ಸಿದ್ಧನು ನೇಕಾರನ ಜ್ವರವನ್ನು ಶಾಶ್ವತವಾಗಿ ಕಳೆದ
🌺 ಸಿದ್ಧನು ನೇಕಾರನ ಜ್ವರವನ್ನು ಶಾಶ್ವತವಾಗಿ ಕಳೆದ 🌺
ಬಡ ನೇಕಾರನಾದ ಶೇಷಪ್ಪ ಗೋರಂಟ್ಲಿಯವರು ಹಳೇಹುಬ್ಬಳ್ಳಿಯಲ್ಲಿರುತ್ತಿದ್ದು , ಅವರಿಗೆ ಮೇಲಿಂದ ಮೇಲೆ ಮುದ್ದಿತ್ತಿನ ಜ್ವರ ಬರುತ್ತಿದ್ದವು. ವೈದ್ಯರ ಉಪಚಾರ ವ್ಯರ್ಥವಾಯಿತು. ಹೀಗೆ ಮೇಲಿಂದ ಮೇಲೆ ಮುದ್ದತ್ತಿನ ಜ್ವರ ಬರುವುದರಿಂದ ನೆಯ್ಗೆಯ ಕೂಲಿ ಕೆಲಸ ಕುಂಠಿತವಾಗಿ ಹೆಂಡತಿ ಮಕ್ಕಳಿಂದ ಕೂಡಿದ ಮನ ನಡೆಸುವುದು ಕಷ್ಟವಾಗಿ ಬಹಳ ಚಿಂತಿತನಾದನು. ಇನ್ನು ಶ್ರೀ ಸಿದ್ಧಾರೂಢರಲ್ಲಿ ಮೊರೆ ಹೋಗುವುದೊಂದೇ ದಾರಿಯೆಂದು ತಿಳಿದು ತನ್ನ ಸ್ನೇಹಿತನಾದ ರಾಮಪ್ಪ ಗುರುಂ ಇವರನ್ನು ಕರೆದುಕೊಂಡು ಸಿದ್ಧಾಶ್ರಮಕ್ಕೆ ಹೋದರು. ಆಗ ಶ್ರೀ ಸಿದ್ಧಾರೂಢರು ದೊಡ್ಡ ಅಡುಗೆಯ ಮನೆಯ ಹತ್ತಿರ ನಿಂತಿದ್ದರು. ಇಬ್ಬರೂ ಹೋಗಿ ಸಿದ್ದರ ಚರಣಗಳಿಗೆ ವಂದಿಸಿದ ನಂತರ ಶೇಷಪ್ಪ, ತನ್ನ ಚಿಂತೆಗೆ ಕಾರಣ ತಿಳಿಸಿದನು. ಆಗ ಗುರುಗಳು ಹೇಳಿದರು `ಭಕ್ಕರೇ, ನೀವು ಯಾವ ಚಿಂತೆಯನ್ನೂ ಮಾಡಬೇಡಿರಿ. ಮೊದಲು ಅಡುಗೆಯ ಮನೆಗೆ ಹೋಗಿ ಪ್ರಸಾದ ತೆಗೆದುಕೊಳ್ಳಿರಿ' ಎಂದು ಹೇಳಿ ಕಳಿಸಿದರು. ಆಗ ಇಬ್ಬರೂ ಅಡುಗೆಯ ಮನೆಗೆ ಹೋಗಿ ಪ್ರಸಾದ ತೆಗೆದುಕೊಂಡು ಹೊರಬಂದು ಗುರುಗಳ ಶಾಸ್ತ್ರ ಕೇಳಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮನೆಗೆ ಬರುವುದರೊಳಗಾಗಿ ಜ್ವರ ಪೂರ್ಣ ಹೋಯಿತು. ಆಮೇಲೆ ಅವನ ಜೀವನದಲ್ಲಿ ಒಂದು ಸಲವೂ ಜ್ವರ ಬರಲಿಲ್ಲ. ಅಂದಿನಿಂದ ಸಿದ್ಧನ ಮೇಲೆ ಅವನ ಭಕ್ತಿ ಹೆಚ್ಚಾಯಿತು. ಸಿದ್ದಾರೂಢನ ಸಾರು ಉಂಡವರೆಲ್ಲಾ ಪಾರು ಘೋಷಣೆಗೆ ಇದೂಂದು ಉದಾಹರಣೆ.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಜೇಲಿನಲ್ಲಿದ್ದ ಕೃಷ್ಣಾಜಿಯನ್ನು ಯವನರೂಪದಿಂದ ಬಿಡಿಸಿದ ಕಥೆ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
