯಣನಿಗೆ ಹಚ್ಚಿರಿ. ಕುಷವು ನಿವಾರಣೆಯಾಗುತ್ತದೆ' ಎಂದರು. ಅವರ ಆಜ್ಞೆಯಂತೆ ಮಾಡಿದಾಗ ರೋಗ ನಿವಾರಣೆಯಾಗಿ ಅವನು ಮತ್ತು ಗಣಪತಿ ಹಾಗೂ ತಾಯಿ ಸೋಮಾಬಾಯಿ ಸೇರಿ ಶಿವರಾತ್ರಿಯಲ್ಲಿ ಅನ್ನಛತ್ರ ನಡೆಸಿದರು. ಇನ್ನೊಬ್ಬ ಭಕ್ತ ಗುರುಪಾದಪ್ಪ ರೋಖಡ ನಿತ್ಯ ಸಿದ್ಧರ ಸೇವೆಯನ್ನು ಭಕ್ತಿಯಿಂದ ಮಾಡುತ್ತಿದ್ದನು. ಅವನು ಶಿವರಾತ್ರಿ ಶ್ರಾವಣ ಮಾಸಗಳಲ್ಲಿ ಸಮಸ್ತ ಕಾರ್ಯ ಮಾಡುತ್ತಿದ್ದುದರಿಂದ ಗುರುಕೃಪೆಗೆ ಪಾತ್ರನಾಗಿದ್ದನು.
ತಮ್ಮಾಜಪ್ಪ ಏಕಬೋಟೆ ಇವನು ಪ್ರತಿವರ್ಷ ಪಂಡರಪುರದ ವಾರಕರಿ ಮಾಡುತ್ತಿದ್ದನು. ಆದರೆ ಸದ್ಗುರು ಚರಣಗಳಲ್ಲಿ ಅಪಾರ ಭಕ್ತಿಯಿತ್ತು. ಸಿದ್ದರು ಪ್ರವಚನ ಕೇಳುತ್ತಿದ್ದು ಅವನಲ್ಲಿ ಭಕ್ತಿಭಾವ ಉದಿಸಿತು. ಪಂಢರಿ ಸಂಪ್ರದಾಯದ ಭಜನಗಳನ್ನು ತಾಳ ಹಿಡಿದು ಕೀರ್ತನವನ್ನು ಮೊಟ್ಟಮೊದಲು ಮಠದಲ್ಲಿ ಪ್ರಾರಂಭಿಸಿದನು. ಸಿದ್ದರ ಆಜ್ಞೆಯಂತೆ ಹುಬ್ಬಳ್ಳಿಯ ಸಂತರ ಸಹಾಯದಿಂದ ಹರಿಮಂದಿರ ಸ್ಥಾಪಿಸಿದನು. ಹೀಗೆ ಕೆಲವು ಕಾಲ ಕಳೆಯುತ್ತಿರಲು ಅವನಲ್ಲಿ ಮೃತ್ಯು ಲಕ್ಷಣ ಕಂಡುಬಂದವು. ತಮ್ಮಾಜಪ್ಪ ಗುರುಭಕ್ತನಿರುವುದರಿಂದ ಅವನಿಗೆ ಮೃತ್ಯುವಿನ ಬಗ್ಗೆ ಮೊದಲೇ ತಿಳಿದಿತ್ತು. ಅವನ ವ್ಯಾಧಿ ಹೆಚ್ಚಾದಾಗ ಹೇಳಿದ "ನಾನು ನಾಳೆ ಪ್ರಾಥಃಕಾಲ ವೈಕುಂಠಕ್ಕೆ ಹೋಗುತ್ತೇನೆ. ಆಗ ನನಗೆ ಸಿದ್ಧರ ದರ್ಶನ ಮಾಡಿಸಬೇಕು' ಎಂದು ಮಕ್ಕಳಿಗೆ ಹೇಳಿದನು. ಅದರಂತೆ ಮಕ್ಕಳು ಸಿದ್ಧರಿಗೆ ವಿಚಾರ ತಿಳಿಸಿ ಪೂಜೆಯ ವ್ಯವಸ್ಥೆ ಮಾಡಿದರು. ಆಗ ಅವನು ಅಖಂಡ ನಾಮಸ್ಮರಣೆ ಮಾಡುತ್ತಿದ್ದನು. ಮುಂಜಾನೆ ಸಿದ್ಧರು ಬಂದು ಅವನಿಗೆ ಹೇಳಿದರು
ತಮ್ಮಾಜಪ್ಪ, ನೀವು ವೈಕುಂಠಕ್ಕೆ ಹೋಗುತ್ತೀರಿ. ವಿಠಲ ನಾಮಸ್ಮರಣೆ ಮಾಡಿರಿ' ಎಂದಾಗ ತಮ್ಮಾಜಪ್ಪ ಹೇಳಿದ 'ತಂದೆ, ನಿಮ್ಮ ಆಜ್ಞೆಯಂತೆ ನಡೆದಿದೆ ಎಂದು ಎಲ್ಲರೂ ವಿಠಲ ಭಜನೆ ಮಾಡಿರಿ' ಎಂದು ಹೇಳಿ ತಮ್ಮಾಜಪ್ಪನು, ತುಕಾರಾಮ ಮಹಾರಾಜರು ವೈಕುಂಠಕ್ಕೆ ಹೋಗುವಾಗ ಯಾವ ಅಭಂಗ ಉಚ್ಚರಿಸಿದ್ದರೂ ಅದೇ ಅಭಂಗವನ್ನು ಉಚ್ಚರಿಸಿದರು. (ಅಮ್ಹಿ ಜಾತೋ ಅಮಚಾ ಗಾಂವಾ ಅಮಚ್ಯಾ ರಾಮಾ ರಾಮ ಫ್ಯಾವಾ) ಈ ಅಭಂಗ ಹಾಡಿ ಸಿದ್ಧರನ್ನು ಪೂಜಿಸಿ ವಿಠ್ಠಲನಾಮ ಹಾಡುತ್ತ ದೇಹತ್ಯಾಗ ಮಾಡಿದನು. ಶಾಲಿವಾಹನಶಕೆ ಹದಿನೆಂಟು ನೂರಾ ಮೂವತ್ತೇಳು ಪ್ರಮಾಥಿ ನಾಮ ಸಂವತ್ಸರ ವೈಶಾಖ ತ್ರಯೋದಶಿ ಸೋಮವಾರ (ಕ್ರಿ.ಶ. ಹತ್ತೊಂಭತ್ತುನೂರಾ ಹದಿನೈದು) ವೈಕುಂಠಕ್ಕೆ ಹೋದನು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
