ಸಿದ್ಧರ ಕೃಪೆಯಿಂದ ನಗರೇಶ್ವರ ಮಂದಿರ ನಿರ್ಮಾಣ
🌺 ಸಿದ್ಧರ ಕೃಪೆಯಿಂದ ನಗರೇಶ್ವರ ಮಂದಿರ ನಿರ್ಮಾಣ 🌺
ಸಿದ್ಧಾರೂಢರ ಪರಮಭಕ್ತರಲ್ಲಿ ಒಬ್ಬರಾದ ಹುಬ್ಬಳ್ಳಿಯ ವೈಶ್ಯ ಸಮಾಜದ ಶ್ರೀ ರಂಗಪ್ಪ ವಡವಡಗಿಯವರು ಅಮಾವಾಸ್ಯೆ, ಹುಣ್ಣಿವೆ ಮುಂತಾದ ಶುಭ ಪ್ರಸಂಗಗಳಲ್ಲಿ ಅಣ್ಣಿಗೇರಿಯ ಅಮೃತೇಶ್ವರ ಮಂದಿರಕ್ಕೆ ಹೋಗಿ ದೇವರ ದರ್ಶನ ಪಡೆದು ಭಕ್ತಿ ಸಲ್ಲಿಸಿ ಬರುತ್ತಿದ್ದರು. ಒಂದು ದಿವಸ ಅವರು ರಾತ್ರಿ ಊಟ ಮಾಡಿ ಮಲಗಿದಾಗ ಅವರ ಕನಸಿನಲ್ಲಿ ಈಶ್ವರನು ಬಂದು 'ರಂಗಪ್ಪಾ ನಾನು ನಿಮ್ಮ ಮನೆ ಯಲ್ಲಿ ಬಂದು ಇರುತ್ತೇನೆ' ಎಂದು ಹೇಳಿ ಅದೃಶ್ಯನಾದನು. ರಂಗಪ್ಪನವರು ಮರುದಿನ ಎದ್ದು ಸ್ನಾನ ಪೂಜಾದಿಗಳನ್ನು ಮಾಡಿ ತನ್ನ ಕನಸಿನ ಗೂಡಾರ್ಥ ತಿಳಿಯದೆ ಈ ಗುರುಗಳಾದ ಶ್ರೀ ಸಿದ್ಧಾರೂಢರಲ್ಲಿ ಹೋಗಿ ನಮಸ್ಕರಿಸಿ ತನ್ನ ಸ್ವಪ್ನ ವಿಚಾರ ತಿಳಿಸಿದರು. ಆಗ ಗುರುಗಳು `ರಂಗಪ್ಪಾ, ನೀನು ಒಂದು ಸ್ಥಳವನ್ನು ಖರೀದಿಸಿ ಅಲ್ಲಿ ನಗರೇಶ್ವರನ ದೇವಸ್ಥಾನ ಕಟ್ಟಿಸು. ಅದು ನಿನ್ನಿಂದ ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ಸಮಾಜ ಮತ್ತು ನಿಮ್ಮ ವಂಶ ಉದ್ಧಾರವಾಗುತ್ತದೆ' ಎಂದು ಆಶೀರ್ವದಿಸಿ ಕಳಿಸಿದರು.
ರಂಗಪ್ಪನವರು ೧೯೧೯ನೇ ಇಸ್ವಿಯಲ್ಲಿ ಸಮಾಜದವರಿಂದ ಸ್ವಲ್ಪ ಹಣ ಕೂಡಿಸಿ ಹೆಚ್ಚಾಗಿ ಹಣವನ್ನು ತಾವೇ ಖರ್ಚು ಮಾಡಿ ಹುಬ್ಬಳ್ಳಿಯ ಕಂಚಗಾರ ಓಣಿಯಲ್ಲಿ ಒಂದು ನಿವೇಶವನ್ನು ಖರೀದಿಸಿ ಶ್ರೀ ಸಿದ್ಧಾರೂಢರಿಂದಲೇ ವಿಜೃಂಭಣೆಯಿಂದ ಅಡಿಗಲ್ಲು ಸಮಾರಂಭ ಮಾಡಿಸಿ ಕಟ್ಟಡ ಕಾರ್ಯ ಪ್ರಾರಂಭಿಸಿದರು. ಮುಂದ ೧೯೨೭ನೇ ಇಸ್ವಿಯಲ್ಲಿ ಮಂದಿರ ಪೂರ್ಣಗೊಂಡಿತು. ಆಗ ಸಿದ್ದಾರೂಢರ ಆದೇಶದಂತೆ ನರ್ಮದಾ ನದಿಯಿಂದ ಪವಿತ್ರವಾದ ಬಾಣಲಿಂಗವನ್ನು ತರಿಸಿ ಆರೂಢರ ಅಮೃತ ಹಸ್ತದಿಂದಲೇ ಪ್ರತಿಷ್ಠಾಪಿಸಿ ಉತ್ಸವ ಮಾಡಿದರು. ಮುಂದೆ ಮಂದಿರದಲ್ಲಿ ಭಜನ, ನಾಮಸ್ಮರಣೆ ಶಾಸ್ತ್ರ ಮತ್ತು ಮಹಾತ್ಮರ ಪ್ರವಚನಗಳೂ ನಡೆಯಹತ್ತಿದವು. ಕೆಲವು ಸಲ ಶ್ರೀ ಸಿದ್ಧಾರೂಢರು ಮತ್ತು ಜಡಿಸಿದ್ದ ಸ್ವಾಮಿಗಳಿಂದಲೂ ಪ್ರವಚನ ನಡೆಸಿದರಂತೆ. ಅದರಂತೆ ಮುಂದೆ ಶ್ರೀ ಶಿವಪುತ್ರ ಸ್ವಾಮಿಗಳೂ, ಶಂಕರಾನಂದರು, ಶಂಕರಭಟ್ಟ ಅಗ್ನಿಹೋತ್ರಿ, ಶ್ರೀ ಸಿದ್ದವೀರ ಸ್ವಾಮಿಗಳು ಮುಂತಾದವರಿಂದ ಪ್ರವಚನಗಳು ನಡೆದವು. ಅಂದು ಶ್ರೀ ಸಿದ್ದರ ಕರುಣೆಯಿಂದ ಸ್ಥಾಪನೆಗೊಂಡ ನಗರೇಶ್ವರ ಮಂದಿರದಲ್ಲಿ ಇಂದಿನವರೆಗೂ ವೈಶ್ಯ ಬಾಂಧವರು ಭಜನ, ಪೂಜನ, ಶಾಸ್ತ್ರ ಪ್ರವಚನ ಮುಂತಾದ ಕಾರ್ಯ ನೆರವೇರಿಸುತ್ತ ಪುಣ್ಯಭಾಗಿಗಳಾಗುತ್ತಿರುವುದನ್ನು ಇಂದಿಗೂ ನೋಡಬಹುದು. ಆ ಸಮಾಜದವರು ಇಂದಿಗೂ ಸಿದ್ದರ ಭಕ್ತರಾಗಿದ್ದಾರೆ.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಕಟ್ಟಿಗೆಗಾಗಿ ಕಾಡಿಗೆ ಹೋದ ಭಕ್ತರನ್ನು ಸಿದ್ಧ ರಕ್ಷಿಸಿದ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಕಟ್ಟಿಗೆಗಾಗಿ ಕಾಡಿಗೆ ಹೋದ ಭಕ್ತರನ್ನು ಸಿದ್ಧ ರಕ್ಷಿಸಿದ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
