ಓಡ್ರದೇಶದಲ್ಲಿ ಕಾಡಹಳ್ಳಿ ಜನರಿಂದ ಶಿವ ನಂದಿ ಬಂದು ಸಿದ್ದರನ್ನು ಪಾರುಮಾಡಿದರು

 ☘️ ಓಡ್ರ  ದೇಶದಲ್ಲಿ ಕಾಡಹಳ್ಳಿ ಜನರಿಂದ ಪಾರಾದದ್ದು



ಸಿದ್ಧನು ಕಟಕದಿಂದ ಮಹಾನದಿಯನ್ನು ದಾಟುತ್ತಾ ಸಂಚಾರ ಮಾಡುತ್ತಾ ಭದ್ರಾಕ್ಷ ಪಟ್ಟಣಕ್ಕೆ ಆಗಮಿಸಿದನು. ಅಲ್ಲಿಯ  ಭದ್ರಾಕ್ಷಲಿಂಗ ದರ್ಶನ ಪಡೆದನು. ನ೦ತರ ಮಹಾನದಿಯ ದಡಕ್ಕೆ ಬಂದರು. ನದಿ ದಾಟಲು ನಾವೆಗಾಗಿ  ನಿರೀಕ್ಷಣೆ ಮಾಡಿದನು. ಎರಡು ದಿನಗಳವರೆಗೆ ನಾವೆಯು  ಬರಲೇ ಇಲ್ಲ. ಸಿದ್ದನು ಅಲ್ಲಿಯೆ ಕೂತು ಉಪವಾಸ ಇದ್ದ. ಹಸಿವೆ, ನೀರಡಿಕೆಗಳ ಬಾಧೆಯನ್ನು ತನ್ನ ತಪೋಶಕ್ತಿಯಿಂದ ನಿಗ್ರಹಿಸಿದನು. ಮೂರನೇ ದಿವಸಕ್ಕೆ ನಾವೆಯು  ಬಂದಿತು. ಹತ್ತಲು ಸಿದ್ದನು, ನೀನು ಈ ನಾವೆಯ  ಚಾರ್ಜ ಕೊಡಬೇಕೆಂದು ನಾವಿಕ ಕೇಳಿದನು. ನನಗೆ ರೊಕ್ಕವಿಲ್ಲದ್ದರಿಂದ ನಿನಗೆಲ್ಲಿಂದ ಕೊಡಬಲ್ಲೆ  ಅಂತಾ ಸಿದ್ಧನು  ಉತ್ತರಿಸಿದನು. ಆದರೂ  ನಿನ್ನ ಕಡೆ ಏನಾದರೂ ಇದ್ದರೆ ಅದನ್ನೇ  ಕೊಡು ಅಂತಾ ನಾವಿಕನು ಕೇಳಿದ ಕೂಡಲೇ ಸಿದ್ದನು, ಹಾಗಾದರೆ ತೆಗೆದುಕೊ ಅಂತಾ  ಮೈಮೇಲಿದ್ದ ಜೀರ್ಣವಾದ ಲಂಗೋಟಿಯನ್ನು ಆತನ ಕಡೆ ಬಿಸಾಡಿದನು. ದಿಗಂಬರನಾದ ಸಿದ್ಧನನ್ನು ಗಮನಿಸಿ ಲಜ್ಜಿತನಾದ ನಾವಿಕನು ಸಿದ್ಧನನ್ನು ನಾವೆಯಲ್ಲಿ ಕುಳ್ಳಿರಿಸಿಕೊಂಡು ನದಿಯ ಆಚೆಯ ದಡಕ್ಕೆ ತಲುಪಿಸಿದನು. ನಾವೆಯಿಂದ ಇಳಿದ ಉಳಿದವರೆಲ್ಲರೂ ನಾವಿಕನಿಗೆ ಹಣವನ್ನು ಕೊಟ್ಟರು. ಬಂದ ಹಣವನ್ನು ಎಣಿಸಲಾಗಿ ನಿತ್ಯಕ್ಕಿಂತಲೂ ಎರಡು ಪಟ್ಟು ಹಣ ಪ್ರಾಪ್ತಿಯಾಗಿದ್ದಕ್ಕೆ ಹರ್ಷಭರಿತನಾದ ನಾವಿಕನು ತನ್ನಲ್ಲಿ ಅಂದುಕೊಳ್ಳುತ್ತ, ಈ ಎರಡು ಪಟ್ಟು ಧನ ಪ್ರಾಪ್ತಿಯು ಆ ಬ್ರಹ್ಮಚಾರಿಯ ಆಶೀರ್ವಾದದಿಂದ ನನಗೆ ಲಭಿಸಿದೆ. ಕಾರಣ ಆತನಿಗೆ ವಸ್ತ್ರ ಕೊಡಬೇಕು ಅಂತ ಸಂಕಲ್ಪ ಮಾಡಿದರು. ಕೂಡಲೇ ಧೋತರದ ತಾಗೆಯನ್ನು ತಂದು ಗೌರವದಿಂದ ಸಿದ್ದನಿಗೆ ಅರ್ಪಿಸಿದನು. ಆಗ ಸಿದ್ಧನು ಅದರಲ್ಲಿ ಆರು ಮೊಳದಷ್ಟು ವಸ್ತ್ರವನ್ನು ತೆಗೆದುಕೊಂಡು ಉಳಿದದ್ದನ್ನು ಬಡಜನರಿಗೆ ವಿತರಿಸಿದನು. ಇದನ್ನೆಲ್ಲ ಕಂಡವರು ತನ್ನ ನಿಜವಾದ ದೇಹದಲ್ಲಿ ಮಮತೆ ಇಲ್ಲದಿರುವಾಗ ಈ ವಸ್ತ್ರದ ಆಶೆಯು ಇವನಿಗಿಲ್ಲ. ಈತನು ಅವಧೂತನಿರುವನು. ಈ ಮಹಾತ್ಮನ ದರ್ಶನವಾದದ್ದು ನಮ್ಮ ಸೌಭಾಗ್ಯ ಅಂತಾ ಹೊಗಳುತ್ತಾ ಕೂಡಿದ ಜನರೆಲ್ಲರೂ ಸಿದ್ಧನಿಗೆ ಭಯ ಭಕ್ತಿಯಿಂದ ವಂದನೆಗಳನ್ನು ಮಾಡುತ್ತ ಆನಂದೋತ್ಸಾಹಗಳಿಂದ ಅಲ್ಲಿಂದ ತೆರಳಿದರು.


🌺 ಓಡ್ರ  ದೇಶದಲ್ಲಿ ಕಾಡಹಳ್ಳಿ ಜನರಿಂದ ಪಾರಾದದ್ದು 🙏


ಮುಂದೆ ಸಂಚಾರ ಮಾಡುತ್ತಾ ಓಡ್ರ  ದೇಶಕ್ಕೆ ಸಿದ್ಧನು  ಆಗಮಿಸಿದನು. ಆ ಪ್ರದೇಶದಲ್ಲಿ ವಾಸ ಮಾಡುವವರೆಲ್ಲರೂ ಕಡು ಬಡವರು. ಅಲ್ಲದೇ ಬಲು ನಿಷ್ಕರುಣಿ ಗಳು. ಪರಕೀಯರು ಇಲ್ಲಿ ಪ್ರವೇಶವಿಲ್ಲ. ಒಂದು ವೇಳೆ ಅಪ್ಪಿ ತಪ್ಪಿ ಪರಕೀಯರು ಬಂದರೆ ಅವರು ತಮ್ಮಲ್ಲಿಯ  ಸಂಪತ್ತನ್ನು ಲೂಟಿ ಮಾಡಲು ಬಂದವರು ಅಂತಾ ಅವರ ಮೇಲೆ ಆರೋಪ ಹೊರಿಸಿ ತುಂಬಾ ತೊಂದರೆ ಕೊಡುತ್ತಿದ್ದರು. ಇಂತಹ ಕಡು ಲೋಭಿ ಜನರ ದೇಶಕ್ಕೆ ಸಿದ್ಧನು  ಬಂದದ್ದನ್ನು ಗಮನಿಸಿ ಕೆಲವರು  ಆತನನ್ನು ಕಳ್ಳ ಬಂದಿದ್ದಾನೆ ಬನ್ನಿ ಅಂತಾ  ಕೂಗತೊಡಗಿದರು. ಇನ್ನು ಕೆಲವರು ಈತನನ್ನು ಹಗ್ಗಗಳಿಂದ ಕಟ್ಟಿ ಹಾಕಿರಿ. ಕೊಳ್ಳಿಯಿಂದ ಬರೆ ಇಡಬೇಕು. ಮನಬಂದಂತೆ ಹೊಡೆಯಬೇಕು. ಹೊಡೆಯುತ್ತಲೇ ನಮ್ಮ ಕ್ಷೇತ್ರದಿಂದ ಈತನನ್ನು ಗಡಿಪಾರು ಮಾಡಬೇಕು ಅಂತ ಚೀರುತ್ತಾ ಒದರುತ್ತ ಕೊಳ್ಳಿ, ಹಗ್ಗಗಳನ್ನು ತರಲು ಮನೆಗಳಿಗೆ ತೆರಳಿದರು. ಆದರೆ ಇವಾವುದನ್ನು ಗಮನಕ್ಕೆ ತಂದುಕೊಳ್ಳದೇ ಸಿದ್ಧನು  ಶಿವನ ಧ್ಯಾನದಲ್ಲಿ ತಲ್ಲೀನನಾದನು. ಗ್ರಂಥಕರ್ತರು ಈ ಅವಸ್ಥೆಯನ್ನು ಕಂಡು ಉದಾಹರಣೆ ಕೊಟ್ಟಿದ್ದಾರೆ.


ದಟ್ಟವಾದ ಅಡವಿಯಲ್ಲಿ ಗರ್ಭಿಣಿಯಾದ  ಒಂದು ಚಿಗರೆಯು  ಹೆರಿಗೆಯ  ವೇದನೆಯ ದುಃಖದಿಂದ ಅಳುತ್ತಿರುವ ನಾದವನ್ನು ಕೇಳಿದ ಬೇಟೆಯಾಡುವ ಬೇಡರು ಬೇಟೆಯ ಸಿದ್ಧತೆಯಿಂದ ಸುತ್ತುವರೆದರು. ಒಂದು ದಿಕ್ಕಿನಲ್ಲಿ ಬಲೆಯ ಬಂಧನ, ಇನ್ನೊಂದು ದಿಕ್ಕಿನಲ್ಲಿ ಗುರಿಯಿಡುವ ಬಂಧನ, ಮಗದೊಂದು ದಿಕ್ಕಿನಲ್ಲಿ ಬಿಲ್ಲುಗಳನ್ನು ಬಿಡುವ  ಬಂಧನ, ನಾಲ್ಕನೆಯ ದಿಕ್ಕಿನಲ್ಲಿ ನಾಯಿಗಳ ಪಡೆಯ ಬಂಧನ. ಹೀಗೆ ನಾಲ್ಕು ದಿಕ್ಕುಗಳಲ್ಲಿ ಬಂಧನಗಳ ವ್ಯೂಹವನ್ನು ರಚಿಸಿದ ಬೇಡರು ಬೇಟೆ ಯಾಡುವ ಗುರಿಯಲ್ಲಿ ಅಚಲತೆಯಿಂದ ಕೋಲಾಹಲ ಮಾಡಹತ್ತಿದರು. ಹೆರಿಗೆಯ  ವೇದನೆಯಿಂದ ಬಳಲುತ್ತಿದ್ದ ಆ ಹರಿಣಿಗೆ ಪಾರಾಗಲು ಯಾವುದೇ ಮಾರ್ಗವಿಲ್ಲದ್ದರಿಂದ ತನ್ನ ಅಂತ್ಯಕಾಲ ಸಮೀಪಿಸಿತೆಂದು ಗೋಳಾಡುತ್ತಾ ಕೊನೆಗೆ ಪರಶಿವನ ಧ್ಯಾನವೇ ನನಗೆ ಗತಿ ಅಂತಾ ತದೇಕಚಿತ್ತದಿಂದ ಶಿವನಾಮ ಸ್ಮರಣೆ ಮಾಡುತ್ತಾ ನಿಂತಿತು. ಸಂಕಷ್ಟಗಳಿಗೊಳಪಟ್ಟಾ ಹರಿಣಿಯು ಆರ್ತನಾದದಿಂದ ಮಾಡಿದ ನಾಮಸ್ಮರಣೆ ಶಿವನು ತನ್ನ ಮಾಯಾಜಾಲದಿಂದ ಕೂಡಲೇ ಮೋಡಗಳನ್ನು ಕಳುಹಿಸಿದನು. ಮಿಂಚು, ಗುಡುಗು ಆರ್ಭಟದಿಂದ ಭೋರ್ಗರೆಯುವ ಮಳೆ ಬೀಳಲು ಪ್ರಾರಂಭಿಸಿದ್ದರಿಂದಲೂ  ಬಿರುಗಾಳಿ ಬೀಸಲು ಬೇಡರ ಬಲೆ ಹರಿಯಿತು. ಗುಡುಗಿನ ಆರ್ಭಟದಿಂದ ಧೂಳು ಕಣ್ಣಲ್ಲಿ  ಬೀಳಲು ಬೇಡರ  ಬಾಣದ ಗುರಿ ತಪ್ಪಿ ಬೇಟೆ ನಾಯಿಗಳ ಮೇಲೆ ಬಿದ್ದು ಸತ್ತವು. ಮಳೆಯ ಹನಿಗಳಿಂದ ಉರಿಯು ನಂದಿತು. ಹಳ್ಳ ಸರಗಳಲ್ಲಿ ತುಂಬಿದ ನೀರು ಏರಲು ಬೇಡರೆಲ್ಲರೂ ತಮ್ಮ ತಮ್ಮ ರಕ್ಷಣೆಗಾಗಿ ಪಲಾಯನಗೈದರು. ಬಂದೊದಗಿದ ವಿಪತ್ತು ಶಿವನಾಮಸ್ಮರಣೆಯಿಂದ ಅಳಿದು ಹೋಗಿದ್ದರಿಂದ ಶಾಂತಿಯಿಂದ ಹರಿಣಿಯು  ತನ್ನ ಮಗುವಿಗೆ ಜನ್ಮ ನೀಡಿತು. ಇದೇ ತರ  ವಿಪತ್ತಿನಲ್ಲಿದ್ದ ಸಿದ್ಧನಿಗೆ ಸಂರಕ್ಷಿಸುವ ಸಲುವಾಗಿ ಶಿವನೇ ಚಮತ್ಕಾರ ಮಾಡಿದನು. ಅಷ್ಟರಲ್ಲಿ ಪ್ರಕಾಶಮಾನವಾದ ಖಡ್ಡದಾರಿ ಅಶ್ವಾರೋಹಿ ಗಳಿಬ್ಬರು ಕುದುರೆಗಳನ್ನು ಓಡಿಸುತ್ತಾ ಅಲ್ಲಿಗೆ ಬಂದರು.


ಕೌನ ಹೈರೇ ಝೋರಶೆ ಬೆ |

ಮಾನ ಯಹಿ ಸಬ್ಜನಕು ಪಕಡೋ।

ಜಾನ ಲೇತಾ ಉನ್ಕೇ  ಎನುತಾರ್ಭಟದಿ ತಾವ್  ಬರಲು||


ಅಶ್ವಾರೋಹಿಗಳ ಗಂಭೀರವಾದ ಆರ್ಭಟವನ್ನು ಕಂಡು ಪ್ರತ್ಯುತ್ತರ ಕೊಡದೆ ಹೀನರಾದ ಆ ಜನ ತಮ್ಮ ಪ್ರಾಣದಂಜಿಕೆಯಿಂದ ದಿಕ್ಕೆಟ್ಟು ಓಡಿದರು. ಆ ನಂತರ ಆ ಅಶ್ವಾರೋಹಿಗಳು ಸಿದ್ದನ ಬಳಿಗೆ ಬಂದು ಸಂತಸದಿಂದ ಆತನನ್ನು ಕುರಿತು


ಸುನೋಜಿ ಪಾಂಚಹಜಾರಕಾ ಸಂಧಿ |

ಕಲಿಕೆ ಹೈ ಆಪ್ತೋ  ಹುಷಾರಸೆ |

ಚಲನೆಸೆ ಆಪ್ಕೋ  ಭಗವಾನ್‌ಜಿ ಜುಲುಮಶೆ।

ಕಲ್ಯಾಣ ಕರತಾ ಹೈ ಹುಷಾರ ರಹೋ ll


ಅಂತ ಹೇಳುತ್ತಾ ಹೊರಟು ಹೋದರು. ಈ ಪ್ರದೇಶದ ಸುತ್ತಲಿನ ಹಳ್ಳಿಗಳಲ್ಲಿ ಇಂತಹ ಜನರೇ  ವಾಸವಾಗಿರಬಹುದು. ಪುನಃ ಕಷ್ಟಕ್ಕೊಳಗಾಗಬಾರದು ಅಂತ ಭಾವಿಸಿ ನಾಲ್ಕು ದಿನಗಳವರೆಗೆ ಅಡವಿಯಲ್ಲಿಯೇ  ಇದ್ದು, ಕಂದಮೂಲಗಳನ್ನು ಸಿದ್ದನು ಸೇವಿಸುತ್ತಾ, ಶೀತೋಷ್ಣಬಾಧೆಗಳನ್ನು ಸಹಿಸುತ್ತಾ ಕಾಲ ಕಳೆದನು. ಬದರಿನಾಥ ತಾಣದಲ್ಲಿಯಂತೆ ಹಿಮಾಚ್ಛಾದಿತ ಈ ಪ್ರದೇಶ ಶೀತಮಯವಾಗಿರುವುದರಿಂದ ಶಿವಧ್ಯಾನದಲ್ಲಿ ನಿರ್ವಿಕಲ್ಪ ಸಮಾಧಿಸ್ಥನಾದನು.

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿಂಹಾಚಲ ಗೋಮುಖ ತೀರ್ಥದಲ್ಲಿ ಒಬ್ಬ ಮಾರವಾಡಿ ಮಹಾರೋಗವನ್ನು ವಾಸಿ ಮಾಡಿದ ಸಿದ್ಧಾರೂಢರ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ