ಸಂಚಾರದಲ್ಲಿ ಮೂವರು ಹಲವು ವಿಧ ಕಷ್ಟ ಸಂಕೋಲೆಗಳಿಗೀಡಾದ ಕಥೆ
🌳 ಸಂಚಾರದಲ್ಲಿ ಮೂವರು ಹಲವು ವಿಧ ಕಷ್ಟ ಸಂಕೋಲೆಗಳಿಗೀಡಾದದ್ದು
ಸದಾಶಿವಪೇಟೆಯ ಜನರಿಂದ ತಪ್ಪಿಸಿಕೊಂಡು ಸಂಚರಿಸುತ್ತಾ ಅಡವಿ ಸೇರಿದರು. ಮಳೆ ಬರಲಾರಂಭಿಸಿದ್ದರಿಂದ ಒಂದು ಗಿಡದ ಕೆಳಗೆ ನಿಂತರು. ಭೋರ್ಗರೆಯುತ್ತಾ ಬೀಳುವ ಮಳೆ, ಸಿಡಿಲಿನಾರ್ಭಟ ಕೋಲ್ಮಿಂಚನ್ನು ಕಂಡು ಸೋಮ ಭೀಮರು ಘಾಬರಿಗೊಂಡರು. ಮಳೆ ನಿಂತಿತು. ಸೂರ್ಯ ಪ್ರಕಾಶ ಕಂಡಿತು. ಬಿರುಗಾಳಿ ರಭಸಕ್ಕೆ ಮೋಡಗಳು ಚದುರಿದವು, ಕಣವಿ ಮಾರ್ಗದಲ್ಲಿ ಬಲೆಗಳನ್ನು ಹಾಕಿ ಕೋಲಾಹಲ ಮಾಡುತ್ತಿರುವ ಬೇಡರ ಗದ್ದಲ ಕಾಡಿನಲ್ಲಿಯ ಮೃಗಗಳು ಅಂಜುತ್ತಾ ಓಡಾಡುವ ದೃಶ್ಯ ಎಲ್ಲಿ ನೋಡಲು ಹುಲಿಗಳ ಘರ್ಜನೆ, ಚಿರತೆಗಳ ಚೀತ್ಕಾರ, ಕಾಡುಕೋಣ, ಹಂದಿಗಳ ಪೂತ್ಕಾರ, ಹರಿಣಗಳ ಓಡಾಟ, ನರಿಗಳು ಕೂಗುತ್ತಾ ಮನ ಬಂದ ಕಡೆ ಓಡಾಡತೊಡಗಿದವು. ಬೇಡರು ಮೃಗಗಳನ್ನು ಮುತ್ತಿ ಅವುಗಳ ಕತ್ತುಗಳನ್ನು ತುಂಡರಿಸುತ್ತಿದ್ದರು. ಈ ಪ್ರಾಣಿಗಳಿಂದ ಹೊರಟ ರಕ್ತವನ್ನು ಕುಡಿಯುತ್ತಿದ್ದರು. ಈ ಭಯಾನಕ ದೃಶ್ಯವನ್ನು ಕಾಣುತ್ತಿದ್ದ ಸೋಮ, ಭೀಮರು ಸಿದ್ದನನ್ನು ಕುರಿತು " ಸದ್ಗುರುವ ಶೋಧಿಸಲು ಮನೆಗಳನ್ನು ಬಿಟ್ಟು ಬಂದೆವು ಆದರೆ ಮೃತ್ಯುವಿನ ಶೋಧಕ್ಕೆ ಹೊರಟಂತಾಯಿತು. ಗುರುಶೋಧನೆ ಇಲ್ಲಾ" ಅಂತಾ ಭೋರೆಂದು ಅಳುತ್ತಾ ನಡೆಯತೊಡಗಿದಾಗ ಸೂರ್ಯಸ್ತವಾಗಿದ್ದರಿಂದ ಕತ್ತಲಲ್ಲಿ ದಾರಿ ಕಾಣದೆ ಮುಳ್ಳು ನಾಟಲು ಸೋಮನು ರೋಧಿಸತೊಡಗಿದನು. ಭೀಮನು ಕೆಸರಿನಲ್ಲಿ ಬಿದ್ದನು. ಆಗ ಸಿದ್ದನು ''ನೀವು ಶಿವನ ಧ್ಯಾನ ಮಾಡಿರಿ ಕಷ್ಟಗಳು ಪರಿಹಾರವಾಗುವವು ನಮ್ಮ ಪರೀಕ್ಷೆಗಾಗಿ ಶಿವನು ಈ ಪ್ರಕಾರ ಮಾಡುತ್ತಿರುವನು. ಜಡದೇಹದ ಭಾವವು ಚಿತ್ತದಲ್ಲಿರುವ ವರೆಗೆ ಭವ ಬಾಧೆ ತಪ್ಪಲಾರದು. ಕತ್ತೆಯ ಮೇಲೆ, ಮೇಲಿಂದ ಮೇಲೆ ಭಾರವನ್ನು ಹೇರಿ ಕಾಡಿಗೆ ಕಳಿಸುವಂತೆ, ಪುನಃ ಜನ್ಮ ಮರಣಗಳುಂಟಾಗಿ ಭವಸಾಗರದ ದುಃಖದಲ್ಲಿ ಮುಳುಗಬೇಕಾದೀತು. ಈ ವರೆಗಿನ ಜನ್ಮ ಜನ್ಮದ ಸಂಸ್ಕಾರದಿಂದ ದುಃಖವೇ ಸುಖವೆಂದು ಭ್ರಮಿಸಿರುವ, ನಾವು ಆ ಭಾವವನ್ನು ತೊರೆದು ಮುಕ್ತಿಯ ಚಿಂತನ ಮಾಡಲು ಗುರುಶೋಧನೆ ಅವಶ್ಯ. ಕಾರಣ ನಾವು ವೈರಾಗ್ಯ ತತ್ಪರರಾಗಬೇಕು'' ಅಂತಾ ಹೇಳುತ್ತಿರಲು ''ಆದದ್ದಾಯಿತು, ಸುಗಮವಾದ ದಾರಿಗೆ ಕರೆದೊಯ್ದು ನಂತರ ಸಾಧನೆಗಳ ಚಿಂತನೆ ಮಾಡೋಣ'' ಅಂತಾ ಗೆಳೆಯರಿಬ್ಬರು ನುಡಿದರು. ಆಗ ಸಿದ್ದನು “ಗೆಳೆಯರೆ, ಕಷ್ಟಪಟ್ಟು ಶೋಧ ಮಾಡಲು ಗುರುವರನು ದೊರವನು. ತಂದೆ ತಾಯಿಗಳನ್ನು ಪತ್ನಿ ಸುತರನ್ನು ಸದನ, ಪಶು, ಧನ, ಧಾನ್ಯ, ರಾಜ್ಯ ದೇವರಾಶ್ರಯ, ದೇವರನ್ನೂ ಸಹ ಪಡೆಯಬಹುದು. ಆದರೆ ಗುರುವು ದುರ್ಲಭ, ಗುರುವಿನ ದರ್ಶನ, ಸೇವೆ, ಆತನ ಕರುಣೆ, ಬೋದವು ಮೇಲಸ್ತರವಾಗಿದೆ.
ರೋಗಿಯ ಕಹಿ ಅಂತಾ ಗುಳಿಗೆಯನ್ನು ಬಿಡಬಹುದೇ, ಪ್ರಯಾಸ ಮಾಡಿದರೆ ಗುರುಶೋಧನೆಯಾಗುವದು ಗುರುವಿನ ಧ್ಯಾನ ಮಾಡಣ" ಅಂತಾ ನಡೆಯುತ್ತಿರುವಾಗಲೇ ದೀಪಗಳಿಂದೊಡಗೂಡಿದ ಗ್ರಾಮವು ಕಾಣಿಸತೊಡಗಿತು. ಮೂವರೂ ಊರಲ್ಲಿ ಪ್ರವೇಶಿಸಿ ಹಳೆಯ ದೇವಾಲಯದಲ್ಲಿ ಕೂತರು.
ದೇವಾಲಯವು ಬಹಳ ಜೀರ್ಣಸ್ಥಿತಿಯಲ್ಲಿತ್ತು, ಮೇಲೆ ಮಳೆಯು ಅತಿಶಯವಾದ್ದರಿಂದ ಅದರದೊಂದು ಭಾಗದ ಗೋಡೆಯು ಬಿತ್ತು. ಇದನ್ನು ಕಂಡು ಗಾಬರಿಯಾಗಿ ಅವರಿಬ್ಬರು, “ನಮಗೆಂಥಾ ದುರ್ದೆಶೆ ಪ್ರಾಪ್ತವಾಯಿತು. ಸಿದ್ದನ ಸಂಗ ಹಿಡಿದಿದ್ದಕ್ಕೆ ಹೀಗಾಯಿತು. ನಾವು ಸಾಯುತ್ತೇವೊ ಉಳಿಯುತ್ತೇವೋ ತಿಳಿಯದು". ಎಂದು ಅನ್ನುತ್ತಿರುವಾಗ, ಸಿದ್ಧನು ಕೇಳಿ, ಅವರಿಬ್ಬರನ್ನು ಕುರಿತು, "ನಾವು ಸದ್ಗುರುವನ್ನು ಹುಡುಕಲಿಕ್ಕೆ ಹೊರಟಿರುತ್ತೇವೆ. ಈಗ ದೇಹದ ಚಿಂತೆಯು ಎಲ್ಲಿಂದ ಬಂತು? ನೀವು ಗ್ರಾಮದೊಳಗೆ ಹೋಗಬೇಕೆಂತ ಇಚ್ಚಿಸಿದಿರಿ. ಆದರೆ ಗ್ರಾಮದೊಳಗೆ ಬಂದರೂ ದುಃಖ ಹಾಗೆಯೇ ಇದೆ. ಲೋಕದಲ್ಲಿ ಇಚ್ಛಿತ ಯಾವದೊಂದು ವಿಷಯ ಸಿಕ್ಕರೂ, ದುಃಖವು ಮತ್ತೆ ಉಳಿಯುವುದು. ಯಾಕೆಂದರೆ ಒಂದು ಇಚ್ಛಿತ ವಿಷಯ ಪ್ರಾಪ್ತವಾದ ಕೂಡಲೇ, ಮನಸ್ಸು ಅದನ್ನು ಬಿಟ್ಟು ಬೇರೊಂದನ್ನು ಇಚ್ಚಿಸುವದು. ಆದ್ದರಿಂದ ಜಾಣನಾದವನು ಹ್ಯಾಗಾದರೂ ಉಪಾಯದಿಂದ ಮನಸ್ಸನ್ನೇ ನಿಗ್ರಹಿಸಬೇಕು'' ಎಂದು ನುಡಿದನು. ಇಷ್ಟರೊಳಗೆ ಮಳೆಯು ನಿಂತಿತು. ಆಗ ಭೀಮ, ಸೋಮ ಇಬ್ಬರಿಗೂ ಹಸಿವೆಯಾಯಿತು. “ಈಗ ಸಿದ್ಧನು
ಮಲಗಿಕೊಂಡಿರುವಾಗಲೇ ನಾವು ಭಿಕ್ಷೆಗೆ ಹೋಗೋಣ”, ಎಂದು ಅವರು ಒಬ್ಬರಿಗೊಬ್ಬರು ಅಂದುಕೊಂಡು, ಇಬ್ಬರೂ ಗ್ರಾಮದೊಳಗೆ ಹೋದರು. ಒಬ್ಬ ಗೃಹಸ್ಥನ ಮನೆಗೆ ಹೋಗಿ ನಿಂತಾಕ್ಷಣ ಆತನು ಒಳಗಿಂದ ಬಂದು ಇವರನ್ನು
ನೋಡಿ, “ಇವರು ಕಳ್ಳರಿರುವರು. ಮೊನ್ನೆ ನಮ್ಮ ಉತ್ತಮವಾದ ಎಮ್ಮೆಯನ್ನು ಇವರೇ ನಿಶ್ಚಯವಾಗಿ ಕಳವು ಮಾಡಿದರು. ಈಗ ಪಾಳತಿ ನೋಡಲಿಕ್ಕೆ ಸಾಧುಗಳಂತೆ ಪುನಃ ಬಂದಿದ್ದಾರೆ'' ಎಂದು ಅಂದದ್ದು ಕೇಳಿ, ಇಬ್ಬರೂ "ಒಡೆಯರೇ,ನಾವು ಕಳ್ಳರಲ್ಲ. ಈಗಲೇ ನಾವು ಈ ಗ್ರಾಮಕ್ಕೆ ಬಂದೆವು. ಸ್ವಾಮಿ, ನಮ್ಮ ಮೇಲೆ ಕೃಪೆ ಮಾಡಬೇಕು ", ಎಂದು ದಿನಭಾವದಿಂದ ನುಡಿದರು. ಆ ಗೃಹಸ್ಥನು ಅಧಿಕ ಸಿಟ್ಟಿಗೆದ್ದು, “ನಿಮಗೆ ಈಗಲೇ ಕಪಾಳ ಭಿಕ್ಷೆಯನ್ನು ಕೊಡುವೆನು, ನಿಲ್ಲಿರಿ, ನಿಲ್ಲಿರಿ'' ಎಂದು ಅಂದದ್ದು ಕೇಳಿ, ಇಬ್ಬರೂ ಓಡಲಾರಂಭಿಸಿದರು. ದಾರಿಯಲ್ಲಿ ಗಸ್ತಿ ಸಿಪಾಯರು ಅವರನ್ನು ಹಿಡಿದು, “ನೀವು ಯಾರು ? ರಾತ್ರಿ ಹೊತ್ತಿನಲ್ಲಿ ಹೀಗೆ ಅಡ್ಡಾ ಬೇಡಿರಿ. ಆ ಹಾಳು ಗುಡಿಗೆ ಹೋಗಿ ರಾತ್ರಿ ಕಳೆದು, ನಾಳೆ ಮುಂಜಾನೆ ಗ್ರಾಮ ಬಿಟ್ಟು ಹೋಗಿರಿ", ಎಂದು ಹೇಳಿ ಅವರನ್ನು ತಿರಿಗಿಸಿಬಿಟ್ಟರು. ಮನಸ್ಸಿನಲ್ಲಿ ಬಹು ದುಃಖಿತರಿಗೆ ಅದೇ ಗುಡಿಗೆ ಮರಳಿ ಬಂದು ನೋಡಿದರೆ, ಸಿದ್ಧನು ಆನಂದದಿಂದ ಕೂತಿರುವದನ್ನು ಕಂಡರು. ಇವರನ್ನು ಕಂಡು, ಆತನು, “ನೀವು ಈಶ್ವರನ ಮೇಲೆ ಭಾರ ಇಡದೆ, ಭಿಕ್ಷೆದಶೆಯಿಂದ ಗ್ರಾಮದೊಳಗೆ ಹೋದಿರಿ. ನಾನಾದರೋ ಶಿವದ್ಯಾನ ತತ್ಪರನಾಗಿ ಇಲ್ಲೇ ಕೂತಿರುವಾಗ, ಅರ್ಚಕನು ಬಂದು ದೇವರಿಗೆ ನೈವೇದ್ಯ ತೋರಿಸಿ, ಅನ್ನದ ಪಾತ್ರೆಯನ್ನು ನನ್ನ ಮುಂದಿಟ್ಟನು. ಆದರೆ ನೀವು ಬಹಳ ಹಸಿದಿರುವಿರಿ; ಊರೊಳಗೆಭಿಕ್ಷೆ ಸಿಗದೆ ನೀವು ಮರಳಿ ಬರುವಿರೆಂದು ನಾನು ತಿಳಿದು, ನಿಮ್ಮ ಸಲುವಾಗಿ ಆ ಅನ್ನವನ್ನು ಇಟ್ಟಿರುತ್ತೇನೆ'', ಎಂದು ಅಂದದ್ದು ಕೇಳಿ, ಅವರಿಬ್ಬರೂ “ತ್ರಾಹಿ, ತ್ರಾಹಿ, ದಯಾಳು ದೇವರನ್ನು ಮರತ ನಮ್ಮ ಜೀವತ್ವವು ವ್ಯರ್ಥ" ಎಂದಂದುಕೊಂಡರು. ಅನಂತರ ಮೂವರು ಕೂತು ಆನಂದದಿಂದ ಭೋಜನ ಮಾಡಿ,ಅಲ್ಲೇ ರಾತ್ರಿಯನ್ನು ಕಳದರು. ಮರುದಿನ ಮುಂಜಾನೆ ಎದ್ದು, ಭೀಮಸೋಮರಿಬ್ಬರೂ ಸಿದ್ಧನನ್ನು ಕುರಿತು, "ಹೇ ಸಿದ್ಧನಾಥನೇ ನಾವು ಪಾಮರರಿದ್ದೇವೆ. ನಮಗೆ ಮನಸ್ಸಿನ ನಿರ್ಧಾರವು ನಿಲ್ಲದು. ದುರ್ಧರವಾದ ಗುರುಶೋಧದ ಮಾರ್ಗದಲ್ಲಿ ನಾವು ನಡಯಲಾರೆವು. ನಮಗೆ ಹೊತ್ತಿಗೆ ಅನ್ನವನ್ನು ಪೂರೈಸುತ್ತಿದ್ದ ನಮ್ಮ ತಾಯಿ ತಂದೆಗಳು ಮನೆಯಲ್ಲಿ ನಮ್ಮನ್ನು ನೆನೆಯುವರು", ಎಂದು ಬಹು ವ್ಯಾಕುಲತೆಯಿಂದ ನುಡಿಯುವದನ್ನು ಕೇಳಿ, ಸಿದ್ಧನು, “ಈ ಪವಿತ್ರವಾದ ಗುರುಮಾರ್ಗವನ್ನು ಹಿಡಿದವರು ಬಹು ಮುಖವನ್ನು ಸಹಿಸಬೇಕುಗುವದು. ದೇಹಾಭಿಮಾನಿಗಳಿಗೆ ಇದು ದುರ್ಭರವಾದದ್ದು. ನಿಮಗಿಲ್ಲಿ ಅಧಿಕಾರವಿಲ್ಲ. ನೀವು ಈಗ ಮನೆಗೆಹೋಗಿ, ಸುಖದಿಂದ ಸಂಸಾರದೊಳಿದ್ದು, ಅಂತರದಲ್ಲಿ ಈಶ್ವರನನ್ನು ಪ್ರೇಮದಿಂದ ಭಜಿಸತಕ್ಕದ್ದು. ಆಮೇಲೆ ನೀವು ಅಧಿಕಾರಿಗಳಾಗುವಿರಿ'', ಎಂದು ನುಡಿದನು. ಈ ಪ್ರಕಾರ ಸಿದ್ಧಮುನಿ ಕೃಪಾವಚನವನ್ನು ಕೇಳಿ, ಭೀಮ ಸೋಮರಿಬ್ಬರೂ, ಸಿದ್ದನಿಗೆ ನಮಿಸಿ ತಮ್ಮ ಗ್ರಾಮಕ್ಕೆ ಹೊರಟರು. ಸಿದ್ದನಾಥನು, "ನಿಮ್ಮ ವೃತ್ತಿಯ ಗುರುಸೇವೆಯಲ್ಲಿ ನಿರತವಾಗಿ, ನಿಮ್ಮ ಇಚ್ಛಿತಾರ್ಥವು ಸಫಲವಾಗಲಿ'' ಎಂದು ಆಶೀರ್ವದಿಸಿ, ಅಲ್ಲಿಂದ ಗುರುಗಳನ್ನು ಶೋಧಿಸುವದಕ್ಕೆ ಮುಂದಕ್ಕೆ ಹೊರಟನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
👇👇👇👇ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಶ್ರೀಶೈಲ ಸೂರ್ಯಸಿಂಹಾಸನದ ಸ್ವಾಮಿಗಳು ಬಾಲಸಿದ್ಧನ ವೈರಾಗ್ಯ ನೋಡಿ ಶೀಘ್ರ ಸದ್ಗುರು ದೊರೆಯಲಿ ಅಂತ ಶುಭಾಶೀರ್ವಾದ ಕಥೆ
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉 nbsp;
3)
«««««ಓಂ ನಮಃ ಶಿವಾಯ »»»»»»»
