ಕಾಶೀಕ್ಷೇತ್ರದ ಅನ್ನಪೂರ್ಣಾ ಛತ್ರದಲ್ಲಿ ಸಿದ್ಧನು ಉಂಡ ಎಂಜಲು ಎಲೆಯನ್ನು ಸಾಕ್ಷಾತ್ ಪಾರ್ವತಿ ಪರಮೇಶ್ವರರು ತೆಗೆದದ್ದು.
ಮಾಲಾಪುರಿ ಭೋಜನ
ಕಾಶೀ ಕ್ಷೇತ್ರದಲ್ಲಿ ಪ್ರಸಿದ್ಧವಾದ ಅನ್ನಪೂರ್ಣಾ ಛತ್ರದಲ್ಲಿ ಮಾಲಪುರಿ ಅನ್ನಸಂತರ್ಪಣೆ ಇರುವುದನ್ನು ಕೇಳಿ ಹಲವು ಬ್ರಾಹ್ಮಣರು ಮಾತನಾಡುತ್ತಾ ಹೊರಟಿದ್ದನ್ನು ಗಮನಿಸಿ, ಸಿದ್ದನು ತಾನೂ ಅವರೊಡನೆ ಭರದಿಂದ ಸಾಗಿದನು. ಛತ್ರ ಸಮೀಪಿಸುತ್ತಿದ್ದಂತೆ ಸಿದ್ಧನನ್ನು ಕುರಿತು ಬ್ರಾಹ್ಮಣರು '' ಹೇ ಮೂಢಾ, ನೀನು ಶೂದ್ರನಿರುವಿ. ಗಡಬಡಿಸಿ ಒಳನುಗ್ಗಿ ಬ್ರಾಹ್ಮಣರ ಸಾಲಿನಲ್ಲಿ ಕೊಡ್ರುವಿಯಾ, ನಡೆ ಆಚೆಗೆ'' ಅಂತಾ ಆತಂಕಪಡಿಸಿದರು. ಆದಾಗ್ಯೂ ಕೆಲವರು ಆ ಛತ್ರದಲ್ಲಿ ಪಾದರಕ್ಷೆಗಳನ್ನು ಬಿಡುವ ಸ್ಥಳದಲ್ಲಿ ಸಿದ್ದನಿಗೆ ಎಲೆಹಾಕಿದರು. ಅಲ್ಲಿಯೇ ಕುಳಿತುಕೊಂಡು ಪ್ರಸಾದವನ್ನು ಸ್ವೀಕರಿಸಿ ತೃಪ್ತಿಪಟ್ಟನು. ಭೋಜನವಾದ ಕೂಡಲೇ ಎಂಜಲೆಲೆಯನ್ನು ತೆಗೆಯುದೆ ಸಿದ್ಧನು ಹಾಗೆಯೇ ಹೊರಟನು. ಆಗ ಬ್ರಾಹ್ಮಣರು ಆತನನ್ನು ಹಿಡಿದೆಳೆದು, ಹೇ ಬುದ್ಧಿ ಗೇಡಿಯೇ, ಎಂಜಲೆಲೆ ತೆಗೆ, ಹಾಗೆಯೇ ಹೊರಟಿರುವಿ. ಈ ಎಲೆಯನ್ನು ನಿಮ್ಮಪ್ಪ ತೆಗೆಯುವನೋ ಎಂದು ಗದರಿಸಿದರು. ಅವರ ಎಳೆದಾಟಕ್ಕೆ ಸಿದ್ಧನು " ಓಂ ನಮಃ ಶಿವಾಯ " ಅಂತ ಉಚ್ಚರಿಸುತ್ತ ಮಗ ಬೇಕಾದರೆ ಆತನ ತಂದೆಯೇ ಈ ಎಲೆಯನ್ನು ತೆಗೆಯುವನು ಎಂದನು. ಅದಕ್ಕೆ ನೀನೇ ಈ ಎಲೆಯನ್ನು ತೆಗೆಯಬೇಕು. ನಿನ್ನಿಂದಲೇ ನಾವು ತೆಗೆಯಿಸುತ್ತೇವೆ ಅಂತಾ ಕೈಗೊಂದು ಹೊಡೆಯ ಹತ್ತಿದರು. ಸಿದ್ಧನು ಹೊಡೆತ ತಿನ್ನುತ್ತ ಮೌನದಿಂದ ಪರಶಿವನನ್ನು ಸ್ಮರಿಸಹತ್ತಿದನು.
🙏ಪಾರ್ವತಿ ಪರಮೇಶ್ವರರು ಪ್ರತ್ಯಕ್ಷರಾದರು 🙏
ಬ್ರಾಹ್ಮಣರ ಹೊಡೆತಗಳಿಗೆ ಪ್ರತಿಭಟನೆ ಮಾಡದೇ ಶಿವನ ಸ್ಮರಿಸುತ್ತಾ ನಿಂತಾಗ, ನಿಲ್ಲಿರಿ, ನಿಲ್ಲಿರಿ, ಹೊಡೆಯಬೇಡಿ. ನನ್ನ ಮಗನು ಈತನೇ, ಇವನುಂಡ ಎಲೆಯನ್ನು ನಾನೇ ತೆಗೆವೆನು ಅನ್ನುತ್ತಾ ಶಿರದಲ್ಲಿ ಜಡೆ, ಹಣೆಯಲ್ಲಿ ಭಸ್ಮ ಧಾರಣ ಕೊರಳಲ್ಲಿ ರುದ್ರಾಕ್ಷಿ ಮಾಲಾಭರಣ ಕೈಯಲ್ಲಿ ದಂಡ ಕಮಂಡಲಗಳೊಂದಿಗೆ ಪಾದುಕಾಧಾರಿ ಭಸ್ಮೋದ್ಧೋಳಿತ ಬಿಳೇ ವಸ್ತ್ರಧಾರಿ, ಹಣೆಯಲ್ಲಿ ಕುಂಕುಮದಿಂದ ಮುಕ್ಕಣ್ಣನಂತೆ ಸಾಕ್ಷಾತ್ ಶಿವನ ರೂಪ ಧರಿಸಿದ ಮೂರ್ತಿ ಅಲ್ಲಿಗೆ ಬಂದು ಹೇ ಬ್ರಾಹ್ಮಣರೇ, ನನ್ನ ಮಗನ ನಡವಳಿಕೆಗೆ ಬೇಸರ ಪಡಬಾರದು. ಸೈರಿಸಿಕೊಳ್ಳಿರಿ, ಆ ನನ್ನ ಮಗನ ಎಂಜಲ ಎಲೆಯನ್ನು ತೆಗೆಯುವೆ ಅನ್ನುತ್ತಾ ಎಲೆಯನ್ನು ತೆಗೆದನು. ಅಷ್ಟರಲ್ಲಿ ಝಗ್ ಝಗ್ ಪ್ರಕಾಶಮಾನ ಪೀತಾಂಬರಧರಿಸಿ, ನವರತ್ನ ಖಚಿತ ಆಭರಣಗಳನ್ನು ಧರಿಸಿ, ಹಣೆಯಲ್ಲಿ ಕೋಟಿಸೂರ್ಯ ಪ್ರಕಾಶಮಾನ ಕಸ್ತೂರಿ ತಿಲಕವನ್ನು ಧರಿಸಿ, ಕೊರಳು, ತೋಳ, ಎದೆಯಲ್ಲಿ ಸುಗಂಧದ್ರವ್ಯ ಲೇಪಿಸಿಕೊಂಡು ವೈಯಾರದಿಂದ ಓರ್ವ ಸುಂದರಿಯು ನೀರು ತುಂಬಿದ ಬಂಗಾರದ ಪಾತ್ರೆಯೊಂದಿಗೆ ಬಂದುದನ್ನು ಆಶ್ಚರ್ಯಚಕಿತರಾಗಿ ಆ ಬ್ರಾಹ್ಮಣರು ನೋಡುತ್ತ ನಿಂತರು. ಆ ಹೆಣ್ಣು ಮಗಳು ಎಲೆ ತೆಗೆದ ಜಾಗೆಯನ್ನು ನೀರಿನ ಪ್ರೋಕ್ಷಣೆ ಮಾಡುತ್ತಾ ಶುದ್ದೀಕರಿಸಿದಳು. ಶಿದ್ದನ ಎಂಜಲದ ಕೈಗಳನ್ನು ತೊಳೆದು ನನ್ನ ಪೀತಾಂಬರದ ಸೆರಗಿನಿಂದ ಕೈಯನ್ನು ಒರೆಸಿದಳು. ಈ ಕಾರ್ಯ ಪೂರೈಸುತ್ತಲೇ ಈರ್ವರೂ ಅಂತರ್ಧಾನರಾದರು. ಅವರು ಅದೃಶ್ಯರಾದ ಕೂಡಲೇ ಬ್ರಾಹ್ಮಣರೆಲ್ಲರೂ ಓಹೋ ಈತನು ಮಹಾತ್ಮನಿರುವನು. ಈಗ ಬಂದವರು ಸಾಕ್ಷಾತ್ ಪಾರ್ವತಿ ಪರಮೇಶ್ವರರು ಇರಲಿಕ್ಕೆ ಬೇಕು. ಈತನು ಶೂದ್ರನೆಂದು ಸುಮ್ಮನೆ ಹೊಡೆದವು. ನಾವು ದುರ್ದೈವಿಗಳು ಅಂತ ಖೇದ ಪಡುತ್ತಿರುವಾಗಲೇ ಸಿದ್ದನು ಅಲ್ಲಿಂದ ತಕ್ಷಣ ನಿರ್ಗಮಿಸಿ ಸಂದಿಗೊಂದಿಗಳಲ್ಲಿ ಹಾಯ್ದು ಅದೃಶ್ಯನಾದನು. ಕೂಡಲೇ ಬ್ರಾಹ್ಮಣರಲ್ಲರೂ ನಗರದ ಸುತ್ತಲೂ ಹುಡುಕಾಡಿದರೂ ಸಿದ್ದನು ದೊರೆಯಲಿಲ್ಲ.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಗಂಗಾ ಯಮುನಾ ಸಂಗಮ ಪ್ರಯಾಗ ಕ್ಷೇತ್ರಕ್ಕೆ ಸಿದ್ಧಾರೂಢರ ದರ್ಶನ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
