ಸಿದ್ಧಾರೂಢರಿಂದ ಮಾರವಾಡಿಗೆ ದೇಹ ಪಂಚೀಕರಣ ಭೋದನೆ ಕಥೆ

 ಮಾರವಾಡಿಗೆ ದೇಹ ಪಂಚೀಕರಣ ಹೇಳಿದ್ದು 🙏



ಮಾರನೇ ದಿನ ಮಾರವಾಡಿಯು  ಶುದ್ಧ ಮನಸ್ಸಿನಿಂದ ನಿರ್ವಿಕಾರಭಾವದಿಂದ ಸಿದ್ಧಾರೂಢ ಭಾರತಿನ್ನು ಕುರಿತು ಹೇ ಗುರುವರ್ಯ ತೋರತಕ್ಕೆ ನಾಮರೂಪ ಪ್ರಪಂಚ, ವನಿತಾ, ಧನ ಸಂಪತ್ತೆಲ್ಲ ದುಃಖಮಯವಾಗಿದೆ. ಈ ದುಃಖದಿಂದ ನಿವೃತ್ತನಾಗಿ ಪರಮಾನಂದ ಪ್ರಾಪ್ತಿಯ ಮಾರ್ಗದ ಹಂಬಲವಾಗಿದೆ. ನನ್ನ ಈ ಮನಸ್ಸಿನ ಸ್ಥಿತಿಯನ್ನರಿತು ತಾವುಗಳು ಈ ತನುವಿನ ಸ್ಥಿತಿಗತಿ, ಜನನ, ಮರಣಗಳ ವಿಧಾನ ನನ್ನ ಸ್ವರೂಪವನ್ನು ಮೊದಲಿಗೆ ತಿಳಿಸಿ ಅಂತ ಕೇಳಿಕೊಂಡನು. ಆಗ ಸಿದ್ಧನು  ಆತನನ್ನು ಕುರಿತು ಹೇ ಮಾರವಾಡಿಯೇ ಸ್ವಸ್ವರೂಪ ತಿಳಿದುಕೊಳ್ಳಬೇಕೆಂಬ ಬುದ್ಧಿಯು ನಿನ್ನಲ್ಲಿ ಪೂರ್ವ ಜನ್ಮದ ಸುಕೃತ ಪುಣ್ಯದಿಂದ ಉದಯವಾಗಿದೆ. ಚಿತ್ತವಿಟ್ಟು ಕೇಳು. ಮನದ ಕಲ್ಪನೆಗಳಿಗೆ ಮೀರಿದ ಚಿನ್ಮಯಾನಂದ ನಿತ್ಯ, ನಿರ್ವಿಕಾರ ಸ್ವಯಂ ಪ್ರಕಾಶ ಪರವಸ್ತುವೇ ನೀನಿರುವಿ. ಆ ನಿನ್ನ ಸ್ವರೂಪಕ್ಕೆ ಕಾರ್ಯ ಕಾರಣಗಳಿಂದ ತೋರುವ ಈ ಜಗತ್ತಿನ ಕಲ್ಪನೆಗಳಿರದೆ ತಾನೇ ತಾನಾಗಿರುವ. ಒಂದಾನೊಂದು ದಿನ ಆನಂದಘನವಾದ ಸ್ವಜ್ಞಪ್ತಿಯು  ಜನಿಸಿತು. ಇದಕ್ಕೆ ಚಿಚ್ಛಕ್ತಿಯೆನ್ನುವರು. ಅದು ಶುದ್ಧ ಅಶುದ್ಧ ರೂಪದಿಂದ ಕೂಡಿ ಮಾಯೆ ಎನಿಸಿತು. ಅದರಲ್ಲಿ ಸಾತ್ವಿಕ, ರಾಜಸ, ತಾಮಸ ಈ ಮೂರು ಗುಣಗಳು ಸಮಾನವಾಗಿ ಕೂಡಿಕೊಂಡಿದ್ದರಿಂದ ಈ ಜಗತ್ತು ಉತ್ಪತ್ತಿಯಾಯಿತು. ಇದಕ್ಕೆ ಪ್ರಕೃತಿ ಎನ್ನುವರು. ನಂತರ ಆ ಮೂರು ಗುಣಗಳು ಹಮ್ಮಿನಿಂದ ಕೂಡಿ ವೈಕಾರಿಕ ಅಹಂಕಾರ, ತೈಜಸ ಅಹಂಕಾರ ತೋರಿದವು.


ಸಾತ್ವಿಕ ರಾಜಸ ಗುಣಗಳು ಕೂಡಲು ವಿದ್ಯೆಯೆನಿಸಿತು. ಸಾತ್ವಿಕ, ತಾಮಸ ಗುಣ ಕೂಡಲು ಪಂಚಭೂತಗಳಾದವು. ಹೇ ಚತುರಮತಿಯೆ ಮುಂದೆ ಪಂಚೀಕರಣವನ್ನು

ವಿವರಿಸುವೆ. 


ಮೊದಲಿಗೆ ಈ ಸೃಷ್ಟಿಯನ್ನು ಬ್ರಹ್ಮದೇವನು ಸೃಷ್ಟಿಸಿ, ಚಮಚ ಪಾತ್ರೆ ರಚಿಸಿ ಕ್ರಮವಾಗಿ ಇರಿಸಿದನು. ಆಕಾಶದ ಐದು ಚಮಚ ಕೂಡಿಸಲು  ಜ್ಞಾತೃವಾಯಿತು. ಆಕಾಶದ ಒಂದು ಚಮಚದಷ್ಟು ಭಾಗವನ್ನು ವಾಯುವಿನ ನಾಲ್ಕು ಚಮಚೆಯ  ಭಾಗದಲ್ಲಿ ಬೆರೆಸಲು ಮನವಾಯಿತು. ಆಕಾಶದ ಒಂದು ಚಮಚ ಭಾಗವನ್ನು ಅಗ್ನಿಯ ನಾಲ್ಕು ಚಮಚ ಭಾಗಗಳಲ್ಲಿ ಬೆರೆಸಲು ಬುದ್ದಿಯಾಯಿತು. ಆಕಾಶದ ಒಂದು ಚಮಚೆ ಭಾಗವನ್ನು ಜಲದ ನಾಲ್ಕು ಚಮಚ ಭಾಗದಲ್ಲಿ ಬೆರೆಸಲು  ಚಿತ್ತವಾಯಿತು. ಆಕಾಶದ ಒಂದು ಚಮಚೆಯ  ಭಾಗವನ್ನು ಪೃಥ್ವಿಯ ನಾಲ್ಕು ಚಮಚೆಗಳ ಭಾಗದಲ್ಲಿ ಸೇರಿಸಲು ಅಹಂಕಾರ ಉತ್ಪತ್ತಿಯಾಯಿತು. ಈ ಪ್ರಕಾರ ಆಕಾಶ ಪಂಚೀಕರಣದಿಂದ ಜ್ಞಾತೃ, ಮನಸ್ಸು, ಬುದ್ಧಿ, ಚಿತ್ತ  ಮತ್ತು ಅಹಂಕಾರ ಇವುಗಳು ಉದಿಸಿದವು.


ಪವನ ಭೂತದ ಐದು ಚಮಚೆ ತೆಗೆದುಕೊಂಡು ಏಕ ಮಾಡಲು ವ್ಯಾನವಾಯಿತು. ವಾಯುವಿನ ಒಂದು ಚಮಚೆಯ ಭಾಗವು ಆಕಾಶದ ನಾಲ್ಕು ಚಮಚೆ ಭಾಗದಲ್ಲಿ ಸೇರಲು ಸಮಾನವಾಯಿತು. ಪವನದ ಒಂದು ಚಮಚೆಯ ಭಾಗವು ಅಗ್ನಿಯ ನಾಲ್ಕು ಚಮಚ ಭಾಗದಲ್ಲಿ ಕೂಡಿಸಲು ಉದಾಯವಾಯಿತು. ಪವನ ಒಂದು ಚಮಚೆಯ  ಭಾಗವು  ಜಲದ ನಾಲ್ಕು ಚಮಚೆ ಭಾಗದಲ್ಲಿ ಸೇರಲು ಅಪಾನವಾಯಿತು. ವಾಯುವಿನ ಒಂದು ಚಮಚ ಭಾಗವು ಪೃಥ್ವಿಯ ನಾಲ್ಕು ಚಮಚೆ ಭಾಗದಲ್ಲಿ ಕೂಡಿಸಲು ಪ್ರಾಣ ಉದಯಿಸಿತು. ಸಾಂಖ್ಯರು ಕರೆಯುವ ವಾಯು ಪಂಚೀಕರಣದಿಂದ ವ್ಯಾನ, ಸಮಾನ,ಉದಾನ, ಅಪಾನ ಹಾಗೂ ಪ್ರಾಣ ಇವುಗಳ ಉದಯವಾಯಿತು. 


ನಂತರ ಅಗ್ನಿಯನ್ನು ಐದು ಚಮಚಗಳಿಂದ ತೆಗೆದುಕೊಳ್ಳಲು ಅದು ನೇತ್ರವಾಯಿತು. ಅಗ್ನಿಯ ಒಂದು ಚಮಚೆಯ  ಭಾಗವನ್ನು ಆಕಾಶದ ನಾಲ್ಕು ಚಮಚೆಗಳಲ್ಲಿ ಬೆರೆಸಲು ಶ್ರೋತೃವಾಯಿತು. ಅಗ್ನಿಯ ಒಂದು ಚಮಚೆಯ  ಭಾಗವನ್ನು ವಾಯುವಿನ ನಾಲ್ಕು ಚಮಚೆ ಭಾಗಗಳಲ್ಲಿ ಸೇರಿಸಲು ತ್ವಚವಾಯಿತು, ಆಗ್ನೇಯ ಒಂದು ಚಮಚ ಭಾಗವನ್ನು ನೀರಿನ ನಾಲ್ಕು ಚಮಚೆ ಭಾಗಗಳಲ್ಲಿ ಸೇರಲು ರಚನೆಯಾಯಿತು. ಅಗ್ನಿಯ ಒಂದು ಚಮಚ ಭಾಗವು ಪೃಥ್ವಿಯ ನಾಲ್ಕು ಚಮಚ ಭಾಗಗಳಲ್ಲಿ ಬೆರೆಸಲು ಘ್ರಾಣವಾಯಿತು. ಈ ಪ್ರಕಾರ ಪಂಡಿತರಿಂದ ಶೋಧನೆಯಾದ ಅಗ್ನಿ ಪಂಚೀಕರಣದಿಂದ ನೇತ್ರ,ಶ್ರೋತೃ, ತ್ವಚ, ರಸನಾ, 

 ಘ್ರಾಣ ಈ ಐದು ಜ್ಞಾನೇಂದ್ರಿಯಗಳು ಜನಿಸಿದವು.


ಬಳಿಕ ಜಲದ ಐದು ಚಮಚಗಳನ್ನು ಒಂದೆಡೆ ಇಡಲು ರಸ ವಿಷಯವಾಯಿತು. ಜಲದ ಒಂದು ಚಮಚೆಯ ಭಾಗವನ್ನು ಆಕಾಶದ ನಾಲ್ಕು ಚಮಚೆ ಭಾಗಗಳಲ್ಲಿ ಬೆರೆಸಲು ಶಬ್ದ ವಿಷಯವಾಯಿತು. ಜಲದ ಒಂದು ಚಮಚೆ ಭಾಗವು ವಾಯುವಿನ ನಾಲ್ಕು ಚಮಚೆ ಭಾಗಗಳಲ್ಲಿ ಸೇರಿಸಲು ಸ್ಪರ್ಶ ವಿಷಯವಾಯಿತು. ಜಲದ ಒಂದು ಚಮಚೆ ಭಾಗವು ಅಗ್ನಿಯ ನಾಲ್ಕು ಚಮಚೆ ಭಾಗಗಳಲ್ಲಿ ಕೂಡಿಸಲು ರೂಪ ವಿಷಯವಾಯಿತು. ಜಲದ ಒಂದು ಚಮಚ ಭಾಗವು ಪೃಥ್ವಿಯ ನಾಲ್ಕೂ ಚಮಚ ಭಾಗಗಳಲ್ಲಿ ಬೆರೆಸಲು ಗಂಧ ವಿಷಯವಾಯಿತು. ಜೀವರ  ಭೋಗ ವಿಲಾಸಗಳಿಗೆ ಬ್ರಹ್ಮದೇವನು ಹರ್ಷ ಚಿತ್ತದಿಂದ ಜಲದ ಪಂಚೀಕರಣವಾದ ಶಬ್ದ, ಸ್ಪರ್ಶ, ರೂಪ ವಿಷಯವಾಯಿತು. ಜಲದ ಒಂದು ಚಮಚ ಭಾಗವು ಪೃಥ್ವಿಯ ನಾಲ್ಕೂ ಚಮಚ ಭಾಗಗಳಲ್ಲಿ ಬೆರೆಸಲು ಗಂಧ ವಿಷಯವಾಯಿತು. ಜೀವದ ಭೋಗವಿಲಾಸಗಳಿಗೆ ಬ್ರಹ್ಮದೇವನು ಹರ್ಷಚಿತ್ತದಿಂದ ಜಲದ ಪಂಚೀಕರಣವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಪ್ರಕಾರ ವಿಷಯಗಳನ್ನು ಸೃಷ್ಟಿಸಿದನು ಅಂತಾ ಪಂಡಿತರ ಅಭಿಪ್ರಾಯವಾಗಿದೆ.


ಬಳಿಕ ಪೃಥ್ವಿಯ  ಐದು ಚಮಚೆಗಳನ್ನು ತೆಗೆದುಕೊಂಡು ಒಂದೆಡೆ ಇಡಲು ಗುದವಾಯಿತು, ಪೃಥ್ವಿಯ ಒಂದು ಚಮಚೆ ಭಾಗವು ಆಕಾಶದ ನಾಲ್ಕು ಚಮಚ ಭಾಗಗಳಲ್ಲಿ ಸೇರಿಸಲು ವಾಕ್‌ವಾಯಿತು. ಪೃಥ್ವಿಯ ಒಂದು ಚಮಚಾ ಭಾಗವು ವಾಯುವಿನ ನಾಲ್ಕು ಚಮಚೆ ಭಾಗಗಳಲ್ಲಿ ಸೇರಲು ಪಾಣಿಯಾಯಿತು. ಪೃಥ್ವಿಯ ಒಂದು ಚಮಚೆ ಭಾಗವು ಅಗ್ನಿಯ ನಾಲ್ಕು ಚಮಚೆ ಭಾಗಗಳಲ್ಲಿ ಸೇರಲು ಪಾದವಾಯಿತು. ಪೃಥ್ವಿಯ ಒಂದು ಚಮಚ ಭಾಗವು ನೀರಿನ ನಾಲ್ಕು ಚಮಚ ಭಾಗಗಳಲ್ಲಿ ಸೇರಲು ಗುಹ್ಯವಾಯಿತು. ಈ ಪ್ರಕಾರ ಸಾಂಖ್ಯರು ಹೇಳಿದಂತೆ ಪೃಥ್ವಿ ಪಂಚೀಕರಣದಿಂದ ವಾಕ್, ಪಾಣಿ, ಪಾದ, ಗುಹ್ಯ, ಗುದ ಎಂಬ ಕರ್ಮೇಂದ್ರಿಯಗಳು ಉತ್ಪತ್ತಿಯಾದವು ಅಂತಾ ಸಿದ್ಧನು ವಿವರಿಸಿದನು. 


     🙏 ದೇಹ ಪಂಚೀಕರಣ🌺


ಹೇ ಶ್ರವಣಾಪೇಕ್ಷಿಯಾದ ಮಾರವಾಡಿಯೇ  ಏಕಾಗ್ರತೆಯಿಂದ ಕೇಳು. ದೇಹದ ಪಂಚೀಕರಣವನ್ನು ಕೇಳು, ವೀರ್ಯ ಮತ್ತು ರಕ್ತದಲ್ಲಿ ಪಂಚಭೂತಗಳ ಸೂಕ್ಷ್ಮಾ0ಶಗಳಿರುತ್ತವೆ. ಸತಿ ಪತಿಗಳ ಮೈಥುನದ ಕಾಲಕ್ಕೆ ವೀರ್ಯವು ಪತನವಾಗಿ ಸತಿಯ ಗರ್ಭದಲ್ಲಿಯ ರಕ್ತದಲ್ಲಿ ಮಿಶ್ರಣವಾಗುವದು. ಈ ಮಿಶ್ರಣದಿಂದ ಆಸ್ತಿಯಾಯಿತು. ಆ ಎರಡರಲ್ಲಿಯ ಪೃಥ್ವಿ ಮತ್ತು ಅಗ್ನಿ ಅಂಶಗಳು ಒಂದಾಗಲು ನರಗಳಾದವು. ಅಲ್ಲಿಯ ಪೃಥ್ವಿ ಜಲ ಅಂಶಗಳು ಸೇರಲು ಮಾಂಸವಾಯಿತು.


ಪೃಥ್ವಿ ವಾಯುವಿನ ಅಂಶಗಳು ಸೇರಿ ಚರ್ಮವಾಯಿತು. ಪೃಥ್ವಿ ಆಕಾಶದ ಅಂಶಗಳು ಬೆಳೆಯಲು ರೋಮಗಳಾದವು. ಈ ಪ್ರಕಾರ ದೇಹದಲ್ಲಿಯ ಪೃಥ್ವಿ  ಪಂಚೀಕರಣವಾಗಿದೆ.


ಜಲ ಪೃಥ್ವಿ ಅಂಶ ಕೂಡಲು ರಕ್ತ, ಜಲ ಜಲ ಅಂಶಗಳು ಕೂಡಲು ಶುಕ್ಲ, ಜಲ, ಅಗ್ನಿ ಅಂಶಗಳು ಕೂಡಲು ಮೂತ್ರ, ಜಲ, ವಾಯುವಿನ ಅಂಶಗಳು ಸೇರಲು ಬೆವರು, ಜಲ, ಆಕಾಶ ಅಂಶಗಳು ಕೂಡಲು ಜೊಲ್ಲು ಈ ಪ್ರಕಾರ ದೇಹದೊಳಗಿನ ಜಲದ ಪಂಚೀಕರಣವೆಂದು ತಿಳಿದುಕೊಳ್ಳು,


ಅಗ್ನಿ, ಪೃಥ್ವಿ ಅಂಶಗಳು ಬೆರೆಯಲು ಮಾಂದ್ಯ, ಅಗ್ನಿ, ನೀರು ಬೆರೆಯಲು ಶಾಂತಿ ಅಗ್ನಿ, ಅಗ್ನಿ ಅಂಶಗಳು ಕೂಡಲು ಕ್ಷುಧೆ, ಅಗ್ನಿ ವಾಯು ಬೆರೆಯಲು ತೃಷೆ, ಅಗ್ನಿ ಆಕಾಶ ಅಂಶಗಳು ಸೇರಲು ನಿದ್ರೆ ಈ ಪ್ರಕಾರ ಅಗ್ನಿ ಪಂಚೀಕರಣ ವಾಗಿದೆ. 


ವಾಯು ಪೃಥ್ವಿ ಅಂಶಗಳು ಸೇರಲು ಆಕುಂಚನ, ವಾಯು, ಜಲ ಅಂಶಗಳು ಸೇರಲು ಚಲನ, ವಾಯು ಅಗ್ನಿ ಅಂಶ ಕೂಡಲು ವಲನ ವಾಯು ವಾಯು ಅಂಶಗಳು ಸೇರಲು ಧಾವನ, ವಾಯು ಆಕಾಶ ಅಂಶಗಳು ಸೇರಲು ಪ್ರಸರಣ, ಈ ಪ್ರಕಾರ ದೇಹದೊಳಗಿನ ವಾಯು ಪಂಚೀಕರಣ.


ಆಕಾಶ ಪೃಥ್ವಿಯ ಅಂಶ ಬೆರೆಯಲು ಭಯ, ಆಕಾಶ ಜಲ ಅಂಶ ಬೆರೆಯಲು ಮೋಹ, ಆಕಾಶ ಅಗ್ನಿ ಅಂಶಗಳು ಸೇರಲು ಕ್ರೋಧ, ಆಕಾಶ ವಾಯು ಅಂಶ ಬೆರೆಯಲು ಕಾಮ, ಆಕಾಶ ಆಕಾಶ ಅಂಶಗಳು ಸೇರಲು ಶೋಕ. ಈ ಪ್ರಕಾರ ದೇಹದೊಳಗಿನ ಆಕಾಶ ಪಂಚೀಕರಣವಾಗಿದೆ. 


 🕉️ ಅವಸ್ಥಾತ್ರಯಗಳು 🕉️


ಬ್ರಹ್ಮದೇವನು ಸರ್ವ ಜೀವರಿಗೆ ಬೇಕಾದ ಅನ್ನವನ್ನು ವಿಷಯೋಪಭೋಗಗಳನ್ನು ಮೊದಲಿಗೆ ಸೃಷ್ಟಿಸಿದನು. ನಂತರ ತನುಗಳನ್ನು ರಚಿಸಿದನು. ಸರ್ವ ಜೀವಿಗಳಲ್ಲಿ ಬ್ರಹ್ಮದೇವನು ಅಂತರ್ಯಾಮಿಯಾಗಿದ್ದುಕೊಂಡು ಅವುಗಳಲ್ಲಿ ನಟಿಸುವನು. ತನ್ನನ್ನು ತಾನು  ಮರೆಯುತ್ತಾ ಜೀವಭಾವದಿ ವಿಷಯಗಳನ್ನು ಕಾಮಿಸುವನು. ಈ ಹಿಂದೆ ತಿಳಿಸಿದ ಇಪ್ಪತೈದು ತತ್ವಗಳ ಮಿಶ್ರಣದಿಂದ ಈ ಸ್ಥೂಲ ದೇಹದೊಳಗೆ ಜಾಗೃತ್‌ದಲ್ಲಿ ನೇತ್ರ ಸ್ಥಾನದಲ್ಲಿ ಸತ್ವಗುಣ ಆಕಾರ ಮಾತ್ರೆಯಿಂದೊಡಗೂಡಿ ವಿಶ್ವ ಜೀವನನೆಸಿಕೊಂಡು ಸ್ಥೂಲ ವಿಷಯಭೋಗ ಮಾಡುವನು.


ಪಂಚೀಕರಣ ೨೫ ತತ್ವಗಳು


ಆಕಾಶ ತತ್ವ + ಆಕಾಶ - ಜ್ಞಾತೃ 

ಆಕಾಶ ತತ್ವ + ವಾಯು -ಮನ 

ಆಕಾಶ ತತ್ವ + ಅಗ್ನಿ - ಬುದ್ಧಿ 

ಆಕಾಶ ತತ್ವ + ಜಲ -ಚಿತ್ 

ಆಕಾಶ ತತ್ವ + ಪೃಥ್ವಿ - ಅಹಂಕಾರ

ವಾಯು ತತ್ವ + ಆಕಾಶ - ಸಮಾನ್ 

ವಾಯು ತತ್ವ +ವಾಯು - ವ್ಯಾನ್ 

ವಾಯು ತತ್ವ +ಅಗ್ನಿ -ಉದಾನ 

ವಾಯು ತತ್ವ +ಜಲ -ಅಪಾನ್ 

ವಾಯು ತತ್ವ + ಪೃಥ್ವಿ - ಪ್ರಾಣ 

ಅಗ್ನಿ ತತ್ವ +ಆಕಾಶ - ಶ್ರೋತೃ 

ಅಗ್ನಿ ತತ್ವ + ವಾಯು -ತ್ವಚ

ಅಗ್ನಿ ತತ್ವ + ಅಗ್ನಿ - ನೇತ್ರ 

ಅಗ್ನಿ ತತ್ವ +ಜಲ - ಜಿಹೆ 

ಅಗ್ನಿ ತತ್ವ +ಪೃಥ್ವಿ - ಪ್ರಾಣ 

ಜಲತತ್ವ +ಆಕಾಶ-ಶಬ್ದ 

ಜಲತತ್ವ +ವಾಯು -ಸ್ಪರ್ಶ 

ಜಲತತ್ವ +ಅಗ್ನಿ -ರೂಪ 

ಜಲತತ್ವ +ಜಲ -ರಸ 

ಜಲತತ್ವ +ಪೃಥ್ವಿ -ಗಂಧ 

ಪೃಥ್ವಿ ತತ್ವ + ಆಕಾಶ್ - ವಾಕ್ 

ಪೃಥ್ವಿ ತತ್ವ + ವಾಯು - ಪಾಣಿ 

ಪೃಥ್ವಿ ತತ್ವ +ಅಗ್ನಿ - ಪಾದ 

ಪೃಥ್ವಿ ತತ್ವ +ಜಲ - ಪಾಯು 

ಪೃಥ್ವಿ ತತ್ವ +ಪೃಥ್ವಿ -ಉಪಸ್ಥ 


🌺 ದೇಹ ಪಂಚಿಕರಣ🌺


ಆಕಾಶ ತತ್ವ + ಆಕಾಶ - ಶೋಕ 

ಆಕಾಶ ತತ್ವ + ವಾಯು - ಕಾಮ 

ಆಕಾಶ ತತ್ವ + ಅಗ್ನಿ - ಕ್ರೋಧ 

ಆಕಾಶ ತತ್ವ + ಜಲ -ಮೋಹ 

ಆಕಾಶ ತತ್ವ + ಪೃಥ್ವಿ - ಭಯ 

ವಾಯು ತತ್ವ + ಆಕಾಶ - ಪ್ರಸರಣ 

ವಾಯು ತತ್ವ +ವಾಯು - ಧಾವನ

ವಾಯು ತತ್ವ +ಅಗ್ನಿ -ವಲನ

ವಾಯು ತತ್ವ +ಜಲ - ಚಲನ

ವಾಯು ತತ್ವ + ಪೃಥ್ವಿ - ಆಕುಂಚನ

ಅಗ್ನಿ ತತ್ವ +ಆಕಾಶ - ನಿದ್ರಾ 

ಅಗ್ನಿ ತತ್ವ + ವಾಯು - ತೃಷೆ 

ಅಗ್ನಿ ತತ್ವ + ಅಗ್ನಿ - ಕ್ಷುಧೆ 

ಅಗ್ನಿ ತತ್ವ +ಜಲ - ಕಾಂತಿ 

ಅಗ್ನಿ ತತ್ವ +ಪೃಥ್ವಿ - ಆಲಸ್ಯ 

ಜಲತತ್ವ +ಆಕಾಶ-ಜೊಲ್ಲು 

ಜಲತತ್ವ +ವಾಯು -ಬೆವರು 

ಜಲತತ್ವ +ಅಗ್ನಿ -ಮೂತ್ರ 

ಜಲತತ್ವ +ಜಲ -ಶುಕ್ಲ 

ಜಲತತ್ವ +ಪೃಥ್ವಿ -ರಕ್ತ 

ಪೃಥ್ವಿ ತತ್ವ + ಆಕಾಶ್ - ರೋಮ 

ಪೃಥ್ವಿ ತತ್ವ + ವಾಯು - ಚರ್ಮ 

ಪೃಥ್ವಿ ತತ್ವ +ಅಗ್ನಿ - ನರ 

ಪೃಥ್ವಿ ತತ್ವ +ಜಲ - ಮಾಂಸ 

ಪೃಥ್ವಿ ತತ್ವ +ಪೃಥ್ವಿ -ಆಸ್ತಿ 



ಇಪ್ಪತೈದು ತತ್ವಗಳಲ್ಲಿಯ  ಜ್ಞಾನೇಂದ್ರಿಯಗಳೈದು, ಕರ್ಮೇಂದ್ರಿಯಗಳೈದು,  ಪ್ರಾಣಗಳೈದು,  ಮನ, ಅಹಂಕಾರ ಈ ಹದಿನೇಳು ತತ್ವಗಳಿಂದ ಸೂಕ್ಷ್ಮ ತನುವಿನ ಸ್ವಪ್ನಾವಸ್ಥೆಯಲ್ಲಿ ರಜೋಗುಣದಿಂದ ತೈಜಸ ಜೀವನೆಂದೆನಿಸಿ ಕಂಠದಲ್ಲಿ ಉಕಾರ ಮಾತ್ರೆಯಿಂದ ಮನೋಕರಣದಿಂದ ಅಲ್ಲಿ ಕನಸುಗಳನ್ನು ಕಟ್ಟಿ, ಅಲ್ಲಿ ಸೂಕ್ಷ್ಮ ವಿಷಯಗಳನ್ನು ಅನುಭವಿಸುವನು.


ಸ್ಥೂಲ, ಸೂಕ್ಷ್ಮ ದೇಹಗಳಿಗೆ ಮೂಲ ಕಾರಣವಾದ ಕಾರಣ ಶರೀರ ತಾಳಿ ತಾಮಸ, ಗುಣ ಸುಪ್ತಾವಸ್ಥೆಯನ್ನು ಹೊಂದಿ ಹೃದಯದಲ್ಲಿ ಅಜ್ಞಾನ ಸಹಿತ ನಿದ್ರಾಸುಖವನ್ನು ಅನುಭವಿಸುವವನೇ  ಪ್ರಾಜ್ಞ ಜೀವನೆನಿಸಿಕೊಳ್ಳುವನು.


🌺 ಪಂಚಕಾಶಗಳ ವಿವರ🌺


ಹೇ ಮೋಕ್ಷೇಚ್ಚೆಯುಳ್ಳ ಮಾರವಾಡಿಯೇ  ಕೇಳು.


ಈ ಪ್ರಕಾರ ಅವಸ್ಥಾತ್ರಯಗಳಿಂದ ಜೀವನಿಗೆ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯ ಕೋಶ, ಚಿಂತಿಸುವ ವಿಜ್ಞಾನಮಯ ಕೋಶ, ಭ್ರಾಂತಿದಾಯಕ ಆನಂದಮಯ ಕೋಶ ಈ ಪ್ರಕಾರ ಐದು ಕೋಶಗಳಿವೆ. ಜಾಗ್ರದಾವಸ್ಥೆಗೆ ಅನ್ನಮಯ

ಕೋಶ, ಸ್ವಪ್ನಾವಸ್ಥೆಗೆ ಪ್ರಾಣಮಯ, ಮನೋಮಯ ಮತ್ತು ವಿಜ್ಞಾನಮಯ ಈ ಮೂರು ಕೋಶಗಳಿವೆ. ಸುಷುಪ್ತಿ ಅವಸ್ಥೆಗೆ  ಆನಂದಮಯ ಕೋಶವಾಗಿರುವುದು.


ಬ್ರಹ್ಮದೇವನು ವಿವರವಾಗಿ ಮೇಲೆ ಹೇಳಿದ ತೆರ ತತ್ವಗಳನ್ನು ಪಂಚೀಕರಿಸಿದನು. ಇದರ ಒಡೆತನವನ್ನು ಅನ್ನಪೂರ್ಣೇಶ್ವರಿಗೆ ಕೊಡುತ್ತ ನೀನು ಭೂಲೋಕದಲ್ಲಿ ಸಕಲ ಜೀವಿಗಳಲ್ಲಿ ಕೃಪೆಯಿಂದ ಪ್ರೀತಿಯಿಂದ ಅನ್ನವನ್ನು ನೀಡುತ್ತ ರಕ್ಷಿಸಬೇಕು ಅಂತಾ ಕಾರ್ಯಭಾಗವನ್ನು ಒಪ್ಪಿಸಿದನು. ಅದಕ್ಕೆ ಅನ್ನಪೂರ್ಣೇಶ್ವರಿಯ  ಬ್ರಹ್ಮದೇವನ ಇಚ್ಚಾ ಪ್ರಕಾರ ಕಾರ್ಯಭಾಗವನ್ನು ನಿರ್ವಹಿಸಲು ಸಂತೋಷದಿಂದ ಒಪ್ಪಿಕೊಂಡಳು. 


ನಿರ್ಲಿಪ್ತ, ನಿರ್ಮಲ,  ಶಾಂತ, ಸತ್ಯ, ಜ್ಞಾನ, ಘನ ಸುಖರೂಪ ನಿತ್ಯ ನಿರಂತರ ನಿದರ ಆತ್ಮನೇ ನೀನಿರುವಿ. ಕಾರಣ ಈ ಕೋಶಾದಿಗಳು ನೀನಲ್ಲ. ಇವೆಲ್ಲ ಬೇರಾಗಿ  ಎದುರಾಗಿದ್ದು ತೋರುವವು. ಎದುರಿಗಿದ್ದ ತೋರುವ ವಸ್ತುವು ನೀನೆಂದಿಗೂ ಆಗಲಾರೆ. ವಸ್ತುಸ್ಥಿತಿ ಹೀಗಿದ್ದೂ, ನೀನು  ನಿನ್ನನ್ನು ಮರೆತು, ಈ ಎಲ್ಲ ವಿಷಯಗಳನ್ನು ನನ್ನವು  ಅಂತಾ ಮೋಹಿಸುತ್ತಿ. ಹೇಗಂದ್ರೆ ನನ್ನ ಜಾಗ್ರ, ನನ್ನ ಸ್ವಪ್ನ, ನನ್ನ ಸುಪ್ತಿ, ನನ್ನ ದೇಹ, ನನ್ನ ಪ್ರಾಣ, ನನ್ನ ಮನಸ್ಸು, ನನ್ನ ವಿಜ್ಞಾನ, ನನ್ನವರು ನನ್ನವು ನನ್ನವು  ಅವುಗಳ ಉಪಾಧಿಯಿಂದ ಸುಖ ದುಃಖಕ್ಕೊಳಗಾಗುವಿ. ವಿಚಾರಿಸಲು ನೀನು ಅವುಗಳಿಗೆ ಕೇವಲ ಸಾಕ್ಷಿಕನಾಗಿರುವಿ. ಸಾಗರದಲ್ಲಿ ತೋರಿ ಅಡಗುವ  ಗುರುಳೆ, ತೆರೆ ನೊರೆ ಬುರುಗಕ್ಕೆಲ್ಲ ಜಲವೇ ಆಧಾರದಂತೆ ದೇಹೇಂದ್ರಿಯಾದಿಗಳು ಇರಲು ನೀನೇ  ಅವಕ್ಕೆ ಆಧಾರನಿದ್ದು, ನಿನ್ನಲ್ಲಿ ಅದೆಲ್ಲ ತೋರಿ ಅಡಗುವವು,  ತ್ರಿಕಾಲದಲ್ಲಿಯು ಬಾಧೆರಹಿತನಾದ ನೀನೇ ಸತ್ಯನು, ನಿನ್ನ ಪ್ರೇರಣೆ ಯಿಂದ ಜಾಗ್ರ ಸ್ವಪ್ನ  ಉದಯಿಸಿ ಕಾರ್ಯ ಮಾಡುವವು. ನೀನು ಸುಪ್ತಿಯಲ್ಲಿ ಪ್ರವೇಶಿಸಲು ಜಡಗಳಿಂದ ಎಲ್ಲವೂ ಅಡಗಲು ನೀನೇ ಚೇತನನು, ನಿನ್ನನ್ನು ಅವು ಅರಿಯಲಾರವು. ನೀನು ಅವುಗಳನ್ನು ಅರಿಯುವಿ. ನೀನು ಸ್ವಪ್ರಕಾಶನು. ನೀನು ಅರಿಯದವನಂತೆ ಅಭಿಮಾನಿಸಿ ತದಾಕಾರವಾಗಿ ಹಾನಿಯಾಗಲು ದುಃಖಪಡುವಿ. ದುಃಖದಾಯಕ ಹೀಗೆನಲು  ಆಭರಣದಲ್ಲಿಯ ಚಿನ್ನದಂತೆ ನಾನು ವ್ಯಾಪಕನು. ಸುಪ್ತಿಯಲ್ಲಿ ನಿನ್ನ ಭಾವ ಅಡಗಲು ನೀನು ನಿಜವಾದ ಸುಖವನ್ನು ಅನುಭವಿಸುವಿ, ಪರಮ ಸುಖಮಯನಾಗುವಿ. ಈ ಪ್ರಕಾರ ನೀನಿರಲು ನಿಜವಾಗಿ ನೀನೇ ಪರಮಾತ್ಮ ಇರುವಿ ಅಂತಾ  ಸಿದ್ಧನು ಮಾರವಾಡಿಗೆ ಬೋಧ ಮಾಡಿದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧಾರೂಢರು ವಿಜಯನಗರದಲ್ಲಿ ಭೈರಾಗಿಗಳಿಗೆ ಉಂಡ ಅನ್ನವು ದೇಹದಲ್ಲಿ ಜೀರ್ಣಿಸಿವ ಫಲಶೃತಿ ಹೇಳಿದ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ