ಸಿದ್ಧನು ಮೋತಿರಾಮನ ಮದ್ಯದ ಮೋಹ ಬಿಡಿಸಿದ

   ಸಿದ್ಧನು ಮೋತಿರಾಮನ ಮದ್ಯದ ಮೋಹ ಬಿಡಿಸಿದ 🌺



ಗೋಕುಳಾಬಾಯಿ ಮಂಬಾಪುರಿ ಗ್ರಾಮದಲ್ಲಿದ್ದಳು. ಆ ಗ್ರಾಮದ ವಿಷ್ಟು ಪಂತನೆಂಬ ಶ್ರೀಮಂತನ ಮಗ ಮೋಹೀರಾಮನು ದುರ್ವ್ಯಸನಿಯಾಗಿದ್ದು ಅವನ ಪತ್ನಿ ವೀಣಾಬಾಯಿಗೆ ಬಹಳ ಚಿಂತೆಯಾಯಿತು. ಸದಾ ಸಿದ್ಧಾರೂಢರ ಧ್ಯಾನದಲ್ಲಿರುತ್ತಿದ್ದರು. ಹೀಗೆ ಅನೇಕ ದಿವಸಗಳು ಕಳೆದವು. ಅವನ ವ್ಯಸನಗಳು ಹೆಚ್ಚಾಗುತ್ತ ನಡೆದವು ವಿಷ್ಣುಪಂತನು ತೀರಿದ ಮೇಲೆ ಮನೆಯ ಯಜಮಾನಿಕೆ  ಅವನ ಕೈಗೆ ಬಂದಾಗ ವ್ಯಸನಿ ಜನರು ಇವನನ್ನು ಕೂಡಿಕೊಂಡು ಅಪಾರ ಸಂಪತ್ತನ್ನು ಹಾಳು ಮಾಡಿದರು. ಅಂಗಡಿಯಲ್ಲಿ ಮದ್ಯ ಕುಡಿದು ಬರುವಾಗ ರಸ್ತೆಯಲ್ಲಿ ಬಿದ್ದರ ಜನರು ಅವನನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಹಾಕಿದಾಗಲೂ ಅವನಿಗೆ ಎಚ್ಚರವಿರುತ್ತಿರಲಿಲ್ಲ. ಇವನ ವರ್ತನೆಯನ್ನು ನೋಡಿ ಸರಕಾರವು ಇವನ ಹಣವನ್ನಲ್ಲ ಜಪ್ತಿ ಮಾಡಿಕೊಂಡಿತು.
ಆಗ ಮೋತೀರಾಮನು ಹಣದ ಕೊರತೆಯಿಂದ ತಳಮಳಗೂಂಡನಾದರೂ ವ್ಯಸನಗಳು ಹೆಚ್ಚಾದವು. ಎಲ್ಲರೂ ಇವನಿಗೆ ಛಿ, ಥು ಎಂದು ಅವಮಾನಗೊಳಿಸುತ್ತಿದ್ದರು. ಕಾಂತಾ ವೀಣಾಬಾಯಿಗೆ ದುಃಖವಾಯಿತು. ಅವಳ ತಾಯಿ ಸಿದ್ಧನಲ್ಲಿಗೆ ಬಂದು ಮೋತೀರಾಮನ ಸ್ಥಿತಿಯ ಬಗ್ಗೆ ವಿವರಿಸಿದಳು. ಆಗ ಸಿದ್ಧ ಹೇಳಿದ ನೀವು ಭಯಪಡಬೇಡಿರಿ. ನಿಮ್ಮ ರಕ್ಷಣೆಗೆ ಸದ್ಗುರುವಿದ್ದಾನೆ . ಅವನ ನಾಮಸ್ಮರಣೆ ಮಾಡಿರಿ' ಎಂದು ಹೇಳಿ ಕಳಿಸಿದರು. ಅವರ ಆದೇಶದಂತ ತಾಯಿ ಮಗಳು ಗುರುಧ್ಯಾನದಲ್ಲಿ ತೊಡಗಿದರು. ಜನರು ವೀಣಾಬಾಯಿಯ ತಾಯಿಗೆ ನಿನಗೆ ಎಲ್ಲವೂ ಗೊತ್ತಿದ್ದು ವೀಣಾಬಾಯಿಯನ್ನು ಮೋತೀರಾಮನಿಗೆ ಕೊಟ್ಟು ಬಾವಿಯಲ್ಲಿ ದೂಡಿದಂತೆ ಮಾಡಿದೆ' ಎಂದು ಟೀಕಿಸುತ್ತಿದ್ದರು. ಆಗತಾಯಿ ಹೇಳುತ್ತಿದ್ದಳು ನಾನು ಆಕೆಯ ತಾಯಿಯಾದರೂ ಆಕೆಯ ಪ್ರಾರಬ್ಧ ನಿವಾರಣೆಯಾಗಿಲ್ಲ. ಅವಳಿಗೆ ಸಿದ್ಧಾರೂಢರೇ ತಾಯಿಯಾಗಿದ್ದು, ಅವರೇ ಅವಳನ್ನು ರಕ್ಷಿಸುತ್ತಾರೆ' ಎನ್ನುತ್ತ ಸಿದ್ಧರ ಸ್ಮರಣೆ ಮಾಡತೊಡಗಿದಳು. ಮೇಲಿಂದ ಮೇಲೆ ಮೋತೀರಾಮನ ಸ್ಥಿತಿಯ ಬಗ್ಗೆ ಸಿದ್ಧರಿಗೆ ಪತ್ರ ಬರೆಯುತ್ತಿದ್ದಳು. ವೀಣಾಬಾಯಿಯು ದುಃಖದಿಂದ ಪತಿಗೆ ಉತ್ತಮ ಗುಣ ಕೊಡು ಎಂದು ಸಿದ್ದರಲ್ಲಿ ಬೇಡಿಕೊಳ್ಳುತ್ತಿದ್ದಳು.
ಇಷ್ಟಾದರೂ ಮೋತೀರಾಮನ ಮದಿರಾಪಾನಿಯ ಮೋಹ ಬಿಡಲಿಲ್ಲ. ದೇಹದಲ್ಲಿ ಶಕ್ತಿ ಕ್ಷೀಣಿಸಿತು. ಮತ್ತೊಮ್ಮೆ ವೀಣಾಬಾಯಿಯ ತಾಯಿಯು ಸಿದ್ಧರಲ್ಲಿ ಹೋಗಿ ಮೋತೀರಾಮನನ್ನು ಸದ್ಯುಣಿಯಾಗುವಂತೆ ಮಾಡು' ಎಂದು ಬೇಡಿಕೊಂಡಳು. ಆಗ ಗುರುಗಳು `ಮೋತೀರಾಮನ ಬಗ್ಗೆ ಚಿಂತಿಸಬೇಡಿರಿ. ಅವನು ಬುದ್ಧಿವಂತನಾಗುತ್ತಾನೆ. ಸುರೆಯನ್ನು ತ್ಯಾಗ ಮಾಡುತ್ತಾನೆ, ಮಕ್ಕಳು ಮೊಮ್ಮಕ್ಕಳನ್ನು ಪಡೆಯುತ್ತಾನೆ. ಅದನ್ನು ನೀವು ನೋಡುತ್ತೀರಿ' ಎಂದು ಆಶ್ವಾಸನೆಯನ್ನು ಕೊಟ್ಟು ಕಳಿಸಿದರು.
ಆಗಿನಿಂದ ಮೋತೀರಾಮನು ಎಲ್ಲ ವ್ಯಸನಗಳನ್ನು ಬಿಟ್ಟು ಬುದ್ಧಿವಂತನಾದನು. ಎಲ್ಲರಿಗೂ ಸಂತೋಷವಾಯಿತು. ಮೋತೀರಾಮನು ತಮ್ಮ ಅತ್ತೆಯನ್ನು ಪತ್ನಿಯನ್ನು ಕರೆದುಕೊಂಡು ಗುರುಗಳಲ್ಲಿ ಬಂದು ಅವರ ಪಾದಪೂಜಿಸಿ ಜಯಜಯಕಾರ ಮಾಡಿದನು. ಆಗ ಗುರುಗಳ ಮನಸ್ಸು ಕರಗಿ ಅವನ ಮೇಲೆ ಹಸ್ತವನ್ನಿಟ್ಟು ನಿನಗೆ ಸದ್ಗುರುವು ಕಲ್ಯಾಣ ಮಾಡುತ್ತಾನೆ' ಎಂದು ಹರಸಿದರು. ಮುಂದೆ ತನ್ನ ಪತ್ನಿಯನ್ನು ಅತ್ತೆಯನ್ನೂ ಕರೆದುಕೊಂಡು ಶಹಪುರದಲ್ಲಿ ವಾಸ ಮಾಡಿದನು. ಪತ್ನಿ ವೀಣಾ ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು. ಕೂಸಿಗೆ ಲಕ್ಷ್ಮಿಯೆಂದು ಹೆಸರಿಟ್ಟರು. ಮೋತೀರಾಮನು ಅನೇಕ ಸಜ್ಜನ ಶ್ರೀಮಂತರ ಸ್ನೇಹ ಮಾಡಿ ಧನಿಕನಾದನು. ಎಲ್ಲರ ಪ್ರೀತಿಗೆ ಪಾತ್ರನಾದನು. ಮೋತೀರಾಮನ ಮೇಲೆ ಗುರುಕೃಪೆಯಿರುವುದರಿಂದ ಮತ್ತು ಸಂತನಂತೆ ವರ್ತಿಸುತ್ತಿರುವುದರಿಂದ ಎಲ್ಲರಿಂದ ವಂದನೀಯ ಮನುಷ್ಯನಾದನು. ಹೀಗೆ ಸಿದ್ಧರ. ಕೃಪೆಯಿಂದ ಅನೇಕರು ಧನ್ಯರಾಗಿದ್ದಾರೆ.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸಿದ್ಧನು ನೇಕಾರನ ಜ್ವರವನ್ನು ಶಾಶ್ವತವಾಗಿ ಕಳೆದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ