ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ ಬಾಲಸಿದ್ಧಾರೂಢನ ಲೀಲಾಕಥೆ ,
🏊 ದೇವದತ್ತನನ್ನು ಕೆರೆಯಲ್ಲಿ ಮುಳಗಿಸಿ ಬ್ರಹ್ಮಾನಂದದಲ್ಲಿ ಇರುವಂತೆ ಮಾಡಿದ್ದು,
ಒಂದಾನೊಂದು ದಿನ ಸಿದ್ಧನು ತನ್ನ ಸಂಗಡಿಗರನ್ನು ಕುರಿತು, ಎಲ್ಯೆ ಬಾಲಕರೇ ನನ್ನ ಸಂಗಡ ಕರೆಗೆ ಸ್ನಾನಕ್ಕೆ ಬನ್ನಿರಿ " ಎಂದು ಅಂದದ್ದು ಕೇಳಿ ಅವರು ಅತ್ಯಾನಂದದಿಂದ ಸಿದ್ಧನನ್ನು ಹಿಂಬಾಲಿಸಿದರು. ಕೆರೆಗೆ ಬಂದು ಸ್ನಾನಕ್ಕೆ ಸರ್ವರೂ ಇಳಿಯುತ್ತಿರುವಾಗ, ಒಬ್ಬನು ಮಾತ್ರ ಭಯಯುಕ್ತನಾಗಿ ದಂಡೆಯ ಮೇಲೆಯೇ ನಿಂತುಕೊಂಡು. ಆಗ ಸಿದ್ದನು, ಇವನ ಭಯವನ್ನು ನಾಶಪಡಿಸಬೇಕೆಂಬ ಉದ್ದಿಶ್ಯವಾಗಿ ಅವನನ್ನು ಬಲಾತ್ಕಾರದಿಂದ ಹಿಡಿದು ಆಳವಾದ ನೀರಿರುವಲ್ಲಿ ಎಳೆದುಕೊಂಡು ಹೋದನು. ಭಯಭೀತನಾಗಿ ಆ ಬಾಲಕನು ಕೂಗುತ್ತಿರುವಾಗ, ಇತರ ಹುಡುಗರು ಬಂದು ಅವನನ್ನು ಬಿಡಬೇಕೆಂದು ಎಷ್ಟು ಹೇಳಿದರೂ ಸಿದ್ದನು ಬಿಡಲಿಲ್ಲ. ಆಗ ಅವರೆಲ್ಲರೂ ಕೂಡ ಸಿದ್ಧನನ್ನು ಹಿಡಿದುಕೊಳ್ಳಬೇಕೆಂದು ಯತ್ನಿಸಿದರೂ ಆತನು ಅವರ ಕೈಗೆ ಸಿಕ್ಕದೆ, ಆ ಹುಡುಗನನ್ನು ಬಹಳ ಸ್ಥಾನಕ್ಕೆ ಒಯ್ದು ಮುಳುಗಿಸಿಬಿಟ್ಟನು. ಆಮೇಲೆ ಸಿದ್ಧನು ದಂಡೆಗೆ ಬಂದ ಕೂಡಲೇ ಸರ್ವರೂ “ಎಲೈ ಸಿದ್ಧನೇ, ನೀನೇ ಆ ಹುಡುಗನನ್ನು ಕೊಂದಿ. ನಾವೇನೂ ಅರಿಯೆವು," ಎಂದು ಅಂದದ್ದು ಕೇಳಿ, ಸಿದ್ಧನು, ''ನೀವ್ಯಾಕೆ ಇಷ್ಟು ಗದ್ದಲ ಮಾಡುತ್ತೀರಿ, ಆ ಬಾಲಕನ ಭಯ ಹೋಗಿ ನಿರ್ಭಯನಾದನು. ಅವನಿಗೆ ಮುಂದೆ ದುಃಖವು ಉಳಿಯುದೆ ಇಲ್ಲ" ಎಂದು ಅಂದನು. ಅದಕ್ಕವರು " ಸತ್ಯಮಾತು, ದೇಹವೇ ನಾಶವಾದ ಬಳಿಕ ಭಯವೆತ್ತಣದು!" ಅಂದರು. ಕೆಲವರು ಓಡಿಹೋಗಿ ಆ ಹುಡುಗನ ತಾಯಿಗೆ ನಡೆದ ಸಂಗತಿಯನ್ನು ಹೇಳಿದರು. ಆ ಕೂಡಲೇ ತನ್ನ ಒಬ್ಬಂಟಿಗನಾದ ಪುತ್ರನ ಮರಣ ವಾರ್ತೆಯನ್ನು ಕೇಳಿ ಅತಿ ದುಃಖಿತಳಾದ ತಾಯಿಯು ಕೆರೆಗೆ ಓಡಿಬಂದು, ಸಿದ್ಧನನ್ನು ನೋಡಿ, "ಎಲೋ ಇದೆಂಥಾ ದುಷ್ಟತನ!” ಎಂದು ಕೇಳಲಾಗಿ, ಸಿದ್ಧನು ಶಾಂತವಚನದಿಂದ, "ಎಲೈ ತಾಯಿಯೇ, ಇಲ್ಲಿ ನನ್ನ ದುಷ್ಟತನವೇನೂ ಇಲ್ಲ. ನಿನ್ನ ಮಗನು ಜಲರೂಪಿ ಪರಮಾತ್ಮನಲ್ಲಿ ಮಗ್ನನಾಗಿದ್ದು, ಭಯರಹಿತನಿರುವನು,” ಎಂದು ಹೇಳುವುದು ಕೇಳಿ ತಾಯಿಯು, “ಸಾಕು, ಸಾಕು, ನಿನ್ನ ವೇದಾಂತ, ನನ್ನ ಪುತ್ರನನ್ನು ನೀನು ಸತ್ಯವಾಗಿ ಕೊಂದು ಬಿಟ್ಟೆ, ಕೆರೆಯೊಳಗೆ ಬಿದ್ದಿರುವ ಆ ನನ್ನ ರತ್ನವನ್ನು ಈಗಲೇ ತಂದುಕೊಡು." ಎಂದು ದೀರ್ಘ ಸ್ವರದಿಂದ ಅಳಲಾರಂಭಿಸಿದ ಆ ಮಾತೆಯನ್ನು ಕಂಡು, ಕರುಣಾರ್ದ್ರ ಹೃದಯನಾಗಿ ಸಿದ್ಧನು ಅಂದದ್ದು,
“ಎಲೈ ತಾಯಿಯೇ, ನೀನು ಗಾಬರಿಯಾಗಬೇಡ. ನಿನ್ನ ಮಗನು ಆನಂದ ಉದಧಿಯೊಳಗೆ ಜೀವಂತನಾಗಿರುವನು. ನೀನು ಈಗಲೇ ಆತನ ಹೆಸರಿನಿಂದ ಕರೆದರೆ ಆತನು ಎದ್ದ ಬರುವನು."
ಇದನ್ನು ಕೇಳಿ ಆ ತಾಯಿಯು “ದೇವದತ್ತಾ ಬಾ” ಎಂದು ಕೂಗಿದಳು. ಆ ಕ್ಷಣವೇ ನೀರೊಳಗೆ ಕಲ್ಲೋಲವಾಗಿ ಆ ಹುಡುಗನು, ನೀರಿನ ಮದ್ಯೆ ಭಾಗದಲ್ಲಿ ಕಾಣಿಸಿಕೊಂಡು, ಈಜುತ್ತಾ ತೀವ್ರವಾಗಿ ದಂಡೆ ಬಂದು ಮುಟ್ಟಿದನು. ಆತನ ತಾಯಿಯು ಅತ್ಯಂತ ಪ್ರೇಮಯುಕ್ತಳಾಗಿ ಓಡಿಬಂದು ಅವನನ್ನು ಅಪ್ಪಿಕೊಂಡು, “ಮುದ್ದು ಮಗನೇ, ನೀನು ಇಷ್ಟು ಹೊತ್ತು ಎಲ್ಲಿ ಇದ್ದಿ ? ನೀನು ಪರಲೋಕಕ್ಕೆ ತೆರಳಿದಿ ಎಂದು ನಾನು ಭಯಗ್ರಸ್ತಳಾಗಿದ್ದೆ,'' ಎಂದು ಅಂದದ್ದು ಕೇಳಿ ಆ ಬಾಲಕನು ಹಾಸ್ಯವದನದಿಂದ; "ಎಲೈ ತಾಯಿಯೇ ನಾನು ಇಷ್ಟು ಹೊತ್ತು ಬ್ರಹ್ಮಾನಂದದೊಳಗಿದ್ದೆ. ಈಗ ಪುನಃ ದುಃಖರೂಪನಾದ ಜಗಜ್ಜಾಲವು ನನ್ನನ್ನು ಆವರಿಸಿಕೊಂಡಿತು" ಎಂದು ನುಡಿದನು. ಆಗ ತಾಯಿಯು, “ನೀನು ಬದುಕಿಕೊಂಡು ಬಂದಿ, ಒಳ್ಳೆಯದಾಯಿತು. ಇಲ್ಲದಿದ್ದರೆ ನಾನೂ ನೀರಿನಲ್ಲಿ ಬಿದ್ದು ಪ್ರಾಣವನ್ನು ತೊರೆಯುತ್ತೆದ್ದೇನು" ಎಂದು ಕಣ್ಣೀರು ಸುರಿಸುತ್ತಾ ಮಗನನ್ನು ಮೋಹದಿಂದ ಪುನಃ ಪುನಃ ಅಪ್ಪಿಕೊಂಡಳು. ಇದನ್ನು ಕಂಡು ಸರ್ವರೂ ಆನಂದಭರಿತರೂ, ಸಿದ್ಧನ ಕೃತ್ಯವನ್ನು ನೋಡಿ ಆಶ್ಚರ್ಯಚಕಿತರೂ ಆದರು. ಅವರನ್ನು ಕುರಿತು ಸಿದ್ದನು ಅಂದದ್ದೇನೆಂದರೆ- "ಹೇ ಸಜ್ಜನರೇ ಕೇಳುವಂಥವರಾಗಿರಿ. ಈ ವೃತ್ತದ ಗೂಢವೂ ಹೀಗಲ್ಲ. ಈ ಬಾಲಕನೇ ಅಜ್ಞಾನ ಸ್ಥಿತಿಯಲ್ಲಿರುವ ಜೀವನು. ಇವನು ತನ್ನ ಉಪಾಧಿಯನ್ನು ಬಿಟ್ಟು ಬ್ರಹ್ಮದಲ್ಲಿ ಮಗ್ನನಾಗಲಿಕ್ಕೆ ಭಯಪಡುವನು. ಈ ಪ್ರಕಾರ ಅವನು ಭಯಪಡುವದರಿಂದ ಅವನಿಗೆ ದುಃಖ ತಪ್ಪದೆಂದು ದಯಾಳುವಾದ ಸದ್ಗುರುವು ಬಲಾತ್ಕಾರದಿಂದ ಜೀವನ ದೇಹಾಭಿಮಾನವನ್ನು ಬಿಡಿಸಿ, ಆತನನ್ನು ಬ್ರಹ್ಮಾನಂದದಲ್ಲಿ ಮುಳುಗಿಸಿಬಿಟ್ಟುನು.” ಈ ಪ್ರಕಾರ ಸಿದ್ಧನ ವಚನವನ್ನು ಕೇಳಿ ಜನರೆಲ್ಲರೂ, "ಈತನು ಸಾಕ್ಷಾತ್ ಮಹಾದೇವನ ಅವತಾರವು. ಇಲ್ಲದಿದ್ದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿದ್ಧನ ಚರಣಕ್ಕೆರಗಲಿಕ್ಕೆ ಬಂದರು. ಅದನ್ನು ಕಂಡು ಸಿದ್ಧನು ತಪ್ಪಿಸಿಕೊಂಡು ಓಡಿ ಮನೆಗೆ ಬಂದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
