ಗಂಗಪ್ಪ ಸೋಮನಾಳೆ ಗುರುಕೃಪೆಯಿಂದ ಜೋತಿಷಿಯಾದ
ಚನ್ನಪೇಟೆಯ ಗಂಗಪ್ಪ ಸೋಮಸಾಳೆಯವರ ಮನೆತನದ ಉದ್ಯೋಗವು - ನೇಕಾರಿಕೆಯ ಉದ್ಯೋಗವಾಗಿದ್ದು, ಅದನ್ನು ಬಿಟ್ಟು ಸ್ವಂತ ಮುದ್ರಣಾಲಯ ನಡೆಸುತ್ತಿದ್ದರು, ಅವರು ಮತ್ತು ಅವರ ಮನೆಯವರೆಲ್ಲರೂ ಶ್ರೀಗುರು ಸಿದ್ಧಾರೂಢರ ಪರಮ ಭಕ್ತರಾಗಿದ್ದರು. ಪ್ರತಿದಿವಸ ಸಾಯಂಕಾಲ ಅದು ತಪ್ಪಿದರೆ ಮುಂಜಾನೆ ಶ್ರೀಗುರು ಸಿದ್ಧಾರೂಢರ ದರ್ಶನ ಪಡೆಯದೆ ಬೇರೆ ಕೆಲಸ ಮಾಡುತ್ತಿರಲಿಲ್ಲ ಆ ಹೊತ್ತಿನಲ್ಲಿ ಭಜನೆ ಕೀರ್ತನೆಗಳು ನಡೆಯುತ್ತಿದ್ದರೆ ಅದರಲ್ಲಿ ತಬಲಾ ನುಡಿಸುವುದಲ್ಲದೆ ಬೇರೆ ಕೆಲಸಗಳನ್ನೂ ಮಾಡುತ್ತಿದ್ದರು. ಹೀಗೆ ಕೆಲವು ವರ್ಷಗಳು ಕಳೆದ ನಂತರ ಒಂದು ದಿನ ಶ್ರೀ ಸಿದ್ಧಾರೂಡರು ಗಂಗಪ್ಪನನ್ನು ಕರೆದರು ಆಗ ಗಂಗಪ್ಪನವರು ಬಂದು ಗುರುಗಳಿಗೆ ವಂದಿಸಿ ನಿಂತಾಗ ಶ್ರೀಗಳು, ಹೇಳಿದರು. ಕೇಳು ಗಂಗಪ್ಪ ಇನ್ನು ಮುಂದೆ ನೀನು ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡು ಮುಂದೆ ನಿನ್ನ ಮುಪ್ಪಿನ ಕಾಲದಲ್ಲಿ ಒಂದು ತುತ್ತು ಅನ್ನ ಕೊಡುತ್ತದೆ ಎಂದರು. ಆಗ ಗಂಗಪ್ಪನವರು ಒಪ್ಪಿಕೊಂಡು ನಮಸ್ಕರಿಸಿ ಮನೆಗೆ ಬಂದರು. ಆದರೆ ತಮ್ಮ ಉದ್ಯೋಗದ ಒತ್ತಡದ ಮಧ್ಯೆ ಜ್ಯೋತಿಷ್ಯ ಶಾಸ್ತ್ರ ಅಭ್ಯಾಸ ಮಾಡಲು ಕುಳಿತರೆ ಅದು ಸರಿಯಾಗಿ ಹಿಡಿಸಲಿಲ್ಲ.
ಮುಂದೆ ಶ್ರೀಗುರು ಸಿದ್ದಾರೂಢರು ದೇಹತ್ಯಾಗ ಮಾಡಿದ ನಂತರ ತಮ್ಮ ವೃತ್ತಿಯಾದ ಮುದ್ರಣಾಲಯದಲ್ಲಿ ಬಹಳಷ್ಟು ಹಾನಿಯಾಗಿ ಮುದ್ರಣಾಲಯ ಮುಚ್ಚುವ ಪ್ರಸಂಗ ಬಂದಿತು. ಇದ್ದ ಒಬ್ಬ ಮಗ ಮತ್ತು ಹೆಂಡತಿ ತೀರಿಕೊಂಡನಂತರ ಅನಾಥನಾದ. ಈ ಹಿಂದೆ ಶ್ರೀ ಸಿದ್ಧಾರೂಢರು ಹೇಳಿದ ಮಾತು ನೆನಪಿಗೆ ಬಂದು, ಮೌನಯೋಗಿ ಶ್ರೀ ಗುರುವಾರ ಸಾನಿಧ್ಯಕ್ಕೆ ಹೋಗಿ ಬಹಳ ದುಃಖಭರಿತರಾಗಿ ನಮಸ್ಕರಿಸಿ ಅಪಾ ಶ್ರೀ ಗುರುನಾಥಾ, ಶ್ರೀ ಸಿದ್ಧಾರೂಢರು ಸೂಚಿಸಿದಂತೆ ಜ್ಯೋತಿಷ್ಯಶಾಸ್ತ್ರವನ್ನು ವಿಶೇಷ ಅಭ್ಯಾಸ ಮಾಡಬೇಕೆಂದಿರುವ ತಾವು ಕರುಣಿಸಿ ಆಶೀರ್ವದಿಸಿದರೆ ಕಲಿಯುತ್ತೇನೆ. ಕೃಪೆ ಮಾಡಿರಿ ಎಂದು ಬೇಡಿಕೊಂಡರು ಆಗ ಗುರುನಾಥರು ತಮ್ಮ ಕೃಪಾದೃಷ್ಟಿಯನ್ನು ಬೀರಿ ತಮ್ಮ ತಲೆಯನ್ನು ಅಲ್ಲಾಡಿಸಿ ಸಮ್ಮತಿ ಸೂಚಿಸಿದರು. ಆಗ ಅಲ್ಲಿದ್ದ ಸಾಧುವೊಬ್ಬರು ಗಂಗಪ್ಪನವರೇ ಸದ್ಗುರುಗಳು ಒಪ್ಪಿಗೆ ನೀಡಿದ್ದಾರೆ. ಚಿಂತಿಸದೆ ಮನೆಗೆ ಹೋಗಿರಿ ಎಂದರು. ಆಗ ಅವರು ಗುರುಗಳಿಗೆ ಸಾಷ್ಟಾಂಗ ನಮಸ್ಕರಿಸಿ ಸಿದ್ದರ ಗದ್ದುಗೆಯ ದರ್ಶನ ಮಾಡಿಕೊಂಡು ಮನೆಗೆ ಬಂದರು.
ನಂತರ ಜ್ಯೋತಿಷ್ಯ ಶಾಸ್ತ್ರದ ಗ್ರಂಥ ತೆಗೆದುಕೊಂಡು ಬಂದು ಗುರುಗಳನ್ನು ಸ್ಮರಿಸುತ್ತ ಅಭ್ಯಾಸ ಮಾಡಹತ್ತಿದರು. ಆಗ ತಂತಾನೆ ಶಾಸ್ಕ ಸರಳವಾಗಿ ತಿಳಿಯಹತ್ತಿತು. ಅದರಲ್ಲಿ ಅವರು ನೈಪುಣ್ಯವನ್ನು ಪಡೆದರು. ಈ ಒಳಗಾಗಿ ಎಲ್ಲವನ್ನೂ ಕಳೆದುಕೊಂಡ ಅವರು ಮೊದಲು ಚನ್ನಪೇಟೆಯ ವಿಠಲ ಹರಿಮಂದಿರದಲ್ಲಿ ಸ್ವಲ್ಪ ಕಾಲವಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಎತ್ತಿದ ಕೈಯಾದ ಅವರು ಮುಂದೆ ಚನ್ನಪೇಟೆಯ ಗುಡಿ ಓಣಿಯಲ್ಲಿ ವಾಸ ಮಾಡಿ ಆ ಜ್ಯೋತಿಷ್ಯ ಕೇಳಲು ಬಂದವರಿಗೆಲ್ಲ ಕೈ ನೋಡಿ ಭವಿಷ್ಯ ಹೇಳುವುದು, ಕುಂಡಲಿ ಬರೆದುಕೊಡುವುದು ಇತ್ಯಾದಿ ಕೆಲಸ ಮಾಡುತ್ತಿದ್ದರು. ಆಗ ಅವರು ಕೊಟ್ಟಷ್ಟು ಹಣ ಸ್ವೀಕರಿಸುತ್ತಿದ್ದರು. ಬಂದ ಹಣದಲ್ಲಿಯೇ ತೃಪ್ತಿ ಪಟ್ಟು ಒಂದು ಸಣ್ಣ ಖಾನಾವಳಿಯಲ್ಲಿ ಊಟ ಮಾಡಿ ಗುಡಿಯಲ್ಲಿಯೇ ಮಲಗುತ್ತಿದ್ದರು. ಮುಂದೆ ಬಹಳಷ್ಟು ವಯಸ್ಸಾಗಿದ್ದರಿಂದ ಅವರು ದೇಹತ್ಯಾಗದ ಮುನ್ನ ಕನಸಲ್ಲಿ ಸಿದ್ದರನ್ನು ಕಂಡು ಮರುದಿನ ದೇಹ ಬಿಟ್ಟು ಮುಕ್ತಿ ಹೊಂದಿದರು,
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥನ ಆಶೀರ್ವಾದದಿಂದ ಮಹಾದೇವಪ್ಪ ಶ್ರೀಮಂತನಾದ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥನ ಆಶೀರ್ವಾದದಿಂದ ಮಹಾದೇವಪ್ಪ ಶ್ರೀಮಂತನಾದ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
