ಸಿದ್ದಾಪುರದಲ್ಲಿ ಗಜಮನಿಂತ ಹಠಮಾರಿ ಜಂಗಮನ ಗರ್ವಭಂಗ
ಸಿದ್ದಾಪುರದಲ್ಲಿ ಗಜಮನಿಂತ ಹಠಮಾರಿ ಜಂಗಮನ ಗರ್ವಭಂಗ 🌷
ನೆರೆದ ಜನಸಂದಣಿಯನ್ನು ಕಾಣುತ್ತ ಸಿದ್ದನು ಅಲ್ಲಿಗೆ ಹೋದನು. ಜಂಗಮನೋರ್ವನು ತಲೆಕೆಳಗೆ ಮಾಡಿ ಎರಡೂ ಕೈಗಳನ್ನು ನೆಲಕ್ಕೂರಿ ಕಾಲುಗಳನ್ನು ಮೇಲೆ ಮಾಡಿ ಗಜಮ ನಿಂತಿದ್ದನು. ಆ ಹಠಮಾರಿ ಜಂಗಮನು ಉಪವಾಸವಿದ್ದು, ಸಾವಿರ ಜಂಗಮಾರ್ಚನೆ ಮಾಡಲು ಪುರಜನರು ಒಪ್ಪಬೇಕು ಅಂತಾ ಕಠಿಣವಾದ ಶರ್ತನ್ನು ಹಾಕಿದ್ದನು. ಈ ಹಠಯೋಗಿ ಜಂಗಮನ ಬಯಕೆಯನ್ನು ಪೂರೈಸಲು ನೀವು ಶಕ್ತರಲ್ಲ. ಈತನನ್ನು ಯಾವ ವಿಧವಾಗಿ ಕೆಳಗಿಳಿಸಿ ಊಟ ಮಾಡಲು ಹಚ್ಚಬೇಕು, ಈತನ ಊಟ ಮಾಡದಿದ್ದರೆ ನಾವು ಊಟ ಮಾಡುವದು ಸರಿಯಲ್ಲ ಅಂತಾ ಪುರಪ್ರಮುಖರೆ ಲ್ಲರಿಗೆ ದಿಕ್ಕು ಕಾಣದೆ ಚಿಂತಾಕ್ರಾಂತರಾಗಿದ್ದರು. ಅದೇ ಸಮಯಕ್ಕೆ ಸಿದ್ದನು ಆ ಜನರಲ್ಲಿ ಆವರಿಸಿದ ಭಯ, ಜಂಗಮನ ಹಠಮಾರಿತನ ನೋಡಿ ಅವರನ್ನು ಕುರಿತು, ಆಯ್ಯಾ ಪುರದ ಪ್ರಮುಖರೆ, ನಾವೆಲ್ಲರೂ ಕೂಡಿ ಜಂಗಮಾರ್ಚನೆಯನ್ನು ತಪ್ಪದೇ ಮಾಡುತ್ತೇವೆ ಅಂತ ಹೇಳಿರಿ ಅಂತಾ ನುಡಿದರು. ಆತನಲ್ಲಿಯ ಮಹಾನುಡಿಗಳಿಗೆ ಒಪ್ಪಿಕೊಂಡು ಪುರಪ್ರಮುಖರು ಗಜಮ ನಿಂತ ಜಂಗಮನ ಸಮೀಪ ಹೋಗಿ ಹೇ ಜಂಗಮರೇ, ತಮ್ಮ ಇಚ್ಛೆಯ ಪ್ರಕಾರ ಜಂಗಮಾರ್ಚನೆ ಮಾಡುತ್ತೇವೆ. ತಾವು ಈ ಗಜಮ ನಿಂತಿದ್ದನ್ನು ಬಿಟ್ಟುಕೊಡಿರಿ, ಸಂಕೋಚ ಪಡಬೇಡಿ ಅಂತಾ ಪ್ರಾರ್ಥಿಸಿದರು.
ಅದಕ್ಕೆ ಪ್ರಸನ್ನತೆಯಿಂದ ಗಜಮ ಬಿಟ್ಟುಕೊಟ್ಟು ಕುಳಿತ, ಜಂಗಮನ ಬಳಿಗೆ ಸಿದ್ಧನು ಹೋಗಿ ಅಯ್ಯಾ ಸ್ವಾಮಿಯೇ, ಪರಮಯೋಗೀಶ್ಚರನೇ ಕೇಳು, ಜಂಗಮಃ ಜಗದ್ಭರಿತಃ ಇರುವಾಗ ನೀನು ಯಾವ ಜಂಗಮರಿಗೆ ಹರ್ಷದಿಂದ ತೃಪ್ತಿ ಪಡಿಸುವಿ ವಿಚಾರ ಮಾಡು, ಜಂಗಮನು ಪಡೂರ್ಮಿಯೋ ಅಥವಾ ರಹಿತವೋ? ಒಂದು ವೇಳೆ ಜಂಗಮನು ಷಡೂರ್ಮಿ ಎಂದರೆ ಅವನು ಪೂಜೆಗೆ ಯೋಗ್ಯನಲ್ಲ, ಅವನು ಸಾಮಾನ್ಯ ಜೀವನೆನಿಸುವನು, ಒಂದು ವೇಳೆ ಆ ಜಂಗಮನು ಹಸಿವು, ನೀರಡಿಕೆ ಮುಂತಾದ ಷಡೂರ್ಮಿ ರಹಿತನೆಂದಲ್ಲ ಅವನು ಸದಾ ತೃಪ್ತನಾಗಿರುವಾಗ ಅವನಿಗೆ ಅನ್ನಾದಿಗಳು ಅವಶ್ಯವಿಲ್ಲ. ಹೀಗಿದ್ದೂ ಇಂತಹ ಜಂಗಮನಿಗೆ ಯಾವುದೇ ರೀತಿಯಿಂದ ಪ್ರಯೋಜನವಿಲ್ಲ. ಈ ನನ್ನ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸು. ಪುರ ಪ್ರಮುಖರೂ ಸಹ ನಿನ್ನ ಉತ್ತರವನ್ನು ಕೇಳಲಿ, ಸಾರಾಸಾರವಾಗಿ ಆತ್ಮ ನಿರೀಕ್ಷಣೆಯಿಂದ ವಿಚಾರ ಮಾಡು. ಜಂಗಮ ಪದದ ನೈಜವಾದ ಅರ್ಥ ಇರವನ್ನು ತಿಳುವಳಿಕೆ ಇಲ್ಲದೆ ನಿನ್ನ ಡಾಂಬಿಕತನದ ಹಠಮಾರಿತನ ಜನರಲ್ಲಿ ಪ್ರಕಟವಾಗಿದೆ. ಇದರಿಂದ ನಿಮಗೆ ಮಾನ ದೊರೆಯಬಹುದೆ? ನಿನ್ನ ಮೇಲಿನ ಕೋಪದಿಂದ ಅವರಲ್ಲಿಯ ಪ್ರತಿಕ್ರಿಯೆ ಏನಾಗಬಹುದು. ಜನರಿಗೆ ತೊಂದರೆ ಕೊಡುವದರಿಂದ ನಿನಗೇನು ಪ್ರಯೋಜನ? ಮುಂತಾಗಿ ಉದ್ವೇಗದಿಂದ ಸಿದ್ಧಾರೂಢ ಭಾರತಿಯು ನುಡಿಯುತ್ತ ಹಠಮಾರಿ ಜಂಗಮನಲ್ಲಿ ಉಂಟಾಗಿದ್ದ ಗರ್ವಭಂಗ ಮಾಡಿದನು. ಸಿದ್ಧನ ಎಲ್ಲ ಪ್ರಶ್ನೆಗಳಿಗೆ ನಿರುತ್ತರನಾದ . ಜಂಗಮ ತನಗೆ ಹಸಿವಾಗಿದೆ ಅಂತ ಹೇಳಲು, ಕೂಡಲೇ ಸಿದ್ಧನು ಹಾಲು ಸಕ್ಕರೆ ತರಿಸಿ, ಹಠಮಾರಿ ಜಂಗಮನನ್ನು ತೃಪ್ತಿಗೊಳಿಸಿ ಅಲ್ಲಿಂದ ಕಳುಹಿಸಿಕೊಟ್ಟನು. ಇದನ್ನು ಗಮನಿಸಿದ ಜನರೆಲ್ಲರೂ ಚಕಿತಗೊಂಡು ಸಿದ್ಧನಿಗೆ ವಂದನೆಗಳನ್ನು ಸಲ್ಲಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
