ಶಿವರಾತ್ರಿಯ ಉತ್ಸವ

 🌺 ಶಿವರಾತ್ರಿಯ ಉತ್ಸವ 🌺

ಶಿವರಾತ್ರಿಯ ಪುಣ್ಯದಿಗಳಲ್ಲಿ ಭಜನ ಪೂಜನ ಜಾಗರಣ ಮತ್ತು ಮೂರು ಸಲ ಪೂಜೆ ನಡೆಯುತ್ತಿತ್ತು. ಮತ್ತು ರುದ್ರಘೋಷ ಮಾಡುತ್ತಿದ್ದರು. ಏಳನೆಯ ದಿವಸ ಸಿದ್ಧರಿಗೆ ರುದ್ರಾಭಿಷೇಕ ಪೂಜೆ ಮಾಡುತ್ತಿದ್ದರು. ಮಾಘವದ್ಯ  ಅಷ್ಟಮಿಯ ದಿನ ಸಪ್ತಾಹದ ಪ್ರಾರಂಭದ ಸಮಯದಲ್ಲಿ ಉತ್ತರ ದಕ್ಷಿಣ ದಿಕ್ಕುಗಳಲ್ಲಿ ಎರಡು ಮಂಟಪ ಹಾಕುತ್ತಿದ್ದರು. ಉತ್ತರ ಮಂಟಪದಲ್ಲಿ ಎತ್ತರದ ಆಸನದಲ್ಲಿ ಶೃಂಗಾರ ಮಾಡಿ ಸಿದ್ಧರನ್ನು ಕೂಡಿಸಿ ಕೆಳಗಡೆ ಬ್ರಹ್ಮಜಿಜ್ಞಾಸೆ ನಡೆಯುತ್ತಿತ್ತು. ಏಳು ಗಂಟೆಗೆ ಸದ್ಗುರುಗಳು ದಕ್ಷಿಣ ಮಂಟಪದಲ್ಲಿ ಹೋಗಿ ಕೆಳಗಿನ ಆಸನದಲ್ಲಿ ಕುಳಿತಾಗ ಜನರು ದರ್ಶನ ಪಡೆಯುತ್ತಿದ್ದರು. ನಂತರ ಕೀರ್ತನೆ ನಡೆದು ಸ್ತ್ರೀ ಪುರುಷರು ಸಂತೋಷಪಡುತ್ತಿದ್ದರು. ಹನ್ನೊಂದು ಗಂಟೆಗೆ ಶ್ರೀಗಳು ಅಡುಗೆಯ ಮನೆಗೆ ಹೋದಾಗ ಎಲ್ಲರೂ ಸಂತೋಷದಿಂದ ಪ್ರಸಾದ ತೆಗೆದುಕೊಳ್ಳುತ್ತಿದ್ದರು.
ಭಕ್ತರ ಆಗ್ರಹದ ಮೇಲೆ ಕೆಲವು ಸಲ ಸಿದ್ಧನನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಕೂಡಿಸಿ ಊರಲ್ಲಿ ಮೆರವಣಿಗೆ ಮಾಡುತ್ತಿದ್ದರು. ಮೆರವಣಿಗೆಯ ಮಧ್ಯಭಾಗದಲ್ಲಿ ಆರೂಢರು ಅಂಬಾರಿಯ ಮೇಲಿದ್ದರೆ, ಎಡಬಲಗಳಲ್ಲಿ ಕುದುರೆ ಮತ್ತು ಟಾಂಗಾ ಸಾಲುಗಳಿದ್ದು ಅವುಗಳ ಮೇಲೆ ಅಸಂಖ್ಯ ಜನರು ಕುಳಿತಿರುತ್ತಿದ್ದರು. ಲಕ್ಷಗಟ್ಟಲೆ ಭಕ್ತರು ಮೆರವಣಿಗೆಯಲ್ಲಿದ್ದು, ಧ್ವಜ, ಛತ್ರ, ಚಾಮರಗಳನ್ನು ಹಿಡಿದು ವೇದ ಶ್ರುತಿ, ವಾಕ್ಯಗಳನ್ನು ಆರೂಢರ ಜಯಜಯಕಾರವನ್ನೂ ಮಾಡುತ್ತಿದ್ದರು. ಸ್ತ್ರೀಯರು ಆರತಿ ಹಿಡಿದು ಓಂ ನಮಃ ಶಿವಾಯ ಮಂತ್ರ ನುಡಿಯುತ್ತಿದ್ದರು. ಹೀಗೆ ಊರೊಳಗೆ ಮರವಣಿಗೆಯಲ್ಲಿ ಅಸಂಖ್ಯಾತ ವಾದ್ಯಗಳನ್ನು ನುಡಿಸುತ್ತ ಮೆರವಣಿಗೆ ಮಾಡಿ ಸಾಯಂಕಾಲ ಮಠಕ್ಕೆ ಬರುತ್ತಿದ್ದರು. ನಂತರ ಪೂಜೆಯಾಗುತ್ತಿತ್ತು. ಮರವಣಿಗೆಯಲ್ಲಿ ತಮ್ಮ ಮನೆಗೆ ಬಂದಾಗ ಆ ಭಕ್ತರು ಆರತಿ ಮಾಡುತ್ತಿದ್ದರು. ಮಠಕ್ಕೆ ಬಂದಾಗ ದಕ್ಷಿಣ ಮಂಟಪದಲ್ಲಿ ಸದ್ಗುರುಗಳು ಕುಳಿತಾಗ ಎಲ್ಲರೂ ನಮಸ್ಕರಿಸುತ್ತಿದ್ದರು. ಸಿದ್ಧರು ಉಚ್ಚಾಸನದಲ್ಲಿ ಕುಳಿತಾಗ ಕೈಲಾಸದ ಶಂಕರನಂತೆ ಕಾಣುತ್ತಿದ್ದರು.
ಸಾಯಂಕಾಲ ಏಳು ಗಂಟೆಗೆ ಅಸಂಖ್ಯ ದೀಪಗಳನ್ನು ಹಚ್ಚಿ ಅವರ ಎರಡೂ ಬದಿಗಳಲ್ಲಿ ಚಾಮರ ಬೀಸುತ್ತಿದ್ದರು. ಸಿದ್ದರ ಕಂಠದಲ್ಲಿ ಸರ್ಪಹಾರ ಜಡೆಯಲ್ಲಿ ಗಂಗೆ, ತಲೆಯಲ್ಲಿ ಚಂದ್ರ ಶೋಭಿಸುತ್ತಿದ್ದವು. ಹೀಗೆ ಹತ್ತು ನಿಮಿಷ ಪೂಜೆಯಾಗಿ ಆಮೇಲೆ ಸಿದ್ಧರು ಕೆಳಗಿನ ಆಸನದಲ್ಲಿ ಬಂದು ಕುಳಿತಾಗ ಎಲ್ಲರೂ ಅವರಿಗೆ ನಮಿಸಿ ಆಶೀರ್ವಾದ ಪಡೆಯುತ್ತಿದ್ದರು. ಆಮೇಲೆ ಶ್ರೀಗಳು ಅಡುಗೆಯ ಮನೆಗೆ ಹೋದಾಗ ಎಲ್ಲರೂ ಊಟ ಮಾಡುತ್ತಿದ್ದರು. ಭಕ್ತರು ಕೀರ್ತನೆ ಭಜನೆ ಮಾಡುತ್ತ ಜಾಗರಣೆ ಮಾಡಿ ಮುಂಜಾನೆ ನಾಲ್ಕು ಗಂಟೆಗೆ ಭಕ್ತರು ಮಂಟಪ ಸಾರಿಸಿ ರಂಗೋಲಿ ಹಾಕಿ ಶೃಂಗರಿಸುತ್ತಿದ್ದರು. ಆಮೇಲೆ ಸಿದ್ಧನನ್ನು ಪೂಜಿಸಿದ ನಂತರ ಗುರುಗಳು ಉತ್ತರ ಮಂಟಪಕ್ಕೆ ಹೋದಾಗ ಅಲ್ಲಿ ಬ್ರಹ್ಮಜಿಜ್ಞಾಸೆ ನಡೆಯುತ್ತಿತ್ತು. ಆಮೇಲೆ ದಕ್ಷಿಣ ಮಂಟಪಕ್ಕೆ ಬಂದಾಗ ಕೀರ್ತನ, ಭಜನೆ ನಡೆಯುತ್ತಿತ್ತು. ಹೀಗೆ ಏಳು ದಿವಸ ಸಪ್ತಾಹ ನಡೆದು ನಂತರ ಗುರುಗಳ ಆಶೀರ್ವಾದ ಪಡೆದು ಭಕ್ತರು ತವರಿಗೆ ಹೋಗುತ್ತಿದ್ದರು. ಇದರಂತೆ ಶ್ರಾವಣ ಮಾಸದಲ್ಲಿಯೂ ನಡೆಯುತ್ತಿತ್ತು. ಸಪ್ತಾಹದ ಪ್ರಸಾದಕ್ಕಾಗಿ ಅಡುಗೆ ಮಾಡುತ್ತಿದ್ದರು. ಆಗ ಅನ್ನದ ಆಳೆತ್ತರದ ರಾಶಿಗಳು ಅನೇಕ ಬೀಳುತ್ತಿದ್ದವು. ನಾಲ್ವತ್ತು ಕೊಡ ನೀರಿನ ಭಾಂಡಿಯಲ್ಲಿ ಸಾರು ಮಾಡುತ್ತಿದ್ದರು. ಅಂಥ ಪಾತ್ರೆಗಳು ಎಷ್ಟೋ ಇರುತ್ತಿದ್ದವು. ಮಧ್ಯಾಹ್ನ ಮತ್ತು ರಾತ್ರಿ ಒಂದೊಂದು ವೇಳೆಗೆ ಹದಿನಾಲ್ಕು ಸಹಸ್ರ ಜನ ಊಟ ಮಾಡುತ್ತಿದ್ದರು. ಅದೂ ಅಲ್ಲದ ಹೊರಗಿನ ಹಲವಾರು ದಾಸೋಹಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಊಟ ಮಾಡುತ್ತಿದ್ದರು. ಹೀಗೆ ದಿನಾಲು ನಡೆಯುತ್ತಿತ್ತು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸುಡುವ ಅಂಬಲಿಯಿಂದ ಪಾರಾದ ಅಂಬವ್ವ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ