ಗುರು ಕರುಣೆಯಿಂದ ರೇವಣಸಿದ್ಧನ ಜನ್ಮ ಸಾರ್ಥಕ
🌺 ಗುರು ಕರುಣೆಯಿಂದ ರೇವಣಸಿದ್ಧನ ಜನ್ಮ ಸಾರ್ಥಕ 🌺
ಆದರೂ ಮನೆಯ ಕಡೆಗೆ ಪ್ರಬಲ ಇಚ್ಛೆಯಾಗಿ ಮಠ ಬಿಟ್ಟು ಮನೆಗೆ ಹೋಗಿ ಪಡಬಾರದ ಕಷ್ಟಪಟ್ಟು ಪುನಃ ಮಠಕ್ಕೆ ಬಂದು ಗುರುಗಳ ದರ್ಶನ ಪಡೆದಾಗ ಶ್ರೀಗಳು ಪ್ರೀತಿಯಿಂದ ಅವನನ್ನು ಕುರಿತು ರೇವಣ್ಣ, ಗುರುಸೇವೆ ಮಾಡಿ ಧನ್ಯನಾಗು. ಗುರುವನ್ನು ನರನೆಂದು ತಿಳಿಯಬೇಡ' ಎಂದು ಆಶೀರ್ವದಿಸಿದರು. ಅಂದಿನಿಂದ ಹತ್ತು ಹದಿನೈದು ವರ್ಷ ಅವರ ಸೇವೆ ಮಾಡುತ್ತ ಅಲ್ಲಿಯೇ ಉಳಿದಾಗ ಒಂದು ದಿವಸ ರೇವಣ್ಣನನ್ನು ಕರೆದು ಗುರುಗಳು ರೇವಣ್ಣ, ನೀನು ಮುಂದೆ ಶ್ರೀ ಸಿದ್ಧಾರೂಢ ಮಠಕ್ಕೆ ಹೋಗಿ ಅಲ್ಲಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಮುಂದೆ ೧೯೮೪ರಲ್ಲಿ ಶ್ರೀ ಮುಪ್ಪಿನಾರ್ಯರು ಲಿಂಗೈಕ್ಯರಾದ ನಂತರ ರೇವಣಸಿದ್ದಪ್ಪನು ತನ್ನ ಆಲದಕಟ್ಟಿಗೆ ಹೋದರೂ ಅಲ್ಲಿಯೂ ಇರಲಾಗಲಿಲ್ಲ. ಶ್ರೀ ಸಿದ್ಧಾರೂಢರ ಮಠಕ್ಕೆ ಹೋಗಬೇಕೆಂಬ ಶ್ರೀ ಮುಪ್ಪಿನಾರ್ಯರ ವಾಕ್ಯ ಸುಳಾದೀತೆ? ಶ್ರೀ ಗುರುಕೃಪೆಯಿಂದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠಕ್ಕೆ ಬಂದು ಅವರ ಗದ್ದುಗೆಯ ದರ್ಶನ ಪಡೆದುಕೊಂಡು ಮಠದ ಕಮಿಟಿಯವರ ಸಮ್ಮತಿಯಿಂದ ಅಜ್ಜನ ಗದ್ದುಗೆಯ ಮುಂದೆ ಕಸಗೂಡಿಸುವುದು, ಅಡುಗೆ ಮನೆಯಲ್ಲಿ ಸೇವೆ ಮತ್ತು ಆನಂತರ ಪಾಳಿ ಪ್ರಕಾರ ಭಜನೆ ಮಾಡುವ ಭಾಗ್ಯ ಲಭಿಸಿತು.
ಕೆಲವು ದಿನಗಳ ನಂತರ ರೇವಣಸಿದ್ದಪ್ಪನಿಗೆ ಯಾವ ಕಾರಣದಿಂದಲೋ ಹೊಟ್ಟೆ ನೋವು ಜೋರಾಯಿತು. ಔಷಧೋಪಚಾರದಿಂದ ಏನೂ ಗುಣವಾಗಲಿಲ್ಲ. ಶ್ರೀ ಗುರುವೇ ನೀನೇ ಗತಿಯೆಂದು ಔಷದೋಪಚಾರ ಬಿಟ್ಟರೂ ಭಜನ ಸೇವೆ ಬಿಡುತ್ತಿರಲಿಲ್ಲ. ಒಂದು ದಿವಸ ಗದ್ದುಗೆಯ ಮುಂದೆ ನಿಂತು ಕೈ ಜೋಡಿಸಿ ಸದ್ಗುರುವೇ, ಎಷ್ಟೋ ಭಕ್ತರ ಕುಷ್ಟ, ಕ್ಷಯ, ಬಡತನ ಮುಂತಾದವುಗಳನ್ನು ಕಳೆದ ನೀನು ನನ್ನ ಈ ಅರೋಗವನ್ನು ಕಳೆಯಲಾರೆಯಾ? ಸದ್ಗುರುವೇ ನೀನೇ ಗತಿಯೆಂದು ಬೇಡಿಕೊಂಡನು.
ಈ ಹಿಂದೆ ಮುಪ್ಪಿನಾರ್ಯರು ರೇವಣ ಸಿದ್ದಪ್ಪನನ್ನು ಕರೆದು ಶ್ರೀ ಸಿದ್ಧಾರೂಢರ ಚರಿತ್ರೆ ಕೊಟ್ಟು ಎಂಥ ಸಂಕಟ ಬಂದರೂ ಈ ಚರಿತ್ರೆಯನ್ನು ಪಾರಾಯಣ ಮಾಡುವುದನ್ನು ಮರೆಯಬೇಡ ಎಂದು ಹೇಳಿದ ಮಾತು ನೆನಪಾಗಿ ಅವರು ಕೊಟ್ಟ ಚರಿತ್ರೆಯನ್ನು ಭಕ್ತಿಯಿಂದ ಪಾರಾಯಣ ಮಾಡುತ್ತ ಹೋದಂತೆ ಕೆಲವು ದಿವಸಗಳಲ್ಲಿಯೇ ಹೊಟ್ಟೆನೋವು ಶಮನವಾಗಿ ಆರೋಗ್ಯ ಸುಧಾರಿಸಿತು. ಅಂದಿನಿಂದ ಇಂದಿನವರೆಗೂ ರೇವಣಸಿದ್ಧ ಸ್ವಾಮಿಗಳು ಸಿದ್ಧರ ಸೇವೆಯಲ್ಲಿದ್ದಾರೆ.
🌺 ಸಿದ್ಧರ ಕರುಣೆಯಿಂದ ಮನೆಯ ಭೂತ ಓಡಿತು 🌺
ಶ್ರೀ ರೇವಣಸಿದ್ಧರು ಮುಪ್ಪಿನಾರ್ಯರ ಸತ್ಸಂಗದಲ್ಲಿದ್ದಾಗ ಸಪ್ತಾಹಕ್ಕಾಗಿ ಊರೂರಿಗೆ ತಿರುಗಿ ಭಿಕ್ಷಕ್ಕೆ ಹೋಗುತ್ತಿದ್ದರು. ಅದರಂತೆ ಈ ಮಠಕ್ಕಾಗಿ ಕಮಿಟಿಯವರ ಸಮ್ಮತಿಯ ಪ್ರಕಾರ ಬೆಳಗಲಿ ಗ್ರಾಮಕ್ಕೆ ಹೋಗಿದ್ದರು. ಭಿಕ್ಷೆಯನ್ನು ಸಂಗ್ರಹಿಸಿ ಕೊಡುವವರೆಂದರೆ ಸಿದ್ಧರಾಮಪ್ಪ ಎಂಬ ಸಜ್ಜನರು. ತನ್ನ ತಂಗಿ ಹುಬ್ಬಳ್ಳಿ ತಾಲೂಕು ಕೊಟಗುಣ ಸಿ ಗ್ರಾಮದವರಾಗಿದ್ದು, ಅವರನ್ನು ಕರೆದುಕೊಂಡು ಮಠಕ್ಕೆ ಬಂದು ಶ್ರೀ ಸಿದ್ಧಾರೂಢರ ದರ್ಶನ ತೆಗೆದುಕೊಂಡು ಶ್ರೀ ರೇವಣಸಿದ್ದ ಸ್ವಾಮಿಗಳನ್ನು ಭೇಟಿಯಾಗಿ ಅವರನ್ನು ಕುರಿತು, ಆಜ್ಞಾ,
ನನ್ನ ತಂಗಿಯ ಅತ್ತೆ ತೀರಿಕೊಂಡು ಒಂದು ತಿಂಗಳಾಯಿತು. ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ರಾತ್ರಿಯಲ್ಲಿ ಹಂಡೆ, ಭಾಂಡೆ, ಪಾತ್ರಗಳಲ್ಲ ಧಡಧಡ ಬಡೆಯುತ್ತವೆ. ಮೈಮೇಲೆ ಅದಾವುದೋ ಅಕರಾಳ ಶಕ್ತಿ ಓಡಾಡಿದಂತಾಗುತ್ತದೆ. ಬಾಗಿಲು ಬಡಿಯುತ್ತದೆ. ಅದಕ್ಕಾಗಿ ಮಂತ್ರ ತಂತ್ರಗಳಿಂದ ಏನೂ ಪ್ರಯೋಜನವಾಗಲಿಲ್ಲ. ಎಲ್ಲರೂ ಅದನ್ನು ಭೂತವೆನ್ನುತ್ತಾರೆ. ಆ ಮನೆಯಲ್ಲಿರಲು ಭಯವಾಗುತ್ತದೆ. ಅದಕ್ಕಾಗಿ ಏನಾದರೊಂದು ಉಪಾಯ ಹೇಳಿರಿ ಎಂದು ಬೇಡಿಕೊಂಡರು.
ಆಗ ಅವರ ಕಷ್ಟವನ್ನು ಕೇಳಿದ ರೇವಣಸಿದ್ಧ ಸ್ವಾಮಿಗಳು, "ನಾವೂ ನಿಮ್ಮಂತೆ ಸಾಮಾನ್ಯ ಮನುಷ್ಯರು. ನನ್ನಿಂದೇನಾಗುತ್ತದೆ? ಅದಕ್ಕಾಗಿ ಭಕ್ತರ ರಕ್ಷಕ ಸಿದ್ಧನಿದ್ದಾನೆ. ಅವರಲ್ಲಿಯೇ ಬೇಡಿಕೊಳ್ಳುತ್ತೇನೆ" ಎಂದು ಹೇಳಿ ಒಂದು ತೆಂಗಿನಕಾಯಿ ವಿಭೂತಿ ಗಟ್ಟಿಗಳನ್ನು ಅವರ ಕೈಗೆ ಕೊಟ್ಟು ಹೇಳಿದರು ಇವುಗಳನ್ನು ತೆಗೆದುಕೊಂಡು ಅಜ್ಜನ ಗದ್ದುಗೆಯಲ್ಲಿಟ್ಟು ಪ್ರದಕ್ಷಿಣೆ ಹಾಕಿ ಶ್ರೀಗಳಿಗೆ ಬೇಡಿಕೊಂಡು ಟೆಂಗಿನಕಾಯಿ ನಿಮ್ಮ ಮನೆಯಲ್ಲಿಟ್ಟು ಪೂಜಿಸುತ್ತ ಶ್ರೀ ಸಿದ್ದರ ಚರಿತ್ರೆಯನ್ನು ಭಕ್ತಿಯಿಂದ ಓದಿರಿ. ನಿಮಗೆ ಒಳ್ಳೆಯದಾಗುತ್ತದೆ" ಎಂದು ಹೇಳಿ ಕಳಿಸಿದರು.
ಆಗ ಅವರು ಸ್ವಾಮಿಗಳು ಹೇಳಿದ ಪ್ರಕಾರ ಮಾಡಿ ತಮ್ಮ ಮನೆಗೆ ಹೋಗಿ ತೆಂಗಿನಕಾಯಿ ಇಟ್ಟು ಪೂಜಿಸಿ ಶ್ರೀಗಳ ಚರಿತ್ರೆ, ಪಾರಾಯಣ ಪ್ರಾರಂಭಿಸಿದಾಗಿನಿಂದ ಅವರ ಮನೆಯ ಭೂತ ಓಡಿಹೋಗಿ ನೆಮ್ಮದಿಯಿಂದ ಇರಹತ್ತಿದರು. ನಂತರ ಮಠಕ್ಕೆ ಬಂದು ಶ್ರೀ ಸಿದ್ದರ ಗದ್ದುಗೆಗೆ ನಮಸ್ಕರಿಸಿ ಶ್ರೀ ರೇವಣಸಿದ್ಧ ಸ್ವಾಮಿಗಳಿಗೆ ಶ್ರೀ ಸಿದ್ಧರ ಮಹಿಮೆಯನ್ನು ತಿಳಿಸಿದಾಗ ಅವರೂ ಸಂತೋಷಪಟ್ಟರು. ನಂತರ ಅವರು ಮಠದ ಅನ್ನದಾಸೋಹಕ್ಕಾಗಿ ಒಂದು ಜೋಳದ ಚೀಲವನ್ನು ದಾನವಾಗಿ ಅರ್ಪಿಸಿದರು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಸಿದ್ಧರು ಯಾದವಾಡದ ತಾಯಿಯನ್ನು ಗುರುತಿಸಿ ಹಾರೈಸಿ ಕಳಿಸಿದ ಕಥೆ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಸಿದ್ಧರು ಯಾದವಾಡದ ತಾಯಿಯನ್ನು ಗುರುತಿಸಿ ಹಾರೈಸಿ ಕಳಿಸಿದ ಕಥೆ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
