ಸಿದ್ಧರಿಂದ ಜನಾರ್ದನ ಕ್ಷೇತ್ರ ಹಾಗೂ ಉಡುಪಿ ಕ್ಷೇತ್ರ ದರ್ಶನ 🌱

 🕉️ ಜನಾರ್ದನ ಕ್ಷೇತ್ರ ಹಾಗೂ ಉಡುಪಿ ಕ್ಷೇತ್ರ ದರ್ಶನ 🌱



🍁  ಜನಾರ್ದನ ಕ್ಷೇತ್ರಕ್ಕೆ ಆಗಮನ 🌱


ಅಲ್ಲಿಂದ ಸಂಚರಿಸುತ್ತಾ ಜನಾರ್ದನ ಕ್ಷೇತ್ರಕ್ಕೆ ಸಿದ್ಧನು ಆಗಮಿಸಿದನು. ಅಲ್ಲಿ ಸ್ವಾಮಿಗಳ ದರ್ಶನ ಪಡೆದನು. ಆ ಕ್ಷೇತ್ರದ ಗಿರಿಯನ್ನು ಏರಿದನು. ಅಲ್ಲಿ ತಾನು ಮೊದಲಿಗೆ ಬಂದು ಮಾಡಿದ ಸಂಧ್ಯಾವಂದನೆಯ ಕುರುಹನ್ನು ನಿರೀಕ್ಷಿಸಿದನು, ಸ್ವಪ್ನದಂತೆ ನಾಮರೂಪದಿ ಭಾಸವಾಗುವ ಈ ಜಗವು ಮಿಥ್ಯವೆಂದು ನುಡಿಯುತ್ತಾ ಮುಂದೆ ಸಾಗಿದನು.


🕉️ ಉಡುಪಿ ಕ್ಷೇತ್ರಕ್ಕೆ ಆಗಮನ ✡️


ಸಂಚಾರ ಮಾಡುತ್ತಾ ಸಿದ್ಧನು ಉಡುಪಿ ಕ್ಷೇತ್ರಕ್ಕೆ ಆಗಮಿಸಿದನು. ಶ್ರೀಕೃಷ್ಣನ ಮೂರ್ತಿ ದರ್ಶನ ಪಡೆದು ಕನಕನ ಕಿಂಡಿಯ ಹತ್ತಿರ ಬಂದನು. ಅಲ್ಲಿ ನಿಂತು ತನ್ನ ಮನಸ್ಸಿನಲ್ಲಿ ಯೋಚನೆ ಮಾಡುತ್ತಾ ಶುದ್ಧ ಸಾಕ್ಷಾತ್ ಬ್ರಹ್ಮರೂಪಿ ಪ್ರಸಿದ್ಧನಾಗಿರುವ ಕ್ಷೇತ್ರಜ್ಞನು ಸರ್ವವ್ಯಾಪಕವಾಗಿ ಮುದ್ದುಕೃಷ್ಣನ ರೂಪದಿಂದ ಉಡುಪಿಯಲ್ಲಿ ಪ್ರಕಟವಾಗಿಹನು. ಆತ್ಮನು ಈ ಸೃಷ್ಟಿಕಾರ್ಯದ ಸಾತಿಶಯದ ಜ್ಞಾನವನ್ನು ಆತುರದಿಂದ ಆಕರ್ಷಣೆ ಮಾಡುವವನೇ ಕೃಷ್ಣನೆನಿಸುವನು. ಈ ಪ್ರಕಾರವೇ ನಾವು ತಿಳಿದುಕೊಳ್ಳಬೇಕು ಅಂತಾ ಆತನಲ್ಲಿ ತದೇಕಾಗ್ರತೆಯುಳ್ಳವನಾಗಿ ಬಾಹ್ಯ ವೃತ್ತಿಯಿಂದ ಅಂತರ್ ಮುಖಿಯಾಗಿ ಸುಖ ಸಮಾಧಿಸ್ಥನಾದನು. ಈ ಸ್ಥಿತಿಯಲ್ಲಿಯೇ ಕೆಲಕಾಲ ಕಳೆಯಿತು. ಸಮಾಧಿಯಿಂದ ಪುನರುತ್ಥಾನವಾದ ಕೂಡಲೇ ಉಡುಪಿಯಿಂದ ಹೊರಟು ಮಾರ್ಗದಲ್ಲಿ ಮುರುಡೇಶ್ವರ ಕ್ಷೇತ್ರಕ್ಕೆ ಬಂದನು. ಅಲ್ಲಿ ಮುರುಡೇಶ್ವರನ ದರ್ಶನ ಪಡೆದು ಹೊರಟನು. ಗಿರಿ ಕಂದರ ಅಡವಿಗಳಲ್ಲಿ ಸಂಚಾರ ಮಾಡುತ್ತಾ ಸಿದ್ದನು ಗೋಕರ್ಣ ಕ್ಷೇತ್ರಕ್ಕೆ ಬಂದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗೋಕರ್ಣದಲ್ಲಿ ಸಿದ್ಧ ಮತ್ತು ಜಡಿಸಿದ್ಧರ ಅದ್ಭುತ ಲೀಲೆಗಳು

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ