ಭಕ್ತರೇ ಸಿದ್ಧಾರೂಢರ ಉಸಿರು

 🌺 ಭಕ್ತರೇ ಸಿದ್ಧಾರೂಢರ ಉಸಿರು  🌺





ಇಂಡಿಸೆಟ್ಟರ ಹಾಗೂ ಸಾತವಿರಮ್ಮನಿಗೆ ಒಬ್ಬಳೇ ಮಗಳು, ಅವಳ ಹೆಸರು ವೀರಸಂಗಮ್ಮ . ವೀರಸಂಗಮ್ಮ ನಿಗೆ 16-19 ವರ್ಷದ ಪ್ರಾಯ, ಅವಳು ಲಗ್ನವಳೇ ಒಲ್ಲೆ ಎಂದು ಹಟ ಹಿಡಿದಿದ್ದಳು. ಹೆಳವದಾಯಿತು. ಕೇಳುವುದಾಯಿತು. ಯಾರು ಮಾತಿಗೂ ಅವಳು ಒಪ್ಪಲಿಲ್ಲ. ದೊಡ್ಡ ಶ್ರೀಮಂತರ ಮನೆತನ, ಲಗ್ನದ ವಯಸ್ಸು ಮೀರಿ ಹೋಗುತ್ತಿದೆ. ಇವಳಾದರೆ  ಲಗ್ನವೇ ಬೇಡ ಎನ್ನುತ್ತಿದ್ದಾಳೆ. ಏನು ಮಾಡುವುದು? ಎಂದು ಹೆತ್ತವರಿಗೆ ಚಿಂತೆಯಾಯಿತು  ಇವಳನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ, ಸಿದ್ದಾರೂಢ ಅಪ್ಪನಿಂದಲೇ ಇವಳಿಗೆ ಬುದ್ದಿ : ಹೇಳಿಸಿದರಾಯಿತೆಂದು ಅವಳನ್ನು ಕರೆದುಕೊಂಡು ಹುಬ್ಬಳ್ಳಿಗೆ ಬಂದರು. ತಾಯಿ ತಂದೆಗೆ ಮಗಳ ಲಗ್ನದ ವಿಚಾರ ಹೇಳಿ ತಂದೇ ! ಇವಳಿಗೆ ಲಗ್ನವಾಗುವಂತೆ ಹೇಳು ದೇವಾ!" ಎಂದು ಪ್ರಾರ್ಥಿಸಿದರು. ಆಗ ಸಿದ್ಧಾರೂಢರು 'ವೀರಸಂಗಮ್ಮ, ಎಲ್ಲರಿಗೂ ಅಕ್ಕಮಹಾದೇವಿ ಆಗಲಿಕ್ಕೆ ಸಾಧ್ಯವಾಗುವುದಿಲ್ಲ. ಕೆಲವರು ಮದುವೆ ಮಾಡಿಕೊಳ್ಳದೆ, ಅಕ್ಕಮಹಾದೇವಿ ಆಗುತ್ತಾರೆ. ಇನ್ನು ಕೆಲವರು ಲಗ್ನ ಮಾಡಿಕೊಂಡು ಸಂಸಾರದಲ್ಲಿ ಇದ್ದು ಕೊಂಡ ಅಕ್ಕ ಮಹಾದೇವಿ ಆಗುತ್ತಾರೆ. ನೀನು ಲಗ್ನ ಮಾಡಿಕೊಂಡು ಅಕ್ಕಮಹಾದೇವಿ ಆಗು' ಎಂದು ಹರಸಿದರು. ಸಿದ್ಧಾರೂಢರ ಆಶೀರ್ವಾದಂತೆ ಅವಳು ಲಗ್ನಕ್ಕೆ ಒಪ್ಪಿದಳು. ಅವಳ ಲಗ್ನವು ಹೀರೆಬಾಗೇವಾಡಿಯ ಲಕ್ಷಪ್ಪ ಅಂಗಡಿ ಎಂಬವರೊಡನೆ ಆಯಿತು. ಅವಳು ವರುಷಕ್ಕೊಂದರಂತೆ ಮೂರು ಗಂಡ ಮಕ್ಕಳನ್ನು ಹೆತ್ತಳು. ದುರ್ದೈವ ಒಂದು ಮಗುವೂ ಬದುಕಿ ಉಳಿಯಲಿಲ್ಲ. ಅವಳಿಗೆ ನಿಂತ ನೆಲವೇ ಬಾಯಿ ತೆರೆದಂತಾಯಿತು. ಸಂಸಾರದ ಸವಿಯೇ ಬತ್ತಿದಂತಾಯಿತು. ಹುಟ್ಟಿದ್ದ ಮೂರು ಮಕ್ಕಳು ಪಟಪಟ ಬಿದ್ದು ಸತ್ತು ಹೋದಾಗ ಅವಳಿಗೆ ಬದುಕು ಭಾರವಾಯಿತು. ಅವಳು ಬಹಳ ನೊಂದುಕೊಂಡು ಸಿದ್ಧಾರೂಢರ ಬಳಿಗೆ ಬಂದು, "ಅಡ್ಡ ಬಿದ್ದು, ತಂದೇ ! ನಾನು ಲಗ್ನವನ್ನೇ ಒಲ್ಲೆ ಒಲ್ಲೆ ಎಂದಿದ್ದೆ. ನಿನ್ನ ಮಾತ ಕೇಳಿಲಗ್ನ ಆದೆ. ನೀನು ಮೂರು ಮಕ್ಕಳನ್ನೇ ಕೊಟ್ಟ. ಕೊಡಕೊಡುವದರಾಗೇ ಕಸಗೊಂಡಿ, ಸಂಸಾರದೊಳಗೆ ಇದ್ದುಕೊಂಡೇ ಅಕ್ಕಮಹಾದೇವಿ | ಆಗು ಎಂದು ಹರಸಿದ್ದಿ. ಈಗ ಮಕ್ಕಳಿಲ್ಲದಂಗ ಮಾಡಿದೆ. ನಾನು ಹ್ಯಾಂಗ ಮಾಡಲಿ' ಎಂದು ಬೇಡಿಕೊಂಡಳು. ಆಗ ಸಿದ್ಧರೂಢರು ಅವಳನ್ನು ಸಮಾಧಾನ ಮಾಡುತ್ತ" ತಾಯೇ! ನಿನ್ನ ಉದರದೊಳಗ ಬಂದ ಆ ಮೂರು ಮಕ್ಕಳ ಮಣ್ಣಿನ ಋಣ ಅಷ್ಟೆ ಇತ್ತು. ಅವರು ಬಂದು | ಹೋಗುವವರಿದ್ದರು. ಅದಕ್ಕೆ ಬಂದರು ; ಬಂದಂಗ ಹೊರಟು ಹೋದರು. ಆದರೆ ಇನ್ನು ಇರುವವರು ಬರುತ್ತಾರೆ. ನೀನೇನು ಚಿಂತಿ ಮಾಡಬ್ಯಾಡ '' ಎಂದು ಹರಸಿದರು. ಸಿದ್ಧಾರೂಢರ ಆಶೀರ್ವಾದಿಂದ ಶ್ರೀಮತಿ ವೀರಸಂಗಮ್ಮರ ಉದರಲ್ಲಿ ಬಸಲಿಂಗಮ್ಮ  ಹಾಗೂ ಗುರುಪ್ಪ ಜನಿಸಿದರು. ಮಾತೋಶ್ರೀ ಬಸಲಿಂಗಮ್ಮನನ್ನು ಇಟಗಿಯ ಸಾಣಿಕೊಪ್ಪದವರ ಮನೆಗೆ ಕೊಟ್ಟಿತು. ೧೨ ನೆಯ ವರ್ಷಕ್ಕೆ ಲಗ್ಗವಾಯಿತು, ದುರ್ದೈದ, ಅವಳ ಪತಿ ಎರಡು ವರ್ಷಗಳಲ್ಲಿ ತೀರಿದ, ಆ ತಾಯಿ ತನ್ನ ೧೦೫ ವರ್ಷದ ಶೇಷ ಆಯುಷ್ಯವನ್ನು ಸದ್ದು ರು ಶ್ರೀ ಸಿದ್ಧಾರೂಢರ ಧ್ಯಾನದಲ್ಲಿಯೇ ಕಳೆದಳು, ಅವಳಿಗೆ ಸಿದ್ಧಾರೂಢರೇ ಅನ್ನ ನೀರು ಪ್ರಾಣಿ ಆಗಿದ್ದರು, ಸಿದ್ಧಾರೂಢರು ದೇಹವಿಟ್ಟ ಮೇಲೆಯೂ ಬಸಲಿಂಗಮ್ಮನನ್ನು ಒಂದು ದುರ್ಬರ ಮೋಟಾರ ಅಪಘಾತದಲ್ಲಿ ರಕ್ಷಿಸಿದ ಪ್ರಸಂಗ ಬಲು ಮನಮೋಹಕ. ಶ್ರೀಮತಿ ಬಸಲಿಂಗಮ್ಮ ಒಂದು ಸಲ ಬೆಳಗಾವಿಯಿಂದ ಎಂ.ಕೆ. ಹುಬ್ಬಳ್ಳಿಗೆ ಬಸ್ಸಿನಲ್ಲಿ ಬರುವಾಗ ಬೆಳಗಾವಿಯ ಬಳಿ ಇಳುಕಲಿನಲ್ಲಿ ಆ ಬಸ್ಸು ಕೊಳ್ಳದಲ್ಲಿ ಉರುಳೆ ಬಿದ್ದಾಗ, ಬಸಲಿಂಗಮ್ಮ ಕೆಳಕ್ಕೆ ಬಿದ್ದರು ರಭಸದಿಂದ ಒಂದು ಕುರ್ಚಿ ಬಂದು ಅವರ ಕುತ್ತಿಗೆಗೆ ಅಪ್ಪಳಿಸಿದಾಗ, “ ಅವರು ಜೋರಾಗಿ ಸಿದ್ದಾರೂಢ ತಂದೇ' ಎಂದು ಚೀರಿದ್ದ ನೆನಪು. ಆ ಹೊಡೆತಕ್ಕೆ ಅವರ ತಲೆ ಸೀಳಿ, ಕುತ್ತಿಗೆಯ ಎಲುಬೇಚೂರು ಚೂರು ಆಗಿರಬೇಕೆಂದು ಅಲ್ಲಿದ್ದವರು ನಂಬಿದ್ದರು. ಹಾಗೇನೂ ಆಗಿರಲಿಲ್ಲ, ಆ ತಾಯಿ ಜೀವವೇ ಚೀರಿದಂತೆ ಸಿದ್ಧಾರೂಢ ತಂದೇ ಎಂದು ಚೀರಿದ ಕರುಳಿನ ಕೂಗು ಸಿದ್ದಾರೂಢರಿಗೆ ಮುಟ್ಟಿತ್ತು. ಆ ಪೆಟ್ಟನ್ನು ಸಿದ್ಧಾರೂಢರು ತಾವು ತಕೊಂಡು, ನಂಬಿದ್ದ ಭಕ್ತಳನ್ನು ರಕ್ಷಿಸಿದ್ದರು. ಬಸಲಿಂಗಮ್ಮನವರಿಗೆ ಕುರ್ಚಿ ಕಿವಿಯ ಬಳಿ ತೆರೆದಿತ್ತು. ಅಲ್ಪ ಘಾಯಮಾಡಿತ್ತು. ಆ ತಾಯಿ ಮನೆಗೆ ಬಂದು ಅಪಘಾತದ ವಿಷಯ ಹೇಳಲಿಲ್ಲ. ಮರು ದಿವಸ ತಾಯಿ ವೀರಸಂಗಮ್ಮನ ಸ್ವಪ್ನದಲ್ಲಿ ಸಿದ್ಧಾರೂಢರು ಕಾಣಿಸಿಕೊಂಡರು. ಅವರ ಕುತ್ತಿಗೆ ಬಾತಿತ್ತು. ಅದನ್ನು ಕಂಡು ಆ ತಾಯಿಯ ಕರುಳಿಗೆ ಕೊಳ್ಳೆ  ಇಟ್ಟಂತಾಯಿತು. ಅಪ್ಪಾ ! ಕೊರಳೇಕೆ ಬಾತುಕೊಂಡಿದೆ? ಏನಾದರೂ ಪೆಟ್ಟಾಯಿತಾ? ಎಂದು ಕೇಳಿದರು. ಸ್ವಾಮಿಗಳು ಏನನ್ನೂ ಒಡನುಡಿಸಲಿಲ್ಲ. ಬರಿ ನಕ್ಕರು. ವೀರಸಂಗಮ್ಮನಿಗೆ ಸಮಾಧಾನವಾಗಲಿಲ್ಲ. ಅವರಿಗೆ ಎಂಥದ್ದೋ ವ್ಯಾಕುಲತೆ . ಏನೋ ದುಗಡ, ಅದೇ ಚಿಂತೆಯಾಯಿತು. ಮುಂಜಾನೆ ಎದ್ದು ತಾನು ಸ್ವಪ್ನದಲ್ಲಿ ಕಂಡ ಸಿದ್ಧಾರೂಢರ ಕೊರಳ ಬಾವನ್ನು ಮಗಳೆದರು ಪ್ರಸ್ತಾಪಿಸಿದಾಗ, ಬಸಲಿಂಗಮ್ಮ ಗಳಗಳನೇ ಕಣ್ಣೀರ ಕರೆದು, " ತಂದೆ ! ನನಗೆ ಬಿದ್ದ ಪೆಟ್ಟನ್ನು ನೀನು ತಕ್ಕೊಂಡೆಯಲ್ಲ; ನೀನೆಂಥ ಕರುಣಾಳು, ಭಕ್ತರ ಮೇಲಿನ ನಿನ್ನ ಪ್ರೀತಿಗೆ ಎಣೆಯಿದೆಯೇ?'' ಎಂದು ತಾನು ಅಪಘಾತದಲ್ಲಿ ಪಟ್ಟ ಪಾಡನ್ನು ಹೇಳಿದಳು. ಸಿದ್ಧಾರೂಢರು ದೇಹಬಿಟ್ಟ ೨೦ ವರ್ಷದ ಮೇಲೆಯೂ ತನ್ನ ಭಕ್ತರ ನೋವನ್ನು ತಾವೇ ಸ್ವತಃ ಅನುಭವಿಸಿ ನಂಬಿದ ಸದ್ಭಕ್ತರನ್ನು ಹೇಗೆ ಕಾಯುತ್ತಾರೆಂಬುದನ್ನು ಮಾತೋಶ್ರೀ ಬಸಲಿಂಗಮ್ಮ ಕೃತಜ್ಞೆಯಿಂದ ನೆನೆಯುತ್ತಿದ್ದರು. ಸದ್ಗುರು ಶ್ರೀ ಸಿದ್ಧಾರೂಢರ ಕರಳು ತಾಯಿಗರುಳಿನಲ್ಲಿತ್ತು. ಆ ಕೂಗು, ಮನದ ಮೇಲೆ, ಅವರು ಎಷ್ಟೇ ದೂರದಲ್ಲಿರಲಿ, ಹತ್ತಿರದಲ್ಲಿರಲಿ, ಸ್ವಾಮಿಗಳ ಮನಕ್ಕೆ ತಟ್ಟನೇ ವೇದ್ಯವಾಗುತ್ತಿತ್ತು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ


ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ