ಗುರುನಾಥನ ಆಶೀರ್ವಾದದಿಂದ ಮಹಾದೇವಪ್ಪ ಶ್ರೀಮಂತನಾದ




ಹಳೇಹುಬ್ಬಳ್ಳಿ  ಶ್ರೀ ಮಹಾದೇವಪ್ಪ ಮೂರಶಿಳ್ಳಿ ಇವರ ತಂದೆ ಪರಪ್ಪನವರು ಹಾಗೂ ಮನೆತನದವರೆಲ್ಲರೂ ಶ್ರೀ ಸಿದ್ಧಾರೂಢರ ಭಕ್ತರಾಗಿದ್ದರು. ಪರಪ್ಪನವರು ಮಠದ ಎದುರಿಗೆ ಸ್ವಲ್ಪ ದೂರದಲ್ಲಿ ಹೋಲಸೋಲ (ಸಗಟು ವ್ಯಾಪಾರ) ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರು. ಅವರ ಸಣ್ಣಮಗ ಮಹಾದೇವಪ್ಪ ಐದಾರು ವರ್ಷದವನಾಗಿದ್ದಾಗ ಕೈಲಾಸ ಮಂಟಪ ಕಟ್ಟುವ ಕಾರ್ಯ ನಡೆದಿತ್ತು. ಬಾಲಕ ಮಹಾದೇವಪ್ಪ ಕಲ್ಲುಗಳನ್ನು ಹೊತ್ತುಕೊಂಡು ಹೋಗಿ ಅಲ್ಲಿ ಹಾಕುತ್ತಿರುವದನ್ನು ಕಂಡ ಶ್ರೀ ಸಿದ್ಧಾರೂಢರು ಆನಂದಭರಿತರಾಗಿ ಮಹಾದೇವನನ್ನು ಕರೆದು ಬೊಗಸೆ ತುಂಬ ಹಣ್ಣು ಹಂಪಲು ಪ್ರಸಾದ ಕೊಟ್ಟರು. ಆಗ ಮಹಾದೇವಪ್ಪನು ಆ ಪ್ರಸಾದ ತೆಗೆದುಕೊಂಡು ಹೋಗಿ ತಂದೆ ತಾಯಿಗಳಿಗೆ ಕೊಟ್ಟಾಗ ಅಜ್ಜನ ಪ್ರಸಾದವನ್ನು ಸ್ವೀಕರಿಸಿದ ತಂದೆ ಆನಂದಪಟ್ಟು ನಮ್ಮ ಮಗ ಮಹಾದೇವನಿಗೆ ಶ್ರೀಗಳ ಆಶೀರ್ವಾದವಾಗಿದೆ, ಇವನು ದೊಡ್ಡ ಮನುಷ್ಯನಾಗುತ್ತಾನೆ ಎಂದು ನಂಬಿದರು.
ಮುಂದೆ ಶ್ರೀ ಸಿದ್ಧಾರೂಢರು ಬ್ರಹ್ಮಲೀನರಾದ ನಂತರ ಸಹಿತ ಶ್ರೀಗುರುನಾಥಾರೂಢರ ದರ್ಶನಕ್ಕೆ ಮನೆಯರೆಲ್ಲರೂ ಹೋಗುತ್ತಿದ್ದರು. ತಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಬಂದರೂ ಗುರುಗಳಲ್ಲಿ ತಮ್ಮ ವಿಚಾರವನ್ನಿಟ್ಟು ಆಶೀರ್ವಾದ ಪಡೆದು ಕಾರ್ಯ ಮಾಡುತ್ತಿದ್ದರು. ಶ್ರೀ ಮಹಾದೇವಪ್ಪ ಮತ್ತು ಅವರ ಅಣ್ಣ ಮರಿಯಪ್ಪ ದೊಡ್ಡವರಾದ ನಂತರ ಅಣ್ಣ ನೌಕರಿ ಮಾಡುತ್ತಿದ್ದನು. ಆಗ ಮಹಾದೇವಪ್ಪನವರಿಗೂ ನೌಕರಿ ಬಂದಿತ್ತು. ಆಗ ಅಣ್ಣನು ಮಹಾದೇವಪ್ಪನನ್ನು ಕರೆದು ನೋಡು ಮಹಾದೇವ ನಾನು ನೌಕರಿಯಲ್ಲಿದ್ದೇನೆ. ನೀನೂ ನೌಕರಿಗೆ ಹೋದರೆ ಮನೆತನದ ವ್ಯವಸ್ಥೆಯನ್ನು ನೋಡಿಕೊಳ್ಳಲು ಯಾರೂ ಇಲ್ಲದಂತಾಗುತ್ತದೆ ಆದ್ದರಿಂದ ನೀನು ಹುಬ್ಬಳ್ಳಿಯಲ್ಲಿ ಯಾವುದಾದರೊಂದು ವ್ಯಾಪಾರದಲ್ಲಿ ತೊಡಗು, ನಾನು ದುಡ್ಡು ಕೊಡುತ್ತೇನೆ ಎಂದರು. ಮಹಾದೇವಪ್ಪ ಅನಿವಾರ್ಯವಾಗಿ ಒಪ್ಪಿಕೊಂಡರು.
ಯಾವ ವ್ಯಾಪಾರ ಮಾಡಬೇಕೆಂದು ಪ್ರಶ್ನೆ ಬಂದಾಗ ಗುರುನಾಥರನ್ನು ಕೇಳಿ ಅವರ ಒಪ್ಪಿಗೆಯಂತೆ ನಡೆದುಕೊಳ್ಳೋಣ ಎಂದು ವಿಚಾರಮಾಡಿ ಶ್ರೀ ಗುರುನಾಥರ ದರ್ಶನಕ್ಕೆ ಹೋದಾಗ, ಅಲ್ಲಿ ಸೇವೆ ಮಾಡುತ್ತಿದ್ದ ಬಸವಣ್ಣೆಪ್ಪ ಕೊಂಗಿಯವರು ಹೀಗೆ ಹೇಳಿದರು. ಒಳಗಡೆ ಫಾರಸಿ ಭಕ್ತರಿದ್ದಾರೆ. ಅವರು ಹೋದನಂತರ ನಿಮ್ಮನ್ನು ಕಳಿಸುತ್ತೇನೆ, ಸ್ವಲ್ಪ ತಡೆಯಿರಿ ಎಂದರು, ಫಾರಸಿ ಭಕ್ತರು ಹೊರಗೆ ಬಂದಾಗ ಇವರು ಒಳಗೆ ಹೋಗಿ ನಮಸ್ಕರಿಸಿ ನಿಂತು ಸದ್ಗುರುವೇ ನಾನು ತೆಂಗಿನಕಾಯಿ ಮತ್ತು ಅಕ್ಕಿ ವ್ಯಾಪಾರ ಮಾಡಬೇಕೆಂದಿದ್ದೇನೆ. ತಾವು ಒಪ್ಪಿ ಆಶೀರ್ವಾದ ಮಾಡಿದರೆ ಅಂಗಡಿ ಮಾಡುತ್ತೇನೆ ಎಂದು ಮಹಾದೇವಪ್ಪ ಅಂದಾಗ ಮೌನಮುನಿ ಶ್ರೀ ಗುರುನಾಥರು ಒಂದು ಹೂವನ್ನು ತೆಗೆದುಕೊಂಡು ಅದನ್ನು ಗಟ್ಟಿಯಾಗಿ ಹಿಚುಕಿ ಮುದ್ದಿ ಮಾಡಿ ಕೆಳಗೆ ಚೆಲ್ಲಿದರು. ಇದನ್ನು ಕಂಡ ಮಹಾದೇವಪ್ಪ ಶ್ರೀಗಳ ಒಪ್ಪಿಗೆ ಸಿಗಲಿಲ್ಲ ಎಂದು ತಿಳಿದು ಮಹದೇವಪ್ಪನವರ ಅಣ್ಣ ಮರಿಯಪ್ಪ ಹೀಗೆ ಬೇಡಿಕೊಂಡ. ಸದ್ಗುರುಗಳೇ ಹತ್ತಿಕಾಳ ವ್ಯಾಪಾರ ಮಾಡೋಣವೇ ಹೇಗೆ ಎಂದಾಗ ಶ್ರೀ ಗುರುನಾಥರು ತಮ್ಮ ಕೊರಳಲ್ಲಿದ್ದ ಸಂಪಿಗೆ ಹಾರ ತೆಗೆದು ಮಹಾದೇವಪ್ಪನವರ ಕೊರಳಲ್ಲಿ ಹಾಕಿದರು. ಆಗ ಎಲ್ಲರೂ ಸಂತೋಷಪಟ್ಟು ಗುರುಗಳು ಒಪ್ಪಿಗೆ ನೀಡಿದರೆಂದು ತಿಳಿದು ಸದ್ಗುರುಗಳಿಗೆ ದೀರ್ಘದಂಡ ನಮಸ್ಕರಿಸಿ ಮನೆಗೆ ಬಂದರು. ಬಂದ ನಂತರ ಸ್ವಲ್ಪ ದಿವಸಗಳಲ್ಲಿಯೇ ಹಳೇಹುಬ್ಬಳ್ಳಿ ದುರ್ಗದಬೈಲಿನಲ್ಲಿ ಒಂದು ಕಡೆ ಹತ್ತಿಕಾಳಿನ ಸಣ್ಣ ಅಂಗಡಿ ಪ್ರಾರಂಭ  ಮಾಡಿದರು. ದಿನ ಕಳೆದಂತೆ ದೊಡ್ಡ ದೊಡ್ಡ  ವ್ಯಾಪಾರಸ್ಥರ ಪರಿಚಯವಾಗಿ ವ್ಯಾಪಾರ ಮಾಡುತ್ತ ಶ್ರೀಮಂತರಾದರು.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರುನಾಥರ ಕೃಪೆಯಿಂದ ಪರಪ್ಪನ ತಲೆನೋವು ಸಹಿತ ಬಡತನ ಮಾಯವಾಯಿತು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ