ಗಂಗಾ ಯಮುನಾ ಸಂಗಮ ಪ್ರಯಾಗ ಕ್ಷೇತ್ರದ ಸಿದ್ಧಾರೂಢರ ದರ್ಶನ

 ಪ್ರಯಾಗ ಕ್ಷೇತ್ರಕ್ಕೆ ಆಗಮನ 🙏



ಅಲ್ಲಿಂದ ಹೊರಟ ಸಿದ್ದನು ಭೂಮಂಡಲದಲ್ಲಿ ಎಲ್ಲ ತೀರ್ಥಗಳಿಗೆ ತೀರ್ಥರಾಜ ಪ್ರಯಾಗ ಕ್ಷೇತ್ರಕ್ಕೆ ಆಗಮಿಸಿದನು. ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮ ಸ್ಥಾನಕ್ಕೆ ಪ್ರಯಾಗ ಕ್ಷೇತ್ರವೆಂದು ಕರೆದಿರುವರು. ಈ ಪವಿತ್ರ ಸಂಗಮದ ದಡದಲ್ಲಿ ಸಿದ್ದನು ಆಸೀನನಾಗಿ  ಸುತ್ತಲೂ ನಿರೀಕ್ಷಣೆ ಮಾಡತೊಡಗಿದನು. ವಿಶಾಲವಾದ ಸಂಗಮದಲ್ಲಿ ಲಕ್ಷೋಪಲಕ್ಷ ಯಾತ್ರಿಕರ ಉಪಸ್ಥಿತಿಯು  ಅವರಲ್ಲಿ ಕೆಲವರು ಮುಂಡನ ಮಾಡಿಸಿಕೊಂಡು ಪಿತೃಗಳಿಗೆ ಪಿಂಡ ತರ್ಪಣ ಮಾಡಿಸಲು  ವೇದ ಮಂತ್ರ ಘೋಷಣೆಗಳನ್ನು ಮಾಡುತ್ತಿರುವ ವಿಪ್ರ ವೃಂದ, ಕೆಲವರು  ರಾಮೇಶ್ವರದಿಂದ ತಂದ ಮಳಲನ್ನು ಸಂಗಮದಲ್ಲಿ ವಿಸರ್ಜನೆ ಮಾಡುತ್ತಾ ಸ್ನಾನ ಮಾಡುವ ದೃಶ್ಯ, ದೋಣಿಯಲ್ಲಿ ಕೆಲ ಸುವಾಸಿನಿಯರಿಗೆ ಕೂತು ಸಂಗಮ ಮಧ್ಯದಲ್ಲಿ ವೇಣಿದಾನ ಮಾಡುವ ದೃಶ್ಯ ನಯನ ಮನೋಹರವಾದುದನ್ನು ಕಂಡು ನೈಮಿತ್ತಿಕ ಕಮ್ಮಾದಿಗಳಲ್ಲಿ ಆಸಕ್ತರಾದ ಈ ಯಾತ್ರಿಕರು ನಿಷ್ಕಾಮನೆಯಿಂದ ಹರನ ಸೇವೆ ಮಾಡಿದಲ್ಲಿ ಸುಜ್ಞಾನಕ್ಕೆ ಅಧಿಕಾರಿಗಳಾಗಿರುತ್ತಾರೆ. ತೀರ್ಥಯಾತ್ರೆಯ ಸಂಚಾರ ಮಾಡಲು ಅಶಕ್ತರಾದವರು ತಾವಿದ್ದಲ್ಲಿಯೇ ತೀರ್ಥರಾಜನ, ಮೃಡನ ಧ್ಯಾನ ಮಾಡಿದಲ್ಲಿ ತೀರ್ಥ ಯಾತ್ರೆ ಮಾಡಿದ ಫಲ ದೊರೆಯುವದು ಅಂತಾ ಅನ್ನುತ್ತಲೇ ಸಿದ್ಧಭಾರತಿಯು ಆ ತೀರ್ಥಯಾತ್ರಿಕರ ವಿರಾಟ್‌ರೂಪವನ್ನು ಕಂಡು ಆನಂದಭರಿತನಾದನು. ಗುಪ್ತಗಾಮಿನಿ ಸರಸ್ವತಿ ನದಿಯು ಹರಿಯುವುದನ್ನು ಸಮೀಪದಿಂದ ನಿರೀಕ್ಷಿಸಿದನು. ಸಂಗಮನಾಥನ ದರ್ಶನ ಪಡೆದು ಸಿದ್ದನು  ಅಲ್ಲಿಂದ ಹೊರಟು ಮೊಘಲ್ ಸರಾಯಿಗೆ ಬರುವಷ್ಟರಲ್ಲಿ ಸೂರ್ಯಾಸ್ತನಾದನು. ಮೋಡ ಕವಿದ ಬಿರುಗಾಳಿ, ಗುಡುಗು, ಮಿಂಚು ಏಕಕಾಲಕ್ಕೆ ಬರಲು ಅಲ್ಲಿಯೇ ಸಮೀಪದಲ್ಲಿದ್ದ ದೇವಾಲಯದಲ್ಲಿ ಸಿದ್ದನ್ನು ಪ್ರವೇಶಿಸಿ ಅಲ್ಲಿ ಕುಳಿತುಕೊಂಡು.


🙏ಕಾವ್ಯಜ್ಜನಿಗೆ ಅಲಂಕಾರ, ವೀರರಸ ಹೇಳಿದ್ದು:


 ಆ ದೇವಾಲಯದಲ್ಲಿ ಈ ಮೊದಲೇ ಕೂತಿದ್ದ ಕಾವ್ಯಜ್ಞನು ಸಿದ್ಧನನ್ನು ನೆಟ್ಟ ದೃಷ್ಟಿಯಿಂದ ನೋಡತೊಡಗಿದನು. ಬಹುಶಃ ಈತನು ಕಾವ್ಯಜ್ಞನಿರುವನೆಂದು ಭಾವಿಸಿ ಸಿದ್ಧನನ್ನು ಕುರಿತು ಹೇ ಪರಮನೇ, ನಿನ್ನೊಡನೆ ಕಾವ್ಯದ ಅಲಂಕಾರ, ರಸಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಇಚ್ಛೆ ನಮಗೆ ಆಗಿದೆ. ನೀನು ಚೆನ್ನಾಗಿ ತಿಳಿದುಕೊಂಡ ಕಾವ್ಯಜ್ಞನಿರುವಿ ಅಂತಾ ನನ್ನ ನಿರೀಕ್ಷಣೆಯಿಂದ ನನ್ನ ಗಮನಕ್ಕೆ ಬಂದಿದೆ. ಶ್ರೇಷ್ಠವಾದ ಕ್ಷೀರಸಾಗರದಲ್ಲಿ ಉದಯಿಸುವ ಅಮೃತಾಂಶುವಿನಂತೆ ಮುನಿವರರ  ಮಧ್ಯದಿಂದ ಪ್ರೀತಿಯಿಂದ ಎದ್ದನಾ ರಘುನಾಥನು. ಇದು ಯಾವ ಅಲಂಕಾರಕ್ಕೆ ಒಳಪಡುವುದು ಅಂತಾ  ಕೇಳಿದನು. ಅದಕ್ಕೆ ಸಿದ್ದನು  ಮಂದಹಾಸ ಬೀರುತ್ತಾ ಇದು ಉಪಮಾಲಂಕಾರ ಅಂತ ಹೇಳಿದನು. ಪುನಃ ಸಿದ್ಧನನ್ನು ಕುರಿತು ಅಯ್ಯಾ, ಮೇಘವು ಯಾಕೆ ಮಿಂಚುಗಳಿಂದ ಗುಡುಗುವದು  ಇದರ ಅಭಿಪ್ರಾಯವನ್ನು ತಿಳಿಸಬೇಕು. ಆ ಕಾವ್ಯಜ್ಞನು ಪ್ರಶ್ನಿಸಿದನು. ಅದಕ್ಕೆ ಸಿದ್ದನು  ಆತನನ್ನು ಕುರಿತು ಅಯ್ಯಾ ಕಾವ್ಯಜ್ಞನೇ ಕೇಳು, ಮೇಘವಾಹನನಾದ ದೇವೇಂದ್ರನು ತನ್ನ ವೈರಿಗಳಾದ ಗಿರಿ ಪರ್ವತಗಳ ರೆಕ್ಕೆಗಳನ್ನು ವಜ್ರಾಯುಧದಿಂದ ಕತ್ತರಿಸಲು, ಅವುಗಳಲ್ಲಿಯ  ಮೈನಾಕನೆಂಬ ಪರ್ವತವು ತಪ್ಪಿಸಿಕೊಂಡು ಅಂಜುತ್ತಾ ಸಮುದ್ರ ರಾಜನಿಗೆ ಶರಣಾಗತನಾಗಿ ಅಲ್ಲಿಯೇ ಅಡಗಿಕೊಂಡನು. ತನ್ನ ವೈರಿಯನ್ನು ಧೈರ್ಯದಿಂದ ಸಮುದ್ರರಾಜನು ಆಶ್ರಯ ನೀಡಿ ತನಗೆ ದ್ರೋಹ ಬಗೆದನೆಂದು ಕೋಪಾವಿಷ್ಟನಾದ  ದೇವೇಂದ್ರನು, ಮೊದಲಿಗೆ ಆ ವೈರಿಯನ್ನು ತನ್ನ ವಶಕ್ಕೆ ಒಪ್ಪಿಸುವ ಸಂದೇಶದೊಂದಿಗೆ ಮೇಘ ಭಟ್ಟರನ್ನು ಸಮುದ್ರ ರಾಜನಲ್ಲಿಗೆ ಕಳಿಸಿದನು. ಅಬ್ಬರಿಸುತ್ತಾ ಆರ್ಭಟಿಸುತ್ತಾ ಬಂದ ಮೇಘಭಟರು ಸಮುದ್ರರಾಜನೇ, ಸ್ವರ್ಗಾಧಿಪತಿಯು ಮೈನಾಕ ಗಿರಿಯನ್ನು ಒಳ್ಳೆ ಮಾತಿನಿಂದ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಸಂದೇಶ ಕಳಿಸಿದ್ದಾನೆ. ನಾವು ಅವರ ದೂತರು, ಹಠ  ಮಾಡದೇ ನಿನ್ನಾಶ್ರಯ ಪಡೆದ ಆ ವೈರಿಯನ್ನು ನಮಗೆ ಒಪ್ಪಸದೇ  ಇದ್ದಲ್ಲಿ ನಿನ್ನ ಬಲವನ್ನು ಮುರಿಯಬೇಕಾದೀತು. ನಿನ್ನ ಪ್ರಾಣವನ್ನೇ  ನಿರ್ದಯವಾಗಿ ತೆಗೆಯಬೇಕಾಗುತ್ತದೆ. ವಿನಾಕಾರಣ ದೇವೇಂದ್ರನ ಅವಕೃಪೆಗೆ ಪಾತ್ರನಾಗ ಬೇಡ ಅಂತ ಉಗ್ರ ಕಣ್ಣುಗಳಿಂದ ಖಟಿಲ್ ಖಟಿಲ್  ಅಂತಾ ಹಲ್ಲುಗಳನ್ನು ಕಡಿಯುತ್ತಾ ಎಚ್ಚರಿಸಿದರು. ಈ ಪ್ರಕಾರ ಗುಡುಗು ಮಿಂಚು ಗಳಲ್ಲಿ ಅಡಗಿದ ರಭಸತೆ  ಯನ್ನು ವೀರರಸಾನ್ವಿತ ಪದವಾಗಿರುವದು ಮತ್ತು ಉತ್ಪ್ರೇಕ್ಷಾಲಂಕಾರವಾಗಿದೆ ಅಂತಾ ತಿಳಿಸಿದ ಸಿದ್ಧನನ್ನು ಕುರಿತು ಆ ಕಾವ್ಯಜ್ಞನು, ಹೌದು ಹೌದು ನೀವು ಹೇಳಿದ್ದು ನಿಜವಾಗಿದೆ. ನನ್ನಲ್ಲಿಯ ಮದವಿಳಿಯಿತು. ಪೌರುಷ್ಯದಿಂದ ಹೇಳುವ ನನ್ನ ಭಾವನೆ ಅವರ್ಣನೀಯವಾಗಿದೆ. ನೀನು ಸರ್ವಜ್ಞನಿರುವಿ ಅಂತಾ ವಂದಿಸಿ ತೆರಳಿದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧನು ಸಾಹುಕಾರನ ಮನೆ ಪ್ರವೇಶಿಸಿ ಅದನ್ನು ಧರ್ಮಶಾಲೆ ಅಂತ ಕರೆದಿದ್ದು, ಅಲ್ಲಿ ಚದುರಂಗದಾಟವಾಡಿ ಗೆದ್ದು, ಅದರ ಲಕ್ಷಾರ್ಥ ವಿವರಿಸಿದ್ದು 

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ