ಗಯಾದಲ್ಲಿ ವಿಷ್ಣುಪಾದ ಹಾಗೂ ಅರುಣಾಛಲದಲ್ಲಿ ಅರುಣಾಚಲೇಶನ ದರ್ಶನ ಸಿದ್ದನು ಕಬೀರದಾಸರ ಮಂದಿರಕ್ಕೆ ಬಂದು ಸಂತರಿಗೆ ರಾಮನಾಮ ಮಹಿಮೆಯನ್ನು ಹೇಳಿದ್ದು

 ಗಯಾ ಕ್ಷೇತ್ರಕ್ಕೆ ಆಗಮನ🌺



ಬಳಿಕ ಸಿದ್ಧನೂ  ಅಲ್ಲಿಂದ ತೆರಳಿ ಗಯಾ ಕ್ಷೇತ್ರಕ್ಕೆ ಆಗಮಿಸಿದನು. ಅಲ್ಲಿ ವಿಷ್ಣುಪಾದ ದರ್ಶನ ಪಡೆದನು. ಸಹಸ್ರ ಸಹಸ್ರ ಜನರು ಅಲ್ಲಿ ಶ್ರೀ ವಿಷ್ಣು ಪಾದಕ್ಕೆ ಪಿತೃಗಳಿಗಾಗಿ  ಪಿಂಡ ಪ್ರದಾನ ಮಾಡುವ ಕರ್ಮ ಕ್ರಿಯೆಗಳನ್ನು ನಿರೀಕ್ಷಿಸಿದನು. ಈ ಪಿಂಡ ಪ್ರಧಾನದಿಂದ ತೃಪ್ತರಾದ ಪಿತೃಗಳು ವೇದಾಧಿಕಾರಿಗಳ ಗರ್ಭದಲ್ಲಿ ಜನಿಸುವಂತೆ ಸಂಕಲ್ಪ ಮಾಡಿ ತರ್ಪಣ ಬಿಡುವರು. ನಂತರ ವೇದದ ಮುಖಾಂತರ ಪಿತೃಗಳಿಗೆ ಮುಕ್ತಿ ದೊರೆಯುವದು ಎಂಬ ಭಾವನೆಯಿಂದ, ಈ ಜನರು ಕರ್ಮಶಾಸ್ತ್ರದ ಪ್ರಕಾರ ಕರ್ಮಗಳನ್ನು ಮಾಡುತ್ತಿರುವರು ಅಂತಾ ಸಿದ್ಧನೂ  ಅಂದುಕೊಂಡನು. ಪಿಂಡ ಪ್ರದಾನಕ್ಕೆ ಪ್ರಸಿದ್ಧ ವಾದ ಗಯಾ ಕ್ಷೇತ್ರದಿಂದ ಮುಂದೆ ಸಿದ್ಧನು  ತನ್ನ ಪಯಣವನ್ನು ಬೆಳೆಸಿದನು.


🕉️  ವೈಜನಾಥ ಕ್ಷೇತ್ರಕ್ಕೆ ಆಗಮನ ✡️


ಬಳಿಕ ಸಿದ್ಧನು  ಸಂಚಾರ ಮಾಡುತ್ತಾ ವೈಜನಾಥ ಕ್ಷೇತ್ರಕ್ಕೆ ಆಗಮಿಸಿ ಅಲ್ಲಿದ್ದ ದೇವಾಲಯವನ್ನು ಪ್ರವೇಶಿಸಿದನು. ಅಲ್ಲಿ ಭಕ್ತರು ಅಭಿಷೇಕ ಮಾಡುತ್ತಿರುವದನ್ನು ಕಂಡನು. ಸೂರ್ಯನಿಗೆ ಪ್ರಿಯವಾದ ಸೂರ್ಯ ನಮಸ್ಕಾರ ಮಾಡಿದಲ್ಲಿ ಕೃಪೆ ಮಾಡುವನಂತೆ, ಗಂಧಕ್ಕೆ ವಾಯುವು ಒಲಿದಂತೆ ಮೊದಲು ಅಭಿಷೇಕ ಮಾಡಿದಲ್ಲಿ ಪರಮೇಶನ ಕೃಪೆಯಾಗುವದು ಅಂತಾ  ಭಾವಿಸಿ ಭಕ್ತರು ಅಭಿಷೇಕ ಮಾಡುತ್ತಿರುವದನ್ನು ಕಂಡನು. ಸ್ಥೂಲವಾದ ಲಿಂಗಕ್ಕೆ ಸ್ಥೂಲವಾದ ಅಭಿಷೇಕ ಅವಶ್ಯವು. ಶಿಲಾಪ್ರತಿಮೆಗೆ  ಭಯ ಭಕ್ತಿಗಳಿಂದ ಅಭಿಷೇಕ ಮಾಡುತ್ತಾ ಮಾಡುತ್ತಾ ಶಿಲಾಭಾವವು ನಾಶವಾಗಿ ದೇವಭಾವ ಬರುವುದು. ಇದರಂತೆ ಮಂದಮತಿಯರಲ್ಲಿ ದೇಹಭಾವ ನಾಶವಾಗಿ ಆತ್ಮಭಾವ ಪ್ರಕಟವಾಗಲೆಂಬ ಉದಾತ್ತ ದ್ಯೇಯದಿಂದ ಋಷಿಗಳು ಈ ಪ್ರಕಾರದ ಮಾರ್ಗಗಳನ್ನು ತೋರಿಸಿದ್ದಾರೆ  ಅಂತಾ ಅನ್ನುತ್ತಾ ಸಿದ್ದನು ಅಲ್ಲಿಂದ ಹೊರಟು ಸಂಚಾರ ಮಾಡುತ್ತಾ ಮಾಡುತ್ತಾ ಅರುಣಾಚಲಕ್ಕೆ ಆಗಮಿಸಿದನು.


🌺 ಅರುಣಾಚಲಕ್ಕೆ ಆಗಮನ 🌺


ಅರುಣಾಚಲದ ಸೃಷ್ಟಿ ಸೌಂದರ್ಯವನ್ನು ನೋಡುತ್ತಾ ಪರಮಾನಂದಭರಿತನಾದ ಸಿದ್ಧನು  ಆ ಗಿರಿಯ ಶಿಖರವನ್ನೇರಿದನು. ಉನ್ನತವಾದ ಶಿಖರದ ಮೇಲೆ ಸುತ್ತಲೂ ಕೆಳಗೂ ನೋಡಿ ಆಹ್ಲಾದಪಟ್ಟನು. ಅಲ್ಲಿಯೇ  ಕೂತು ಪರಮಾತ್ಮನ ಧ್ಯಾನ ಮಾಡುತ್ತಾ ನಿರ್ವಿಕಲ್ಪ ಸಮಾಧಿಯನ್ನು ಹೊಂದಿದನು. ಕೆಲ ಸಮಯದ ನಂತರ ನಿರ್ವಿಕಲ್ಪ ಸ್ಥಿತಿಯಿಂದ ಸವಿಕಲ್ಪಕ್ಕೆ ಬಂದು ಜಗತ್ತಿಗೆ ತಂದೆಯಾದ ಅರುಣಾಚಲೇಶನನ್ನು ಹೃದಯ ಕಮಲದಲ್ಲಿಯ  ರತ್ನಖಚಿತ ಸಿಂಹಾಸನದ ಮೇಲೆ ವಿರಾಜಮಾನನ್ನಾಗಿ ಮಾಡಿ ಆತನ ಪಾದಪದ್ಮಗಳಲ್ಲಿ  ಮಂತ್ರ ಪುಷ್ಪಗಳನ್ನರ್ಪಿಸುತ್ತಾ ಮಾನಸಪೂಜೆಯನ್ನು ಮಾಡಲು ಅಲ್ಲಿ ಮನಸ್ಸು ಲಯವಾಗಿ ಕೋಟಿ ಸೂರ್ಯ ಪ್ರಕಾಶಮಾನ ಪರಮಾತ್ಮನ ದರ್ಶನದಿಂದ ತೃಪ್ತಿಪಡುತ್ತಾ, ಆ ಪರಮಾತ್ಮನೇ  ನಾನಿರುವೆ ಅಂತಾ ಭಾವಿಸಿ ಅದೇ  ಚಿತ್ತದಿಂದ ಸಿದ್ಧನು  ಆ ಶಿಖರದಲ್ಲಿ ನಿದ್ದೆ ಮಾಡಹತ್ತಿದನು.


ಬೆಳಗಾಯಿತು. ಸಿದ್ದನು ಎಚ್ಚರಗೊಂಡು ನಿಂತನು. ಆತನ ಎರಡು ತೊಡೆಗಳ ಮಧ್ಯದಲ್ಲಿ ಸೂರ್ಯನ ಹೊಂಬಣ್ಣ ಕಿರಣಗಳು ಪಾರಾಗಿದ್ದನ್ನು  ಕಂಡನು. ಈ ಭೂಮಂಡಲದ ರಥಕ್ಕೆ ತಾನೇ ಚಕ್ರನಿರುವನೆಂತಲೂ ನಂದಿಯನ್ನೇರಿ ಅಜ್ಞಾನದ ಕತ್ತಲೆಯನ್ನು ಕಳೆಯಲು  ಭೂಮಿಗೆ ಬಂದ ಪರಶಿವನಂತೆ ಕಂಡನು. ಬಳಿಕ ಆ ಗಿರಿಯಿಂದ ಸಿದ್ದನು ಕೆಳಗಿಳಿದರು.


ಕಪಿಲ ಮಹಾಮುನಿಯ ಕೋಪದ ಉರಿಯಿಂದ ದುಃಖಿಸುತ್ತಾ ಭಸ್ಮವಾದ ಸಗರ ಮಹಾರಾಜನ  ಅರವತ್ತು ಸಾವಿರ ಪುತ್ರರ  ಶಾಂತಿಗಾಗಿ ಶ್ರೇಷ್ಠವಾದ ಪದೇ ಪದೇ ತಪಸ್ಸು ಮಾಡಿದ ಸೂರ್ಯ  ವಂಶಸ್ಥರಾದ ಭಗೀರಥನ ತಪಸ್ಸಿಗೆ ಮೆಚ್ಚಿ ಪರಶಿವನು ತನ್ನ ಹೆಂಡತಿಯಾದ ಪಾವನ ಗಂಗೆಯನ್ನು ಭೂಮಿಗೆ ಕಳಿಸಿರುವನೋ ಎನ್ನುವಂತೆ ಸಗರ ವಂಶಸ್ಥರು ಉರಿದುಹೋದ ತಾಣವಾದ ಸಾಗರ ತಾಣಕ್ಕೆ ಸಹಸ್ರಮುಖಗಳಿಂದ ಗಂಗೆಯು ಭೂಲೋಕದ ಹಿತಕ್ಕಾಗಿ ಹರಿದು ಬಂದಿರುವಳು  ಅಂತಾ ಸಿದ್ಧನು ಆ ಗಂಗೆಯ ಪಾವಿತ್ರ್ಯಕ್ಕೆ ಸಂತೋಷಪಡುತ್ತಾ  ಮುಂದೆ ಸಾಗಿದನು. ಊರಲ್ಲಿ ಭಿಕ್ಷೆ ಬೇಡಿ ಭೋಜನ ಮಾಡಿದನು. ಅಲ್ಲಿಂದ ಸಂಚಾರ ಮಾಡುತ್ತಾ ಕಾಲಕತ್ತೆಗೆ  ಆಗಮಿಸಿದನು.


ಕಲಕತ್ತೆಗೆ ಆಗಮನ🌺🌺


ಕಲಕತ್ತಾದ ಕಾಳಿಯ ದರ್ಶನ ಪಡೆದು ವಡ್ಡಿಗೆ ಬಂದನು. ಅಲ್ಲಿಯ  ದೇವಾಲಯದಲ್ಲಿಯ  ಜಗನ್ನಾಥಮೂರ್ತಿ, ನೀಲಚಕ್ರವನ್ನು ನಿರೀಕ್ಷಿಸಿದನು. ಅಲ್ಲಿಯೇ ಸಮೀಪದಲ್ಲಿ ಒಂದರ ಮೇಲೊಂದರಂತೆ ಅಡಕಲು  ಗಡಿಗೆಗಳಂತೆ ಏಳು ಗಡಿಗೆಗಳನ್ನಿಟ್ಟು ಅದರಲ್ಲಿ ಅನ್ನವನ್ನು ಕುದಿಸಿ ಅರ್ಚಕರು ದೇವರಿಗೆ ನೈವೇದ್ಯ ಮಾಡುತ್ತಾ ಅತಿಥಿಗಳಿಗೆ ಅನ್ನ ಸಂತರ್ಪಣೆ ಮಾಡುವ ಸಾಲಿನಲ್ಲಿ ಸಿದ್ದನು ನಿಂತು ಅನ್ನ ಪ್ರಸಾದವನ್ನು ಸ್ವೀಕರಿಸಿದನು. ಪ್ರಸಾದ ಸ್ವೀಕರಿಸಿ ತೃಪ್ತಿಗೊಂಡ ಸಿದ್ಧನು  ಅನ್ನ ಬ್ರಹ್ಮ ವೆಂಬ ಶೃತಿವಾಕ್ಯದಂತೆ ಈ ಸ್ಥಳಕ್ಕೆ ಈ ನಾಮ ಯೋಗ್ಯ ಅಂತಾ ಅಂದುಕೊಂಡನು. ಅಲ್ಲಿ ಬ್ರಾಹ್ಮಣರು ಬಂದು ಎರಡು ಅನ್ನ ತುಂಬಿದ ಎರಡು ಗಡಿಗಳನ್ನು ಕ್ರಯಕ್ಕೆ ತೆಗೆದುಕೊಂಡು ಭೋಜನ ಮಾಡುವಾಗ ಸಿದ್ದನಿಗೂ  ಅನ್ನವನ್ನು ನೀಡಿದರು. ಅದನ್ನು ಸ್ವೀಕರಿಸಿ ತೃಪ್ತಿಗೊಂಡು ಆ ದೇವಾಲಯದ ಪೌಳಿಯಲ್ಲಿ ವಿಶ್ರಾಂತಿ ಮಾಡಿದನು. ಅಲ್ಲಿ ಮುಂದೆ ನೋಡುವಾಗ ಭೋರ್ಗರೆಯುತ್ತಿರುವ ಸಾಗರದ ದಡದಲ್ಲಿಯ ಸಂತ ಶಿರೋಮಣಿ ಕಬೀರದಾಸರ ಮಂದಿರವಿದೆ ಅಂತಾ ಕೇಳಿದನು. ಆ ಮಂದಿರಕ್ಕೆ ಬಂದು ಎರಡಾವರ್ತಿ ರಾಮನಾಮ ಭಜಿಸುತ್ತಿರುವ ಸಂತರ  ಸಮೂಹವನ್ನು ಕಂಡನು. ಆಗ ಸಿದ್ಧನು ಅವರನ್ನು ಕುರಿತು ಹೇ ಸಂತರೇ ವಾಲ್ಮೀಕಿಯಿಂದ ರಚಿತವಾದ ರಾಮನಾಮವನ್ನು ಮೂರು ಲೋಕದವರು ಮೂರುನೂರು ಮೂವತ್ಮೂರು  ವಿಭಾಗಿಸಿಕೊಂಡರೂ  ತಾವೇ ಸ್ವೀಕರಿಸಿದರು. ಉಳಿದ ಒಂದೇ ನಾಮವನ್ನು ರಾಮ ಅಂತಾ  ಭಕ್ತಿಯಿಂದ ಉಚ್ಚರಿಸಲು ಭೋಗ - ಮೋಕ್ಷಗಳು ದೊರೆಯುವವು ಅಂತ ಸಾರಿ ಸಾರಿ ಹೇಳುವೆ ಅಂತ ತಿಳಿಸಿದನು. ಎರಡು ಸಲ ಉಚ್ಚರಿಸಿದರೆ ನಾಮದ ಶಕ್ತಿಗೆ  ಲಘುತ್ವ ಬರುವುದು ಕಾರಣ ಒಂದೇ ಸಲ ಉಚ್ಚರಿಸಬೇಕು ಅಂತಾ ಹೇಳಲು ಅದಕ್ಕೆ ಹರ್ಷದಿಂದ ಒಪ್ಪಿಕೊಂಡು ಸಿದ್ಧನಿಗೆ ವಂದಿಸಿದರು. ಅಲ್ಲಿಂದ ಸಿದ್ದನು ಹೊರಟು ಓರಿಸ್ಸಾ ಪ್ರಾಂತದಲ್ಲಿ ಕಟಕದಲ್ಲಿ ಮಹಾನದಿಯನ್ನು ದಾಟಿದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಓಡ್ರದೇಶದಲ್ಲಿ ಸಿದ್ಧನನ್ನು ಕಳ್ಳನೆಂದು ಭಾವಿಸಿ, ಹೊಡೆಯುವ ಯತ್ನ ಮಾಡಿದಾಗ  ಅವರನ್ನು ಈಶನಂದೀಶರು ಕುದುರೆ ಏರಿ ಬಂದು ಓಡಿಸಿ ಸಿದ್ದನಿಗೆ ಅಭಯ ಕೊಟ್ಟ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ