ಸಾಹುಕಾರನ ಮನೆಯನ್ನು ಧರ್ಮಛತ್ರ ಎಂದು ಕರೆದ ಸಿದ್ಧರು
✡️
ಬಹಳೇ ಮಳೆ ಬಂದು ಆ ದೇವಾಲಯ ಸೋರಹತ್ತಲು ಸಿದ್ದನು ಅಲ್ಲಿಂದ ಎದ್ದು ಊರೊಳಗೆ ಬಂದನು. ಶ್ರೀಮಂತನ ಮನೆಯಲ್ಲಿ ಪ್ರವೇಶಿಸಿ ಕೂಡ್ರುವಾಗ ಕಾವಲು ಗಾರನು ಸಿದ್ಧನನ್ನು ಕುರಿತು ಗದರಿಸುತ್ತಾ 'ಎಲಾ ಇದು ಸಾಹುಕಾರನ ಮನ, ನೀನೇಕೆ ಇಲ್ಲಿಗೆ ಬಂದಿರುವಿ ಹೇಳು ಇಲ್ಲವಾದರೆ ನಿನ್ನ ಪರಿಸ್ಥಿತಿ ನೆಟ್ಟಗಾಗಲಾರದು' ಅಂತಾ ಜೋರಾಗಿ ಮಾತನಾಡಿದರು. ಅದಕ್ಕೆ ಸಿದ್ದನು , ಈ ಸ್ಥಳವು ಸಂಚಾರಿಗಳಿಗೆ ಇಳಿದು ಕೊಳ್ಳುವ ಧರ್ಮಶಾಲೆಯಾಗಿರುವದು. ನಾನೊಬ್ಬ ಸಂಚಾರಿ ಇದ್ದು ಅಲ್ಲಿ ಕೆಲಕಾಲ ಉಳಿದುಕೊಂಡು ಮತ್ತೆ ಪ್ರಯಾಣ ಮಾಡುವೆ ಅಂತ ಉತ್ತರಿಸಿದನು. ಕಾವಲುಗಾರನು ಸಿದ್ದನಿಗೆ ಅಯ್ಯಾ ಮೂರ್ಖಾ ಸಾಕು ನಿನ್ನ ಮಾತು ಅನ್ನಲು ಸಿದ್ದನು ಹೇ ಕಾವಲುಗಾರನೇ ನೀನೇ ಮೂರ್ಖನಿರುವಿ. ಮೊದಲಿಗೆ ಈ ಸದನದಲ್ಲಿ ಯಾರು ಇದ್ದರು ಅಂತಾ ಕೇಳಲು ನೀನು ಇಲ್ಲಿ ಸಾಹುಕಾರನ ಅಜ್ಜ ಇದ್ದನೆನ್ನುವಿ. ನಂತರ ಅವನ ಮಗ, ನಂತರ ಮೊಮ್ಮಗ, ಹೀಗೆ ಹಳಬರು ಹೋಗಿ ಹೊಸಬರು ಬಂದು ಹೋಗುತ್ತಿರುವರು. ಧರ್ಮಶಾಲೆಯಲ್ಲಿ ನಿರಂತರ ಹಳಬರು ಹೋಗಿ ಹೊಸಬರು ಬಂದು ಹೋಗುತ್ತಾರೆ. ಕಾರಣ ಈ ಸದನಕ್ಕೂ ಧರ್ಮಶಾಲೆಗೆ ಯಾವುದೇ ಭೇದವಿಲ್ಲ. ಇದನ್ನು ತಿಳಿದ ವಿಚಾರ ಮಾಡದೆ ನನಗೆ ನೀನು ಮೂರ್ಖ ಅಂತಾ ಕರೆಯುತ್ತಿರುವಿ. ನಿಜವಾದ ತಿಳುವಳಿಕೆಯಿಲ್ಲದ ನೀನೇ ಮೂರ್ಖನಿರುವಿ ಅಂತಾ ಉಚ್ಚಸ್ವರದಿಂದ ಸಿದ್ಧನು ಮತ್ತು ಆ ಕಾವಲು ಗಾರನ ನಡುವೆ ವಾದ - ವಿವಾದ ನಡೆಯಿತು. ಇದನ್ನು ಕೇಳಿದ ಸಾಹುಕಾರನು ಅಲ್ಲಿಗೆ ಬಂದನು. ಕಾವಲುಗಾರನನ್ನು ತಡೆದನು. ಸಿದ್ದನ ದರ್ಶನ ಮಾತ್ರದಿಂದ ಆ ಸಾಹುಕಾರನಲ್ಲಿ ವಿವೇಕ ಜಾಗೃತಿಯಾಗಿ ಈತನ ನಡೆ ನುಡಿಯ ಗಾಂಭೀರ್ಯತೆ ಕಂಡಲ್ಲಿ ಈತನು ಯತಿವರನಿದ್ದು ನಮ್ಮಲ್ಲಿ ಪ್ರಪಂಚಾಕಾರ ವಿಷಯೋಪಭೋಗಗಳ ಕ್ಷಣಿಕ ಸುಖದಲ್ಲಿಯ ವೃತ್ತಿಯನ್ನು ಪರಿವರ್ತನೆಗೊಳ್ಳಲು ವೈರಾಗ್ಯಕ್ಕೆ ಕಾರಣವಾದ ಬೋಧಪರ ನುಡಿಗಳನ್ನು ಆಡಿ ನಮಗೆ ಗುರುಗಳಾಗಿ ಬಂದಿರುವರು ಅಂತಾ ನಯ ವಿನಯ ಭಯ ಭಕ್ತಿಯಿಂದ ಕೈ ಜೋಡಿಸಿ ಹೇ ಯತಿವರ್ಯ, ಒಂದು ದಿವಸ ಈ ಸದನದಲ್ಲಿ ತಮ್ಮ ವಾಸ್ತವ್ಯ ಮಾಡಬೇಕೆಂದು ಪ್ರಾರ್ಥಿಸಿದನು. ಆಗ ಸಿದ್ದ ಭಾರತಿಯು ಆತನನ್ನು ಕುರಿತು ಭೂಮಿ ಎಂಬ ಸದನದಲ್ಲಿ ತಮ್ಮ ಇಡೀ ಆಯುಷ್ಯವನ್ನು ಕಳೆದರೂ ಅದೊಂದು ಕ್ಷಣಿಕವಾದುದು. ಧರ್ಮಶಾಲೆಯಂತಿರುವ ಈ ಮನೆಯನ್ನು ನೀನೇ ಒಂದು ದಿವಸ ಬಿಟ್ಟು ಹೋಗುವಾಗ ನಾನೆಂತು ಇಲ್ಲಿ ಇರಲು ಸಾಧ್ಯ ಅಂತಾ ನುಡಿದನು. ಆಗ ಧನಿಕರು ಗುರುಗಳೇ, ತಾವು ಹೇಳಿದ್ದದು ಸತ್ಯ ಅನ್ನುತ್ತಾ ಗುರುಗಳ ಕರಪಿಡಿದು ತನ್ನ ಮೇಲಂತಸ್ತಿಗೆ ಕರೆದೊಯ್ದನು. ವೈಭವಪೂರ್ಣ ಆ ಅಂತಸ್ತಿನಲ್ಲಿ ಧನಿಕನ ಸುತರು ತಮ್ಮ ಗೆಳೆಯರ ಕೂಡ ಚದುರಂಗದಾಟ ಆಡುತ್ತಿದ್ದರು. ಅಲ್ಲಿಗೆ ಹೋಗಿ ಸಿದ್ದನೂ ಆಟ ಆಡತೊಡಗಿದರು.
🕉️ ಚದುರಂಗದಾಟದಲ್ಲಿ ಗೆದ್ದ ಸಿದ್ದನು ಲಕ್ಷಾರ್ಥ ಹೇಳಿದ್ದು 🌺
ಚದುರಂಗದಾಟದಲ್ಲಿ ಚತುರತೆಯಿಂದ ಒಮ್ಮೆ ಕಾಲಾಳು, ಒಮ್ಮೆ ಕುದುರೆ, ರಾಜನನ್ನು ಬಿಡುತ್ತಾ ಸಿದ್ದನು ಎದುರಾಳಿಗೆ ದಿಗ್ಭ್ರಾಂತಿಯನ್ನುಂಟು ಮಾಡುತ್ತಿದ್ದನು. ಎದುರಾಳಿಯ ಆನೆಯ ಬಳಿಯಲ್ಲಿಯ ರಾಜನ ಮನೆಗೆ ದೃಷ್ಟಿ ಬೀರಿ, ನಿಮ್ಮ ರಾಜನಿಗೆ ಚೆಕ್ಕು ಅಂತ ತನ್ನ ಕುದುರೆಯನ್ನು ಮುಂದೆ ಬಿಟ್ಟನು. ಮೇಲ್ಮನೆಯಲ್ಲಿಯ ಮಂತ್ರಿಯನ್ನು ಕುದುರೆಯಿಂದ ಹಾರಿಸಿ ರಾಜನನ್ನು ವಶಪಡಿಸಿಕೊಂಡು ಸಿದ್ದನು ಆಟದಲ್ಲಿ ವಿಜೇತನಾದನು. ಯತಿಯಾದ ಸಿದ್ದನು ಆಟದಲ್ಲಿ ತೋರಿಸಿದ ಅನುಭವಪೂರ್ಣ ಜಾಣ್ಮೆಯನ್ನು ಕಂಡು ಎದುರಾಳಿ, ಧನಿಕ ಮುಂತಾದವರೆಲ್ಲರೂ ಚಕಿತರಾದರು.
ಚದುರಂಗದಾಟದಲ್ಲಿ ವಿಜಯ ದುಂದುಭಿ ಬಾರಿಸಿದ ಸಿದ್ದ ಭಾರತಿಯು ಚದುರಂಗ ದಾಟದ ಲಕ್ಷಾರ್ಥವನ್ನು ಹೇಳತೊಡಗಿದನು. ಹೇ ಧನಿಕನೆ, ಮತ್ತು ಚದುರಂಗ ಆಟದ ಪ್ರೀಯರೇ ಚಿತ್ತವಿಟ್ಟು ಕೇಳಿರಿ. ಹೃದಯದಲ್ಲಿ ತಿಳಿದುಕೊಂಡು ಆಟ ಆಡಬೇಕು. ದಿಟ್ಟನಾದ ತಾನು ಅಧ್ಯಾತ್ಮವೆಂಬ ಪಟವೆಂದೂ, ಅದರಲ್ಲಿ ಅಷ್ಟ ಪ್ರಕೃತಿಗಳೆ ಮನೆಗಳೆಂದೂ, ತತ್ವ ವಿಚಾರವೇ ಚದುರಂಗದಾಟದಲ್ಲಿ ಜೀವನಮತಿಯೇ ರಾಜನೆಂದು, ಕುಟಿಲವಾದ ಮೋಹವೇ ಮಂತ್ರಿಯೆಂದು, ಸ್ಥೂಲ ಸೂಕ್ಷ್ಮ ಎಂಬ ಮದವೆ ಎರಡು ಆನೆಗಳೆಂದು, ಕುಮತಿಗಳೆ ಒಂಟಿಗಳೆಂದೂ, ಸ್ಥೂಲ ಸೂಕ್ಷ್ಮ ರೂಪ ಪ್ರವೃತ್ತಿಗಳೇ ಕುದುರೆಗಳೆಂದು, ದುರ್ಗುಣಾದಿ ಎಂಟು ವೃತ್ತಿಗಳೆ ಕಾಲಾಳೆಂದು ಈ ಪ್ರಕಾರ ಆಟದ ಒಂದು ಭಾಗ ಕಲ್ಪಿಸಬೇಕು. ಇದರ ಎದುರಾಳಿ ಪಕ್ಷದಲ್ಲಿ ಪ್ರಕಾಶಮಾನವಾದ ಸುಮತಿಯೇ ರಾಜನೆಂದು, ಶ್ರೇಷ್ಠವಾದ ವಿವೇಕವೇ ಮಂತ್ರಿಯೆಂದು, ಸ್ಥೂಲ, ಸೂಕ್ಷ್ಮ ಸರಸವಾದ ನಿಗರ್ವತನವೇ ಎರಡು ಗಜಗಳೆಂದು, ಮೆರೆವ ಸ್ಥೂಲ ಸೂಕ್ಷ್ಮಮತಿಯೇ ಎರಡು ಒಂಟಿಗಳೆಂದು ನಿತ್ಯ ಸೂಕ್ಷ್ಮ ಸ್ಥೂಲರೂಪ ನಿವೃತ್ತಿಗಳೇ ಎರಡು ಕುದುರೆಗಳೆಂದು, ಸದ್ಗುಣಾದಿಗಳೇ ಎಂಟು ಕಾಲ್ದಳಗಳೆಂದು ಇವೆಯೆಂದು ಭಾವಿಸಬೇಕು. ಈ ಪ್ರಕಾರ ರಚನೆಗೊಂಡ ಚದುರಂಗದಾಟದ ಒಂದು ಬದಿಗೆ ಗುರುವು ಮತ್ತು ಎದುರಾಳಿ ಶಿಷ್ಯನು ಹರ್ಷದಿಂದ ಪ್ರಶ್ನೋತ್ತರವೆಂಬ ಕಾಯಿಗಳನ್ನು ನಡೆಸಬೇಕು.
ಆಗ ಗುರುಗಳು ದುರ್ಗುಣಗಳೆಂಬ ಕಾಲ್ದಳಗಳೆಂಬ ವೃತ್ತಿಗಳನ್ನು ಹಾರಿಸುತ್ತಾ ಕ್ಷಣಕ್ಷಣಕ್ಕೆ ಜೀವನು ಭ್ರಾಂತಿಮಯನೆಂದು ತಿಳಿಸಿಕೊಡುವುದೇ ಶಾಹಾ, ಆನೆ ಕುದುರೆಗಳನ್ನು ಕಡಿಯುತ್ತಾ ಶಿಷ್ಯನನ್ನು ನಿರುತ್ತರ ಗೊಳಿಸಬೇಕು, ಕರುಣಾರಸಭರಿತ ಗುರುನಾಥನು ಸಾಕಷ್ಟು ಬೋಧಿಸಿದರು ಶಿಷ್ಯನಿಗೆ ಅರ್ಥವಾಗದಿದ್ದರೆ ಆಟವನ್ನು ಕೆಡಿಸಿಕೊಂಡು ವ್ಯರ್ಥವಾಗುವುದು. ಜೀವನ ಎಲ್ಲಾ ಸಮೂಹವನ್ನು ನಾಶ ಮಾಡಿ ಅವನ ಪ್ರಪಂಚಾಕಾರ ವೃತ್ತಿಯಿಂದ ಪರಾವರ್ತನೆ ಮಾಡಿಸಿ ಜೀವನನ್ನು ಪರಮಾತ್ಮನಲ್ಲಿ ಐಕ್ಯಗೊಳಿಸುವದೇ ರಾಜನನ್ನು ವಶಪಡಿಸಿಕೊಂಡು ಚದುರಂಗದಾಟವನ್ನು ಗೆದ್ದಂತಾಗುವಧು. ಆ ನಂತರ ಪಟ ಕಾಯಿಗಳನ್ನು ಧೈರ್ಯವಾಗಿ ಗುರುವಿನ ಚರಣಗಳಲ್ಲಿ ಅರ್ಪಿಸಿ ಜೀವನ್ಮುಕ್ತಿ ವಿಲಕ್ಷಣಾನಂದ ಪಡೆಯುವದೇ ಈ ಆಟದ ಮುಕ್ತಾಯವಾದಂತೆ. ಅಲ್ಲಿ ತೋರತಕ್ಕ ಆನಂದವೇ ಚದುರಂಗದಾಟದ ಫಲಶೃತಿಯಾಗಿದೆ. ಈ ಪ್ರಕಾರದ ಲಕ್ಷಾರ್ಥ ದಿಂದ ಆಟವಾಡದೇ ಸಮಯಹಣಕ್ಕಾಗಿ ಆಡುವ ಆಟದ ಫಲಶೃತಿಯು ವ್ಯಾಜ್ಯವಾಗುವಧು ಅಂತಾ ಸಿದ್ದಭಾರತಿಯು ಅವರೆಲ್ಲರೂ ತಲೆದೂಗುವಂತೆ ಹೇಳಿದನು. ಈತನ ಮಹಾಜ್ಞಾನಿ ಅಂತಾ ಅವರೆಲ್ಲರೂ ವಂದನೆಗಳನ್ನರ್ಪಿಸಿದರು. ಭೋಜನಕ್ಕಾಗಿ ಎಲ್ಲರೂ ಮೇಲ್ಮಹಡಿಯಿಂದ ಕೆಳಗೆ ಇಳಿಯುತ್ತಾ ಬರುವಾಗ ಒಂದು ಅಳುವ ಧ್ವನಿಯು ಕೇಳತೊಡಗಿತು. ಅದಕ್ಕೆ ಇದೇನು ಅಂತಾ ಸಿದ್ದನು ಕೇಳಲು, ಆ ಧನಿಕರು ಗುರುವರ್ಯ, ನನ್ನ ಮಾತೋಶ್ರಿಯು ಮೂರು ತಿಂಗಳುಗಳಿಂದ ಒಂದೇ ಸವನೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಈಗ ಅದು ಉಲ್ಬಣಾವಸ್ಥೆಯ ತಲುಪಿರುತ್ತದೆ. ಸಾಕಷ್ಟು ಔಷಧೋಪಚಾರ ಮಾಡಿದರೂ ಗುಣಮುಖವಾಗಿಲ್ಲ. ಈ ಬಾಧೆಯನ್ನು ತಡೆದುಕೊಳ್ಳಲಾರದಲೇ ಗೋಗರೆಯುತ್ತಿರುವಳು. ತಮ್ಮಿಂದೇನಾದರೂ ಉಪಾಯವಿದ್ದಲ್ಲಿ ತಿಳಿಸಿರಿ ಅಂತಾ ಕೇಳಿಕೊಂಡನು.
🕉️ ಧನಿಕನ ತಾಯಿಯ ಉದರಯೋಗ ಗುಣಪಡಿಸಿದ್ದು ✡️
ಆಗ ಸಿದ್ಧಭಾರತಿಯು ಸಾಹುಕಾರನನ್ನು ಕುರಿತು ಹೇ ಲಕ್ಷ್ಮೀಪತಿಯೇ ಹೆದರಬೇಡಾ, ನಡೆ ಆ ವೃದ್ಧ ತಾಯಿಯ ಬಳಿ ಹೋಗೋಣ ಅಂತ ಬಂದನು, ಆ ತಾಯಿಯನ್ನು ನೆಟ್ಟ ದೃಷ್ಟಿಯಿಂದ ನಿರೀಕ್ಷಿಸಿದನು. ನನ್ನ ದಿವ್ಯದೃಷ್ಟಿಯಿಂದ ಸಿದ್ಧನು ಹೇ ಧನಿಕನೆ ಈ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವಾಗಿ ಈ ತಾಯಿಯು ಈ ಜನ್ಮದಲ್ಲಿ ಈ ರೋಗದಿಂದ ಪರಿಪರಿಯಿಂದ ಬಾಧೆಯನ್ನು ಅನುಭವಿಸುತ್ತಿರುವಳು. ಕರ್ಮಜನ್ಯವಾದ ಈ ರೋಗಕ್ಕೆ ಪರಿಹಾರವೆಂದರೆ ಶಂಕರನ ನಾಮಸ್ಮರಣೆ, ಮಾನಸಪೂಜೆ ಮತ್ತು ಮಹಾತ್ಮರ ಪಾದೋದಕದಿಂದ ಪರಿಹಾರವಾಗುವುದು ಅಂತ ಹೇಳಿದನು. ಕೂಡಲೇ ಆ ಧನಿಕನು ಭಕ್ತಿಯಿಂದ ಸಿದ್ದಭಾರತಿಯ ಪಾದಪೂಜೆಯನ್ನು ಮಾಡಿದನು. ಆ ಪಾದೋದಕವನ್ನೇ ಶಿವ ನಾಮಸ್ಮರಣೆ ಮಾಡುತ್ತಾ ಆ ತಾಯಿಯು ಸ್ವೀಕಾರ ಮಾಡಿದಳು. ಮಹಾತ್ಮನ ಪಾದೋದಕವು ಆ ತಾಯಿಯ ಹೊಟ್ಟೆಯಲ್ಲಿ ಸೇರುತ್ತಿರುವಂತೆ ಅಸಹನಾತೀತ ಹೊಟ್ಟೆನೋವು ಅಡಗಿ ಶಾಂತವಾಯಿತು. ಧಿಗ್ಗನೆ ಎದ್ದು ರೋಗ ಪರಿಹಾರ ಮಾಡಿದ ಆ ಸಿದ್ದ ಭಾರತಿಯ ಚರಣಕಮಲಗಳಿಲ್ಲಿ ತನ್ನ ಶಿರೂಕಮಲವನ್ನಿಟ್ಟು ಪ್ರಾರ್ಥಿಸುತ್ತಿರುವಲ್ಲಿ ಆಕೆಯ ನಯನ ಕಮಲಗಳಿಂದ ಆನಂದೋತ್ಸಾಹದ ಅಶ್ರುಧಾರೆ ಇಳಿಯತೊಡಗಿತು. ಗುಣಮುಖವಾಗದೆ ಇದ್ದ ರೋಗ ಪರಿಹಾರವಾಗಿರುವದನ್ನು ಕಣ್ಣುಂಬಾ ಕಂಡ ಉಪಸ್ಥಿತರಿದ್ದವರೆಲ್ಲರೂ ಈತನು ಸಾಕ್ಷಾತ್ ಪರಶಿವನವತಾರಿ ಅಂತಾ ಉದ್ಗಾರಗಳಿಂದ ಆತನ ಚರಣಕಮಲಗಳಲ್ಲಿ ನತಮಸ್ತಕರಾಗಿ ವಂದನೆಗಳನ್ನು ಸಲ್ಲಿಸಿದರು. ನಂತರ ಧನಿಕನು ಮಾಡಿಸಿದ ಮೃಷ್ಟಾನ್ನ ಭೋಜನ ಮಾಡಿ ಎಲ್ಲರೂ ಸಂತೃಪ್ತರಾದರು. ಬಳಿಕ ಆ ಧನಿಕನು ಸಿದ್ದನಿಗೆ ಹಂಸತೂಲಿಕಾ ತಲ್ಪದಲ್ಲಿ ವಿಶ್ರಾಂತಿ ಪಡೆಯಲು ಪ್ರಾರ್ಥಿಸಿದನು. ಮೆತ್ತನೆಯ ಗಾದಿಯಿಂದ ಕೂಡಿದ ಮಂಚದ ಮೇಲೆ ಮಲಗಿಕೊಂಡ ಸಿದ್ಧನು ತನ್ನ ಮನಸ್ಸಿನಲ್ಲಿ ಆಲೋಚನೆ ಮಾಡುತ್ತಾ ನನಗೆ ಈ ಭೂಮಿಯೇ ಮಂಚವಾಗಿದೆ. ಆಕಾಶವೇ ಹೊಂದಿಕೆಯಾಗಿದೆ. ಚಂಚಲರಹಿತ ಅಚಲವಾದ ಮತಿಯೇ ತಲೆದಿಂಬಾಗಿದೆ ಇದು ಸಹಜವಾಗಿವೆ. ಉಳಿದವೆಲ್ಲ ಈಗ ಪ್ರಾಪ್ತಿಯಾದ ಈ ಧನಿಕನ ಹಂಸತೂಲಿಕಾ ತಲ್ಪವು ಪ್ರಾರಬ್ಧವಶದಿಂದ ಭೋಗದಾಯಕವಾಗಿದೆ ಅಂತಾ ಅನ್ನುತ್ತಾ ವಿಶ್ರಮಿಸಿದನು .
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಗಯಾ ಕ್ಷೇತ್ರಕ್ಕೆ ಬರುವ ಮಾರ್ಗದ ಶಿವ ದೇವಾಲಯದಲ್ಲಿ ಸಿದ್ಧನು ಗಾಯಕನಿಗೆ ಗಂಧರ್ವವೇದದ ಸಾರವನ್ನು ಹೇಳಿದ್ದು
ಎಲ್ಲಾ ಕಥೆಗಳ ಲಿಂಕಗಳು
👉 ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
