ಪದ್ಮಾಚಾರ್ಯರು ಬುದ್ಧಿಗಲಿತರು
🌺 ಪದ್ಮಾಚಾರ್ಯರು ಬುದ್ಧಿಗಲಿತರು 🌺
ಹುಬ್ಬಳ್ಳಿ ಸಮೀಪದ ಒಂದು ಹಳ್ಳಿಯಲ್ಲಿ ಪದ್ಮಾಚಾರಿಯೆಂಬ ವಿದ್ವಾಂಸರಿದ್ದರು. ಸಿದ್ದರ ಕೀರ್ತಿಯನ್ನು ಕೇಳಿ ಅವರ ಸ್ನೇಹಿತನೊಬ್ಬನ ಒತ್ತಾಯಕ್ಕೆ ಮಣಿದು ಸಿದ್ಧಾರೂಢರ ಮಠಕ್ಕೆ ಬಂದು ಸ್ವಾಮಿಗಳ ದರ್ಶನ ತೆಗೆದುಕೊಂಡಾಗ ಮಧ್ಯಾಹ್ನವಾಗುತ್ತ ಬಂದಿತ್ತು. ಸಿದ್ಧರು ಆಚಾರ್ಯರನ್ನು ಕುರಿತು 'ಆಚಾರ್ಯರೇ, ತಾವು ನಮ್ಮೊಡನೆ ಊಟ ಮಾಡುವಿರೋ ಅಥವಾ ತಮಗೆ ಅಡುಗೆ ಮಾಡಿಕೊಳ್ಳಲು ಆಹಾರ ಸಾಮಗ್ರಿಗಳನ್ನು ಕೊಡುವ ವ್ಯವಸ್ಥೆ ಮಾಡಬೇಕೋ' ಎಂದು ಪ್ರಶ್ನಿಸಿದರು. ಆಗ ಆಚಾರ್ಯರು ಸ್ವಾಮಿಗಳೇ, ನಮ್ಮ ದೇವರಿಗೆ ನಿಮ್ಮ ಭೋಜನ ನಡೆಯುವುದಿಲ್ಲ. ಆದ್ದರಿಂದ ನಾನೇ ಸ್ವತಃ ಅಡುಗೆ ಮಾಡಿಕೊಳ್ಳುತ್ತೇನೆ' ಎಂದರು. ನಂತರ ಸ್ವಾಮಿಗಳು ಅವರ ಶಿಷ್ಕರಿಂದ ಆಹಾರ ಸಾಮಗ್ರಿಗಳನ್ನು ಕೊಡಿಸಿದರು.
ಆಚಾರ್ಯರ ಅಡುಗೆ ಸಿದ್ಧವಾಯಿತು. ಅಷ್ಟರಲ್ಲಿ ಸ್ವಾಮಿಗಳು ಬಂದು ನಿಮ್ಮ ಭೋಜನವಾಯಿತೆ' ಎಂದು ಪ್ರಶ್ನಿಸಿದಾಗ ಆಚಾರ್ಯರು ಹೇಳಿದರು 'ಇಲ್ಲ! ಇನ್ನೂ ದೇವರಿಗೆ ನೈವೇದ್ಯ ಮಾಡಬೇಕಾಗಿದೆ' ಎಂದರು. ಆಗ ಆರೂಢರು 'ಆಚಾರ್ಯರೇ, ನಮ್ಮ ಅಡುಗೆ ಸಿದ್ಧವಾಗಿದೆ. ಸಹಜವಾಗಿ ನಿಮ್ಮ ಕಡೆಗೆ ಬಂದು ವಿಚಾರಿಸಿಕೊಂಡು ಹೋಗೋಣ ಎಂದು ಬಂದೆ' ಎಂದಾಗ ಆಚಾರ್ಯರು ಸ್ವಾಮಿಗಳೇ, ದೇವರಿಗೆ ನೈವೇದ್ಯವಾದ ನಂತರ ನಾವು ನೀವು ಕೂಡಿ ಭೋಜನ ಮಾಡೋಣ' ಎಂದರು. ಆಗ ಸ್ವಾಮಿಗಳು ಅವರನ್ನು ಕುರಿತು 'ಇಲ್ಲ, ನೀವು ಭೋಜನ ಮಾಡಿರಿ. ಅಲ್ಲಿ ಭಕ್ತರು ನನಗಾಗಿ ಕಾಯುತ್ತಿದ್ದಾರೆ' ಎಂದು ಹೇಳಿ ಹೊರಟುಹೋದರು.
ನಂತರ ಪದ್ಮಾಚಾರ್ಯರು ದೇವರಿಗೆ ನೈವೇದ್ಯ ತೋರಿಸುವುದಕ್ಕಾಗಿ ದೇವರನ್ನಿಟ್ಟಿರುವ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಅದರಲ್ಲಿ ಒಂದೂ ದೇವರಿರಲಿಲ್ಲ. ಆಗ ಆಚಾರ್ಯರು ಕೂಡಲೇ ಗಾಬರಿಗೊಂಡು ಅವಸರದಿಂದ ಸಿದ್ದರ ಕಡೆಗೆ ಹೋಗಿ ಕೈಮುಗಿದು ವಿಷಯ ತಿಳಿಸಿದರು. ಸಿದ್ದರು ನಸುನಗುತ್ತ ಆಚಾರ್ಯರೇ, ನಮ್ಮ ಅಡುಗೆ ನಿಮ್ಮ ದೇವರಿಗೆ ನಡೆಯುವುದಿಲ್ಲವೆಂದು ಹೇಳಿದಿರಿ. ಆದರೆ ನಮ್ಮ ಸಾರು ನಿಮ್ಮ ದೇವರಿಗೆ ತುಂಬಾ ಇಷ್ಟವಾದಂತೆ ತೋರುತ್ತದೆ. ಕಾರಣ ನಿಮ್ಮ ಎಲ್ಲಾ ದೇವರು ಬಂದು ನಮ್ಮ ಸಾರಿನ ರುಚಿ ನೋಡುತ್ತ ಸಾರಿನ ಪಾತ್ರೆಯಲ್ಲಿ ಮುಳುಗಿ ಹೋಗಿವೆ' ಎಂದು ಹೇಳಿ ಸಾರು ಬಡಿಸುವ ಭಕ್ತನಿಗೆ ಸಾರಿನ ಪಾತ್ರೆಯೊಳಗಿರುವ ದೇವರನ್ನು ತೆಗೆದುಕೊಡಲು ಹೇಳಿದರು. ಆಗ ಅವನು ಸೌಟಿನಿಂದ ಸಾರಿನ ಪಾತ್ರೆಯೊಳಗಿದ್ದ ಸಾಲಿಗ್ರಾಮ ಮೊದಲಾದ ಐದು ದೇವರುಗಳನ್ನು ತೆಗೆದು ಆಚಾರ್ಯರ ಮುಂದಿಟ್ಟನು. ಅದನ್ನು ನೋಡಿದ ಪದ್ಮಾಚಾರ್ಯರಿಗೆ ತನ್ನ ತಪ್ಪಿನ ಅರಿವಾಗಿ ಆರೂಢರ ಚರಣಗಳಿಗೆರಗಿ ತಾನು ಮಾಡಿದ ಅನ್ನವನ್ನು ತಂದು ಸಿದ್ದರ ಮುಂದಿಟ್ಟು ತನ್ನ ಗೆಳೆಯನೊಂದಿಗೆ ಸಿದ್ಧರ ಪಂಗ್ತಿಯಲ್ಲಿ ಕುಳಿತು ಮಠದ ಪ್ರಸಾದ ಸೇವಿಸಿದನು. ಮುಂದೆ ಪದ್ಮಾಚಾರಿಯು ಸಿದ್ದರ ಶಿಷ್ಯನಾದನು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
