ಕಾಶಿಯಲ್ಲಿ ನಂಗಾ ಘಾಟದಲ್ಲಿ ಭೈರಾಗಿ ಜೊತೆ ವೇದಾಂತ
🌺ನಂಗಾ ಘಾಟದಲ್ಲಿ ಭೈರಾಗಿಗೆ ಉಪದೇಶ🌺
ನಂಗಾ ಸಂಪ್ರದಾಯದ ಭೈರಾಗಿಯು ಸಂಚರಿಸುತ್ತಾ ನಂಗಾ ಘಾಟದಲ್ಲಿ ವಿಶ್ರಮಿಸಿದ ಸಿದ್ಧನಿರುವ ಸ್ಥಾನಕ್ಕೆ ಆಗಮಿಸಿದನು. ಆಗ ಸಿದ್ಧನನ್ನು ಕುರಿತು ಆ ಭೈರಾಗಿಯು ಹೇ ಸಾಧುವೆ, ಪ್ರಾಪಂಚಿಕ ವಿಷಯಗಳಲ್ಲಿ ಕಡು ಚಿಂತಿತರಾದರು ವಸ್ತ್ರಾದಿಗಳನ್ನು ಧರಿಸಿ ಜಡರಾಗಿರುವರು. ಆದರೆ ಈ ಪ್ರಾಪಂಚಿಕ ವಿಷಯಗಳು ಸುಖಕ್ಕೆ ಕಾರಣವಲ್ಲ ಅಂತಾ ತಿಳಿದ ಸಾಧುಗಳಿಗೆ ತಮ್ಮ ಶರೀರಕ್ಕೆ ವಸ್ತ್ರವು ಅವಶ್ಯವಿಲ್ಲ. ಕಾರಣ ನಿನಗೀಗ ಕೌಪೀನ ಯಾಕೆ ಬೇಕಾಗಿದೆ ಅಂತಾ ಪ್ರಶ್ನಿಸಿದನು. ಆಗ ಸಿದ್ದ ಭಾರತಿ ಆತನನ್ನು ಕುರಿತು ಅಯ್ಯಾ ಬೈರಾಗಿಯೆ ವಸ್ತ್ರ ಧಾರಣ ಬಿಟ್ಟಿರುವವನ ಸ್ಪರ್ಶೇಂದ್ರಿಯ ತನ್ನ ವಿಷಯವನ್ನು ಗ್ರಹಿಸುವ ಕಾಲಕ್ಕೆ ಸುಖ ದುಃಖ ಆಗುವುದೋ ಇಲ್ಲವೋ ಎಂದು ಮರುಸವಾಲು ಮಾಡಿದನು. ಆಗ ಭೈರಾಗಿಯು ಹೇ ಯತಿಯೇ, ಪ್ರಾರಬ್ಬ ವಶದಿಂದ ತನ್ನ ವ್ಯವಹಾರ ನಡೆದಿರಲು ಮೊದಲು ತನ್ನ ಮನಸ್ಸನ್ನು ನಿಗ್ರಹ ಮಾಡಿದವನಿಗೆ ಸುಖ ದುಃಖ ಇರುವುದಿಲ್ಲ ಅಂತ ಉತ್ತರಿಸಿದನು. ಆಗ ಸಿದ್ಧನು ಆತನಿಗೆ ಪುನಃ ಕೇಳಲುದ್ಯುಕ್ತನಾದನು.
ಹೇ ಬೈರಾಗಿಯೆ ಮನೋ ನಿಗ್ರಹವೇ ಸುಖಕ್ಕೆ ಸಾಧನವಾಗಿರಲು ಬಹಿರಂಗ ವಸ್ಯತ್ಯಾಗವು ಹೇಗೆ ಸಾಧನವಾಗುವದು ಎಂದು ಪ್ರಶ್ನಿಸಿದನು. ಈ ಮಾತುಗಳ ರಹಸ್ಯವನ್ನು ತಿಳಿದುಕೊಂಡು ಆ ಭೈರಾಗಿಯು, ಆಶ್ಚರ್ಯಚಕಿತನಾಗಿ ತನ್ನೊಳಗೆ ಈತನು ಮೂಹದಿವಾನಾ - ದಿಲ್ ಶಿಯಾನಾ ಹೈ ಎಂಬಂತೆ ಬಹಿರಂಗವಾಗಿ ಹುಚ್ಚನಂತೆ ಕಾಣುತ್ತಲಿರುವ ಈತನು ಅಂತರಂಗದಲ್ಲಿ ಜಾಣನಾಗಿರುವ ಪರಮ ಬ್ರಹ್ಮಜ್ಞಾನಿ ಯಾಗಿರುವನು ಅಂತಾ ಹರ್ಷೋದ್ಗಾರಗಳಿಂದ ಪ್ರಸನ್ನವದನನಾಗಿ ವಂದನೆಗಳನ್ನು ಅರ್ಪಿಸುತ್ತಾ ಅಲ್ಲಿಂದ ಹೊರಟು ಹೋದನು.
🌺 ವ್ಯಾಸ ಕಾಶಿಯಲ್ಲಿ 🌺
ಅಲ್ಲಿಂದ ಸಿದ್ದನು ಮುಂದೆ ಸಾಗಿ ಕಾಮನಗರವೆಂಬ ವ್ಯಾಸಕಾಶಿಗೆ ಬಂದನು. ಅಲ್ಲಿ ರಾಜನು ನಿರ್ಮಾಣ ಮಾಡಿದ ಮಂದಿರವನ್ನು ನೋಡುತ್ತಾ ಪಕ್ಕದಲ್ಲಿಯ ಕೆರೆಯ ದಂಡೆಯ ಮೇಲೆ ವಿಶ್ರಮಿಸಿದನು. ನಂತರ ಮುಂದೆ ಕಾಣುವ ಗಿರಿಜಾದೇವಿಯ ಮಂದಿರಕ್ಕೆ ಹೋಗಿ ದರ್ಶನ ಪಡೆದು ಆ ಗುಡಿಯ ಒಂದು ಸ್ಥಾನದಲ್ಲಿ ನಿರ್ವಿಕಲ್ಪನೆಯಿಂದ ಆಸೀನನಾದನು. ಅಷ್ಟರಲ್ಲಿ ಸ್ನಾನ, ಸಂಧ್ಯಾವಂದನೆ ಪೂರೈಸಿ ಆನಂದದಿಂದ ಪತ್ರ, ಪುಷ್ಪ ನೈವೇದ್ಯಗಳನ್ನು ಅಲ್ಲಿಯ ಅರ್ಚಕನು ತೆಗೆದುಕೊಂಡು ಠಣ್ ಠಣ್ ಜಿಗಿಯುತ್ತಾ ನಾಮಸ್ಮರಣೆ ಮಾಡುತ್ತಾ ದೇವಿಗೆ ಅರ್ಚನೆ ಮಾಡಿದನು. ಅಲ್ಲಿಯೇ ಕೂತ ಸಿದ್ಧನನ್ನು ಕಂಡ ಆ ಪೂಜಾರಿಯು ಪಾಪ ಅನ್ನವಿಲ್ಲದೆ ಎಷ್ಟು ದಿನಗಳಿರಬಹುದು. ಈ ಯತಿಯ ಹೊಟ್ಟೆಯು ಬೆನ್ನಿಗೆ ಹತ್ತಿಕೊಂಡಂತಾಗಿದೆ ಅಂತಾ ಮರಗುತ್ತಾ ಹೇ ಯತಿಯೇ, ನೀನಾರು? ಎಂದು ಪ್ರಶ್ನಿಸಿದನು. ಅದಕ್ಕೆ ಸಿದ್ದನು ಆ ಪೂಜಾರಿಯನ್ನು ಕುರಿತು ನೀನು ನಿನ್ನನ್ನು ತಿಳಿಯಲು ನೀನಾರು ಇರುವಿಯೋ ಅವನೇ ನಾನಿರುವೆ ಅಂತ ಹೇಳಿದನು. ಅದಕ್ಕೆ ಆ ಪೂಜಾರಿಯು ಅದಿರಲಿ, ಸಮಯ ಬಹಳವಾಗಿದೆ ನನಗೆ ಹಸಿವಾಗಿದೆ, ಹಸಿವೆ ಬಾಧೆ ನಾನು ತಡೆದುಕೊಳ್ಳಲಾರೆ. ಅಯ್ಯಾ ಯತಿಯೇ, ನೀನು ಈಗ ಭೋಜನ ಮಾಡುವಿಯೋ ಹೇಳು ಅಂತಾ ಕೇಳಿದನು. ಅದಕ್ಕೆ ಸಿದ್ದನು, ಹೇ ಪೂಜಾರಿಯೆ, ನೀನು ಭೋಜನ ಮಾಡುವವನಾದರೆ ನನಗೂ ಭೋಜನ ಮಾಡಿಸು ಅಂತಾ ಹೇಳಲು ಅದಕ್ಕೆ ಪೂಜಾರಿಯು ಹಾಗಾದರೆ ನನ್ನ ಜೊತೆಗೆ ನಮ್ಮ ಮನೆಗೆ ಬಂದು ಭೋಜನವನ್ನು ಸ್ವೀಕರಿಸಬೇಕು ಅಂತಾ ಕೇಳಿಕೊಂಡನು. ಅದಕ್ಕೆ ಸಿದ್ದನ ಅಯ್ಯಾ ಅರ್ಚಕನೆ ನೀನು ಮನೆಗೆ ಕರೆದುಕೊಂಡು ಹೋಗಿ ಭೋಜನ ಮಾಡಿಸಿದ ಫಲಕ್ಕಿಂತ ಅತ್ಯಧಿಕವಾಗಿ ಫಲವು ಇಲ್ಲಿಯೇ ಅನ್ನವನ್ನು ತಂದು ಭೋಜನ ಮಾಡಿಸಲು ದೊರೆವುದು ಅಂತಾ ಹೇಳಿದನು. ಭರದಿಂದ ಆ ಅರ್ಚಕನು ಮನೆಗೆ ಹೋಗಿ ನಾನಾ ತರದ ಪಂಚ ಪಕ್ವಾನ್ನಗಳನ್ನು ತಂದು ಈರ್ವರೂ ಕೂಡಿ ಭೋಜನ ಮಾಡುತ್ತಾ ಅಲ್ಲಿಗೆ ಬಂದ ಅತಿಥಿಗಳಿಗೂ ಭೋಜನ ಮಾಡುತ್ತಾ ತೃಪ್ತಿ ಹೊಂದಿದರು.
ನಂತರ ಈರ್ವರೂ ಕೂಡಿ ನಡೆಯುತ್ತಾ ಹೊಳೆಯ ದಂಡೆಯಲ್ಲಿರುವ ವ್ಯಾಸ ನಿರ್ಮಿತ ಶಿವಲಿಂಗದ ದರ್ಶನ ಪಡೆದರು. ಆಗ ಅರ್ಚಕರು ಸಿದ್ಧನನ್ನು ಕುರಿತು ಹೇ ಯತಿಗಳೇ , ಮಹಾವಿದ್ಯಾ ಪಾರಂಗತ ಪಂಡಿತನಾದ ವ್ಯಾಸನು ಶಿವನನ್ನು ನಿಂದನೆ ಮಾಡಿ ತನ್ನ ಹಸ್ತವನ್ನು ಕಳೆದುಕೊಳ್ಳಲು ಆತನು ಮೂಢನೇನು ಅಂತಾ ಪ್ರಶ್ನಿಸಿದನು.
ಆಗ ಸಿದ್ದನು ಆ ಪೂಜಾರಿಯನ್ನು ಕುರಿತು ಹೇ ಅರ್ಚಕನೆ , ಮೊದಲಿಗೆ ವ್ಯಾಸನು ಕಾಶಿಗೆ ಬಂದಾಗ ಭಿಕ್ಷಾನ್ನಕ್ಕಾಗಿ ಮೂರು ದಿನಗಳವರೆಗೆ ಮನೆ ಮನೆಗೆ ಹೋದನು. ಆದರೆ ಅವನಿಗೆ ಯಾರೂ ಅನ್ನವನ್ನು ನೀಡಲಿಲ್ಲ. ತುತ್ತು ಅನ್ನ ದೊರೆಯದೆ ಹಸಿವೆಯ ಬಾಧೆ ತಾಳಲಾರದೆ ಬಡಬಡಿಸುತ್ತಾ ಲಕ್ಷ್ಮೀಪತಿಯೆ ನನ್ನನ್ನು ರಕ್ಷಿಸುವನು ಅಂತಾ ಅಂದುಕೊಳ್ಳುತ್ತಾ ಅವನಿಗೆ ಭಿನ್ನವಾದವನು ಗಿರಿಜಾಧರನು. ಈ ಗಿರಿಜಾಧರನ ನಗರವಾದ ಈ ಕಾಶಿಯಲ್ಲಿ ಗಿರಿಧರನೇ ಬಿಕ್ಷೆ ಬೇಡುತ್ತಿರಲು ಇಂತಹ ಭಿಕ್ಷುಕನು ತನ್ನ ಭಕ್ತರಿಗೆ ಅನ್ನ ಕೊಡಬಲ್ಲನೆ ಇದು ಸಾಧ್ಯವಿಲ್ಲ. ಮೇಲಾಗಿ ಈ ಗಿರಿಜಾಧರನ ಊರು ಸ್ಮಶಾನವು, ಇದಕ್ಕೆ ಹರಿಶ್ಚಂದ್ರನೆ ಸಾಕ್ಷೀಭೂತನಾಗಿರುವನು. ಸ್ಮಶಾನದಲ್ಲಿ ಅನ್ನ ಸಿಗಬಲ್ಲದೇ ಅಂತ ನಾನಾ ರೀತಿಯಿಂದ ಕೈಯೆತ್ತಿ ಸಾರಿ ಸಾರಿ ಹರನನ್ನು ಕುರಿತು ನಿಂದೆ ಮಾಡುತ್ತಾ ಜರಿಯತೊಡಗಿದನು. ಆಗ ಕೋಪಾವಿಷ್ಟನಾದ ಹರನು ಉಗ್ರನಾಗಿ ನಿಂದೆ ಮಾಡಿ ಸಾರಿ ಸಾರಿ ಹೇಳಲು ಮುಂದಾದ ವ್ಯಾಸಋಷಿಯು ಎತ್ತಿದ ಬಲಗೈ ಹರಿದು ಬೀಳಲಿ ಮತ್ತು ಶೋಭಾಯಮಾನವಾದ ಈ ಕಾಶಿಕ್ಷೇತ್ರದಿಂದ ವ್ಯಾಸನೇ ಹೊರಹೋಗು ಅಂತ ಶಾಪ ನೀಡಿದ ಕೂಡಲೇ ವ್ಯಾಸನ ಕರವು ಕತ್ತರಿಸಲ್ಪಟ್ಟಿತು. ಅಲ್ಲಿಂದ ವ್ಯಾಸನು ಹೊರಟು ಈ ಸ್ಥಳಕ್ಕೆ ಬಂದು ಒಂದು ನಗರವನ್ನು ನಿರ್ಮಾಣ ಮಾಡಿ, ಈ ಪವಿತ್ರವಾದ ಲಿಂಗ ಪ್ರಾಣ ಪ್ರತಿಷ್ಠೆ ಮಾಡಿದನು. ಹರನ ನಿಂದನೆಯಿಂದುಂಟಾದ ದೋಷ ಪರಿಹಾರಕ್ಕಾಗಿ ವ್ಯಾಸನು ಹನ್ನೆರಡು ವರ್ಷಗಳ ದೀರ್ಘಾವಧಿ ಘೋರ ತಪಸ್ಸನ್ನಾಚರಿಸಿ, ಪರ ಶಿವನ ಕೃಪೆಗೆ ಪಾತ್ರನಾದ
ಬಳಿಕ ಕತ್ತರಿಸಲ್ಪಟ್ಟ ಆತನ ಕರವು ಚಿಗಿಯಿತು. ಹರಿ ಮತ್ತು ಹರನಲ್ಲಿ ಭಿನ್ನಭೇದ ಭಾವ ನಾಶವಾಯಿತು. ಆನಂತರ ವ್ಯಾಸಮಹರ್ಷಿಯು ಬ್ರಹ್ಮಸೂತ್ರವನ್ನು ರಚಿಸಿದನು.
ಮಹಾನ್ ಪರಾಕ್ರಮಿಯಾದ ಹಿರಣ್ಯಕಶ್ಯಪನು ಹರನನ್ನು ಸ್ತುತಿಸಿ ಹರಿಯ ಕುರಿತು ಹೀನಾಯವಾಗಿ ನಿಂದನೆ ಮಾಡಿದ್ದರಿಂದ ಅವನಿಗೂ ಉಗ್ರನರಸಿಂಹನಿಂದ ಮರಣವಾಯಿತು. ದೇವತ್ವದಲ್ಲಿ ಭಿನ್ನ ಭೇದ ಮಾಡುವವರೆಲ್ಲರೂ ಇದೇ ಪರಿಣಾಮಗಳಿಗೆ ತುತ್ತಾಗುವರು. ಕಾರಣ ದೇವದೇವರಲ್ಲಿ ಭೇದ ಮಾಡಕೂಡದು.
ಒಬ್ಬ ತಂದೆಗೆ ಅನೇಕ ಮಕ್ಕಳಿರುವ ಅವರಲ್ಲಿ ಆಟವಾಡುವಾಗ ಜಗಳ ಬಂದು ತಮ್ಮ ತಮ್ಮಲ್ಲಿ ನಿಮ್ಮಪ್ಪ ಕಳ್ಳನು, ನಮ್ಮಪ್ಪ ಒಳ್ಳೆಯವನು ಅಂತಾ ಬಡಿದಾಡಿವುದನ್ನು ಕಂಡು ತಂದೆಯು ಅವರಿಗೆ ದಂಡಿಸಿ ಸನ್ಮಾರ್ಗಕ್ಕೆ ಹಚ್ಚಿವನು. ಅದರಂತೆ ದೇವರೊಬ್ಬನೇ ಇರುತಿರ್ದು ಅವರಿಗೆ ಸಾವಿರಾರು ನಾಮಗಳಿವೆ. ಇದನ್ನು ತಿಳಿದು ಕೊಳ್ಳದಲೇ ಭ್ರಮೆಯಿಂದ ದೇವದೇವರಲ್ಲಿ ಭೇದ ಮಾಡಿದಲ್ಲಿ ಆ ದೇವನೇ ಅವರಿಗೆ ದಂಡಿಸುವನು. ಕಾರಣ ಭೇದ ಭಾವವನ್ನು ತೊರೆಯಬೇಕು. ಇಂತಹ ಪರಮ ವ್ಯಾಸ ಋಷಿಗೆ ದಂಡನೆಯಾದ ಮೇಲೆ ಭೇದವಾದಿಗಳಿಗೆ ದೇವರ ರಕ್ಷಣೆಯು ದೊರೆಯ ಲಾರದು. ದುಃಖದಾಯಕ ಭೇದವನ್ನು ತೊರೆಯಬೇಕೆಂಬ ಸಧ್ಬೋಧೆಯನ್ನು ಜನರಿಗೆ ತಿಳಿಯಲೆಂದು ವ್ಯಾಸನು ಈ ಕಾರ್ಯವನ್ನು ಮಾಡಿ ತೋರಿಸಿದರು. ಈ ಅಂಶವನ್ನು ಗಮನಿಸಲು ವ್ಯಾಸನು ಮೂಢನಾಗಬಲ್ಲನೆ ಎಂದು ಸಿದ್ಧನು ತಿಳಿಸಿದನು. ಆ ಅರ್ಚಕನು ಹರ್ಷದಿಂದ ನಮಿಸಿ ಹೋದನು. ನಂತರ ಸದ್ಗುರುವನ್ನು ಸ್ಮರಣೆ ಮಾಡುತ್ತಾ ಸಿದ್ಧನು ಕಾಶಿಗೆ ಹತ್ತಿರವಿರುವ ಪಂಚಕೋಶ ಯಾತ್ರೆಗೆ ಹೋದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಕಾಶೀಕ್ಷೇತ್ರದ ಅನ್ನಪೂರ್ಣಾ ಛತ್ರದಲ್ಲಿ ಸಿದ್ಧನು ಉಂಡ ಎಂಜಲು ಎಲೆಯನ್ನು ಸಾಕ್ಷಾತ್ ಪಾರ್ವತಿ ಪರಮೇಶ್ವರರು ತೆಗೆದದ್ದು.
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
