ಸಿದ್ಧರ ಅನಾದೃಶ್ಯ ಗುರುಭಕ್ತಿ
🌺 ಸಿದ್ಧರ ಅನಾದೃಶ್ಯ ಗುರುಭಕ್ತಿ 🌺
1919-20ನೆಯ ವರ್ಷ ಇರಬೇಕು. ದೂರದ ಬಿಜಾಪೂರದ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸಾಲವಾಡಗಿ ಬಂಡೆಪ್ಪನಹಳ್ಳಿಯ ಹಿರೇಮಠದ ಒಂದು ಲಗ್ನ ತಂಡವು ಹುಬ್ಬಳ್ಳಿಯಲ್ಲಿ ಅಕ್ಕಸಾಲಿಗರ ಓಣಿಯಲ್ಲಿರುವ ಹನ್ನೆರಡುಮಠಕ್ಕೆ ಬಂದಿತ್ತು, ಆ ತಂಡದಲ್ಲಿ ಸಿದ್ದಯ್ಯ ಎಂಬ ಒಬ್ಬ ಹುಡುಗ ಇದ್ದನು. ಅವನಿಗೆ ಆಗ ಹೆಚ್ಚೆಂದರೆ 12-13 ವರ್ಷ ಇರಬೇಕು(ಜನನ ೧೯೦೬ರಲ್ಲಿ) ಆ ಲಗ್ನ ತಂಡವು ಹುಬ್ಬಳ್ಳಿಯಲ್ಲಿ ಸುಮಾರು ಒಂದು ತಿಂಗಳ ಕಾಲ ಉಳಿಯಿತು. ಹುಡುಗರಾಗಿದ್ದ ಸಿದ್ಧಯ್ಯನವರು ತಮ್ಮ ಗೆಳೆಯರೊಡಗೂಡಿ ಆ ಓಣಿಯಲ್ಲಿ ಆಟ ಆಡುವಾಗ, ಅವರಿಗೆ ಅದೇ ಓಣಿಯಲ್ಲಿ ಸದ್ದುದು ಶ್ರೀ ಸಿದ್ಧಾರೂಢರು ತಮ್ಮ ಶಾಸ್ತ್ರ ಮುಗಿದ ಮೇಲೆ ಎಲ್ಲರಿಗೂ ಹಿಡಿ ಹಿಡಿ ಕೊಡುವ ಪ್ರಸಾದದ ವಿಷಯ ತಿಳಿಯಿತು. ಆ ಪ್ರಸಾದದಲ್ಲಿ ಕಲ್ಲು ಸಕ್ಕರೆ, ಗೋಡಂಬಿ, ಪಿಸ್ತಾ, ಬದಾಮ, ಕೇರಬೀಜ, ಉತ್ತತ್ತಿ ಇರುವ ವಿಷಯ ತಿಳಿದ ಮೇಲಂತೂ ಆ ಹುಡುಗರ ಬಾಯಲ್ಲಿ ನೀರು ಬರತೊಡಗಿದವು. ಅವರಿಗೆ ತತ್ತ್ವಶಾಸ್ತ್ರ ಗೊತ್ತಿರಲಿಲ್ಲ. ನಿಜಗುಣರ ವಿಷಯ ತಿಳಿಯುತ್ತಿರಲಿಲ್ಲ. ಆದರೂ ಆ ಪ್ರಸಾದದ ಆಸೆಗೆ ಅವರು ಸಿದ್ದಾರೂಢರ ಬಳಿ ಸಾರಿದರು. ಹುಡುಗ ಸಿದ್ದಯ್ಯನವರು ಉಜ್ಜಣ್ಣನವರ ಮನೆಯ ಬಾಗಿಲಲ್ಲಿ ಮೊದಲ ಸಲ ಹೋಗಿ ನಿಂತಾಗಲೇ ಸದ್ಗುರು ಶ್ರೀ ಸಿದ್ಧಾರೂಢರ ದಿವ್ಯ ದೃಷ್ಟಿ ಇವರ ಮೇಲೆ ಬಿತ್ತು. ಸಿದ್ಧಾರೂಢರು ಸಿದ್ಧಯ್ಯನವರನ್ನು ನೋಡೇ ನೋಡಿದರು. ಧನ್ಯತೆ ಕಂಗಳಲ್ಲಿ ಕುಣಿಯಿತು. ಸುಮಾರು ೫೦ ವರ್ಷಗಳ ಮೇಲೆ ಗುರುಗಳಾಗಿದ್ದ ಗಜದಂಡ ಸ್ವಾಮಿಗಳ ಸಂತತಿಯನ್ನು ಕಂಡನೆಲ್ಲ ಎಂಬ ತೃಪ್ತಿ ಆವರ ಮುಖದಲ್ಲಿ ಮೂಡಿತು. ಆ ಎಡಗ ಹುಡುಗನಿಗೆ ಸಿದ್ಧಾರೂಢರು ಕೈ ಮುಗಿದರು. ಗುರುಭಕ್ತಿಯನ್ನು ಪ್ರದರ್ಶಿಸಿದರು. ಆ ಎಡಗ ವಯಸ್ಸಿನ ಹುಡುಗ ಸಿದ್ಧಯ್ಯನವರು ಯಾವ ಕಡೆಗೆ ಹೋದರೋ ಅದೇ ದಿಕ್ಕಿನತ್ತ ಸಿದ್ಧಾರೂಢ ಸ್ವಾಮಿಗಳು ಸದರಿನ ಮೇಲಿದ್ದರೂ, ಹೊರಳಿ ಹೊರಳಿ ಕೂಡ್ರತೊಡಗಿದರು. ಮೂರು ನಾಲ್ಕು ದಿವಸ ಹೀಗೇ ನಡೆಯಿತು. ಜಗತ್ತೆಲ್ಲವೂ ಸಿದ್ಧಾರೂಢರ ಕಡೆಗೆ ಹೊರಳುತ್ತಿದ್ದರೆ, ಸಿದ್ಧಾರೂಢರು ಈ ಹುಡುಗನತ್ತ ಹೊರಳುತ್ತಾರೆ, ಅವನಿಗೆ ಕೈ ಮುಗಿಯುತ್ತಾರೆ. ಏನಿದರ ಗುಟ್ಟು? ಎಂದು ಹಿರಿಯರಿಗೆ ಅಚ್ಚರಿಯಾಯಿತು. ಹಿರಿಯರು ಸಿದ್ಧಾರೂಢರಿಗೆ ಈ ವಿಷಯವಾಗಿ ಕೇಳಿದರು. ಆಗ ಸ್ವಾಮಿಗಳು ಆ ಸಿದ್ದಯನವರತ್ತ ಕೈಮುಗಿದು, “ಇವನು ನನ್ನ ಗುರು ಸಂತತಿ. ಇವನಲ್ಲಿ ನಾನು ನನ್ನ ಗುರುಗಳನ್ನೇ ಕಾಣುತ್ತೇನೆ. ಇವನು ಮುಂದೆ ನನ್ನ ಗುರುಗಳಾದ ಗಜದಂಡ ಸ್ವಾಮಿಗಳ ಪೀಠಕ್ಕೆ ಅಧಿಕಾರಿಯಾಗಿತ್ತಾನೆ. ಆಗ ನಾನು ಈ ದೇಹದೊಂದಿಗೆ ಇರುವುದಿಲ್ಲ. ಈಗಲೇ ಆ ಗುರುಗಳಿಗೆ ಕೈ ಮುಗಿದೆ'' ಎಂದು ಹೇಳಿದರು.
ಹುಡುಗ ಸಿದ್ದಯ್ಯನವರು ಲಗ್ನ ಮುಗಿಸಿ ಸಾಲವಾಡಿಗೆ ಹೋದರು.
ಒಂದು ವಿಶೇಷವೆಂದರೆ ರಾಯಚೂರ ಜಿಲ್ಲೆ, ಲಿಂಗಸೂಗೂರ ತಾಲೂಕಿನ ಪ್ರಸಿದ್ದ ಅಮರೇಶ್ವರ ಕ್ಷೇತ್ರದ ಬಳಿಯಿರುವ ದೇವರಭೂಪುರ ಗ್ರಾಮದ ಪೂಜ್ಯ ಶ್ರೀ ಗಜದಂಡ ಸ್ವಾಮಿಗಳ ಹೀರೆಮಠಕ್ಕೆ ಎಂದಿನಿಂದಲೂ ಸಾಲವಾಡಗಿ ಬಂಡೆಪ್ಪನಳ್ಳಿ ಹೀರೇಮಠದವರೇ ಪೀಠಾಧಿಪತಿಗಳಾಗುವದು ನಡೆದು ಬಂದ ಪದ್ದತಿ, ಹುಬ್ಬಳ್ಳಿಯಲ್ಲಿ ಸದ್ದು ರು ಶ್ರೀ ಸಿದ್ಧಾರೂಢರ ದೃಷ್ಟಿಗೆ ಬಿದ್ದ ಯುವಕ ಸಿದ್ಧಯ್ಯನವರೂ ಅದೇ ಸಾಲವಾಡಗಿ ಬಂಡೆಪ್ಪಹಳ್ಳಿಯ ಹೀರೆಮಠದವರು. ಈ ಸಿದ್ಧಯ್ಯನವರ ಕಕ್ಕಂದಿರೇ ೧೯೨೦ನೆಯ ಸಾಲಿನಲ್ಲಿ ದೇವರಭೂಪುರದಲ್ಲಿ ಗಜದಂಡ ಸ್ವಾಮಿಗಳಾಗಿದ್ದರು. (ಈ ಹೀರೆಮಠದ ಇನ್ನೊಂದು ವೈಶಿಷ್ಟ್ಯವೆಂದರೆ ಈ ಪೀಠಕ್ಕೆ ಬರುವ ಎಲ್ಲ ಸ್ವಾಮಿಗಳ ಹೆಸರೂ ಗಜದಂಡಸ್ವಾಮಿಗಳೇ ಆಗಿರುತ್ತದೆ.) ಅವರು ಈ ಸಿದ್ಧಯ್ಯನವರನ್ನು ತಮ್ಮ ಪೀಠದ ಮರಿಯೆಂದು ನೇಮಿಸಿ ಕಾಗದ ಪತ್ರ ಮಾಡಿದ್ದರು. ಇವರನ್ನು ಮರಿಮಾಡಿಕೊಂಡಿದ್ದ ಗಜದಂಡ ಸ್ವಾಮಿಗಳು ಆರೋಗ್ಯವಾಗಿಯೇ ಇದ್ದರು. ಯಾವ ಬೇನೆ ಬೆಸರಿಕೆಗಳೂ ಅವರಿಗಿರಲಿಲ್ಲ. ಅವರು ಅಷ್ಟು ಬೇಗ ಏಕಾಏಕಿ ದೇಹ ಬಿಡುತ್ತಾರೆಂದು ಯಾರೂಬ್ಬರೂ ಕನಸು ಮನಸ್ಸಿನಲ್ಲಿ ಚಿಂತಿಸಿರಲಿಲ್ಲ. ಆದರೆ ವಿಧಿಯ ಲೀಲೆಯೇ ಬೇರೆ ಇತ್ತು. ಸಿದ್ಧಯ್ಯನವರನ್ನು ಮರಿಮಾಡಿಕೊಂಡಿದ್ದ ಗಜದಂಡ ಸ್ವಾಮಿಗಳು ಸಂಚಾರದಲ್ಲಿ ಮುದ್ದೇಬಿಹಾಳದ ಬಳಿಯ ಅರಸನಾಳ ಎಂಬ ಊರಿನಲ್ಲಿ ವಾಸ್ತವ್ಯ ಮಾಡಿದ್ದರು. ಅವರು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದಂತೆಯೇ ಅಲ್ಲಿ ಲಿಂಗದೊಳಗಾದರು. ಆ ಅರಸನಾಳ ದವರಿಗೆ ಲಿಂಗದೊಳಗಾದ ಗಜದಂಡ ಸ್ವಾಮಿಗಳು ತಮ್ಮ ಆಣ್ಣನ ಮಕ್ಕಳಾದ ಯುವಕ ಸಿದ್ಧಯ್ಯನವರನ್ನು ಮಠಕ್ಕೆ ಮರಿ ಮಾಡಿಕೊಂಡಿದ್ದ ವಿಷಯ ತಿಳಿದಿರಲಿಲ್ಲ ಎಂದು ತೋರುತ್ತದೆ. ಅಲ್ಲಿಯ ಕೆಲವು ವಿಶಿಷ್ಟ ಹಿತಾಸಕ್ತಿಯ ಜನಗಳು ರಾತ್ರೋರಾತ್ರಿ ಗಜದಂಡ ಸ್ವಾಮಿಗಳು ಅರಸನಾಳದಲ್ಲಿ ಜೀವಿಸಿದ್ದಾಗಲೇ ತಮ್ಮೂರಿನ ಕರಿನಿಂಗಯ್ಯನೆಂಬವನ್ನು ಗಜದಂಡ ಸ್ವಾಮಿಗಳ ಪೀಠಕ್ಕೆ ಮರಿ ಮಾಡಿಕೊಂಡಿದ್ದಾರೆ ಎಂಬಂತೆ ಒಂದು ಖೋಟ್ಟಿಕಾಗದ ತಯಾರಿಸಿ, ಅದಕ್ಕೆ ಮೃತ ಸ್ವಾಮಿಗಳ ಹೆಬ್ಬರಳಿನ ಗುರುತನ್ನು ಪಡೆದರು. ಈ ಖೋಟ್ಟ ಕಾಗದವು ಸಿದ್ದಯ್ಯನವರ ಆಸಲೀಕಾಗದಕ್ಕೆ ಸವಾಲು ಹಾಕಿತು. ಅಷ್ಟೇ ಅಲ್ಲದೆ, ೧೯೧೯-೨೦ ರಲ್ಲಿ ಸ್ವತಃ ಸದ್ದು ರು ಸಿದ್ದಾರೂಢರೇ, " ಈ ಸಿದ್ಧಯ್ಯನವರು ನನ್ನ ಗುರುಗಳಾದ ಗಜದಂಡ ಸ್ವಾಮಿಗಳ ಪೀಠಕ್ಕೆ ಅಧಿಕಾರಿಗಳಾಗುತ್ತಾರೆ' ಎಂದು ನುಡಿದಿದ್ದ ಭವಿಷ್ಯವಾಣಿಗೆ ಸವಾಲಾಗಿ ನಿಂತಿತು. ಅರಸನಾಳದ ಕರಿನಿಂಗಯ್ಯ ತಾನೇ ಗಜದಂದ ಸ್ವಾಮಿಗಳ ಪೀಠಕ್ಕೆ ಅಧಿಕಾರಿ ಎಂದು ದೇವರಭೂಪುರಕ್ಕೆ ಬಂದು ಪೀಠವನ್ನಾಕ್ರಮಿಸಿದ ಮಠದಲ್ಲಿ ಉಳಿದ. ಅವನಿಗೆ ಹಣದ ಬಲವಿತ್ತು. ಜನಗಳ ಬಲವೂ ಜೋರಾಗಿಯೇ ಇತ್ತು. ಸಿದ್ದಯ್ಯನವರಿಗೆ ಆರ್ಥಿಕ ಬಲವೂ ಇರಲಿಲ್ಲ. ಜನಗಳ ಬೆಂಬಲವೂ ಅಷ್ಟಾಗಿ ಇರಲಿಲ್ಲ. ಒಂದೇ ಪೀಠಕ್ಕೆ ಇಬ್ಬರು ಅಧಿಕಾರಿಗಳಾದಾಗ, ಸತ್ಯಾಸತ್ಯೆಯ ಪರೀಕ್ಷೆ ನಡೆಯಿತು. ಪ್ರಕರಣವು ಗುಡಗುಂಟಿಯ ಕೋರ್ಟಿಗೆ ಹೋಯಿತು. ಯಾವ ಮಾಯೆಯ ಕೈವಾಡವೋ ಏನೋ, ಯಾವ ಶಕ್ತಿ ಯಾವ ಕೆಲಸ ಮಾಡಿತೋ ಏನೋ, ಗಟ್ಟಿಗಾಳು ಮುಳುಗಿತು. ಜೋಟ್ಟಗಾಳ ಮೇಲೆದ್ದಿತು. ಕರನಿಂಗಯ್ಯನು ಖಟ್ಲೆ ಗೆದ್ದ. ಆದರೆ ಸಿದ್ಧಯ್ಯನವರು ಎದೆಗುಂದಲಿಲ್ಲ. ಖಟ್ಲೆ ರಾಯಚೂರಿಗೆ ಒಯ್ದರು. ಅಲ್ಲಿ ಹಲವಾರು ವರ್ಷ ನಡದು. ಅದು ಕಲಬುರ್ಗಿ ಕೋರ್ಟಿಗೆ ಬಂತು. ಅದು ನಿಜಾಮಶಾಹಿಯ ಕಾಲ. ಸಿದ್ಧಯ್ಯನವರ ಹಿರಿಯರು ಕಲಬುರ್ಗಿಯ ಖಾದರಸಾಹೇಬ ಎಂಬ ಒಬ್ಬ ವಕೀಲರನ್ನು ಕೊಟ್ಟಿದ್ದರು. ಆ ವಕೀಲರು ಬಲು ಸಂಪನ್ನರು, ಧರ್ಮವಂತರು. ಅವರು ಖಟ್ಲೆ ನಡೆಸುವಾಗ ಅವರಿಗೆ ಒಂದು ಸುಂದರ ಸ್ವಪ್ನ. ಹೊರಗೆ ಅವರು ಎಂದೂ ಕಾಣದಿದ್ದ ಅಮರೇಶ್ವರ ಕ್ಷೇತ್ರವನ್ನು ಕನಸಿನಲ್ಲಿ ಕಂಡರು. ಆ ದೇವಸ್ಥಾನದ ಪೀಠದಲ್ಲಿ ಸಿದ್ಧಯ್ಯನವರು ಆಸೀನರಾದಂತೆ ಅವರು ನೋಡಿದರು. ಅವರಿಗೆ ಒಂದು ವಾಣಿ ಸ್ಪಷ್ಟವಾಗಿ ಕೇಳಸಿತು. “ನೀನು ಇಲ್ಲಿ ಕಂಡದ್ದನ್ನೆ, ಕಂಡಷ್ಟನ್ನೇ ನಾಳೆ ಕೋರ್ಟಿನಲ್ಲಿ ಹೇಳು. ಹೆಚ್ಚಿಗೆ ಏನನ್ನೂ ನುಡಿಯಬೇಡ'' ಎಂದು ಅದು ನುಡಿಯಿತು.
ನ್ಯಾಯಾಲಯದಲ್ಲಿ ಪ್ರತಿವಾದಿ ವಕೀಲರು ತಮ್ಮ ಎಲ್ಲ ವಿದ್ಯೆಯನ್ನು ಅಲ್ಲಿ ತುರ್ಯಡಿದರು, ಮಿಣಿ ಹರಿದರು. ತಿಪ್ಪರಲಾಗ ಹಾಕಿದರು. ಇಬ್ಬರೂ ವಕೀಲರ ಹೇಳಿಕೆಗಳನ್ನು ಆಲಿಸಿದ ನ್ಯಾಯಾಧೀಶರು, “ಸಾಕ್ಷಿದಾರರು ಸುಳ್ಳಾದರೂ ಹೇಳುತ್ತಾರೆ. ಸತ್ಯವನ್ನಾದರೂ ನುಡಿಯುತ್ತಾರೆ. ಕಾಗದ ಬರೆದವನು ಬರೆದಿದ್ದೇನೆ ಎಂದು ಹೇಳುತ್ತಾನೆ. ಬರೆದಿಲ್ಲ ಎಂದು ಹೇಳುತ್ತಾನೆ. ಈ ಖಟ್ಲೆ ಎಲ್ಲ ಕಾಗದ ಪತ್ರಗಳನ್ನು ಪರಿಶೀಲಿಸಿದರೆ, ಸಾಲವಾಡಗಿಯ ಸಿದ್ಧಯ್ಯನೇ ಗಜದಂಡ ಸ್ವಾಮಿಗಳ ಪೀಠಕ್ಕೆ ಅಧಿಕಾರಿ ಎಂದು ನಾನು ಪರಮಾತ್ಮನ ಸಾಕ್ಷಿಯಾಗಿ ಈ ನಿರ್ಣಯ ನೀಡುತ್ತೇನೆ'' ಎಂದು ಬರೆದರಂತೆ. ಸಿದ್ಧಯ್ಯನವರು ಮೂರು ನಾಲ್ಕು ಕೋರ್ಟುಗಳನ್ನು ಅಲೆದಾಡಿ, ಕೊನೆಗೆ ಸುಮಾರು ೧೬ ವರ್ಷಗಳ ನಂತರ ಪೀಠಕ್ಕೆ ಅಧಿಕಾರಿಕಗಳೆಂದು ನಿರ್ಣಯಿಸಲ್ಪಟ್ಟರು. ಶಕೆ ೧೮೬೩ ರ ಶ್ರಾವಣಮಾಸದಲ್ಲಿ (ಅಂದರೆ ೧೯೪೧ ನೆಯ ಇಸ್ವಿಯಲ್ಲಿ) ಸಿದ್ಧಯ್ಯನವರು ಗಜದಂಡ ಸ್ವಾಮಿಗಳ ಪೀಠವನ್ನೇರಿದರು. ಸಿದ್ಧಾರೂಢರು ೧೯೧೯-೨೦ ರಲ್ಲಿಯೇ, “ ಇವನು ನನ್ನ ಗುರುಗಳಾದ ಗಜದಂಡ ಸ್ವಾಮಿಗಳ ಪೀಠಕ್ಕೆ ಅಧಿಕಾರಿಯಾಗುತ್ತಾನೆ'' ಎಂದು ನುಡಿದ ಭವಿಷ್ಯವು ಸ್ವಾಮಿಗಳು ದೇಹಬಿಟ್ಟ ಹನ್ನರಡನೆಯ ವರ್ಷಕ್ಕೆ ನಿಜವಾಯಿತು. ೧೯೧೯-೨೦ ರಲ್ಲಿಯೇ ಎದುರು ನಿಂತಿದ್ದ ಎಡಗ ಹುಡುಗನಲ್ಲಿ ಸಿದ್ದಾರೂಢರು ತಮ್ಮ ಗುರುಗಳನ್ನು ಗುರುತಿಸಿದ್ದರು. ಈ ಪ್ರಸಂಗ ಅವರ ಗುರುಭಕ್ತಿಗೆ ಸಾಕ್ಷಿ.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
