ಸಿದ್ಧರಿಂದ ಹುಲಿಗೆಪ್ಪನ ಹಿರಿದಾದ ಊಟ ಕಿರಿದಾಯಿತು

 🌺 ಹುಲಿಗೆಪ್ಪನ ಹಿರಿದಾದ ಊಟ ಕಿರಿದಾಯಿತು 🌺



ಗಾರವಾಡ ಗ್ರಾಮದ ಪರಸಪ್ಪ ಮತ್ತು ಹೊಳಪ್ಪ ಎಂಬ ದಂಪತಿಗಳು ಬಡವರಾಗಿದ್ದು ಒಕ್ಕಲುತನ ಮಾಡಿ ಬಂದ ಆದಾಯದಲ್ಲಿ ಉದರ ಪೋಷಣೆ ಮಾಡುತ್ತ ಶ್ರೀ ಸಿದ್ಧಾರೂಢರಲ್ಲಿ ಅಪಾರ ಭಕ್ತಿಯನ್ನಿರಿಸಿಕೊಂಡವರು. ಅವರಿಗೆ ಸಿದ್ಧ ಕರುಣೆಯಿಂದ ಒಂದು ಗಂಡು ಮಗು ಜನಿಸಿತು. ಅವನಿಗೆ ಹುಲಿಗೆಪ್ಪನೆಂಬ ಹೆಸರಿಟ್ಟರು. ಆ ಮಗು ಮೂರು ನಾಲ್ಕು ವರ್ಷದವನಿರುವಾಗ ಐದಾರು ಜನ ದೊಡ್ಡವರು ಊಟ ಮಾಡುವಷ್ಟು ಆಹಾರ ಊಟ ಮಾಡುತ್ತಿದ್ದನು. ತಾಯಿ ಹೊಳೆವ್ವ ತನ್ನ ಮಗನ ಮೇಲೆ ಎಷ್ಟೇ ಪ್ರೇಮವಿದ್ದರೂ ಮಗು ಉಣ್ಣುವುದನ್ನು ನೋಡಿ ಏನೋ ಒಂದು ರೀತಿಯ ಸಂಶಯ ಬಂದು ಸಿದ್ದರ ಹತ್ತಿರ ಬಂದು 'ತಂದೆ, ನೀನೇನೋ ಬಕಾಸುರನಂಥ ಮಗುವನ್ನು ಕೊಟ್ಟಿರುವೆಯೋ ಏನೋ ಎಂದು ಸಂಶಯ ಬಂದೈತಿ. ಇವಗ ದುಡುದು ಹಾಕೂದು ಭಾಳ ಕಷ್ಟಾಗೈತಿ. ಅದರ ಮ್ಯಾಲ ಬಡತನಾನೂ ಕೊಟ್ಟಿದಿ . ನಾನೇನ್ಮಾಡ್ಲಿ ನೀ ಕೊಟ್ಟ ಮಗನ ನೀನ ತಗೊಂಡು ಜ್ಞಾಪಾನ ಮಾಡ್ಕೊ' ಎಂದು ಮಗನನ್ನು ಸಿದ್ಧರ ಮುಂದೆ ನಿಲ್ಲಿಸಿದಳು.
ಆಗ ಸಿದ್ಧನು `ಹೋಳವ್ವ, ಈ ನಿನ್ನ ಮಗನ್ನ ಶಿವನ ಕೊಟ್ಟಾಗ ಬ್ಯಾಡನಬಾರ್ದವಾ, ಎಷ್ಟೋ ಮಂದಿ ಮಕ್ಕಳಿಲ್ಲ. ಮಕ್ಕಳನ್ನು ಕೊಡು' ಅಂತ ಬರತಾರ. ಆದರ ನೀನು ಬ್ಯಾಡಂದ್ರ ಹ್ಯಾಂಗವಾ' ಎಂದು ಮಗು ಹುಲಿಗೆಪ್ಪನನ್ನು ಮುಂದ ಕರೆದು ಅವನ ಹಣೆಗೆ ಹೊಟ್ಟೆಗೆ ವಿಭೂತಿ ಹಚ್ಚಿ ಅವನ ಬಾಯೊಳಗೆ ಸ್ವಲ್ಪ ಹಾಕಿ ಹೇಳಿದ `ಹೊಳೆಮ್ಮ, ಈ ನಿನ್ನ ಮಗಾ ಇನ್ನ ಮ್ಯಾಲ ಎಲ್ಲಾರೂ ಹ್ಯಾಂಗ ಉಣತಾರ. ನೋಡು ಹಾಂಗ ಉಂಡು ದೊಡ್ಡವನಾದಮ್ಯಾಲ ನಿನ್ನ ಬಡತನಾನೂ ಹಿಂಗಸ್ತಾನ. ಜಾಣನಾಗಿ ಮುಕ್ತನಾಗತಾನ ಚಿಂತೆ ಮಾಡಬ್ಯಾಡ' ಎಂದು ಹರಸಿ ಕಳಿಸಿದರು. ಅಂದಿನಿಂದ ಆ ಮಗು ಎಲ್ಲರಂತೆ ಉಣ್ಣುತ್ತ ಬೆಳೆದು ದೊಡ್ಡವನಾಗಿ ಹುಬ್ಬಳ್ಳಿಗೆ ಬಂದು ಕೃಷಿ ಕೆಲಸಗಳನ್ನು ಮಾಡುತ್ತ ಸಿದ್ಧರ ಸತ್ಸಂಗದಲ್ಲಿದ್ದನು.
ಮುಂದೆ ಹುಲಗಪ್ಪನು ಸಿದ್ಧರ ಮಠದ ಎಡಭಾಗದಲ್ಲಿರುವ ಜಮೀನನ್ನು ಲಾವಣಿಗೆ ಮಾಡಲು ತೆಗೆದುಕೊಂಡು ಒಕ್ಕಲುತನ ಮಾಡುತ್ತ, ಅದರಲ್ಲಿ ಸ್ವಲ್ಪ ಸ್ವಲ್ಪ ಹಣ ಉಳಿಸಿ ಜಮೀನಿನ ಮಾಲಕರಿಂದ ಖರೀದಿಸಿ ಕೆಲಸ ಮಾಡುತ್ತ ಸಿದ್ಧಾರೂಢರ ಸೇವೆ ಮಾಡುತ್ತ ಮಠದ ಕಸಗೂಡಿಸುವುದರಿಂದ ಹಿಡಿದು ಎಲ್ಲ ಸೇವೆಯನ್ನು ಬೇಸರವಿಲ್ಲದೆ ಮಾಡುತ್ತಿದ್ದನು. ನಂತರ ಸಿದ್ಧಾರೂಢರು ಮಹಾಸಮಾಧಿ ಹೊಂದಿದ ನಂತರ ಶ್ರೀ ಗುರುನಾಥಾರೂಢರ ಸೇವೆಯನ್ನು ಅಷ್ಟೇ ಭಕ್ತಿಯಿಂದ ಮಾಡುತ್ತ ತನ್ನ ದೇಹತ್ಯಾಗ ಮಾಡಿದನು.
ಅವನ ದೊಡ್ಡ ಮಗ ರಾಮಣ್ಣ ಗಾರವಾಡ ಇವನೂ ತನ್ನ ತಂದೆಯಂತೆಯೇ ಸಿದ್ದರ ಭಕ್ತನಾಗಿ ಮಠದ ಸೇವೆ ಮಾಡುತ್ತ ಮುಂದೆ ಗುರುನಾಥಾರೂಢರ ಭಕ್ತಿ ಮಾಡುತ್ತಿದ್ದನು. ಗುರುನಾಥಾರೂಢರು ಮಹಾಸಮಾಧಿ ಹೊಂದಿದ ನಂತರ ಬೆಂಗಳೂರಿನ ಶ್ರೀ ಶಿವಾನಂದರ ಜೊತೆಗೂಡಿ ಅವರ ಬಲಗೈಯ್ಯಾಗಿ ನಿಂತು ಶ್ರೀ ಗುರುನಾಥರ ಸಮಾಧಿ ಮಂದಿರ ಕಟ್ಟಿದರು. ಇವರ ಧರ್ಮಪತ್ನಿ ಭೀಮವ್ವ ಮತ್ತು ಮಕ್ಕಳಾದ ಸಿದ್ಧಪ್ಪ, ಶಿವಪುತ್ರಪ್ಪ, ಮಂಜುನಾಥ ಮತ್ತು ಹೆಣ್ಣು ಮಕ್ಕಳಾದ ಮಂಜವ್ವ, ಶಿವಲಿಂಗವ್ವ, ಇವರೆಲ್ಲರೂ ಇಂದಿಗೂ ಸಿದ್ಧರ ಭಕ್ತರಾಗಿದ್ದಾರೆ.

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ