ತಿರುವಾಂಕುರ ಪದ್ಮನಾಭನ ದೇವಾಲಯದಲ್ಲಿ ಸಿದ್ಧನಿಗೆ ಬ್ರಾಹ್ಮಣರಿಂದ ಅಗ್ರಪೂಜೆ

 🕉️ ತಿರುವಾಂಕುರ ಪದ್ಮನಾಭನ ದೇವಾಲಯದಲ್ಲಿ ಸಿದ್ಧನಿಗೆ ಬ್ರಾಹ್ಮಣರಿಂದ  ಅಗ್ರಪೂಜೆ



ಸಿದ್ಧನು ತೋತಾದ್ರಿಯಿಂದ ಹೊರಟು ಅರಣ್ಯ, ಗಿರಿ, ಕಂದರ, ಗ್ರಾಮ, ಪುರ, ಪಟ್ಟಣಗಳಲ್ಲಿ ಸಂಚರಿಸುತ್ತಾ ಛೋಟಾ ನಾರಾಯಣನ ದರ್ಶನ ಪಡೆದನು. ಅಲ್ಲದೆ ಪರಮೇಶ್ವರನ ಲಿಂಗವನ್ನು ಸಹ ದರ್ಶನ ಪಡೆದು ಮುಂದೆ ನಡೆದನು. ಮಾರ್ಗದಲ್ಲಿ ಠಸ್ಕರ ಮಸ್ಕರ ಊರುಗಳ ಮುಖಾಂತರ ತಿರುವಟಾರಕ್ಕೆ ಆಗಮಿಸಿದನು. ಅಲ್ಲಿ ಶ್ರೀಕೃಷ್ಣನ ಮೂರ್ತಿಯ ದರ್ಶನವಾಯಿತು. ಅಲ್ಲಿಂದ ಹೊರಟು ತಿರುಮಲಾಂಕುರಕ್ಕೆ ಬಂದನು. ಅಲ್ಲಿ ಪ್ರದ್ಯುಮ್ನನಾಭ ಉರಗಶಯನ ಮೂರ್ತಿಯ ದರ್ಶನ ಪಡೆದನು. ಆ ದೇವಾಲಯದಲ್ಲಿ ಮಧ್ಯಾಹ್ನದ ಸಮಯ ಬ್ರಾಹ್ಮಣರ ಭಾರಿ ಭೋಜನ ಸಮಾರಂಭವು ನಡೆದಿತ್ತು. ಸಾಲು ಸಾಲಾಗಿ ಬೃಹತ್ ಸಂಖ್ಯೆಯಲ್ಲಿ ಬ್ರಾಹ್ಮಣರು ಭೋಜನಕ್ಕೆ ಆಸೀನರಾಗಿದ್ದರು. ಸಾಲಾಗಿ ಬಾಳೆ ಎಲೆಗಳನ್ನು ಹಾಕಿದ್ದರು. ಎಲೆಗಳ ಮೇಲೆ ಪಾಯಸ ಚಿತ್ರಾನ್ನ, ಘಮ ಘಮಿಸುವ ಉಪ್ಪಿನಕಾಯಿ, ಕೋಸಂಬರಿ ಬಟಾಟೆ ಪಲ್ಯ, ಶೆಂಡಿಗೆ, ಹಪ್ಪಳ, ಮೊದಲಾದ ಪಂಚ ಪಕ್ವಾನ್ನಗಳನ್ನು ಬಡಿಸಿದ್ದರು. ಸಾವಧಾನವಾಗಿ ಸಿದ್ದನು ಬಂದು ಎಲೆಯ ಮುಂದೆ ಭೋಜನಕ್ಕೆ ಕೂತನು. ಈತನನ್ನು ಕಂಡು ಒಬ್ಬ ವಿಪ್ರನು ಕೋಪಾವಿಷ್ಟನಾಗಿ, ಎಲಾ, ನೀನು ಶೂದ್ರನಿದ್ದು ಬುದ್ಧಿಗೇಡಿಯೆ  ಈ ಬ್ರಾಹ್ಮಣ ಪಂಕ್ತಿಯಲ್ಲಿ ನೀನೇಕೆ ಕೂತಿರುವಿ ಎದ್ದೇಳು ನಡೆಯಾಚೆಗೆ ಅಂತಾ ಗದ್ದರಿಸಿದನು. ಆಗ ಬ್ರಾಹ್ಮಣರ ಲಕ್ಷ್ಯವೆಲ್ಲ ಈತನ ಕಡೆ ಕೇಂದ್ರೀಕೃತವಾಯಿತು. ಸಿದ್ಧನು ವಿಪ್ರನ ಲಕ್ಷಣವನ್ನು ಶುದ್ದ ಬ್ರಾಹ್ಮಣನೇ ಬಲ್ಲನು. ಬುದ್ಧಿಶೂನ್ಯರಾದ ಶೂದ್ರರಾದ ನಿಮಗೇನು ತಿಳಿಯುವದು ಅಂತಾ ಉತ್ತರಿಸಿದನು. ಈ ಮಾತುಗಳನ್ನು ಕೇಳಿದ ಬ್ರಾಹ್ಮಣರೆಲ್ಲರೂ ಕೋಪದಿಂದ ಹಲ್ಲುಗಳನ್ನು ಕಿರಿಯುತ್ತಾ, ಎಲಾ ಮೂರ್ಖಾ, ನಮ್ಮನ್ನು ಶೂದ್ರರೆಂದು ಜರಿಯುವ ನಿನಗೆಂತಹ ಧೈರ್ಯ, ಜನಿವಾರ ಎಲ್ಲಿ ಹೋಗಿವೆ. ನಿನ್ನನ್ನು ತ್ಯಾಗ ಮಾಡಿ ಆಕಾಶಕ್ಕೆ ಹಾರಿ ಹೋಗಿರುವವೋ ಅಂತಾ ಕೋಪದ ವ್ಯಂಗ್ಯಭರಿತ ವಾಕ್ಯಗಳಿಂದ ಮೂದಲಿಸಿದರು.


ಅದಕ್ಕೆ ಸಿದ್ಧನು ಅಶಿಖಾ ಅಯಜ್ಞೋಪವೀತಃ ಯತಿಕ್ ಯಾದೃಚ್ಛಿಕೋ ಭವೇತ್ ಎಂಬ ಶೃತಿಯ ವಾಕ್ಯವನ್ನು ಹೇಳಿದನು. ಯತಿಗೆ ಶಿಖಾ,  ಯಜ್ಞೋಪವೀತ ಇರಲಾರವು ಎಂಬುದೇ ಶೃತಿಸಾರವಾಗಿದೆ. ಕೂಡಲೇ ಆ ದ್ವಿಜರು ಹೇ ಮೂಢಮತಿಯೇ ನೀನು ಯತಿಯಾದಲ್ಲಿ ಯತಿಯ ಕುರುಹುಗಳಾದ ದಂಡ ಕಮಂಡಲಗಳು ನಿನ್ನಲ್ಲಿ ಯಾಕೆ ಇಲ್ಲಾ ಅಂತಾ ಕೇಳಲು, ಸಿದ್ದನು ಅವರನ್ನು ಕುರಿತು ಹೇ, ವಿಪ್ರರೇ ಪರರಿಗೆ ಮೊಸ ಮಾಡಲು ಕಾರಣವಾಗಬಲ್ಲ ಡಾಂಭಿಕ ಚಿನ್ಹೆಗಳನ್ನು ನಾನು ತ್ಯಾಗ ಮಾಡಿದ್ದೇನೆ. ನಿಜವಾದ ಚಿಹ್ನೆಗಳನ್ನು ನಾನು ಧರಿಸಿಹೆ. ಅವುಗಳನ್ನು ಹೇಳುವೆ ಕೇಳಿರಿ. ತೋರತಕ್ಕ ನಾಮರೂಪ ಈ ಪ್ರಪಂಚಾಕಾರ ವಿಷಯೋಪ ಭೋಗಗಳಲ್ಲಿ ವೈರಾಗ್ಯವೆಂಬ ಭಸ್ಮವನ್ನು ಲೇಪನ ಮಾಡಿಕೊಂಡಿದ್ದೇನೆ. ಎಲ್ಲರಲ್ಲಿ ಸಮತ್ವ ಭಾವವೆಂಬ ಕೌಪೀನವನ್ನು ಧರಿಸಿದ್ದೇನೆ. ಸಾರಾಸಾರ ವೈಚಾರಿಕವಾದ ವಿವೇಕವನ್ನೇ ಕಮಂಡಲವನ್ನಾಗಿ ಧರಿಸಿದ್ದೇನೆ.

ಸುಜ್ಞಾನವನ್ನೇ ದಂಡವನ್ನಾಗಿ ಮಾಡಿಕೊಂಡಿದ್ದೇನೆ. ಉಪರತಿಯೇ ನನಗೆ ಶಿಖೆಯಾಗಿದೆ. ಈ ಪ್ರಕಾರ ನನ್ನಲ್ಲಿ ಯತಿಯ ಚಿಹ್ನೆಗಳನ್ನು ನೀವು ತಿಳಿದುಕೊಳ್ಳದಿದ್ದರೆ ತಪ್ಪು  ಯಾರದು ಅಂತಾ ಪ್ರಶ್ನಿಸಿದನು. ಬ್ರಾಹ್ಮಣ ಸಮುದಾಯದಲ್ಲಿಯ ತೀಕ್ಷ್ಮಮತಿಯಾದ ಓರ್ವನು ಮುಂದೆ ಬಂದು, ಈತನು ಶೂದ್ರನಲ್ಲ. ಈತನ ವಾಕ್ಯದಲ್ಲಿ ಅರ್ಥಗರ್ಭಿತ ಯತಿಗಳ ಚಿಹ್ನೆಗಳಿವೆ. ಸಾಕ್ಷಾತ್ ವೈಶ್ವಾನರನೇ ಈ ರೂಪದಿಂದ ಭೋಜನದ ಸಮಯಕ್ಕೆ ಬಂದಿರುವನು. ಕಾರಣ ಈತನಿಗೆ ಅಗ್ರಪೀಠದಲ್ಲಿ ಆಸೀನ ಮಾಡಿಸಿ ಅಗ್ರಪೂಜೆ ಮಾಡಿ ಅನ್ನ ಸಂತರ್ಪಣೆ ಮಾಡೋಣ ಅಂತಾ ಪ್ರಸ್ತಾಪಿಸಿದ್ದಕ್ಕೆ ಎಲ್ಲರೂ ಭಕ್ತಿ ಭಾವವುಳ್ಳವರಾಗಿ

ತಲೆದೂಗಿದರು. ನಂತರ ಉಪಸ್ಥಿತರಿದ್ದವರು ಅಗ್ರಪೀಠವನ್ನು ಹಾಕಿ ಅದರ ಮೇಲೆ ಸಿದ್ದ ಯತಿಯನ್ನು ಕೂಡ್ರಿಸಿ ಈತನು ಪ್ರದ್ಯುಮ್ನನಾಭನೆಂದು ಭಾವಿಸುತ್ತಾ ವಿಧಿವತ್ತಾಗಿ ಪಾದಪೂಜೆ ಮಾಡಿ ಭಸ್ಮ, ಗಂಧಾಕ್ಷತೆ, ಹೂವು ಏರಿಸಿ ಪೂಮಾಲೆ ಹಾಕಿ ಸ್ತ್ರೀ ಪುರುಷರೆಲ್ಲರೂ ಹರ್ಷೋಲ್ಲಾಸಗಳಿಂದ ಮಂಗಳಾರತಿ ಮಾಡಿದರು. ಭಯ ಭಕ್ತಿ ಭಾವದಿಂದ ಸಿದ್ದ ಯತಿಯ ಪಾದಾರವಿಂದಗಳಲ್ಲಿ ದಂಡವತ್ ಪ್ರಮಾಣಗಳನ್ನು ಮಾಡಿ ಭೋಜನಕ್ಕೆ ಸಾಲಾಗಿ ಕೂತರು. ಸಿದ್ದ ಯತಿಗೂ ನೈವೇದ್ಯ ಮಾಡಿದರು. ಸಾಕ್ಷಾತ್ ಅನ್ನಪೂರ್ಣಾ ಮಾತೆಯು ತನ್ನ ಸಹಸ್ರ ಸಹಸ್ರ ಬಾಹುಗಳಿಂದ ಬಡಿಸುತ್ತಲಿರುವಳೋ ಎಂಬಂತಿರುವ ಆ ದೃಶ್ಯ ರಮಣೀಯವಾಗಿತ್ತು. ಸಿದ್ದನು ಭೋಜನ ಮಾಡುತ್ತಾ ತೃಪ್ತಿ ಹೊಂದಿದನು. ಬ್ರಾಹ್ಮಣರೆಲ್ಲರೂ ಭಾರಿ ಭೋಜನದೊಂದಿಗೆ ಯತಿಯ ಸಾನ್ನಿಧ್ಯದಿಂದ ಪವಿತ್ರರಾದೆವು ಅಂತಾ ಅಪರಿಮಿತ ಆನಂದ ಸಾಗರದಲ್ಲಿ ತೇಲಾಡಿದರು. ಅನ್ನಸಂತರ್ಪಣೆಯಲ್ಲಿ ಪಾಲುಗೊಂಡವರಿಗೆಲ್ಲ ಸಿದ್ದನು ಹರಸಿ ಅವರಿಂದ ಅಪ್ಪಣೆ ಪಡೆದು ಅಲ್ಲಿಂದ ಹೊರಟನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಜನಾರ್ದನ ಕ್ಷೇತ್ರ ಹಾಗೂ ಉಡುಪಿ ಕ್ಷೇತ್ರ ದರ್ಶನ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ