ಶ್ರೀ ಗುರುನಾಥರ ವಿಚಿತ್ರ ಪವಾಡ
ಬ್ಯಾಹಟ್ಟಿ ಗ್ರಾಮದ ಶ್ರೀ ಸಿದ್ಧಾರೂಢರ ಭಕ್ತರು ಶ್ರೀ ಗುರುನಾಥಾರೂಢರನ್ನು ತಮ್ಮೂರಿಗೆ ಕರೆದುಕೊಂಡು ಹೋಗಿ ಪಾದಪೂಜೆ, ಭಜನೆ, ಕೀರ್ತನೆ ಮತ್ತು ಅನ್ನಸಂತರ್ಪಣೆ ಮಾಡಬೇಕೆಂಬ ಉದ್ದೇಶದಿಂದ ಮಠಕ್ಕೆ ಬಂದು ಗುರುನಾಥಾರೂಢರನ್ನು ತಮ್ಮೂರಿಗೆ ಆಮಂತ್ರಿಸಿ ಹೋದರು. ಗೋಪನಕೊಪ್ಪದ ಶ್ರೀಸಿದ್ಧವೀರ ಸ್ವಾಮಿಗಳು ತನ್ನ ಶಿಷ್ಯೆ ಶ್ರೀಮತಿ ಬಸವಣ್ಣೆವ್ವ ಗೋಕಾಕ ಇವರೊಂದಿಗೆ ಮೊದಲೇ ಹೋಗಿದ್ದರು. ಇತ್ತ ನಾಲೈದು ಸಾಧುಗಳು ಮೌನಯೋಗಿ ಗುರುನಾಥರನ್ನು ಕರೆದುಕೊಂಡು ಕಾರಿನಲ್ಲಿ ಹೊರಟರು, ಕಾರು ಬ್ಯಾಹಟ್ಟಿ ಗ್ರಾಮದ ಸಮೀಪ ಬಂದಾಗ ಅದರ ಸ್ಟೇರಿಂಗ ಅತ್ತಿತ್ತ ಕೆಟ್ಟು ಹೊಯ್ದಾಡ ಹತ್ತಿತು. ಇದನ್ನು ಕಂಡು ಕಾರಿನಲ್ಲಿದ್ದ ಸಾಧುಗಳು ಕಾರಿನ ಬಾಗಿಲು ತೆರೆದು ಜೀವಭಯದಿಂದ ಕೆಳಕ್ಕೆ ಜಿಗಿದರು, ಅವರಂತೆ ಕಾರುಚಾಲಕನೂ ಜಿಗಿದನು, ಕಾರು ಒಂದು ಮರಕ್ಕೆ ಡಿಕ್ಕಿ ಹೊಡೆದು ಮುಂದಿನ ಭಾಗ ಜಜ್ಜಿಹೋಗಿತ್ತು.
ಶ್ರೀ ಗುರುನಾಥರನ್ನು ಬರಮಾಡಿಕೊಳ್ಳಲು ಭಜನೆ ಮೇಳದೊಡಗೂಡಿ ಒಂದ ಬ್ಯಾಹಟ್ಟಿಯ ಭಕ್ತರು ಈ ಕಾರಿನ ಸ್ಥಿತಿಯನ್ನು ನೋಡಿ ಗಾಬರಿಗೊಂಡು ಓಡುತ್ತ ಬಂದು ನೋಡುತ್ತಿದ್ದಾಗ, ಶ್ರೀಗುರುನಾಥರು ತಮ್ಮ ಸ್ವ ಸ್ವರೂಪ ನಿರ್ವಿಕಲ್ಪ ಸ್ಥಿತಿಯಲ್ಲಿ ಕುಳಿತುಕೊಂಡಿದ್ದರು, ನಂತರ ಸಾಧುಗಳು ಮತ್ತು ಕಾರಿನ ಚಾಲಕ ಬಂದು ನೋಡಿದಾಗ ಶ್ರೀಗುರುನಾಥರಿಗೆ ಏನೂ ಆಗಿರಲಿಲ್ಲ. ಜಜ್ಜಿ ಹೋದ ಕಾರು ಮೊದಲಿನಂತೆ ಕಾಣುತಿತ್ತು. ಭಕ್ತರು ಶ್ರೀಗಳನ್ನು ಕೆಳಗಿಳಿಸಿ, ಚಾಲಕನು ಕಾರನ್ನು ಹಿಂದಕ್ಕೆ ದೂಡಿ ಚಾಲನೆ ಕೊಟ್ಟಾಗ ಸ್ಟೇರಿಂಗ ತಂತಾನೆ ಸರಿಯಾಗಿ ಮೊದಲಿನಂತೆ ಚಲಿಸತೊಡಗಿತು. ಈ ಪವಾಡವನ್ನು ನೋಡಿದ ಎಲ್ಲರೂ ಅಚ್ಚರಿಗೊ೦ಡು ಅದೇ ಕಾರಿನಲ್ಲಿ ಶ್ರೀಗುರುನಾಥರನ್ನು ಕೂಡಿಸಿಕೊಂಡು ಭಕ್ತರು ಭಜನೆ ಮಾಡುತ್ತ ಊರಿನಲ್ಲಿ ಬಂದು ಉತ್ಸವ ನಡೆಯುವ ಸ್ಥಳಕ್ಕೆ ಹೊಗುವಾಗ ಈ ವಿಚಿತ್ರ ಘಟನೆಯನ್ನು ತಿಳಿದ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು. ನಂತರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಶ್ರೀಗಳನ್ನು ಕರೆದುಕೊಂಡು ಹೋಗಿ ಉಚಿತಾಸನದಲ್ಲಿ ಕುಳ್ಳಿರಿಸಿ ಪಾದಪೂಜೆ ಮಾಡಿ ಕೀರ್ತನೆ ಮತ್ತು ಶ್ರೀ ಸಿದ್ಧವೀರಪ್ಪನವರ ಪ್ರವಚನ ಹಾಗೂ ಅನ್ನಸಂತರ್ಪಣೆಯ ನಂತರ ಶ್ರೀ ಗುರುನಾಥಾರೂಢರ ಜಯಜಯಕಾರ ಮಾಡುತ್ತ ಅದೇ ಕಾರಿನಲ್ಲಿ ಹುಬ್ಬಳ್ಳಿಗೆ ಕಳಿಸಿಕೊಟ್ಟರು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥನ ಕೃಪಾ ಆಶೀರ್ವಾದದಿಂದ ಬಸಪ್ಪನಲ್ಲಿ ಭಕ್ತಿ ಬಂತು
👉ಗುರುನಾಥನ ಕೃಪಾ ಆಶೀರ್ವಾದದಿಂದ ಬಸಪ್ಪನಲ್ಲಿ ಭಕ್ತಿ ಬಂತು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
